Oplus_131072

ಪುಸ್ತಕ ಪರಿಚಯ.

ಸಾಹಿತಿ ಎಚ್ ಎಸ್. ಬೇನಾಳರವರು ಬರೆದ ‘ವಿಶ್ವ ಕಂಡ ಶ್ರೇಷ್ಠ ಆರ್ಥಿಕ ಚಿಂತಕ ಡಾ.ಬಾಬಾಸಾಹೇಬ ಅಂಬೇಡ್ಕರ್” ಎಂಬ ಪುಸ್ತಕ ಓದುತ್ತಾ ಹೋದಂತೆ ನಮ್ಮಗೆ ಗೊತ್ತಿರದ ಅನೇಕ ವಿಷಯಗಳು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಧೀನ ದಲಿತ ಬಡವರ ಬಂಧು ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಚರಿತ್ರೆ ಮತ್ತು ಅವರ ಬದುಕಿನ ಬವಣೆಗಳು ಈ ಕೃತಿಯಲ್ಲಿ ಕಾಣಬಹುದು.
ಅಂಬೇಡ್ಕರ್ ರವರು ಕೃಷಿ & ಭೂ ಹಿಡುವಳಿಯ ಕುರಿತು ಅಂದಿನ ಚರ್ಚೆಯಲ್ಲಿಯ ಕೃಷಿ ಚಿಂತಕರ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲದ ವಿಷಯ ಈ ಪುಸ್ತಕದಿಂದ ತಿಳಿದುಕೊಳ್ಳಬಹುದಾಗಿದೆ. ರೈತನು ಈ ದೇಶದ ‘ಬೆನ್ನೆಲುಬು.’
ಈ ದೇಶದ ರೈತರು ಮತ್ತು ಅವರ ಏಳಗೆಯ ಬಗ್ಗೆ ಅಂದು ಚಿಂತನೆ ಮಾಡಿದ ಮಹಾತ್ಮರೆಂದರೆ ಡಾ. ಅಂಬೇಡ್ಕರ್. ಅವರು ಹೀಗೆ
ಅನೇಕ ವಿಚಾರಗಳನ್ನು ಹೇಳಿರುವುದು ಈ ಕೃತಿಯಲ್ಲಿ ಲೇಖಕರು ತುಂಬ ಚನ್ನಾಗಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ, ಈ ತರಹದ ಪುಸ್ತಕದ ವಿಷಯಗಳು ಜನ ಸಾಮಾನ್ಯರಿಗೆ ತಿಳಿಸಬೇಕಾಗಿದೆ.
ಅಂಬೇಡ್ಕರ್ ಅವರ ಚಿಂತನೆ, ಆಲೋಚನೆ, ಈ ದೇಶಕ್ಕೆ ಅಷ್ಟೇ ಅಲ್ಲ, ಬೇರೆ ದೇಶಗಳು ಅಳವಡಿಸಿ ಕೊಂಡಿರುವಾಗ, ಇನ್ನು ನಮ್ಮ ಭಾರತ ದೇಶದ ಜನ ಅವರನ್ನು ಜಾತಿ ಯಿಂದ ಕೀಳಾಗಿ ಕಾಣುವುದು ಸರಿಯಲ್ಲ.
ಇಂತಹ ಮಹಾತ್ಮರು ನಮ್ಮ ದೇಶದಲ್ಲಿ ಹುಟ್ಟಿರುವುದು ಈ ಭಾರತಾಂಬೆಗೆ ಹೆಮ್ಮೆ, ಈ ದೇಶದ ಗೌರವ ಹೆಚ್ಚಿಸಿದ ಮಹಾನ್ ಮಾನವತಾವಾದಿ ಡಾ.ಅಂಬೇಡ್ಕರ್ ರವರು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಸಿಗುವಂತೆ ಮಾಡಿದ ಪುಣ್ಯವಂತ. ಹೆಣ್ಣು ದೇವತೆ ಎಂಬ ಕಲ್ಪನೆ ಕೇವಲ ಧಾರ್ಮಿಕ ಗ್ರಂಥಗಳಲ್ಲಿ ಮಾತ್ರ ಸೀಮಿತವಾಗಿದ್ದ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ನಿಜವಾದ ಗೌರವ, ಮನ್ನಣೆ ಕೊಟ್ಟ ಮಹಾನ್ ದೇವತಾ ಮನುಷ್ಯ ನಮ್ಮ ಡಾ. ಅಂಬೇಡ್ಕರ್. ಅನ್ನೋ ವಿಚಾರ ಆಳವಾಗಿ ಇಲ್ಲಿ ತಿಳಿಸಿದ್ದಾರೆ.

ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾಳಜಿ ವಹಿಸಿ ಅವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡುವಂತೆ ಶ್ರಮಿಸಿದವರು ಅಷ್ಟೇಯಲ್ಲದೆ ಮಹಿಳೆಯರು ಶಿಕ್ಷಣ ಮತ್ತು ಸರ್ಕಾರಿ ಹುದ್ದೆಯಲ್ಲಿ ಮಿಸಲಾತಿ ನೀಡಿ ಸಂವಿಧಾನ ರಚಿಸಿದ್ದಾರೆ. ಅಂದು ಮಹಿಳೆಯರಿಗೆ ಸರಿಯಾದ ಸ್ಥಾನ ಮಾನ ಸಿಗದೇ ಇದ್ದಾಗ ತಮ್ಮ ಕಾನೂನು ಮಂತ್ರಿಸ್ಥಾನಕ್ಕೆ ರಾಜಿನಾಮೇ ಕೊಟ್ಟು ಹೊರಬಂದಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಕೃತಿ ಓದಲೇಬೇಕಾಗಿದೆ.
ಒಟ್ಟಿನಲ್ಲಿ ಲೇಖಕರು ಈ ಕೃತಿಯಲ್ಲಿ ಗ್ರಾಮೀಣ ಅರ್ಥವ್ಯವಸ್ಥೆಯ ಪ್ರಾಬಲ್ಯ, ಬಡತನ, ಕೃಷಿ ಜೀವನ, ಕೃಷಿ ಕಾರ್ಮಿಕರ ಮತ್ತು ಚಿಕ್ಕ ಭೂ ಹಿಡುವಳಿದಾರ ಸಮಸ್ಯೆಗಳು, ಕೌಶಲ್ಯದ ಕೊರತೆಗಳು ನೀಗಬೇಕಾದರೆ ಭಾರತದ ಸಾಮಾಜಿಕ-ಆರ್ಥಿಕ ಜೀವನ ಶೈಲಿಯು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಇಲ್ಲಿ ತುಂಬ ಚನ್ನಾಗಿ ವಿಚಾರ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸಾಂಪ್ರದಾಯಿಕ- ಸಾಮಾಜಿಕ-ಆರ್ಥಿಕ ಜೀವನದ ಪ್ರಭಾವ ಮತ್ತೊಂದೆಡೆ ಆಧುನಿಕತೆಯ ಭರಾಟೆ ಇವುಗಳ ಮಧ್ಯೆ ಭಾರತೀಯ ಪ್ರಜೆಗಳು ಗೊಂದಲದ ಗೂಡಿನಲ್ಲಿ ಬದುಕುತ್ತಿದ್ದಾರೆ. ಎಂಬುದರ ಹಿನ್ನಲೆಯಲ್ಲಿ ಎಚ್.ಎಸ್. ಬೇನಾಳರು ವಿಮರ್ಶಿಸಿರುವ ಬಾಬಾ ಸಾಹೇಬ್ ಡಾ. ಬಿ. ಆರ್.ಅಂಬೇಡ್ಕರ ಅವರ ಆರ್ಥಿಕ ಚಿಂತನೆಗಳನ್ನು ಈ ಕೃತಿಯಲ್ಲಿ ಓದಿ ತಿಳಿಯಬಹುದಾಗಿದೆ.

ಲೇಖಕರು: ಎಚ್.ಎಸ್. ಬೇನಾಳ
ಪುಟಗಳು: 130
ಬೆಲೆ: 110.
ಪ್ರಥಮ ಮುದ್ರಣ: 2017
ಪ್ರಕಾಶಕರು: ಸಹನಾ ಪ್ರಕಾಶನ. ಪ್ಲಾಟ್‌ ನಂ. 408, ಸಿ.ಐ.ಬಿ ಕಾಲೋನಿ, ಕೇಂದ್ರ ಬಸ್‌ ನಿಲ್ದಾಣದ ಹಿಂದುಗಡೆ, ಎಂಎಸ್.ಕೆ. ಮಿಲ್‌ ರಸ್ತೆ, ಗುಲಬರ್ಗಾ-585103
Phone: 9901177823

ಪ್ರಶಾಂತ ಪಾಟೀಲ್
ದಾವಣಗೆರೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ