Oplus_131072

ಪುಸ್ತಕ ಓದುವುದು ಕಡಿಮೆಯಾಗುತ್ತಿದೆಯೇ ?

 

ಕವಿತಾ ಎಮ್.ಮಾಲಿ ಪಾಟೀಲ್

 

ಪುಸ್ತಕ ಓದಿದರೆ ಮಸ್ತಕದಲ್ಲಿ ಉಳಿಯುವುದು ” ಎಂದು ಹಿಂದೆ ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿ ಹೋಗಿದೆ. ಮೊಬೈಲಲ್ಲಿ ಓದುತ್ತಿದ್ದರಿಂದ  ನಾಳೆ ಅದು ಮರೆಯಾಗಿ ಹೋಗಬಹುದು . ಆದರೆ ಅದು ತಲೆಯಲ್ಲಿ ಉಳಿಯಲ್ಲ ಎನ್ನುವ ಮಾತು ಇನ್ನೂ ನಿಗೂಢವಾಗಿ ಉಳಿದಿಲ್ಲ.

 

ಪುಸ್ತಕಗಳು.

ಪುಸ್ತಕಗಳು ಮಾನವ ಜೀವನದ ಅವಿಭಾಜ್ಯ ಅಂಗ. ಅವು ಗತಕಾಲದ ಚರಿತ್ರೆ ಇತಿಹಾಸ ಎಂದರೆ ಹಿಂದೆ ನಡೆದ ಘಟನೆ ನಮ್ಮ ಬದುಕಿನ ಜೀವನದ ಚಕ್ರ ಎಲ್ಲವನ್ನು ಒಳಗೊಂಡಿರುತ್ತವೆ ಈ ಪುಸ್ತಕಗಳು.

ಹಿಂದೆ ಆಗಿ ಹೋದ ಘಟನೆಗಳು ವಿಸ್ಮಯಕಾರಿ ವಿಷಯಗಳು, ಆ ವಿಸ್ಮಯದಿಂದ ಯುವ ಪೀಳಿಗೆಯ ಕಲೆಕೆಗೆ ಒಳ್ಳೆಯ ಪಾಠ ಎಂದು ನಾವು ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಬರೆದಿಡುತ್ತೇವೆ.

ಅದನ್ನು ಕವಿಗಳು ವಿವಿಧ ರೀತಿಯಲ್ಲಿ ವರ್ಣಿಸಿ ನಮಗೆ ಓದುವ ಕಲೆಗೆ ಒಳಪಡಿಸಲು ಪುಸ್ತಕಗಳು ಪ್ರಕಟಿಸುತ್ತಾರೆ.
ಆ ಪುಸ್ತಕಗಳು ತರಗತಿಗೆ ಓದುವ ಪಾಠವಾಗಿ ಜೊತೆಗೆ ಹವ್ಯಾಸಿ ಬರಹ ಕಥೆ ಕಾದಂಬರಿ ನಾಟಕ ಕಿರು ಲೇಖನ ಸಂಗೀತ ಸಾಹಿತ್ಯ ಎಲ್ಲವನ್ನು ಒಳಗೊಂಡಿದ್ದು ಅವುಗಳಲ್ಲಿ ಹಾಸ್ಯ ,ಸುಖ-ದುಃಖ ಮೊದಲಾದ ನವರಸಗಳಿಂದ ತುಂಬಿ ತುಳುಕಿರುವ ವಿಷಯ ಪುಸ್ತಕದಲ್ಲಿ ಬರೆದಿಡುವ ಕಲೆ ಹಿಂದಿನಿಂದಲೂ ಇದೆ.

ಅಂತಹ ಪುಸ್ತಕಗಳನ್ನು ಏಕೆ ಈ ಆಧುನಿಕ ಯುಗದಲ್ಲಿ ಮರೆಯಾಗುತ್ತಿವೆ ಎಂದರೆ
ಓದುವರ ಸಂಖ್ಯೆ ಕಡಿಮೆಯಾಗಿ, ಕನ್ನಡ ಭಾಷೆ ಕಲಿಯುವರ ಸಂಖ್ಯೆ ಕಡಿಮೆಯಾಗಿ , ಆಡು ಭಾಷೆಯನ್ನು ಮರೆತು ಆಂಗ್ಲ ಭಾಷೆಗೆ ಹೊರೆಯಾಗಿ, ಎಲ್ಲರೂ ಆಂಗ್ಲಕ್ಕೆ ಹೆಗಲಾಗಿ, ಹೊರೆಯಾಗಿ ನಿಂತು, ಅದನ್ನೇ ಉದ್ಯೋಗ ಶಾಲೆ, ಮನಿ ಆಫೀಸು ಎಲ್ಲೆಂದರಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸುತ್ತಾ , ಓದುವ ಹವ್ಯಾಸ ಕನ್ನಡದಲ್ಲಿ ಕಡಿಮೆಯಾಗುತ್ತಿದೆ.

ಕನ್ನಡ ಸಾಹಿತ್ಯ ಓದುಗರು ಹಿರಿಯರು ಸಾಹಿತಿಗಳು, ಕವಿಗಳು ಶಾಲೆಯಲ್ಲಿ ಕಡ್ಡಾಯವಾಗಿ ಒಂದು ವಿಷಯ ಕೊಟ್ಟು ಒತ್ತಾಯವಾಗಿ ಓದಿಸುವ ಪರಿಸ್ಥಿತಿ ಇಂದು ಎದುರಾಗುತ್ತಿದೆ. ಇದಕ್ಕೆ ಮೂಲ ಕಾರಣ ನಮ್ಮ ತಂತ್ರಜ್ಞಾನ .
ಏಕೆಂದರೆ ತಂತ್ರಜ್ಞಾನ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮುಂದುವರೆದಿದೆ.
ಮತ್ತು ಪುಸ್ತಕ ಎನ್ನುವುದು ಎರಡನೇ ತಂತ್ರಜ್ಞಾನ ಈ ಮೂಲಕವೇ ನಮ್ಮ ಜೀವನ ಸಾಗಿಸುತ್ತಿರುವುದು ಬಹಳ ವಿಷಾದಕರ ಸಂಗತಿಯಾಗಿದೆ.

ತಂತ್ರಜ್ಞಾನದಲ್ಲಿ ವರ್ಣನೆ ಹೋಲಿಕೆ ಹಾಸ್ಯ ಇರಬಹುದು ಆದರೆ ಮನಸ್ಸಿಗೆ ಮುದ ನೀಡುವುದು. ಆಸಕ್ತಿ ಹೊಂದುವುದು ಹವ್ಯಾಸ ಕುತೂಹಲ ಒದಗಿಸಲು ಸಾಧ್ಯವಿಲ್ಲ.
ತಂತ್ರಜ್ಞಾನ ಹೇಗಾಗಿದೆ ಎಂದರೆ ಎಲ್ಲವೂ ಕೈಯಲ್ಲೇ ಪ್ರಶ್ನೆ ಉತ್ತರ ಎರಡನ್ನು ಒಟ್ಟೊಟ್ಟಿಗೆ ನೋಡಿ ಓದುವ ಹವ್ಯಾಸ ಇತ್ತೀಚಿಗೆ ತುಂಬಾ ಕಡಿಮೆಯಾಗುತ್ತದೆ.
ಮಕ್ಕಳು ಪರೀಕ್ಷೆ ಇದೆ ಎಂದರು ಕೂಡ ಓದುವುದಿಲ್ಲ . ಏಕೆಂದರೆ ಮೊಬೈಲ್ ಹಾವಳಿ ದೂರದರ್ಶನ ,ಲ್ಯಾಪ್ಟಾಪ, ಕಂಪ್ಯೂಟರ್ ಗಳಿಂದ ಉತ್ತರಗಳನ್ನು ನೋಡಿ ಅದಲ್ಲದೆ ಓದಿಕೊಂಡು ಶಾಲೆಗೆ ಹೋಗುವರು ಕಾಲೇಜ್ ಹೋಗುವರು ಅತಿ ಹೆಚ್ಚಾಗಿರುವುದರಿಂದ, ಶಿಕ್ಷಕರು ಮಕ್ಕಳಿಗೆ ಆನ್ಲೈನ್ ಅಭ್ಯಾಸ ಮಾಡಿಸಿ ಮಾಡಿಸಿ ಪುಸ್ತಕದ ಅರಿವೇ ಇಲ್ಲದಂತಾಗಿದೆ.

“ಪುಸ್ತಕ ಓದಿದರೆ ಮಸ್ತಕದಲ್ಲಿ ಉಳಿಯುವುದು ” ಎಂದು ಹಿಂದೆ ಹೇಳುತ್ತಿದ್ದರು. ಈಗ ಮೊಬೈಲಲ್ಲಿ ಇದ್ದರೆ ನಾಳೆ ಮರೆಯಾಗಿ ಹೋಗುವುದು . ಆದರೆ ತಲೆಯಲ್ಲಿ ಉಳಿಯಲ್ಲ ಎನ್ನುವ ಸತ್ಯ ಇನ್ನೂ ತಿಳಿದಿಲ್ಲ.

ಇತಿಹಾಸದಲ್ಲಿ ನಡೆದ ಘಟನೆಯ ವಿಸ್ಮಯ ಅದ್ಭುತ ಎಲ್ಲವನ್ನು ಬರೆದಿಡಲು ಮಾತ್ರ ಚೆಂದ. ಮೊಬೈಲ್ ಹಾವಳಿಯಿಂದ ಬರೆ ಆಲಿಸುವ ಸಾಮರ್ಥ್ಯ ಮಾತ್ರ ಓದುವ ಅಭ್ಯಾಸ ತುಂಬಾ ಕಡಿಮೆಯಾಗುತ್ತದೆ.

ಒಂದೊಂದು ದಿನ ಮತ್ತೆ ಅಕ್ಷರ ಭ್ರಮೆ. ಓದಿ ಹೇಳಿಕೊಡುವ ಕಾಲ ಬಂದರು ಬರಬಹುದು. ಆಲಿಸುವುದು, ಓದುವುದು, ಮಾತನಾಡುವುದು, ಬರೆಯುವುದು. ಈ ನಾಲ್ಕು ಕೌಶಲ್ಯ ಕಲಿಯುವುದು ಉತ್ತಮ. ಆದರೆ ಆಲಿಸುವುದು ಒಂದೇ ಆಗಬಾರದು. ಆಲಿಸುವಿಕೆಯಿಂದ ಓದುವಿಕೆ ಕಣ್ಮರೆಯಾಗಿ ಹೋಗುತ್ತದೆ. ಇದರಿಂದ ಪುಸ್ತಕಗಳ ಸಂಖ್ಯೆ ಇಡೀ ಮುಖವಾಗಿ ಓದದೆ ರಾಶಿ ರಾಶಿಗಳಿಗೆ ಲೆಕ್ಕವೇ ಇಲ್ಲ . ಹಾಗೆ ಯಾರು ಪುಸ್ತಕವನ್ನು ಪ್ರಕಟಣೆ ಮಾಡಲು ಓದಲು ಕೊಳ್ಳಲು ಹಿಂಜರಿಯುತ್ತಿದ್ದಾರೆ. ಏಕೆ ಬೇಕು ಈ ಪುಸ್ತಕ ? ಅವರಿಂದ ಏನು ಲಾಭ ? ಅನ್ನುವ ಪ್ರಶ್ನೆ ಈಗಿನ ಕಾಲದ ಮಕ್ಕಳಲ್ಲಿ ಹುಟ್ಟುತ್ತಿವೆ.

ಒಂದು ಪುಸ್ತಕ ನೂರು ವರ್ಷದ ಇತಿಹಾಸ ಹೇಳಬಹುದು. ಒಂದು ಮೊಬೈಲ್ ನೂರು ದಿನದ ಇತಿಹಾಸ ಹೇಳಲು ಸಾಧ್ಯವಿಲ್ಲ. ಆದರೂ ಅದನ್ನು ಮರೆತು ಅಹಂ’ಕಾರದಲ್ಲಿ ತೇಲಾಡುತ್ತಿರುವ ಈ ಕಲಿಯುಗದ ಜನರಿಗೆ ಪುಸ್ತಕದ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ.
ಓದುಗರ ಸಂಖ್ಯೆ ಕಡಿಮೆಯಾದರೆ ತಂತಾನೆ ಪುಸ್ತಕ ಮರೆಯಾಗುವುದು ಸಹಜ. ಓದುಗರಿಲ್ಲದ ಅನಾಥವಾದಂತಾಗಿ ನಮ್ಮ ಗ್ರಂಥಾಲಯದ ಪುಸ್ತಕಗಳು ತೇಲಾಡುತ್ತಲಿವೆ.

ಕವಿತಾ ಎಂ ಮಾಲಿ ಪಾಟೀಲ. ಜೇವರ್ಗಿ

ಕವಯತ್ರಿ ಪರಿಚಯ.

ಕವಿತಾ ಎಮ್.ಮಾಲಿಪಾಟೀಲ್

ಕವಯತ್ರಿ  ಕವಿತಾ ಎಮ್. ಮಾಲಿ ಪಾಟೀಲ ರವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದವರು.
ಇವರು ಡಿ.ಇಡಿ, ಬಿ.ಎ.ಪದವೀಧರರು ಮತ್ತು ಎಂ.ಎ ಸಾತ್ನಕೋತ್ತರ ವಿದ್ಯಾರ್ಥಿನಿಯಾಗಿದ್ದು, ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿ ಕಾಯ೯ ನಿರ್ವಹಿಸುತ್ತಿದ್ದಾರೆ.

ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು ಕತೆ ಕವನ ಲೇಖನ ಮೊದಲಾದ ತರಹದ ಬರಹಗಳು ಬರೆದಿದ್ದಾರೆ. ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇವರಿಗೆ ‘ಉತ್ತಮ ಶಿಕ್ಷಕಿ’ ಮತ್ತು ‘ಆದಶ೯ ಶಿಕ್ಷಕಿ’ ಎಂಬ ಪ್ರಶಸ್ತಿಯು ಕೂಡ ಪಡೆದಿದ್ದಾರೆ.
ಇವರ ಬರಹಗಳು ರಾಷ್ಟ್ರೀಯ, ಅಂತರಾಷ್ಟ್ರೀಯ, ಮಟ್ಟದಲ್ಲಿ ಕೂಡ ಪ್ರಕಟವಾಗಿವೆ. ಹಾಗೂ ಆನ್ಲೈನ್ ನಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳಲ್ಲಿ ಇವರಿಗೆ 500ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಅಷ್ಟೇಯಲ್ಲದೆ ಇವರು ನಾಡಿನ
ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯದಲ್ಲಿಯೇ ಇವರ ಸಾಹಿತ್ಯವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಲಿವೆ.

One thought on “ಪುಸ್ತಕ ಓದುವುದು ಕಡಿಮೆಯಾಗುತ್ತಿದೆಯೇ ?”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ