Oplus_131072

ಪ್ರತಿಭಾವಂತ ಕವಯತ್ರಿ- ಬಂತನಾಳ ಶೋಭಾರಾಣಿ.

ಉದಯೋನ್ಮುಖ ಯುವ ಬರಹಗಾರರ ಬಳಗದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕತೆ, ಕವನ, ಲೇಖನಗಳನ್ನು ಬರೆದು ಖ್ಯಾತಿಯನ್ನು ಹೊಂದುತ್ತಿರುವ ಯುವ ಕವಯತ್ರಿಯೆಂದರೆ,

ಬಂತನಾಳ ಶೋಭಾರಾಣಿ ರವರು.
ಇವರು ಕಲಬುರ್ಗಿ ನಗರದ ಮಹಾದೇವಪ್ಪ ಮತ್ತು ಶ್ರೀದೇವಿ ದಂಪತಿಗಳಿಗೆ 1985 ರಲ್ಲಿ ಜನಸಿದ್ದಾರೆ.
ಇವರು ಓದಿದ್ದು 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದು , ತದನಂತರ ( I.T.I) ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಎರಡು ವರ್ಷ ಅವಧಿಯ ವಿದ್ಯುನ್ಮಾನ (Electronic Mechanic) ತರಬೇತಿಯಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಬಿಇಎಲ್ ನಲ್ಲಿ ಒಂದು ವರ್ಷದ ಶಿಶಿಕ್ಷು (Apperantce) ತರಬೇತಿ ಪಡೆದಿರುತ್ತಾರೆ. ಮತ್ತು ಈಗ ಬೆಂಗಳೂರಿನ KMF ನ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಬಾಲ್ಯದಿಂದಲೂ ಕತೆ, ಕವನ, ಕಾದಂಬರಿ, ಲೇಖನಗಳನ್ನು ಓದುವ
ಹವ್ಯಾಸ ಬೆಳೆಸಿಕೊಂಡಿದ್ದರು.
ಈಗ ಸಾಹಿತಿಯಾಗಿ ಹಲವಾರು ಕವನ,ಲೇಖನ ಚಟುವಟಿಕೆಗಳನ್ನು ಬರೆದು ನಾಡಿನಾದ್ಯಂತ ಗುರುತ್ತಿಸಿಕೊಂಡಿದ್ದಾರೆ.
ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಬರೆದ ಕವಿತೆಗಳು ರಾಗ ಸಂಯೋಜನೆಯಿಂದ ಕೂಡಿದ ಭಾವಗೀತೆಗಳಾಗಿ ಪ್ರಸಾರಗೊಂಡಿವೆ.

ಇವರಿಗೆ ಇವರ ಸಾಹಿತ್ಯ ಕಲೆ ಸಂಸ್ಕೃತಿಯನ್ನು ಗುರುತಿಸಿ ಬೆಂಗಳೂರಿನ ಅಕ್ಷರನಾದ ವೇದಿಕೆಯಿಂದ ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ,
ಮತ್ತು ‘ನಾರಿ ಶಕ್ತಿ ಸಾಹಿತ್ಯ ರತ್ನ ಶಿರೋಮಣಿ ‘ಪ್ರಶಸ್ತಿ ದೊರೆತಿದ್ದು ಹಾಗೂ ಅಕ್ಷರನಾದ ಸಂಸ್ಥೆಯು ಇವರ ಕವನಕ್ಕೆ ಭಾವಗೀತೆಯಾಗಿ ಸಂಗೀತ ಸಂಯೋಜಿಸಿದ್ದಾರೆ.
ಇವರ ಕವಿತೆಗಳು ಹೈದರಾಬಾದಿನ ಶೋಧವಾಣಿ ಮತ್ತು ಕಲಬುರಗಿಯ ಕಲ್ಯಾಣ ಕಹಳೆ ಸೇರಿದಂತೆ ಮೊದಲಾದ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

ಅಷ್ಟೇಯಲ್ಲದೆ ಇವರು ಹಲವಾರು ಸಾಹಿತ್ಯ ಸಂಗೀತ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿಯು ಗುರ್ತಿಸಿಕೊಂಡಿದ್ದಾರೆ.

ಇವರು ಈಗಾಗಲೇ ಬೆಂಗಳೂರಿನ
ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಮಂದೆಗೆರೆ ಮಾಧ್ಯಮ ಸಂಪರ್ಕ ಕೇಂದ್ರ ಜನೆವರಿ ತಿಂಗಳಿನಲ್ಲಿ ಸಂಕ್ರಾಂತಿ ಸುಗ್ಗಿಯ ಕಾವ್ಯಗಾನೋತ್ಸವ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಹಾಗೂ *’ಸುಖಿ ಕನ್ನಡತಿ’* ಎಂಬ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದು ಮತ್ತು ರಮೇಶ್ ಕಮತಗಿ ಅವರ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ನಿರೂಪಣೆ ಮಾಡಿರುತ್ತಾರೆ.

ಹೀಗೆ ಹಲವಾರು ಕನ್ನಡ ಕಾರ್ಯಕ್ರಮಗಳಲ್ಲಿ ತುಂಬ ಸುಂದರವಾಗಿ ನಿರೂಪಣೆ ಮಾಡಿದ್ದಷ್ಟೇಯಲ್ಲದೇ ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ದಿನ ಬಿಡುವಿಲ್ಲದ ಕೆಲಸದ ಒತ್ತಡದಲ್ಲಿಯು ಇವರು ಸಮಯ ಸಿಕ್ಕಾಗೆಲ್ಲ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾವ್ಯ ರಚಿಸುತ್ತಿರುವ ಶೋಭಾರಾಣಿಯವರು ಮುಂದಿನ ದಿನಗಳಲ್ಲಿ ಭರವಸೆದಾಯಕ ಕವಯತ್ರಿಯಾಗಿ ಹೊರಹೊಮ್ಮುತ್ತಾರೆ.
ಇವರು ಸಾಹಿತ್ಯ ಸೇವೆ ಹೀಗೆ ನಿರಂತರವಾಗಿ ಮುನ್ನುಗ್ಗಲೆಂದು ಹಾರೈಸೋಣ.

ಮಚ್ಚೇಂದ್ರ ಪಿ ಅಣಕಲ್.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ