ಪೇಪರ್ ಹುಡುಗನ ಕಥೆ
– ವಿಜಯಕುಮಾರ ಚಟ್ಟಿ.
ಒಂದು ಊರಿನಲ್ಲಿ ಬಸ್ ಸ್ಟಾಂಡ್ ಹತ್ತಿರದಲ್ಲಿ ಬುಕ್ ಸ್ಟಾಲ್ ಅಂಗಡಿ ಒಳಗೆ ವಿದ್ಯಾರ್ಥಿಗಳು ಬಹಳ ವ್ಯಾಪಾರ ಮಾಡ್ತಿದ್ದರು ಅಲ್ಲಿ ಒಬ್ಬ ಪೇಪರ್ ಹುಡುಗ ಇದ್ದನು. ಅವನ ಹೆಸರು ಶಂಕರ್ ಅಂತ.
ಆ ಅಂಗಡಿಯೊಳಗೆ ಹುಡುಗ ನಿಷ್ಠಾವಂತನಾಗಿ ಕಾಯಕ ಮಾಡುತ್ತಿದ್ದನು .
ಅಲ್ಲಿಗೆ ಹೋದ ಒಂದು ದಿನ ನಾನು ಅಂಗಡಿಯ ಮಾಲೀಕರ ಜೊತೆಯಲ್ಲಿ ಟೀ ಕಾಫಿ ಕುಡಿತಿದ್ದೆ. ಆ ಸಮಯದಲ್ಲಿ ಪೇಪರ ಮಾರುವ ಆ ಹುಡುಗ ಅಂಗಡಿ ಒಳಗೆ ಬಂದಿದ್ದನು.
ಆ ಅಂಗಡಿಯ ಮಾಲೀಕರು ಆ ಪೇಪರ್ ಹುಡುಗನಿಗೆ ನನ್ನ ಕುರಿತು ಪರಿಚಯ ಮಾಡಿ ಹೀಗೆ ಹೇಳಿದರು. “ಲೋ ಗುಂಡಾ, ಇವರು ಸಾಹಿತಿಗಳು ಮತ್ತು ನನ್ನ ಸ್ನೇಹಿತರು ಇವರಿಗೆ ಪ್ರತಿದಿನ ಅವರ ಮನೆಗೆ ಹೋಗಿ ಪೇಪರ್ ಹಾಕಬೇಕು” ಅಂತ ಸಲಹೆ ಕೊಟ್ಟರು.
ಮರುದಿನ ಬೆಳಿಗ್ಗೆ ಪೇಪರ್ ಆ ಹುಡುಗ ನಮ್ಮ ಓಣಿಯಲ್ಲಿ ಪೇಪರ್ ಹಾಕಲು ಬಂದಾಗ ನಾನು ವಾಕಿಂಗ್ ಹೋಗುತ್ತಿದ್ದೆ ಆತ ನನಗೆ ನೋಡಿ ” ಎಲ್ಲಿ ಸರ್ ನಿಮ್ಮ ಮನೆ ? ಸಿಗುತ್ತಾ ಇಲ್ಲ . ಪ್ಲೀಸ್ ದಯವಿಟ್ಟು ನಿಮ್ಮ ಮನೆ ತೋರಿಸಿಬಿಡಿ” ಎಂದಾಗ ನಾನು
“ಹೇ ಹುಡುಗ ! ನಮ್ಮ ಮನೆ ವೈಕುಂಠ ಮನೆಯಲ್ಲಿ ಇದೆ” ಎಂದೆ.
” ವೈಕುಂಠ ಎಲ್ಲಿದೆ ಸರ್ ?”
“ಹೇ ಹುಡುಗ ! ವೈಕುಂಠ ಹೋಗುತ್ತೀಯಾ ನೀನು ?
“ಹೌದು ಸರ್ !
“ಹೇ ಹುಡುಗ !
ನೀನು ಟೂ ವೀಲರ್ ಗಾಡಿ ಚಲಿಸುವಾಗ ಎರಡು ಕೈಯ ಬಿಟ್ಟು ನೀನು ಚಲಿಸಿ ನೋಡು”
” ಅಯ್ಯೋ ಸರ್ !
ವೈಕುಂಠ ಬ್ಯಾಡ ನಿಮ್ಮ ಮನೆ ಬ್ಯಾಡ ಸರ್ “ಎಂದು ಹೊರಟ.
“ಹೇ ಹುಡುಗ ! ವೈಕುಂಠ ಹತ್ತಿರ ನಮ್ಮ ಮನೆಯಲ್ಲಿ ಪೇಪರ ಹಾಕಬೇಕು. ಇಲ್ಲವಾದರೆ ನಾನು ನಿನ್ನ ಮಾಲಿಕನಿಗೆ ಹೇಳುತ್ತೇನೆ” ಎಂದಾಗ.
” ಬೇಡ ಸರ್. ನಮ್ಮ ಮಾಲಕರಿಗೆ ಹೇಳಬೇಡಿ ಸರ್. ಪ್ಲೀಸ್. ನಿಮ್ಮ ಮಾತು ಕೇಳ್ತೇನೆ.”ಎಂದ
“ಹೇ ಹುಡುಗ ! ನಮ್ಮ ಮನೆ ಅಡ್ರೆಸ್ ಹೇಳುತ್ತೇನೆ . ನನ್ನ ಜೊತೆಯಲ್ಲಿ ಬಾ . ಇದು ವೈಕುಂಠ ಶ್ರೀನಿವಾಸರ ದೇವಾಲಯದ ಪಕ್ಕದಲ್ಲಿ ನಮ್ಮ ಮನೆ ಗೊತ್ತಾಯ್ತಾ ? ” ಎಂದು ಅವನಿಗೆ ನಮ್ಮ ಮನೆ ತೊರಿಸಿದೆ.
ಹುಡುಗ ಹೀಗೆ ಪ್ರತಿದಿನ ನಮ್ಮ ಮನೆಗೆ ಪೇಪರ್ ಹಾಕುವಾಗ ಪಕ್ಕದ ಮನೆಯ ಒಂದು ಹುಡುಗಿಗೆ ಪರಿಚಯ ಮಾಡಿಕೊಂಡಿದ.
ಕೆಲ ದಿನಗಳ ನಂತರ ಆತ ಆ ಹುಡುಗಿಯೊಂದಿಗೆ ಪ್ರೀತಿ ಪ್ರೇಮ ಪ್ರಣಯದಲ್ಲಿ ಮುಳುಗಿದ. ಆ ಹುಡುಗಿಯೊಂದಿಗೆ ನಗರದ ಉದ್ಯಾನ ವನಗಳಲ್ಲಿ ಸುತ್ತಾಡಿದ. ಅಲ್ಲಿ ಅವರು ಪ್ರೀತಿ ಪ್ರೇಮ ಪಿಸು ಮಾತುಗಳು ಹಂಚಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಒಂದು ದಿನ ಹುಡುಗಿಯ ಅಪ್ಪ ವಾಯು ವಿಹಾರಕ್ಕೆಂದು ಬಂದಾಗ ಇವರಿಬ್ಬರೂ ಪ್ರೇಮದ ಜೋಡಿ ಹಕ್ಕಿಗಳ ತರಹ ಪ್ರೀತಿ ಪ್ರೇಮದೊಂದಿಗೆ ಸಿಹಿ ಮುತ್ತನ ಚುಂಬನದೊಂದಿಗೆ ಮೈ ಮರೆತು ಪ್ರೀತಿಯ ನಿಶೆಯಲ್ಲಿ ತೆಲಾಡುತ್ತಿರುವಾಗ ಆ ಹುಡುಗಿ ತಂದೆ ನೋಡಿಯು ನೋಡದಂತೆ ಅಲ್ಲಿಂದ ತಮ್ಮ ಮನೆಗೆ ಹೊರಟು ಹೋದರು.
ಆದರೆ ಪೇಪರ್ ಹುಡುಗ ಆ ಹುಡುಗಿಯೊಂದಿಗೆ ಮುಂಬೈಗೆ ಪ್ರಯಾಣ ಮಾಡಿದ. ಹುಡುಗಿಯ ತಂದೆ ನನ್ನ ಮಗಳು ರಾತ್ರಿ ವೇಳೆ ಮನೆಗೆ ಬಂದಿಲ್ಲ ಎಂದು ದುಃಖ ಪಡುತ್ತಿದ್ದರು .
ಆ ಕ್ಷಣದಲ್ಲಿ ಅವನು ಪೊಲೀಸ್ ಸ್ಟೇಷನ್ ಗೆ ಕಂಪ್ಲೆಟ್ ಕೊಟ್ಟು ಮನೆಗೆ ಬಂದನು.
ಮರುದಿನ ಬೆಳಿಗ್ಗೆ ಎಲ್ಲ ಪತ್ರಿಕೆಗಳಲ್ಲಿ
ಪೊಲೀಸರ ಸೂಚನೆ ಪ್ರಕಟಣೆಯಾಗಿತ್ತು. ಅದೇನೆಂದರೆ ” ಇಬ್ಬರು ಪ್ರೇಮದ ಜೋಡಿಹಕ್ಕಿಗಳು ಪಾರಾಗಿದ್ದಾರೆ ಇವರೆಲ್ಲಾದರೂ ಸಿಕ್ಕರೆ ಸಂಪರ್ಕಿಸಿ ” ಅಂತ ಕನ್ನಡ ಹಿಂದಿ ಮರಾಠಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಈ ಸುದ್ದಿ ನೋಡಿದ ಮುಂಬೈ ಪೋಲಿಸುವರು ಅವರನ್ನು ಹುಡುಕುವ ಕಾರ್ಯ ಚುರುಕುಗೊಳಿಸಿದರು.
ಇದನ್ನು ತಿಳಿದ ಆ ಪ್ರೇಮಿಗಳು ಹೇದರಿ ಮುಂಬೈ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದರು.
ಕೆಲ ಸಮಯದ ನಂತರ ಲಾಡ್ಜ್ ವೊಂದರ ಮಾಲೀಕರು ಇವರ ಹೆಣವನ್ನು ಪೊಲೀಸರಿಗೆ ಒಪ್ಪಿಸಿದರು.
ಆ ಕ್ಷಣದಲ್ಲಿ ಹುಡುಗಿ ಅಪ್ಪನಿಗೆ ನಿನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಂದು ಪೊಲೀಸರು ತಿಳಿಸಿದರು.
ಈ ಸುದ್ದಿ ತಿಳಿಯುತಿದ್ದಂತೆ ಹುಡುಗಿಯ ತಂದೆಗೆ ಬರ ಸಿಡಿಲು ಬಡಿದಂತಾಗಿ ನೆಲಕ್ಕೆ ಕುಸಿದನು.
– ವಿಜಯಕುಮಾರ ಚಟ್ಟಿ .
ತಾ. ಹುಮನಾಬಾದ ಜಿ.ಬೀದರ
ಮೊ. 9141949392
ಲೇಖಕರ ಪರಿಚಯ:
ವಿಜಯಕುಮಾರ ಚಟ್ಟಿ ಯವರು ಬೀದರ ಜಿಲ್ಲೆ ಹುಮನಾಬಾದಿನವರು. ಬಿ.ಕಾಂ.ಪದವಿಧರರು. ಹುಮನಾಬಾದ ನಗರದ ಬೋಧಿವೃಕ್ಷ ಪದವಿ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಇವರು ಬರೆದ ಕತೆ ಕವನ ಲೇಖನಗಳು ನಾಡಿನಾದ್ಯಂತ ಕೆಲ ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ.