Oplus_131072

ಪುನೀತನಾದ ಪುನೀತ್ .

ಕರುನಾಡ ನೆರಳಾಗಿ, ಸರಳತೆಗೆ ಹೆಸರಾಗಿ..
ನಡೆದೆ ನೀ ಎಲ್ಲಿಗೆ,ಮರಳದೆ ಮರೆಯಾಗಿ
ವರುಷ ತುಂಬಿದರು ಮರೆಯಲಾಗುತ್ತಿಲ್ಲ ಆ ನಗುವ
ನೆನೆಯದೆ ಕಳೆಯಲಾಗುತಿಲ್ಲ ಒಂದು ದಿನವ

ಯಾವ ಜನ್ಮದ ಬಂಧವೋ
ನೀ ನಮಗೇನು ಅಣ್ಣನಲ್ಲ ತಮ್ಮನಲ್ಲ
ತಂದೆಯಲ್ಲ, ಬಂಧು ಬಳಗವಲ್ಲ
ಆದರೂ ನಿನ್ನ ನೆನಪು ಬಹುವಾಗಿ ಕಾಡುತಿದೆಯಲ್ಲ..

ಎಲ್ಲ ಬಂಧಗಳ ಮೀರಿದ ಅಭಿಮಾನ ಗಳಿಸಿ
ಕನ್ನಡಿಗರ ಹೃದಯದಲ್ಲಿ ಬೇರೂರಿ ನೆಲೆಸಿ
ಪ್ರೀತಿ, ನಗುವಿನ ಅರ್ಥವನು ತಿಳಿಸಿ
ಎಲ್ಲಿ ಹೋದೆ ನೀ ನಮ್ಮೆಲ್ಲರ ಅಳಿಸಿ.?

ಮಾನವೀಯತೆಗೆ ಇನ್ನೊಂದು ಹೆಸರಾಗಿ
ದಾನ ಧರ್ಮಕೆ ಉದಾಹರಣೆಯಾಗಿ
ನಗು ನಗುತಲೇ ಮಾಯವಾದೆಯ
ಒಳ್ಳೆಯ ತನಕೆ ಮಾದರಿಯಾಗಿ..

ಅಭಿಮಾನಿಗಳಿಗೆ ದೇವರೆಂದೆ
ಶತ್ರುಗಳ ಮನದಲ್ಲೂ ಪ್ರೀತಿ ತಂದೆ
ಅಜಾತಶತ್ರುವು ನೀ ಅಮರನಾದೆ
ಅಭಿಮಾನಿ ದೇವರುಗಳಿಗೆ ದೇವರಾದೆ..

ಎ ಆರ್ ಇಂದಿರಾ ಸಿದ್ದೇಶ್
ಶಿಕ್ಷಕರು. ಸ ಹಿ ಪ್ರಾ ಶಾಲೆ. ಜರೇಕಟ್ಟೆ. ದಾವಣಗೆರೆ (ದ.ವ)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ