Oplus_131072

ರಮಣಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಡಾ.ಗುರುಲಿಂಗಪ್ಪ ಧಬಾಲೆ.

ಗಡಿನಾಡು ಕನ್ನಡಿಗರಾಗಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುತ್ತಿರುವ ಬಸವಕಲ್ಯಾಣ ತಾಲ್ಲೂಕಿನ ತೊಗಲೂರು ಗ್ರಾಮದ ಡಾ.ಗುರುಲಿಂಗಪ್ಪ ಧಬಾಲೆಯವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡುವ ರಮಣಶ್ರೀ ಪ್ರತಿಷ್ಠಾನದ 2024ನೇ ಸಾಲಿನ ‘ರಮಣಶ್ರೀ ಶರಣ’ ಹಿರಿಯ ಶ್ರೇಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಗೆ 40 ಸಾವಿರ ಮತ್ತು ಪ್ರಶಸ್ತಿ ಫಲಕ ಕೊಟ್ಟು ಗೌರವಿಸಲಾಗುತ್ತದೆ.
ಇವರು ಈಗಾಗಲೇ 25 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮತ್ತು ಇವರು
ಕವನ, ಲೇಖನ, ಪ್ರಬಂಧ, ಶರಣ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ.

ಇವರು ತೊಗಲೂರು ಗ್ರಾಮದ ಶೆಂಕರೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ 2-4-1967 ರಲ್ಲಿ ಜನಿಸಿದ್ದು, ಎಂ.ಎ; ಎಂ.ಫಿಲ್; ಪಿಎಚ್.ಡಿ.ಪದವೀಧರರಾಗಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯ ಸಿ.ಬಿ.ಖೇಡಗಿ ಬಸವೇಶ್ವರ ವಿಜ್ಞಾನ ಆರ್.ವಿ.ವಾಣಿಜ್ಯ ಮತ್ತು ಆರ್.ಜೆ.ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾರ್ಥಿದೆಸೆಯಲ್ಲಿಯೆ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿ ಬೆಳೆಸಿಕೊಂಡ ಧಬಾಲೆಯವರು ಶಿಕ್ಷಣ ಸಂಘಟನೆಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದರು.

1991ರಲ್ಲಿ ‘ಅಂಬಿಗರ ಚೌಡಯ್ಯನ ವಚನಗಳು ಒಂದು ಅಧ್ಯಯನ ‘ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಪಡೆದು ,2003 ರಲ್ಲಿ ‘ ಬೀದರ ಜಿಲ್ಲೆಯ ಅನುಭಾವಿ ಕವಿಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.

ಇವರು ಪ್ರಕಟಿಸಿದ ಕೃತಿಗಳೆಂದರೆ, ‘ ಬೀದರ ಜಿಲ್ಲೆಯ ಅನುಭಾವಿ ಕವಿಗಳು, ಶರಣ ಅಂಬಿಗರ ಚೌಡಯ್ಯ, ಹುಲಸೂರು ಬಸವಕುಮಾರ ಶಿವಯೋಗಿ, ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು, ಗಡಿ ನಡಿಯ ಬೆಡಗು, ಶರಣ ಸೊಲ್ಲಾಪುರ, ಕಲ್ಯಾಣ ದೀಪ್ತಿ, ಶರಣ ಶ್ರಾವಣ, ಬಸವಯೋಗಿ, ಕನ್ನಡ ಮರಾಠಿ ಭಾಂಧವ್ಯ ಗಡಿ ಕನ್ನಡಿಗರ ಸಮಸ್ಯೆಗಳು, ಚನ್ನಬಸವ ಕಲ್ಯಾಣ, ವೀರಗಣಾಚಾರಿ ಅಂಬಿಗರ ಚೌಡಯ್ಯ, ಪಂಡಿತಾರಾಧ್ಯ ಚಾರಿತ್ರ ಸಂಗ್ರಹ. ಮುಂತಾದವು ಇವರ ಪ್ರಮುಖ ಕೃತಿಗಳಾಗಿವೆ. ಇವರ ಕವನ,ಲೇಖನ,ಚಿಂತನ, ಭಾಷಣ ಬರಹಗಳು ಬಸವಪಥ, ಬಸವ ಬೆಳಗು, ಹೊಸತು, ಮಹಾಮನೆ, ಅರುಹು-ಕುರುಹು, ಶಾಂತಿ ಕಿರಣ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ತುಷಾರ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಕಲಬುರಗಿ ಆಕಾಶವಾಣಿಯಿಂದ ಹಲವಾರು ಚಿಂತನ, ಭಾಷಣ ಬರಹಗಳು ಪ್ರಸಾರವಾಗಿವೆ, ದೂರದರ್ಶನ ಚಂದನದಲ್ಲಿ ಇವರ ಕುರಿತು ಸಂದರ್ಶನವು ಪ್ರಸಾರವಾಗಿದೆ. ಇವರು ಅಕ್ಕಲಕೋಟೆ ತಾಲ್ಲೂಕಿನ ಪ್ರಜಾವಾಣಿ ಪತ್ರಿಕೆಯ ಪ್ರಥಮ ಅರೆಕಾಲಿಕ ವರದಿಗಾರರಾಗಿಯು ಸೇವೆ ಸಲ್ಲಿಸಿದ್ದಾರೆ. ಮತ್ತು ಮಹಾರಾಷ್ಟ್ರದ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಸಮನ್ವಯಕರಾಗಿ 2004 ರಿಂದ 2016 ರ ವರೆಗೆ ಸೇವೆ ಸಲ್ಲಿಸಿದ ಇವರು 9 ರಿಂದ 12 ನೇ ತರಗತಿವರೆಗಿನ ಪಠ್ಯ ಪುಸ್ತಕಗಳ ಸಂಪಾದಕ, ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.                      ಕೊಲ್ಲಾಪುರ,ಮುಂಬೈ,ಸೊಲ್ಲಾಪುರ, ವಿಶ್ವವಿದ್ಯಾಲಯಗಳ ಅಭ್ಯಾಸ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಇವರು ಸದ್ಯ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಕೇಂದ್ರದ ಅಭ್ಯಾಸ ಮಂಡಳಿಯ ಸದಸ್ಯರಾಗಿದ್ದಾರೆ.ಹಾಗೂ ಸೊಲ್ಲಾಪುರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಆಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಹಲವಾರು ಜನ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

2008 ರಿಂದ 2011 ರ ಅವಧಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಬರಗೂರು ರಾಮಚಂದ್ರಪ್ಪನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಗಡಿನಾಡು ಹೊರನಾಡು ಉಪಸಮಿತಿಯ ಸದಸ್ಯರಾಗಿಯು ಇವರು ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ ಸೊಲ್ಲಾಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ,
ಗಡಿ ಕನ್ನಡ- ಗುಡಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿ ಮಹಾರಾಷ್ಟ್ರದ ನೆಲದಲ್ಲಿ 29 ವರ್ಷಗಳಿಂದ ನೂರಾರು ಕನ್ನಡ ಕಾರ್ಯಕ್ರಮಗಳು ಮಾಡಿ ಹೆಸರುವಾಸಿಯಾಗಿದ್ದಾರೆ.
ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗೆ ಮೆಚ್ಚಿ, 2004 ರಲ್ಲಿ ಹುಲಸೂರಿನ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದಿಂದ
ಶಿಕ್ಷಕ ಬಂಧು ಪ್ರಶಸ್ತಿ 2009 ರಲ್ಲಿ ಬೇಲೂರಿನ ಉರಿಲಿಂಗ ಪೆದ್ದಿ ಮಠದಿಂದ ‘ ಉರಿಲಿಂಗ ಪೆದ್ದಿ ಪ್ರಶಸ್ತಿ 2012 ರಲ್ಲಿ ಜಮುಖಂಡಿಯ ಬಸವಜ್ಞಾನ ಗುರುಕುಲದಿಂದ ‘ ಗಡಿನಾಡು ಬೆಳಕು ಪ್ರಶಸ್ತಿ’ ನೀಡಿ ಗೌರವಿಸಿದರೆ,ಇವರ ಪೂಜ್ಯ. ಶ್ರೀ. ಬಸವಲಿಂಗ ಪಟ್ಟದ್ದೆವರು ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ 2012 ನೇ ಸಾಲಿನ ‘ ರಾಜ್ಯೋತ್ಸವ ಪ್ರಶಸ್ತಿ‘ 2013 ರಲ್ಲಿ ಅಕ್ಕಲಕೋಟೆಯ ಮೈಕ್ರೋಸ್ಟಾರ್ ಪೌಂಡೆಷನ ವತಿಯಿಂದ ‘ *ಆದರ್ಶ ಸಾಹಿತಿ ಪ್ರಶಸ್ತಿ*, 2016 ರಲ್ಲಿ ಕಲಬುರ್ಗಿಯ ಕನ್ನಡ ಸೈನ್ಯ ಸಂಘದಿಂದ ‘ *ಕನ್ನಡ ವೀರ ಪ್ರಶಸ್ತಿ*, 2017 ರಲ್ಲಿ ಭಾಲ್ಕಿ ಮಠದಿಂದ ‘ *ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು ಸಾಹಿತ್ಯ ಪ್ರಶಸ್ತಿ*, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಈಗ ಇವರಿಗೆ ಈ ವರ್ಷದ 2024 ರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡ ಮಾಡುವ ರಾಜ್ಯ ಮಟ್ಟದ ‘ರಮಣಶ್ರೀ ಶರಣ’ ಎಂಬ ಪ್ರಶಸ್ತಿ ಕೊಡುತ್ತಿರುವುದರಿಂದ ನಮ್ಮ  ‘ಕಲ್ಯಾಣ ಸಿರಿಗನ್ನಡ’  ಸಾಹಿತ್ಯ ಪತ್ರಿಕೆ ಬಳಗವು  ಇವರಿಗೆ ಶುಭ ಹಾರೈಸುತ್ತದೆ.

– ಮಚ್ಚೇಂದ್ರ ಪಿ ಅಣಕಲ್.

 

One thought on “ರಮಣಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಡಾ.ಗುರುಲಿಂಗಪ್ಪ ಧಬಾಲೆ.”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ