ಒಡಲೊಳಗೆ.
ಒಂಭತ್ತು ಮಾಸವಿಡಿ ಬೆಳೆಸಿದಳೆನ್ನ
ಆ ಕತ್ತಲ ಕೋಣೆಯಲಿ
ತಾ ತಿಂದಿದ್ದ ಎಂಜಲು ತಿನಿಸಿದಳೆನ್ನ
ಆ ನೆತ್ತರ ಶರಧಿಯಲಿ.
ಬೆಳೆಸಿದನ್ನ ನರಗಳ ನಡುವೆ
ಆ ಮಾಂಸದ ಖಂಡದಲಿ
ಅಂಗೈಯೊಳಗಿನ ಲಿಂಗದ ಹಾಗೆ
ಏಳು ಪದರ ಹೊದಿಕೆಯಲಿ
ಕರೆದನು ಎನ್ನ ಆ ದೇವ ಜಗತ್ತಿಗೆ
ಮುಗಿದಿತ್ತು ಮಾಸ ಅಂದು
ಪಡಲಾರದ ಕಷ್ಟ ಪಟ್ಟಾಳು ಹೆತ್ತಾಕಿ
ಜಗತ್ತಿಗೆ ಬರುವ ದಿನದಂದು
ಬರುವಾಗ ಹತ್ತಿತ್ತೋ ಹೊಳಿಯಂದು
ನಡು ದಾರಿಯಲಿ
ಹೊಳೆ ದಾಟಿ ಹೊರ ಬಂದಾಗ
ದಕ್ಕಿತು ಸ್ವರ್ಗದ ದಾರಿ.
-ಅಜಿತ.ಎನ್.ನೇಳಗಿ.
ಬೀದರ