ಪುಸ್ತಕ ಪರಿಚಯ
ಕಲ್ಯಾಣ ಕರ್ನಾಟಕ ಖ್ಯಾತ ಕವಿ, ಸಾಹಿತಿ,ಚಿಂತಕ ವಿಮರ್ಶಾತ್ಮಕ ಲೇಖಕರಲ್ಲಿ ಒಬ್ಬರಾದ ಕಲಬುರ್ಗಿಯ ಎಚ್.ಎಸ್.ಬೆನಾಳ ರವರು ಬರೆದ ‘ಮಸಣದ ಆತ್ಮ‘ ಎಂಬ ಕವನ ಸಂಕಲನದಲ್ಲಿನ ಕವಿತೆಗಳು ಓದುತ್ತಾ ಹೊದಂತೆ ಸಮಯ ಹೊದದ್ದೆ ಅರಿವಾಗುವುದಿಲ್ಲ.
ಇಂದಿನ ಆಧುನಿಕತೆಯ ವಾಸ್ತವದ ಬದುಕು,ಆ ಬಡತನ, ಈ ಜಾತಿ ವ್ಯವಸ್ಥೆಯ ಮೇಲು- ಕೀಳು, ಮತ್ತೆ ಇಂದಿನ ಹೊಲಸು ರಾಜಕೀಯ, ಅನೇಕ ವಿಚಾರಗಳನ್ನು ಅವರು ನೇರ ನೇರವಾಗಿ, ಸರಳತೆಯಿಂದ ಓದುಗ ಜನಸಾಮಾನ್ಯರಿಗೆ ಅರ್ಥವಾಗುವಂತೆ ಬರೆದಿರುವುದು ಕಂಡು ಬರುತ್ತದೆ.
ಈ ಕಾವ್ಯ ಸಂಕಲನದಲ್ಲಿ
ನೆತ್ತರ ಮತ್ತು ಅಕ್ಷರ.
ಶಬ್ದವೇದಿಯ ವಿದ್ಯೆ.
ಭೀತಿಯ ಬಂಡೆ.
ಗೋರಿ ಮೇಲಿನ ಹಣತೆ. ಎಂಬ ಕವಿತೆಗಳು ತುಂಬಾ ಅದ್ಭುತವಾದ ಮೂಡಿಬಂದಿವೆ.
ಅ ಪದ್ಯಗಳೊಗಿನ
ಸಾಲುಗಳು….
“ಧ್ಯಾನಕ್ಕೆ ಕೂತ ಜಾತಿ
ಹೇಳುತ್ತಿದೆ
ಅಸ್ಪೃಶ್ಯರೊಂದಿಗೆ
ಆಹಾರ ಸೇವಿಸುವುದಿಲ್ಲ….!”
ಇಂತಹ ಅನೇಕ ನೋವಿನಿಂದ ಬಂದ ಸಾಲುಗಳು..
ಭಾವೈಕ್ಯಾತೆ ಎಂಬ ಕವನವು ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ನವರಂತೆ ಹೃದಯ ಸ್ಪರ್ಶಿಯಾಗಿ ಬರೆದಿದ್ದಾರೆ.
ಇವತ್ತಿನ ಇಂತಹ ದಿನಗಳಲ್ಲಿ ನೇರವಾಗಿ, ಧೈರ್ಯವಾಗಿ ಬರೆಯವರು ತುಂಬಾ ವಿರಳ. ಬರೆದರೂ ಅದು ಪ್ರಕಟಣೆ ಮಾಡದೇ ಸಮಾಜಕ್ಕೆ ಹೆದರಿ ಇರುವವರು ತುಂಬಾನೆ ಇದ್ದಾರೆ… ! ಏಕೆಂದರೆ ಅನುಭವಿಸಿದವರಿಗೆ ಗೊತ್ತು. ನನ್ನ ಕವನಗಳನ್ನು ನಮ್ಮವರೇ ವಿರೋಧಿಸಿದ ದಿನಗಳನ್ನ ನಾನು
ನೋಡಿದ್ದೇನೆ. ನಮ್ಮ ಮನೆಯವರೇ
“ಏಕೆ ಬೇಕು ನಿನಗೆ ಇಂತಾ ಊರ ಉಸಾಬರಿ ?” ಅಂತಾ ಬೈದ ಸಂದರ್ಭಗಳು ಇವೆ.
ಇಂದಿನ ಜಾತಿ ವ್ಯವಸ್ಥೆಯು ಪುರಾತನದ ದೊಡ್ಡ ಆಲದ ಮರದಂತೆ ಆಳದಗಲಕ್ಕೂ ಬೇರು ಬಿಟ್ಟಿದೆ..
ಇದನ್ನು ಇಂದು ಕೀಳಲು ಆಗದ ಮಟ್ಟಕ್ಕೆ ಆಳಕ್ಕೆ ಇಳಿದು ಬಿಟ್ಟಿದೆ . ನಾನು ಇಂತಹ ಘಟಕಗಳು ತುಂಬ ಹತ್ತಿರದಿಂದ ನೋಡಿದ್ದೇನೆ, ಅವುಗಳನ್ನು ವಿರೋಧಿಸಿದ್ದೇನೆ, ಆದರೆ ಅವಕ್ಕೆ ರಾಜಕೀಯ ಬಣ್ಣ ಬಳಿಯುವವರೆ ಹೆಚ್ಚು. ಯಾರೇ ಕೇಳಿದ್ರು ಮೊದಲಿಗೆ ಕೇಳೋದು ನೀನು ಯಾವ ಜಾತಿ ? ಅದರ ಮೇಲೆ ಎಲ್ಲವೂ ನಿರ್ಧರಿಸುತ್ತಾರೆ.
ಹಾಗಾಗಿ ಈ ಸಂಕಲನದಲ್ಲಿ ಲೇಖಕರು ಜಾತಿ ವ್ಯವಸ್ಥೆಯ ಕುರಿತು ಮತ್ತು ದೀನ ದಲಿತರ ಬಡ ಜನಾಂಗದ ನೋವಿನ ಭವಣೆಯ ಕುರಿತು ಕವಿತೆ ಹೆಣೆದಿದ್ದಾರೆ.
ಒಟ್ಟಿನಲ್ಲಿ ಎಚ್.ಎಸ್.ಬೇನಾಳ ಅವರು ಉತ್ತಮ ಉಪನ್ಯಾಸಕರಷ್ಟೆಯಲ್ಲ ಅವರೊಬ್ಬ ಪ್ರತಿಭಾವಂತ ಕವಿ ಸಾಹಿತಿಗಳು ಕೂಡ ಹೌದು. ಅನ್ನೋದು ಬೇರೆ ಹೇಳಬೇಕಾಗಿಲ್ಲ. ಎಲ್ಲರೂ ಓದುವಂತ ಉತ್ತಮ ಕಾವ್ಯಗಳ ಗುಚ್ಛ ಈ ‘ಮಸಣದ ಆತ್ಮ’ ಎಂಬ ಕೃತಿ ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ಲೇಖಕರು: ಎಚ್. ಎಸ್.ಬೆನಾಳ.
ಪುಟಗಳು- 160
ಬೆಲೆ- 130
ಪ್ರತಿಗಳು-1000
ಪ್ರಥಮ ಮುದ್ರಣ-2020
ಪ್ರಕಾಶನ- ಸಹನಾ ಪ್ರಕಾಶನ ಕಲಬುರಗಿ.
– ಪ್ರಶಾಂತ ಪಾಟೀಲ್
ದಾವಣಗೆರೆ