ಕಲ್ಯಾಣ ಕರ್ನಾಟಕದ ಸಾಹಿತಿಗಳಲ್ಲಿ ಹೆಸರುವಾಸಿಯಾದ ಕತೆಗಾರರೆಂದರೆ ಮಚ್ಚೇಂದ್ರ ಪಿ ಅಣಕಲ್ ರವರು.
ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಕಿಣ್ಣಿ ಗ್ರಾಮದವರು. ಇವರ ಕತೆಗಳಲ್ಲಿ ದಲಿತರ ಬಗ್ಗೆ ಅವರು ನೊಂದ ಜೀವಕ್ಕೆ ಸಾಂತ್ವನ ಹೇಳುವ ಬಗ್ಗೆ ಮತ್ತು ಅವರು ಸಾಮಾಜಿಕವಾಗಿ ಹೇಗೆ ಅವಮಾನಕ್ಕೆ ಒಳಪಟ್ಟರು ಎಂಬುದನ್ನು ಕಥೆಗಳಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಅನುಭವಿಸಿದ ಅವಮಾನ ಮತ್ತು ತಾನು ತನ್ನ ಸ್ವಂತ ಅನುಭವದಿಂದ ಮೇಲೆ ಬಂದ ವಿಧಾನ ಈ ಕತೆಗಳಲ್ಲಿ ಹಿಡಿದಿಟ್ಟಿದ್ದಾರೆ.
ಒಟ್ಟು ಹನ್ನೆರೆಡು ಕಥೆಗಳಿರುವ ಈ ‘ಹಗಲುಗಳ್ಳರು‘ ಎಂಬ ಕಥಾ ಸಂಕಲನದ ಕತೆಗಳು ಓದುತ್ತಾ ಹೊದಂತೆಲ್ಲ ಮುಂದೆನಾಗುತ್ತೆ ? ಎಂಬುದನ್ನು ಕುತೂಹಲದಿಂದ ಓದಿಸಿಕೊಂಡು ಹೋಗುವುದರೊಂದಿಗೆ ಕತೆಯ ನೈಜತೆ ಮತ್ತು ಸಂಕಟ ಎರಡನ್ನು ಈ ಕಥಾಸಂಕಲನದಲ್ಲಿ ಕಾಣಬಹುದು. ತಾನು ಬದುಕಿ ಇತರರನ್ನು ಬದುಕಿಸು ಎಂಬ ಆಶಾಭಾವ ಈ ಕಥೆಗಳಲ್ಲಿ ವ್ಯಕ್ತ ವಾಗುತ್ತದೆ. ಮಗನನ್ನೆ ಅಪಘಾತದಲ್ಲಿ ಕಳೆದುಕೊಂಡ ಅಪ್ಪನಿಗೆ ಅದು ಅರಿವಿಗೆ ಬಂದಾಗಿನ ಸಂಕಟ,ವಾಸ್ತವ ಬದುಕನ್ನು ಅದರ ಓರೆ ಕೋರೆಗಳನ್ನು ಓದುಗ ಪ್ರಪಂಚಕ್ಕೆ ಪರಿಚಯಿಸುತ್ತದೆ.
ದೇವರ ಹೆಸರಿನಲ್ಲಿ ಸುಲಿಗೆ ಮಾಡುವ ನಯಗಾರಿಕೆಯನ್ನು ಈ ‘ಹಗಲುಗಳ್ಳರು’ ಕಥೆಯು ತಿಳಿಸುತ್ತದೆ.
ಬಾನಾಮತಿಯ ಬಗ್ಗೆ ಅಲ್ಲಿನ ಹಣ ಸುಲಿಗೆ ಮಾಡುವ ವಿಧಾನದ ಬಗ್ಗೆ ‘ ಒಂದು ಎರಡು ಮೂರು ‘ ಎಂಬ ಕತೆ ಬೆಳಕು ಚೆಲ್ಲುತ್ತದೆ. ‘ಋಣಾನುಬಂಧ’ಎಂಬ ಕಥೆಯಲ್ಲಿ ಅವರ ತಪ್ಪಿನ ಅರಿವು, ಅತ್ತಿಗೆಗೆ ಮದುವೆಯಾದ ವಿಧಾನ ಅವಳ ಬಗ್ಗೆ ಮೈದುನರ ಪ್ರೀತಿ
ಮಮತೆ ಗಂಡ ಇದ್ದರು ಅತ್ತಿಗೆ ಇನ್ನೊಬ್ಬರ ಹೆಂಡ್ತಿಯಾದ ಬಗೆ ಇದರಲ್ಲಿ ಕಣ್ಣೀರು ಬರಿಸುತ್ತದೆ ಅವರ ವಿವರಣೆಗಳು.
ಹಟ ಕಥೆಯಲ್ಲಿ ಪ್ರೀತಿಸಿ ಮದುವೆಯಾದ ಬಗೆ ಹಾಗೂ ಪಟ್ಟ ಕಷ್ಟಗಳು ಏನೇನು ಎಂಬುದನ್ನು ವಿವರಿಸಿದ್ದಾರೆ.
ಮಠದ ಹಿಂದೆ ರಾಜಕಾರಣಿ ಹೇಗೆ ಮತಗಳನ್ನು ಪಡೆಯಲು ದುಂಬಾಲು ಬೀಳುತ್ತಾನೆ. ಎಂಬುದನ್ನು ಬಹಳ ಅರ್ಥ ವತ್ತಾಗಿ ವಿವರಿಸಿದ್ದಾರೆ.
ಲಕ್ಕಜ್ಜನ ಹೊಲದ ಪುರಾಣ ಮಕ್ಕಳು ಇರದವರ ಬದುಕು ಎಷ್ಟು ಚಿಂತಾಜನಕ ಹಾಗೂ ಸಹಾಯ ಮಾಡಿ ಹೇಗೆ ಆಸ್ತಿಯನ್ನು ವಶಪಡಿಸಿ ಕೊಳ್ಳುತ್ತಾರೆ
ಎಂಬುದನ್ನು ತಿಳಿಸಿದ್ದಾರೆ.
ಹೆಸರಿಗಾಗಿ ಹೇಗೆಲ್ಲ ಜನರು ವಿವಿಧ ಕಾರಣ ನೀಡಿ ಜನರನ್ನು ಮೋಸಗೊಳಿಸುತ್ತಾರೆ ಎಂಬುದನ್ನು ಕಥೆಯಲ್ಲಿ ಮಾಹಿತಿ ನೀಡಿದ್ದಾರೆ.
‘ಒಂದು ಮಾಂಸದ ಮೂಳೆ’ ಎಂಬ ಕತೆಯಲ್ಲಿ ಅಸ್ತಿಕ ನಾದ ಮನುಷ್ಯನ ಭಾವದ ಭಕ್ತಿಯನ್ನು ತಿಳಿಸಿದ್ದಾರೆ.
ಮಗುವಿನ ಹಸಿವು ‘ ಅದು ದೂರವಾದ ಬಗೆಯನ್ನು ನೈಜ ಉದಾಹರಣೆಗಳ ಮೂಲಕ ವಿವರಿಸಿ ಹೇಳಿದ್ದಾರೆ.
ಸ್ವಾಭಿಮಾನ ಇಲ್ಲದ ವ್ಯಕ್ತಿ ಜೀವಂತ ಶವ ಎಂಬುದನ್ನು ಮನೋಹರವಾಗಿ ಬಿಂಬಿಸಿದ್ದಾರೆ.
ಕಥೆ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ರೊಪ್ಗೊಲ್ಲುವ್ ವಿವರಣೆಯನ್ನು ಹೊಂದಿದ್ದು ದಲಿತ ಹೇಗೆ ಶೋಷಣೆ ಅನುಭವಿಸಿತ್ತಾನೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಕಥೆಯಲ್ಲಿ ಎಳೆ ಎಳೆ ಯಾಗಿ ವಿವರಿಸುತ್ತಾ ಮಾನವ ಹೆಸರು
ಗಳಿಸಲು ಮೋಸಗೊಳಿಸಿ ಜನರನ್ನು ಹೇಗೆ ಅವಕಾಶಗಳ ವಿರುದ್ದ ಪ್ರತಿಭಟನೆ ನಡೆಸಿಕೊಂಡು ಎದ್ದು ನಿಲ್ಲುತ್ತಾನೆ . ಎಂಬುದನ್ನು ತಿಳಿಸಿ ಕಥೆಗಳು ತಮ್ಮ ಜೀವ
ಉಳಿಸಿಕೊಳ್ಳಲು ಹೆಣಗಾಡಿದ ಎಂಬ ಬಗೆಯನ್ನು ತಿಳಿಸುತ್ತವೆ.
– ಮಹೇಶ್ ಎಸ್ ಹೆಚ್ ಉಜ್ಜಿನಿ.
ಸರ್ಕಾರಿ ಪ್ರೌಢ ಶಾಲೆ
ಹೆಸರೂರ್ ತಾ. ಮುಂಡರಗಿ
ಜಿಲ್ಲಾ ಗದಗ