Oplus_131072

ಪತಂಗ – ಪ್ರಸಂಗ

ಕೇಳಿರಿ ​​ಕೇಳಿರಿ ​​ಚಿಟ್ಟೆಗಳೆ
ಮುದ್ದಿನ ಬಣ್ಣದ ಚಿಟ್ಟೆಗಳೆ
ನನ್ನ ಕಥೆ ಹೇಳುವೆ
ಬನ್ನಿ ನನ್ನ ಬಳಿಗೆ.

ತಂದೆ ತಾಯಿ ಇಲ್ಲದ
ಮನೆಯು ನನ್ನದು
ಅಕ್ಕ ತಂಗಿ ಇಲ್ಲದ
ಮನವು ನನ್ನದು.

ಅಣ್ಣ ತಮ್ಮ ಇಲ್ಲದ
ನೆರಳು’ ನನ್ನದು
ಬಂಧು ಬಳಗ ಇಲ್ಲದಿರುವುದು
ನನ್ನದು.

ಬರಿ ಕಣ್ಣೀರು ತುಂಬಿದ
ಕಣ್ಣುಗಳು ನನ್ನದು
ಶಾಂತಿ ನೆಮ್ಮದಿ ಇಲ್ಲದ
ಬದುಕು ನನ್ನದು.

ಓ ಬಣ್ಣದ ಚಿಟ್ಟೆಗಳೇ
ನನ್ನ ನೋವು ಆಲಿಸಿ
ನಿಮ್ಮಂತೆ ಹಾರಲಾಗದು ಏಕೋ
ಮನದ ಮಾತನ್ನು ತಿಳಿಸಿ.

ರೇಣುಕಾ ವಾಯ್.ಎ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *