ಪುಸ್ತಕ ಪರಿಚಯ.

ಉದಯೋನ್ಮುಖ ಯುವಕವಿ ಹಾಗೂ ಶ್ರೀ ಅಜಿತ್ ಎನ್ ನೇಳಗಿಯವರು ಸಾಹಿತ್ಯಲೋಕಕ್ಕೆ ತಮ್ಮದೆ ಆದ ಛಾಪು ಮೂಡಿಸಲು ಅಣಿಯಾಗಿದ್ದಾರೆ. ತಮ್ಮ ಕವಿತೆಗಳ ಮೂಲಕ ಸಾಮಾಜಿಕ ಕಳಕಳಿ ಮತ್ತು ನೈತಿಕ ಜವಾಬ್ದಾರಿಯನ್ನು ಹೆಚ್ಚಿಸುವಂತೆ ಕವಿತೆ ರಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
೨೦೧೬ರ ಇಸವಿಯಲ್ಲಿ ತಮ್ಮ ಮೊದಲ ಮೊದಲ ಕೃತಿ ‘ಬಯಕೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದು ಅದರಲ್ಲಿ ನಲವತ್ತು ಕವಿತೆಗಳಿವೆ.ಈ ಕವಿತೆಗಳು ಪ್ರೀತಿ-ಪ್ರೇಮ,ನೋವು-ನಲಿವು ಬಡತನ-ಸಿರಿತನ,ಸಾಮಾಜಿಕ ಮಾನವೀಯತೆ ಮತ್ತು ಪರಿಸರ ಹೀಗೆ ತಮ್ಮ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ವಿಶಿಷ್ಟವಾದ ರೀತಿಯಲ್ಲಿ ಕವಿತೆಗಳನ್ನು ಹೆಣೆದಿದ್ದಾರೆ. ಕವಿಗೆ ಹೆಣ್ಣಿನ ಬಗ್ಗೆ ಅಪಾರವಾದ ಗೌರವವಿದೆ. ತಾಯಿ, ಸಹೋದರಿ, ಸಂಗಾತಿ ಕೊನೆಗೆ ಮಗಳು ಇವರು ಜೀವನವನ್ನು ಉನ್ನತಿಗೊಯ್ಯುವ ಭಾಗ್ಯದ ಬಾಗಿಲೆಂದು ಬಿಂಬಿಸಿದ್ದಾರೆ.

ಹೆತ್ತವರಿಗೆ, ಗುರುವಿಗೆ, ಒಡಹುಟ್ಟಿದವರಿಗೆ ಯಾರಿಗೆ ತಮ್ಮ ಮೇಲೆ ಅಧಿಕಾರ ಕೊಡಬೇಕೆಂದು ಕವಿ ಚಿಂತಮಗ್ನರಾಗಿದ್ದಾರೆ. ಇಲ್ಲಿ ಸಂಭವಿಸಿದ ಅನಾಹುತಗಳ ಬಗ್ಗೆ ಮಾನವೀಯತೆಗೆ ಕೇಳುವ ಪ್ರಶ್ನೆ ಮತ್ತು ಅನ್ಯಾಯಕ್ಕೆ ನ್ಯಾಯದೊರಕಿಸುವ ಸಲುವಾಗಿ ನಿಜವಾಗಿಯೂ ಜನ್ಮತಾಳುವುದು ತುಂಬಾ ರೋಚಕವಾಗಿದೆ.ಇಂತಹ ಕವಿತೆಗಳನ್ನು ಕವಿ ಸಹೃದಯತೆಯಿಂದ ಕಾವ್ಯ ವಾಚಕರಿಗೆ ಪ್ರೇಮ ಹಾಲುಣಿಸಿ ರೋಮಾಂಚನಗೊಳಿಸಿದ್ದಾರೆ. ಹಾಗೆಯೇ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಸುಸಂಸ್ಕೃತವಾದ ನಮ್ಮ ಹೆಣ್ಣಿನ ಸಂಸ್ಕೃತಿ ನಶಿಸುತ್ತಿದೆ ‘ ಬದಲಾವಣೆ ,’ ಕವನದಲ್ಲಿ ಕಾಣಿಸಿಕೊಂಡಿರುವುದು ಶೋಚನೀಯ. ಸಮಾಜದಲ್ಲಿನ ಜಾತಿ, ಧರ್ಮ, ಲಿಂಗ ತಾರತಮ್ಯ, ಭೇದ ಭಾವ, ಅಸಮಾನತೆಗೆ ದನಿಯೆತ್ತಿ, ‘ ಹೆಣ್ಮಗಳೇ ಬೇಡ’ ಕವನದಲ್ಲಿ, ಹೆತ್ತಿ ಹಾಲುಣಿಸಿದವಳು, ರಾಖಿ ಕಟ್ಟಲು ಜೊತೆಯಾಗಿ ಹೆಣ್ಣು ಬೇಕು ಆದರೆ ಮಗಳಿಗಾಗಿ ಹೆಣ್ಣು ಬೇಡುವುದನ್ನು ಪ್ರತಿಭಟಿಸಿದ್ದಾರೆ. ಜಾತಿಯಿಂದ ಕೂಡಿದ ವ್ಯವಸ್ಥೆ ಅಳಿಸಲು, ಮಾನವ ಜನಾಂಗದ ಕಣ್ತೆರೆದು ಬುದ್ಧಿ ಮಾತು ಹೇಳುವ ಕವಿ. ‘ ತೊರೆಯಬೇಡ ‘ ಕವನದಲ್ಲಿ ತಾಯ್ನೆಲದ ಮಡಿಲಲ್ಲಿ, ಅನ್ನ ಉಂಡು, ನೀರು ಕುಡಿದು, ಮಣ್ಣಿನಲ್ಲಿ ಆಟ ಆಡಿ ಬೆಳೆದು, ಕೊನೆಗೆ ಹಣದ ವ್ಯಾಮೋಹಕ್ಕೆ ದೇಶಕ್ಕೆ ಹೋಗುವವನಿಗೆ ಮಾತೃಭೂಮಿಯ ಮಹತ್ವ ಸಾರಿದ್ದಾರೆ. ಕವಿ ತಾಯಿ ಮತ್ತು ಗುರುವಿನ ಕುರಿತು ಬರೆದ ಕವಿತೆ ಅಕ್ಷರಶಃ ನೈಜತೆಯ ಪ್ರತೀಕವಾಗಿದೆ. ತಾಯಿ ಗರ್ಭಗುಡಿಯಲ್ಲಿ ನೆಲೆಸಿದ ಸಾಕ್ಷಾತ್ ದೈವಸ್ವರೂಪಿ, ಹೆಜ್ಜೆನಷ್ಟು ಸವಿಯಂತೆ ತುಂಬಿದ ಅಮೃತರತ್ನಾಗರ. ‘ಗುರು ಇದ್ದರೆ ಗುರಿ; ಇಲ್ಲದಿದ್ದರೆ ಮಂಕು ಕುರಿ’ ನುಡಿಯಂತೆ ಗುರುವಿಗೆ ತೋರುವ ಭಕ್ತಿ ಪ್ರಧಾನವಾಗಿ ಅರಳಿದೆ. ಗೌರವತ್ತಾಗಿ ಕವಿಗೆ ಕನ್ನಡ ಮೇಲಿರುವ ಪ್ರೀತಿ ಎಂತಹದು ‘ಸಾಧ್ಯ ಅಸಾಧ್ಯ’ ಕವಿತೆಯಲ್ಲಿ ಗಮನ ಸೆಳೆದಿದ್ದಾರೆ. ಮತ್ತು ‘ಬಯಕೆ’ ಬಯಸಿದಂತೆ ಒಲವಿನ ಕವಿ, ಪ್ರೇಮ ಕವಿ ‘ಶ್ರೀ ಕೆ.ಎಸ್.ನರಸಿಂಹಸ್ವಾಮಿ’ಯ ಕವನ ರೂಪದಂತೆ ನಿರೂಪಿಸಿದ್ದಾರೆ. ‘

ಪುಸ್ತಕದ ಹೆಸರು : ಬಯಕೆ.(ಕವನಸಂಕಲನ)
ಪ್ರಕಟಣಾ ವರ್ಷ : 2016
ಹಕ್ಕುಗಳು : ಲೇಖಕರದ್ದು
ಪುಟಗಳ ಸಂಖ್ಯೆ : 78
ಪ್ರಕಾಶಕರು : ಬನ್ನೇರ್ ಪ್ರಕಾಶನ,                    ಬಸವನಗರ ಕಾಲೋನಿ, ಬೀದರ

ರಾಜು ಮಾರುತಿ ಪವಾರ

One thought on “ಪುಸ್ತಕ ಪರಿಚಯ.”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ