ಪ್ರಕೃತಿ ಮುನಿದಾಗ
ಒಮ್ಮೆ ಪ್ರಕೃತಿ ಮುನಿದಾಗ,
ನಾವು ಕೈ ಸೋತು ನಿಂತಾಗ,
ಎಲ್ಲವು ಅಲ್ಲೋಲ ಕಲ್ಲೋಲಾದಾಗ,
ಬದುಕಿನ ದಿಕ್ಕು ದೇಶೆ ತಪ್ಪಿದಾಗ,
ಪ್ರಕೃತಿಗೆ ತೊಂದರೆ ಕೊಟ್ಟಾಗ,
ಕೆರೆ ಮುಚ್ಚಿ ಮನೆ ಕಟ್ಟಿದಾಗ,
ಮರ ಕಡೆದು ನೆಲ ಸಮ ಮಾಡಿದಾಗ,
ಹಳ್ಳ ಕೊಳ್ಳ ದಾರಿ ತಪ್ಪಿಸಿದಾಗ,
ಅನ್ಯಾಯದ ಕಹಳೆ ಉದಿದಾಗ,
ಅಣ್ಣ ತಮ್ಮಂದಿರಗೆ ಮೋಸವಾ ದಾಗ,
ಹೆಣ್ಣೆನ ಮೇಲೆ ದೌರ್ಜನ್ಯವಾದಾಗ,
ತಾಯಿ ತಂದೆ ಗೋಳಾ ಹಿಸಿದಾಗ,
ಸಿಡಿಲಿನಂತೆ ಜೋರಾಗಿ ಬರುವದು,
ಯಾರಿಗೂ ಮುನ್ನ ಸೂಚನೆ ನೀಡದು,
ಅಟ್ಟ ಹಾಸದಲಿ ಜೋರಾಗಿ ನಗುವದು,
ದಿಕ್ಕು ದೇಶೆಯನು ಬದಲಿಸಿ ಬಿಡುವದು,
ತಿನ್ನಲು ತುತ್ತು ಅನ್ನಕ್ಕೆ ಬರ ಬರಬಹುದು,
ಕುಡಿಯುವ ನೀರಿಗೆ ಆಹಾ ಕಾರವಾಗಬಹುದು,
ಮಲಗಲು ಗೇಣು ಜಾಗ ಸಿಗದಿರಬಹುದು,
ರಾತ್ರಿ ಹಗಲು ಒಂದೇ ಯಾಗಿ ಕಾಣಬಹುದು,
– ಜಯಶ್ರೀ ತೆಗ್ಗಿನಮಠ
ಬಸವನ ಬಾಗೇವಾಡಿ
ವಿಜಯಪುರ