Oplus_131072

 

ಪ್ರೀತಿಯ ನಿವೇದನೆ.

ನಿನ್ನ ಹೆಜ್ಜೆಯ ಗುರುತಿನ
ಹಾದಿಯೊಳಗೆ ನಾನು ನಡೆಯುವೆನು…
ಗೆಳತಿ

ಯಾವ ಸೌಂದರ್ಯಕ್ಕೂ
ಕೆದಡದ ಈ ಮನವು
ನಿನ್ನ ಯವ್ವನದ ಸೌಂದರ್ಯವ
ಕಂಡು ಮನಸೋತು ಹೋಗಿದೆ

ಗೆದ್ದ ಪ್ರೀತಿಗೆ ಕೊನೆಯೇ ಇಲ್ಲದ
ಹಾಗೆ ಈ ಜೀವ ನಿನ್ನದಾಗಿರಿಸುವೆ
ಕೊನೆ ಉಸಿರು ಇರುವವರೆಗೂ
ನೀ ನನ್ನ ಅರಸಿ ಆಗಿರುವೇ…

ಹೊಸವರ್ಷದ ಆರಂಭದಿಂದಲೇ                      ನಮ್ಮಿಬ್ಬರ ಪಯಣ ಆರಂಭ…
ಪ್ರೀತಿಯಲಿ ಗೆದ್ದು ಸೋತು
ಆಗುವೆವು ಮತ್ತೆ ಮತ್ತೆ
ಪುನರ್ ಆರಂಭ…

ಜೊತೆಗೆ ಇರುವೆಯಾ ಗೆಳತಿ ನೀ ಅಮ್ಮನ ಹಾಗೇ…
ಒಳ್ಳೆಯ ಸ್ನೇಹಿತೆಯಾಗಿ ಕೂಡ
ನಾನು ನಿನ್ನ ಮಡಿಲಲಿ
ಮಲಗುವ ಪುಟ್ಟ ಮಗುವಿನ ಹಾಗೇ…

– ಮದಕರಿ ಕಾಂಬಳೆ.
ಕುಂಚನೂರು
ತಾ. ಜಮಖಂಡಿ ಜಿ.ಬಾಗಲಕೋಟ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ