ಪ್ರತಿಭೆ
ಹುಟ್ಟಿದ ಕೊಡಲೇ ಯಾರಿಗೂ ಯಾವ ಪ್ರತಿಭೆ ಇರುವುದಿಲ್ಲ. ಪ್ರತಿಭೆ ಎನ್ನುವ ಒಂದು ಕಲೆ ಹುಟ್ಟುವುದು ತಾ ಬೆಳೆದಂತೆ ತನ್ನ ಮನಸ್ಸಿನಲ್ಲಿ ಅಗೋಚರವಾದ ಒಂದು ಕಲ್ಪನೆ ,ಚಿಂತನೆ, ಯೋಚನೆ ಬಂದಾಗ ಮಾತ್ರ ಪ್ರತಿಭೆ ಎಂಬುದು ತಾನಾಗಿ ಹುಟ್ಟಿಕೊಳ್ಳುತ್ತದೆ.
ಈ ಭೂಮಿಗೆ ಬಂದ ಮನುಜ ತನ್ನಷ್ಟಕ್ಕೆ ತಾ ಬೆಳೆಯದೆ ತನ್ನಲ್ಲಿರುವ ಪ್ರತಿಭೆಯನ್ನು ಸಹ ಬೆಳೆಸಿಕೊಳ್ಳಬೇಕು. ತನ್ನಲ್ಲಿರುವ ಪ್ರತಿಭೆಯನ್ನ ಹೊರ ಜಗತ್ತಿಗೆ ವಿಸ್ತರಿಸಬೇಕು.
ಆಗಲೇ ಪ್ರತಿಭೆಯ ಅನಾವರಣ ಮತ್ತು ತನ್ನಲ್ಲಿನ ವ್ಯಕ್ತಿತ್ವ ತಾನಾಗೆ ಬೆಳೆಯುತ್ತೆದೆ..
ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ತಮ್ಮ ಪ್ರತಿಭೆ ಹೊರಹಕಾಲು ಪ್ರತಿಯೊಬ್ಬರಿಗೂ ಅವಕಾಶಗಳು ಖಂಡಿತ ಬೇಕಾಗಿದೆ. ಉತ್ತಮ ಅವಕಾಶಗಳನ್ನು ನೀಡುವ ಅತ್ಯುತ್ತಮ ವೇದಿಕೆ ಪ್ರತಿಭೆಯುಳ್ಳವರಿಗೆ ಸಿಕ್ಕರೆ ಖಂಡಿತ ತನ್ನಲಿರುವ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ದಾರಿ ಅತೀ ಸುಲಭವಾಗುತ್ತದೆ. ಆದರೆ ಇಂದಿಗೂ ಸಹ ಎಷ್ಟೋ ಪ್ರತಿಭೆಯುಳ್ಳ ಲಕ್ಷಾಂತರ ಕಲಾವಿದರು, ಸಾಹಿತಿಗಳು, ಬರಹಗಾರರು, ವಿದ್ಯಾರ್ಥಿಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ಇರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಸಿಗದೆ ವಂಚಿತರಾಗಿದ್ದಾರೆ.
ಏನೇ ಆಗಲಿ ಒಬ್ಬ ವ್ಯಕ್ತಿಯ ಪ್ರತಿಭೆ ಕಲೆ ಅನಾವರಣ ಗೊಳ್ಳಲು ಕಾಲ ನಿರ್ಧಾರದೊಂದಿಗೆ ಆತನ ಪ್ರತಿಭೆಯ ಕೌಶಲ್ಯ ಪರಿಶ್ರಮ ಸಹ ಅಷ್ಟೇ ಮುಖ್ಯವಾಗುತ್ತದೆ.
ತನ್ನೊಳಗಿನ ಪ್ರತಿಭೆ ಯನ್ನ ಪ್ರದರ್ಶಿಸಲು ಅದ್ಬುತವಾದ ಒಂದು ವೇದಿಕೆ ಸಜ್ಜಾಗಿ ಅವಕಾಶ ಸಿಕ್ಕಿದ್ದೇ ಆದರೆ ಆತ ಸಿಕ್ಕ ಒಂದೇ ಅವಕಾಶದೊಂದಿಗೆ ಮತ್ತಷ್ಟು ವೇದಿಕೆಗಳಲ್ಲಿ ಮತ್ತು ಅವಕಾಶ ಸರಮಾಲೆಗಳ ಹಾದಿಯಲ್ಲಿ ತನ್ನ ಪ್ರತಿಭೆಯನ್ನ ಪರಿಚಯಿಸುತ್ತಾ ಪ್ರತಿಭಾವಂತ ವ್ಯಕ್ತಿ ಎಂಬ ಸನ್ಮಾನಕ್ಕೆ ಭಜನಾನಗುತ್ತಾನೆ.
ವ್ಯಕ್ತಿಗೆ ತನ್ನ ಪ್ರತಿಭೆಯನ್ನು ಹೊರ ಹಾಕಲು ಅವಕಾಶಗಳು ತಾನಾಗೆ ಆತನ ಮುಂದೆ ಬರುವುದಿಲ್ಲ. ಆದರೆ ಆತ ತನ್ನ ಪ್ರತಿಭೆ ಹೊರಹಾಕುಲು ಅವಕಾಶಗಳತ್ತ ದಾರಿ ಹುಡುಕುವುದು ಸಹ ಒಂದು ಸಾಹಸವೇ ಆಗಿದೆ.
ಯಾಕೆಂದರೆ ಇತ್ತೀಚಿನ ಸ್ಪರ್ಧಾತ್ಪಕ ಯುಗದಲ್ಲಿ ಎಲ್ಲಾ ಕ್ಷೇತದಲ್ಲಿ ಲಕ್ಷಾಂತರ ಪ್ರತಿಭಾವಂತರು ಇದ್ದಾರೆ. ಆಗಾಗಿ ಎಲ್ಲಾರು ಎಲ್ಲಾ ಸಮಯದಲ್ಲಿ ಎಲ್ಲರಿಗೂ ಅವಕಾಶ ಸಿಗುವುದು ಕಷ್ಟವೇ ಆದರೂ ಪರಿಶ್ರಮ ಪಟ್ಟರೆ ಸಿಕ್ಕ ಅವಕಾಶದಲ್ಲಿ ನಮ್ಮ ಪ್ರತಿಭೆ ಅನಾವರಣ ಮಾಡಲೇ ಬೇಕು.
– ಬಸವೇಶ. ಎಸ್.
ಟಿ. ನರಸೀಪುರ.ಮೈಸೂರು