Oplus_131072

ರಾಸೂರಾಯಿ ಹೇಳಿದ ಕಥೆ.

ಭಾಲಚಂದ್ರ ಜಯಶೆಟ್ಟಿ. 

ರಾಸೂರಾಯಿಯ ಖರೆ ಹೆಸರು ಯಾರಿಗೂ ಗೊತ್ತಿಲ್ಲ. “ರಾಸೂರಾಯಿ” ಎಂದು
ಹೆಸರುವಾಸಿಯಾದ ಮೇಲೆ ಆಕೆಯೂ ಕೂಡ ತನ್ನ ಖರೆ ಹೆಸರನ್ನು ಮರೆತ್ತಿದ್ದಾಳೆ.
ಆಕೆಯ ವಯಸ್ಸಿನ ಅಂದಾಜು ಹಚ್ಚುವುದೂ ಕೂಡ ಸಾಧ್ಯವಿಲ್ಲದ ಮಾತಾಗಿದೆ. ಊರಿಗೇನೆ
ಹಿರಿಯರೆನಿಸಿಕೊಳ್ಳುವ ಮಲಂಗಸಾಬ ಮತ್ತು ಈಶಂಭಟ್ಟರ ತಾತ ಮುತ್ತಾತರವರೆಗಿನ
ಸಂಗತಿಗಳು ಆಕೆಗೆ ಸ್ಪಷ್ಟವಾಗಿ ನೆನಪಿದೆ. ಅದಕ್ಕೂ ಹಿಂದಿನ ಸಂಗತಿಗಳನ್ನೂ ಒಮ್ಮೊಮ್ಮೆ
ಹೇಳುತ್ತಾಳೆ. ಆದರೆ ವರ್ಣಾಶ್ರಮಕ್ಕೆ ಸೇರದ ಇನ್ನೂ ಯಾರ ಯಾರ ಸಂಗತಿಗಳೋ
ಅವುಗಳಲ್ಲಿ ತಳಕು ಮಳಕಾಗಿ ಗೊಂದಲವೋ ಗೊಂದಲ ಉಂಟಾಗುತ್ತದೆ. ಆದ್ದರಿಂದ
ಯಾರೂ ಆಕೆಗೆ ತಮ್ಮ ಪೂರ್ವಿಕರ ಕತೆಗಳನ್ನು ಕೇಳುವ ಗೋಜಿಗೆ ಹೋಗುವುದಿಲ್ಲ.
ಅದನೆಲ್ಲ ಕೇಳುತ್ತ ಕೂಡಲು ಪುರಸೊತ್ತಾದರೂ ಯಾರಿಗಿದೆ?

ಆದರೆ ರಾಸೂರಾಯಿ ಆಗಾಗ ತನ್ನ ಕತೆಯನ್ನು ಹೇಳುತ್ತಿರುತ್ತಾಳೆ. “ಡೋಗಿ ಬರ
ಬಂದಾಗ ನಾ ಇನ್ನೂ ಕಿರಗುಣಿ ಉಡ್ತಾ ಇದ್ದೆ” ಎಂದು ಹೇಳುತ್ತಾಳೆ. “ರಾಗಿ ಬರ
ಬಂದಾಗ ಉಡಿ ತುಂಬಿಸಿಕೊಂಡು ಒಗತನಕ್ಕೆ ಬಂದೆ” ಎಂದು ಕೂಡ ಹೇಳುತ್ತಾಳೆ. ಈ
‘ಡೋಗಿ ಬರ’, ‘ರಾಗಿ ಬರ’ ಈಗ ಯಾರಿಗೆ ಗೊತ್ತಿವೆ. ಒಟ್ಟಾರೆ ರಾಸೂರಾಯಿ ಬಹಳ
ಹಳೆಯ ಕಾಲದವಳು ಎಂದು ಹೇಳಿದರೆ ಸಾಕು. ಆಕೆ ಹಡದದ್ದು ಹಿಂಗಿದ್ದಕ್ಕೆ ಲೆಕ್ಕವಿಲ್ಲ.
ತನ್ನ ಕಳ್ಳಿನ ಕುಡಿಗಳನ್ನು ಮಣ್ಣು ಮಾಡಿದ್ದಕ್ಕೂ ಲೆಕ್ಕವಿಲ್ಲ. ಅವೆಲ್ಲ ಕತೆ ಹೇಳುತ್ತ ಕುಂತರೆ
ದೊಡ್ಡ ಪುರಾಣವೇ ಆಗುತ್ತದೆ.
ಬೀದಿ ಸುತ್ತುತ್ತ ಇಡೀ ಊರನ್ನೇ
ವ್ಯಾಪಿಸಿ ಬಿಡುತ್ತಾಳೆ. ಒಂದೊಂದು ಓಣಿಯೂ, ಒಂದೊಂದು ಮನೆಯೂ ಆಕೆಗೆ ಚಿರಪರಿಚಿತ.
ಹೀಗಾಗಿ ಹಿರಿಯರಿಗೆ ‘ಹಿರಿಯಳು’ ಎಂಬ ಗೌರವ ಇದ್ದರೆ ಮಕ್ಕಳಿಗೆ ಅಚ್ಚುಮೆಚ್ಚಿನ
‘ಆಯ’, ಆಕೆ ಯಾವ ಬೀದಿಯಲ್ಲೇ ಹೋಗಲಿ ಹಿಂದೆ ಹತ್ತೆಂಟು ಮಕ್ಕಳು ಮುಕುರಿರುತ್ತಾರೆ.
ಒಮ್ಮೊಮ್ಮೆ ಕೋಲು ಬೀಸಿ ಮಕ್ಕಳಿಗೆ ಹೊಡೆಯುವ ನಾಟಕವಾಡಿದರೆ, ಇನ್ನೊಮ್ಮೆ ಹತ್ತಿರ
ಕರೆದು ಪ್ರೀತಿಸುತ್ತಾಳೆ, ಹಾಡು ಹೇಳುತ್ತಾಳೆ. ಕತೆ ಹೇಳುತ್ತಾಳೆ. ಮಕ್ಕಳಿಗೆ ರಾಸೂರಾಯಿಯ
ರಾಸೂರಾಯಿ ಕೋಲೂರಿಕೊಂಡು ಬೀದಿ
ಕತೆ ಎಂದರೆ ಪಂಚಪ್ರಾಣ.
‘ಹರಿಜನವಾಡಾ’ ಎಂದು ಹೊಸ ನಾಮಫಲಕ ಹಾಕಿರುವ ಬೀದಿಯ ಕಡೆಯಿಂದ
ರಾಸೂರಾಯಿ ಕೋಲೂರಿಕೊಂಡು ಹೊಂಟಿದ್ದಾಳೆ. ಹಿಂದೆ ಎಂಟತ್ತು ಮಕ್ಕಳು ಬೆನ್ನು
ಹತ್ತಿವೆ. “ಆಯಿ, ಕತೆ ಹೇಳು. ಆಯಿ ಕತೆ ಹೇಳು” ಎಂದು ಹಟ ಮಾಡುತ್ತಿವೆ.

‘ಆ ಮಸೀದಿ ಕಟ್ಟಿಮ್ಯಾಲ ಬರಿ, ಅಲ್ಲಿ ಕುಂತು ಕತಿ ಹೇಳ್ತಿನಿ
ರಾಸೂರಾಯಿ ಮಕ್ಕಳನ್ನು ಮಸೀದಿ ಕಟ್ಟೆಗೆ ಕರೆತಂದಳು.
‘ಯಾವ ಕತಿ ಹೇಳಿ ಮಕ್ಕಳ ?’ ರಾಸೂರಾಯಿ ಕೇಳಿದಳು.
‘ಹೊಸಾ ಕತಿ ಹೇಳು ಆಯಿ, ಹೊಸಾ ಕತಿ’-ಮಕ್ಕಳು ಏಕ ಕಂಠದಿಂದ ಕೂಗಿದವು.
ಹೊಸಾ ರಾಮಾಯಣ – ಮಹಾಭಾರತದ ಕತಿ ಹೇಳ್ಲಾ ?
‘ಬ್ಯಾಡ ಆಯಿ. ಅವೆಲ್ಲ ಕೇಳಿ ಬ್ಯಾಸರಾಗದ.
‘ಹಂಗಾರ ನೀತಿ ಕತಿ ಹೇಳೀನಿ, ಕೇಳಿ’
‘ಥೂ! , ಅದನ್ಯಾರ ಕೇಳ್ತಾರ. ಹೋಗ್ ಆಯಿ.’
‘ಇನ್ನ ಯಾವ ಕತಿ ಹೇಳ್ಲಿ ?’-ರಾಸೂರಾಯಿಗೆ ಚಿಂತೆಯಾಯ್ತು.

‘ರಾಸೂರಿನ ಕತೀನೇ ಹೇಳು, ಆಯಿ’
‘ರಾಸೂರಿನ ಕತಿ ಕೇಳ್ತಿರಾ. ಹಂಗಾರ ಹೇಳ್ತಿನಿ ಕೇಳಿ.’

ರಾಸೂರಾಯಿ ಕತೆ ಹೇಳಲು
ತಯಾರಾದಳು. ಮಕ್ಕಳೆಲ್ಲ ಕುತೂಹಲದಿಂದ ಕತೆ ಕೇಳಲು ಉತ್ಸುಕರಾಗಿ ಕುಳಿತರು.
ಇನ್ನೇನು ಆಕೆ ಕತೆ ಹೇಳಲು ಸುರು ಮಾಡಬೇಕು ಅಷ್ಟರಲ್ಲಿ ಆ ಕಡೆ ಊರೊಳಗಿಂದ
ನಾಲ್ಕೆಂಟು ಮಕ್ಕಳು ಓಡಿಬಂದರು. ಈ ಕಡೆ ಪೇಟೆ ಕಡೆಯಿಂದ ಎಂಟತ್ತು ಮಕ್ಕಳು ಧಾವಿಸಿ
ಬಂದರು. ರಾಸೂರಾಯಿ ಕತೆ ಹೇಳಲು ಕುಂತಿದ್ದಾಳೆ ಎಂಬ ಸಮಾಚಾರ ಆ ಮಕ್ಕಳಿಗೆಲ್ಲ
ಹೇಗೆ ಗೊತ್ತಾಯಿತೊ ?
ನೋಡ್ರಿ ಮಕ್ಕಳ್ಯಾ, ಭಾಳ ಭಾಳ ಹಿಂದಿನ ಮಾತು; ಹೀಂಗೊಬ್ಬ ರಾಜಾ ಇದ್ದ…

‘ಥೂ! ಆಯಿ, ಮತ್ತ ರಾಜಾರಾಣಿ ಕತಿ ಸುರು ಮಾಡಿ’.
“ಇದು ನೀವು ಕೇಳಿದ ರಾಜಾರಾಣಿ ಕತಿ ಅಲ್ಲ. ಬ್ಯಾರೆ ಆದ. ಕೇಳ್ಯಾದ್ರೂ ಕೇಳಿ’
“ನೀ ಸುಮ್ನ ಹೇಳ ಆಯಿ’- ಇನ್ನೊಬ್ಬ ಹುಡುಗ ಹೇಳಿದ.
ರಾಸೂರಾಯಿ ಮುಂದುವರಿಸಿದಳು.

“ಕೇಳಿ, ರಾಸೂರಾಗ ಹೀಂಗೊಬ್ಬ ರಾಜಾ ಇದ್ದ. ಭಾಳ ಶೋಕಿ ಮನಷ್ಯಾ, ಮಂದೀನೂ ಸೈತ ಅಂವನಿಗೆ ಭಾಳ ಮರ್ಯಾದೆ ಕೊಡ್ತಿದ್ರು, ರಾಜಾ
ರಾಜ್ಯ ಆಳಿದ್ದ. ಮಂದೀ ತಮ್ಮ
ತಮ್ಮ ಮನ್ಯಾಗ ಉಂಡೂ ಉಟ್ಟೂ ಸುಖದಾಗೇ ಇದ್ರೂ, ರಾಜಾನ ಕಾರೋಬಾರದಾಗ
ಮಂದೀ ತಲೀ ಹಾಕತಿದ್ದಿಲ್ಲ. ಹೀಂಗಾಗಿ ಎಲ್ಲಾನೂ ಸುಸೂತ್ತಾಗಿನೇ ನಡೀತಿತ್ತು.

ಸುಸೂತ್ರ ಅಂದ್ರೆ ವಿನಾಯಿ ?’ – ಒಂದು ಮಗು ಕೇಳಿತು.
ನಡುವೆ ಬಾಯಿ ಹಾಕಬ್ಯಾಡ ಮಗಾ, ನನಗೆ ಕೃತಿ ಮೂರ್ತ ಹೋಗದೆ ರಾಜಗಾರ |
ಎಲ್ಲರಿಗೂ ಸೂಚಿಸುವಂತೆ ಹೇಳಿದಳು.
‘ಏ ಸುಮ್ಮಿರೊ’

ಪ್ರಶ್ನೆ ಕೇಳಿದ ಹುಡುಗನಿಗೆ ಇನ್ನೊಬ್ಬ ಡುಕಿ ರಾಸೂರಾಯಿಗೆ
ಹೇಳಿದ. ‘ಹೂಂ. ಮುಂದೇನು ಹೇಳು ಆಯಿ,
‘ಹೀಂಗ ಸುಸೂತ್ತಾಗಿ ನಡೀತಿರಬೇಕಾದ್ರ ಒಮ್ಮೆ ಹಿಂದೆ ದರೋಡೆ ಖೋರ ಆಗಿದ್ದಾಂಪ
ಒಬ್ಬ ಮನಷ್ಯಾ ಬಂದ.’
‘ಯಾರಾಯೀ ಆ ಮನಷ್ಯಾ?’
‘ಇಂಕಣ್ಣ ಅಂತ ಅವನ ಹೆಸರು’
“ಓ ಗೊತ್ತು. ನಮ್ಮ ಎಂಕಣ್ಣ ಅಲ್ಲೇನಾಯಿ ? ಆದರೆ ನಮ್ಮ ಎಂಕಣ್ಣ ದರೋಡಿ
ಮಾಡ್ತಿದ್ದೇನಾಯಿ ?’

‘ಇಂವಾ ಅಲ್ಲ. ಅಂವಾ ಬ್ಯಾರೆ;’ ಮಕ್ಕಳ ಸಂಶಯ ಪರಿಹಾರ ಮಾಡಿ ರಾಸೂಬಾಯಿ
ಕತೆ ಮುಂದುವರೆಸಿದಳು.

 

‘ಇಂಕಾ ಬಂದವನೇ ಗುಟ್ಟಾಗಿ ಊರಿನ ಸಾಲಿಮ ಮಂದಿಗೆಲ್ಲ ಹೇಳ್ತಾ – ಈ ರಾಜಾ
ಭಾಳ ಖೋಡಿ ಹಾನ, ಇಂವನಿಗೆ ಊರ ಬಿಟ್ಟು ಓಡಸಿ ಅಂತ,’
– ಇಂಕಾನ ಮಾತ ಕೇಳಿ ಮಂದಿ ಗಾಬರಾದ್ರು, ರಾಜಾನ್ನೇ ಊರು ಬಿಟ್ಟು ಓಡಿಸಿದ್ದ
ಮುಂದ ಊರು ಆಳಾವು ಯಾರು? ಊರು ಅಂದ ಮ್ಯಾಲ ಅದನ್ನ ಆಳಾಂವ ಒಬ್ಬ
ರಾಜಾ ಬೇಕೇಬೇಕಲ್ಲ!

– ‘ಇಂಕಾ ಹೇಳ್ತಾ – ನೀವು ಗಾಬರಿಯಾಗ ಬ್ಯಾಡ್ರಿ ರಾಜಾ ಊರು ಬಿಟ್ಟು ಹ್ವಾದನಂದ್ರ
ನೀವು ಸ್ವತಂತ್ರ ಆಗ್ತಿರಿ.’

ಹರಿಜನ ವಾಡಾದಿಂದ ಬಂದಿದ್ದ ಒಂದು ಹೆಣ್ಣು ಮಗು ಕೇಳಿತು
‘ಸ್ವತಂತ್ರ ಅಂದ್ರೆ ಏನಾಯಿ?’
‘ಅದು ನಿಮ್ಮ ಮಂದಿಗೆ ತಿಳ್ಳಾಂಗಿಲ್ಲ. ಅಲ್ಲೆ. ಹೆಣ್ಮಕ್ಕಳಿಗೆ ಮೊದ್ದೆ ತಿಳ್ಳಾಂಗಿಲ್ಲ.’

ಸುಮ್ಮಿರು
ರಾಸೂರಾಯಿ ಆ ಮಗುವಿಗೆ ಸಮಾಧಾನ ಹೇಳಿ ಕತೆ ಮುಂದುವರೆಸಿದಳು
ಮಂದಿ ಅಂದ್ರು. “ಅದೇನೂ ನಮಗ ತಿಳಾಂಗಿಲ್ಲ. ರಾಜಾ ಇದ್ರೇನು, ಹೋದ್ರೇನು!
ನಮಗೇನೂ ಫರಕ ಬೀಳಾಂಗಿಲ್ಲ.
ಇಂಕಾ ಹೇಳ್ತಾ ‘ಅದಕ್ಕೇ ಅಂಬಾದು ನಿಮಗ ಬುದ್ದಿ ಇಲ್ಲಾಂತ. ನೀವು ಸ್ವತಂತ್ರ
ಆದ್ರ ನೀವೇ ರಾಜರಾಗ್ತಿರಿ. ಇನ್ನೊಬ್ಬರಿಗೆ ಸಲಾಂ ಹೊಡೀ ಬೇಕಾಗಿಲ್ಲ.’
ಇಂಕಣ್ಣ ಪಾಪ, ಎಷ್ಟ ಸಂಭಾವಿತ ಹಾನ. ಅಂವ ಹೇಳ್ತಾನಂದ್ರ ನಾವು ಖರೇನೇ
ಬದಲ ಆಗ್ತಿವಿ – ಸ್ವತಂತ್ರ ಆಗ್ತಿವಿ ಅಂತ ಮಂದಿಗೆ ಇಟೀಟೇ ವಿಶ್ವಾಸ ಮೂಡಾಕ
ಹತ್ತಿತು. ಆದ್ರ ಈಗಿರೋ ರಾಜಾಗ ಊರ ಬಿಡಿಸಿ ಹೊರಗ ಹಾಕೋದ್ಧಾಂಗ?

‘ಇಂಕಣ್ಣ ಹೇಳ್ತಾ – ನಾ ಹೇಳ್ತಾಂಗ ಮಾಡಿ, ರಾಜಾ ತಾನೇ ಖುಷಿ ಖುಷಿಲೇ
ಊರು ಬಿಟ್ಟು ಹೋಗ್ತಾನ.
ಊರ ಮಂದಿ ಇಂಕಣ್ಣ ಹೇಳಿದ ಉಪಾಯದಂತೆ ಮಾಡಿದರು. ರಾಜಾ ತಾನೇ
ತಾನಾಗಿ ಊರ ಬಿಟ್ಟು ಹ್ವಾದ. ಹೋಗೋಮುಂದ ಇಲ್ಲಿನ ಮಂದಿಗೆ ಹೇಳಿ ಹ್ವಾದ –
ಈಗ ನೀವು ಸ್ವತಂತ್ರ ಆಗೀರಿ. ‘ಈಗ ನಿಮಗ ನೀವೇ ರಾಜಾ, ನಿಮಗ ನೀವೇ ಪ್ರಜಾ’
ಇನ್ನೊಂದು ಮಗು ಕೇಳಿತು ‘ಪ್ರಜಾ ಅಂದ್ರೇನು ಆಯಿ?’

ರಾಸೂಬಾಯಿ ಸಮಾಧಾನ ಮಾಡಿದಳು. ‘ಅವೆಲ್ಲ ನಿಮಗ ಗೊತ್ತಾಗಾಂಗಿಲ್ಲ’
ನೀ ಹೇಳಿದ್ರ ಗೊತ್ತಾಗೇ ಆಗ್ತಾವ ಆಯಿ’ ಅದೇ ಮಗು ಕೇಳಿತು.
‘ನಡುವೆ ಬಾಯಿ ಹಾಕಬ್ಯಾಡ ಅಂತ ಹೇಳಿದ್ದೆಲ್ಲ. ನನಗೆಲ್ಲ ಮರ್ತ ಹೋಗ್ತದ’ –
ರಾಸೂರಾಯಿಗೆ ನಿಜವಾಗಿಯೂ ಮುಂದಿನ ಕತೆ ಮರೆತು ಹೋಯ್ತು. ಜಡೆಗಟ್ಟಿದ
ತಲೆಕೂದಲಿನಲ್ಲಿ ಹೇನುಗಳು ಹಿಂಸೆ ಕೊಡಹತ್ತಿದವು. ಆಕೆ ತಲೆಯನ್ನು ಉಗುರಿನಿಂದ
ಕರಕರನೆ ಕೆರೆದುಕೊಂಡು ಹೇನುಗಳನ್ನು ಹಿಡಿದು ತೆಗೆಯಲು ಪ್ರಯತ್ನಿಸಿದಳು. ಹೇನಿನ
ಕಾಟದಿಂದ ಆಕೆಯ ಮನಸ್ಸು ಅಸ್ಥಿರವಾಯ್ತು. ಕೋಲೂರಿಕೊಂಡು ಎದ್ದೇ ಬಿಟ್ಟಳು.

‘ಆಯಿ ಕತೆ, ಆಯಿ ಕತೆ’ – ಎಂದು ಮಕ್ಕಳು ಬೆನ್ನು ಹತ್ತಿದವು.
ರಾಸೂರಾಯಿ ಮಕ್ಕಳ ಕಡೆಗೆ ಕೋಲು ಬೀಸುತ್ತ ಮಸೀದಿ ಕಟ್ಟೆ ಇಳಿದು ಚಾವಡಿಯ
ಕಡೆಗೆ ನಡೆದಳು.
ಭವಾನಿ ಗುಡಿಯ ಹೊರಗಿನ ಕಟ್ಟೆಯ ಮೇಲೆ ರಾಸೂರಾಯಿ ಒಂದು ಕೋತಿಯ
ಕೈಗೆ ತನ್ನ ತಲೆಯನ್ನು ಕೊಟ್ಟು ಕುಂತಿದ್ದಳು. ಒಂದೊಂದೇ ದೇನನ್ನು ಆಯ್ದು ಕೋತಿ ತನ್ನ
ಬಾಯಿಗೆ ಹಾಕಿಕೊಳ್ಳುತ್ತಿತ್ತು. ಕೋತಿಯ ಚಾಕಚಕ್ಯತೆಯನ್ನು ನೋಡಿದರೆ ರಾಸೂರಾಯಿಯ
ತಲೆಯಲ್ಲಿ ಮನೆ ಮಾಡಿಕೊಂಡಿರುವ ಎಲ್ಲಾ ಹೇನುಗಳನ್ನು ಅದು ಒಂದೇ ದಿನದಲ್ಲಿ
ಮುಗಿಸಿ ಬಿಡುತ್ತದೆ ಅನ್ನೋ ಹಾಗಿತ್ತು.
ಶಾಲೆ ಬಿಟ್ಟು ನೀರು ಕುಡಿಯಲು ಭವಾನಿ ಗುಡಿಯ ಬಾವಿಗೆ ಬಂದ ಮಕ್ಕಳು
ರಾಸೂರಾಯಿಯನ್ನು ಕಂಡು ಅಲ್ಲಿ ತಮ್ಮ ಪಾಟಿ – ಪುಸ್ತಕಗಳನ್ನು ಚೆಲ್ಲಿ ತಳವೂರಿ,
‘ಆಯಿ, ಎಂಕಣ್ಣನ ಕತಿ ಹೇಳು’ ಎಂದು ಪೀಡಿಸ ಹತ್ತಿದುವು. ರಾಸೂರಾಯಿ ಒಮ್ಮೆ
ಕಿಡಿಗಣ್ಣಿನಿಂದ ನೋಡಿದಳು. ಆದರೆ ಮಕ್ಕಳ ಮುಗ್ಧತೆಯನ್ನು ಕಂಡು ಆಕೆಯ ಮನಸ್ಸು
ಕರಗಿ ನೀರಾಯಿತು. ಕತೆ ಹೇಳಲು ಶುರು ಮಾಡಿದಳು
‘ರಾಸೂರ ಮಂದಿಗೆ ಮುಂದೆ ಮಾಡಿ ಇಂಕಾ ಇಲ್ಲಿನ ರಾಜಾಗೇನೋ ಓಡಿಸಿದ,
ಮಂದೀಗೆ ಹೇಳ್ತಾ ಈಗ ನೀವ ಸ್ವತಂತ್ರ ಆದ್ರಿ ಅಂತ.’
ನಡುವೆ ಒಂದು ಮಗು ಬಾಯಿ ಹಾಕಿತು ‘ಸ್ವತಂತ್ರ ಅಂದ್ರೇನಾಯಿ? ‘
‘ಅದು ರಾಸೂರ ಮಂದಿಗೇ ತಿಳಿಲ್ಲ. ನಿಂಗಹ್ಯಾಂಗ ತಿಳೀತದ ಮಗ ? ಸುಮ್ಮೆ ಕತಿ
ಕೇಳು’ -ರಾಸೂರಾಯಿ ರೇಗಲಿಲ್ಲ. ಸಮಾಧಾನದಿಂದ ಹೇಳಿ ಕತೆ ಮುಂದುವರಿಸಿದಳು-
‘ಸ್ವತಂತ್ರ ಅಂದ್ರ ಏನೋ ಆಗ್ತಿವಿ ಅಂಡ್ಕೊಂಡಿದ್ದ ಮಂದಿಗೆ ಏನೂ ಫರಕ ಕಾಣಿಸ್ತೇ
ಇಲ್ಲ. ಸ್ವತಂತ್ರ ಅಂದ್ರೆ ತಮ್ಮನ್ನ ಆಟೋ ರಾಜಾನ್ನ ಕಳಕೊಂಡು ಅನಾಥ ಅನಿಸಿಕೊಳ್ಳೋದು
ಅಂತ ಜನ ತಿಳಿದು, ಯಾಕಂದ್ರ ಅವರಿಗೆ ಅಳಿಸಿಕೊಳ್ಳಾದು ಗೊತ್ತಿತ್ತು. ಆಳೋದು ಗೊತ್ತಿರಲಿಲ್ಲ.’
‘ಹಂಗಾರ ಮುಂದ ಭಾಳ ಫಜೀತಿ ಆಗಿರಬೇಕು?’ – ಒಂದು ಮಗು ಕೇಳಿತು.
‘ಮಂದಿ ಮತ್ತ ಇಂಕಣ್ಣಗೇನೇ ಕೇಳಿದ್ರು’ – “ಈಗ ನಾವೇನು ಮಾಡೋಣು?” ಅಂತ.
ಇಂಕಣ್ಣ ಹೇಳ್ತಾ – “ಈಗ ನೀವೇ ರಾಜಾ ಆಗಿರಿ.” ಮಂದಿ ಅಂದ್ರು – “ನಮಗೆ ಆಲೋಕ
ಬರಲ್ಲ” ಅಂತ. ಇಂಕಣ್ಣ ಅಂದ “ಗಾಬರಾಗ ಬ್ಯಾಡ್ರಿ, ನಾ ಇದ್ದೀನಿ. ನಿಮಗೆ ಬಂದಾಂಗ
ನೀವು ಆಳೋರಿ, ನಾ ಆಗಾಗ ಬಂದು ನಿಮಗ ನೋಡ್ಕೊತೀನಿ.”
ಹೇನು ತಪ್ಪಿಸಿಕೊಂಡಿತು ಅಂತ ತಿಳಿದು ಕೋತಿ ರಾಸೂರಾಯಿಯ ತಲೆಯನ್ನು
ಕುಕ್ಕಿತು. ಹಣ್ಣಾನ ಹಣ್ಣಾದ ಮುದುಕಿ ನೋವಿನಿಂದ ಚೀರಿದಳು.
‘ಯಾಕ ಆಯಿ? ಏನಾಯ್ತು?’ – ಒಂದು ಮಗು ಕೇಳಿತು.
‘ಕೋತಿ ಕೈಯಾಗ ತಲಿ ಕೊಟೀನಿ ಅಂದ ಮ್ಯಾಲ ಕುಕ್ಕಸಕೋ ಬೇಕಲ್ಲ! ಕೋತಿ
ಕುಕ್ಕಿದರ ಬ್ಯಾನಿ ಆಗ್ತದ. ಹೇನಿನ ಪೀಡಾ ಕಳ್ಕೊಬೇಕು ಅಂದ್ರೆ ಈ ಬ್ಯಾನಿ ತಾಳೋ
ಬೇಕಲ್ಲ ಮಗ!”
‘ನೀ ಕೋತಿ ಕಯ್ಯಾಗ ಯಾಕ ತಲೀ ಕೊಡ್ತಿ ಆಯಿ ? ನಾವು ನಿನ್ನ ತಲ್ಯಾನ ದೇನ
ಆರಸ್ತೀವಿ.’
‘ಇನ್ನೂ ಸಣ್ಣಾವರಿದ್ದೀರಿ. ನನ್ನ ತಲ್ಯಾಗ ಭಾಳ ಹೇನ ತುಂಬ್ಯಾವ, ಯಾರು ಈ
ಹೇನು ಆರಿಸಬೇಕೋ ಅವ್ರು ಮ್ಹಾರಿ ತಿರುವಿ ಕುಂತಾರ, ದೊಡ್ಡವರಾದ ಮ್ಯಾಲ ನೀವರೇ
ನನ್ನ ತಲ್ಯಾನ ಹೇನ ಕಮ್ಮಿ ಮಾಡ್ತೀರಿ ಅಂತ ಅಂಡ್ಕೊಂಡೀನಿ.”
‘ಓss! ನಾ ದೊಡ್ಡಾಂವ ಆದ ಮ್ಯಾಲ ಹೇನಿನ ಅಗಸುಧ್ಯಾ ಹಾಕಿ ನಿನ್ನ ತಲ್ಯಾನ ಎಲ್ಲ
ಹೇನೂ ಕೊಂದು ಹಾಕಿನಿ’ – ಒಂದು ಮಗು ಹೇಳಿತು.
“ಶಾಬಾರ ಮಗಾ! ನನಗೆ ನಿನ್ನಂಥ ಮಕ್ಕಳೇ ಬೇಕಾಗಾರ, ಈ ಹೇನಿನ ಕಾಟ
ತಡಕೊಳ್ಳಾಕ ಆಗವಲ್ಲದು. ಬೆಳಗಾದರೆ ಹೊಸಹೊಸಾ ಹೇನು ಹುಟ್ಟತಾನೇ ಇರ್ತಾವ್
ಕತೆ ನಡುವೆ ಉಳಿದು ಮಾತು ಎತ್ತೆತ್ತಲೂ ತಿರುಗಿತು ಎಂದು ತಿಳಿದು ಕತೆಯ ಬಗ್ಗೆ
ಜಿಜ್ಞಾಸೆ ಹೊಂದಿದ ಒಂದು ಮಗು ರಾಸೂರಾಯಿಯನ್ನು ಕತೆಯ ಬಗ್ಗೆ ಜ್ಞಾಪಿಸಿತು. ಕತೆ
ಹೇಳು ಆಯಿ, ಮುಂದೇನಾಯ್ತು?’
ಹೈಂ ಕೇಳಿ ಮಂದಿ ಇಂಕಾಗ ಬಿಟ್ಟೇ ಇಲ್ಲ. ಅಂವಾ ಇಲ್ಲೇ ಬಂದು ಉಳ್ಳ, ಅಂವಾ
ಹೇಳ್ತಾಂಗ ಮಂದಿ ಕೇಳಿದ್ದು ನೀವೇ ರಾಜಾ ನೀವೇ ಪ್ರಜಾ ಅಂತ ಮಂದಿಗೆ
ಮಸಲಾಯಿಸುತಿದ್ದ. ಮಂದಿ ಉಬ್ಬಿ ಹೋದ್ರು, ರಾಜಾ ಅಂದಮ್ಯಾಲ ಸೇವಕರಿಗೆ ಬಕ್ಷೀಸ
ಕೊಡಬೇಕಲ್ಲ. ಇಂಕಾ ತನ್ನ ಕೆಲಸಾಬನ್ನಿ ಬಿಟ್ಟು ರಾಸೂರಿನ ಸೇವಾ ಮಾಡ್ಲಿಕ ನಿಂತಿದ್ದ.
ಅಂದ ಮ್ಯಾಲ ಅಂವನಕ್ಕಿಂತ ಊರಾಗ ದೊಡ್ಡ ಸೇವಕರು ಮತ್ಯಾರು ಸಿಗಬೇಕು?
ರಾಜಾಮಂದಿ ಖುಷಿ ಖುಷಿಲೇ ಇಂಕಾಗ ಬಕ್ಷೀಸ ಕೊಡ್ಲಿಕ್ಕೆ ಶುರು ಮಾಡಿದರು. ಇಂಕಾ
ಭಾಳ ಸಂಭಾವಿತ ಮನುಷ್ಯ ಅಷ್ಟೇ ನಿಯತ್ತಿನ ಮನುಷ್ಯಾ ಕೂಡ. ನಂಗೆ ಇಷ್ಟೆ ಬಕ್ಷೀಸ
ಕೂಟ ಅಷ್ಟೇ ಬಕ್ಷೀಸ ಕೊಟ್ರೆ ಅಂತ ಎಂದೂ ತಕರಾರ ಮಾಡವನಲ್ಲ. ಸೇವಾಕ್ಯ ಕಿಮ್ಮತ
ಕಟ್ಟಬಾರ್ದು – ಇದು ಇಂಕಾರ ತತ್ತ್ವ ಇಂಕಾ ಹಗಲೂ ರಾತ್ರಿ ನಗನಗ್ತಾನೇ ಇರಾಂವ, ಅವನ ಒಂದೊಂದು ನಗೀ ಮ್ಯಾಲ
ಮಂದಿ ಸಾವಿರ ಅಲ್ಲ ಲಕ್ಷಗಟ್ಟಲೇ ಹಣ ನಿವಾಳಿ ತೆಗೆದು ಎಸೀತಿದ್ರು, ದ್ವಾರಗೋಳ ಇರ್ಲಿ
ದೊಡ್ಡವರು ಇರ್ಲಿ, ಬಡೂರಿರ್ಲಿ ದೈವಾನುರ್ಲಿ ಇಂಕಾ ಎಲ್ಲಾರ ಜೊತೆಗೆ ಒಂದೇ
ರೀತಿಯಾಗಿ ನಡಕೋತಿದ್ದ. ಮಂದೀ ರಾಜಾನ್ನ ಮರ್ತಬಿಟ್ಟು
ದಿನ ಕಳೆದಂತೆ ಇಂಕಣ್ಣ ನಗೋದು ಹೆಚ್ಚಾಯ್ತು, ಹಾದಿ ಬೀದಿಲೆ ಹೋಗಾವ ಹೆಗಲ
ಮೇಲೆ ಕೈ ಹಾಕೋದೇನು, ಎಳಕೊಂಡು ಹೋಗಿ ಚ್ಯಾ ಕುಡೋದೇನು, ಪಾನಬೀಡಾ
ಸಿಗರೇಟ ಪಟ್ಟೋದೇನು! ಎಲ್ಲಾ ಕಲ್ಲಾ ಭಾರಿ ಆಯ್ತು. ಮಂದಿ ಅಂವನಿಗೆ ಚಾ ಪಾಣಿ,
ಬೀಡಿ ಸಿಗರೇಟಿನ ಯಾವ ಬಿಲ್ಲನ್ನೂ ಕೊಡಾಕ ಬಿಡ್ತಿದಿಲ್ಲ. ಅಂವಗ ಜಾ-ಪಾಣಿ ಮಾಡಿದ್ರ
ತಮ್ಮ ಜೀವನ ಸಾರ್ಥಕ ಆಯ್ತು ಅಂತ ಮಂದಿ ತಿಳ್ಕೊತಿದ್ರು, ಇಂಕಾನ ನಗು ಹೆಚ್ಚಾದಾಂಗ
ಅಂವನ ಬಕ್ಷೀಸಿನ ರೇಟೂ ಹೆಚ್ಚಾಯ್ತು. ಅಂವ ಖುದ್ಧ ರೇಟು ಹೆಚ್ಚಿಗಿ ಮಾಡೋಲಿಲ್ಲ.
ಮಂದೀನೇ ತಿದ್ದು ಅವನ ರೇಟು ಹೆಚ್ಚ ಮಾಡಿದ್ರು’ ರಾಸೂರಾಯಿ ಒಂದು ಕ್ಷಣ ತಡೆದು
ಹೇಳಿದಳು- ‘ಅಂವನಿಗೆ ನಾನು ನಿಗಾದಾಗೇ ಬರ್ಲಿಲ್ಲ. ನನ್ನ ಬಗ್ಗೆ ಒಮ್ಮೆನೂ ಕಾಳಜಿ
ಮಾಡಲಿಲ್ಲ. ಇಂಥಾವು ಎಷ್ಟು ಮಂದಿ ಬರ್ತಾರ, ಹೋಗ್ತಾರ ಅಂತ ತಿಳ್ದು ನಾನೂ
ಅಂವನಿಗೆ ಕಿಮ್ಮತ ಕೊಡಲಿಲ್ಲ.’
ಇಂಕಣ್ಣನ ಕಾಲು ನೆಲದ ಮ್ಯಾಲೇ ನಿಲ್ಲತಿರಲಿಲ್ಲ. ಅಂವಾ ಗಾಳ್ಯಾಗೇ ಓಡಾಡತಿದ್ದ
ನಾಲು ಕೂಡಿಸಿದ ಬೂಟುಗಾಲಿನಿಂದ ನನ್ನ ತುಳಿತಿದ್ದ. ಅಂವ ತುಳಿದಕ್ಕೆ ನನ ಸೀರಿ
ಎಲ್ಲಾ ಹರದು ತೂತುತೂತಾಗ ಹತ್ತಿತು, ನಿಮ್ಮಂಥ ಮಕ್ಕಳು ಕೊಟ್ಟ ಚಿಂದಿ ಹೊಲ್ದು ತ್ಯಾಪಿ ಹಚ್ಚಕೊಂಡಿನಿ.
ತ್ಯಾಪಿ ಹಚ್ಚಕೊಂಡೀನಿ,
– ರಾಸೂರಾಯಿ ತನ್ನ ಹರಿದ, ಕ್ಯಾಪಿ ಹಚ್ಚಿ ಹೊಲೆದ ಸೀರೆಯನ್ನು ಮಕ್ಕಳಿಗೆ
ತೋರಿಸಿದಳು,

ಕೌದಿಯ ಚಿತ್ತಾರಗಳಂತೆ ಆಕೆಯ ಸೀರೆಗೆ ನೂರಾರು ತ್ಯಾಪಿ
ಹತ್ತಿಕೊಂಡಿದ್ದುವು. ಒಂದು ಮಗು ಹೇಳಿತು
‘ಆಯಿ, ನಾ ನಿನಗ ಹೊಸಾ ಸೀರೆ ಕೊಡುತ್ತೇನಿ,
‘ಅಯ್ಯೋ ನನ ರಾಜಾ! ಜಲ್ಲಿ ಬೆಳ್ಳು ದೊಡ್ಡಾಂಪ ಆಗು’ ಎಂದಳು.

ಕೇಳು
ರಾಸೂರಾಯಿ ಆ ಮಗುವಿನ ಮುಖದ ಮೇಲೆ ಕೈಯಾಡಿಸಿ, ತನ್ನ ತಲೆಗೆ ಬೆರಳುಗಳನ್ನು
ಒತ್ತಿಕೊಂಡು ಲಟಲಟನೆ ಲಟಕಿ ಮುರಿದು ಕೊಂಡಳು,
ಇನ್ನೊಂದು ಮಗು ನಿರಾಶನಾದಂತೆ ರಾಗ ಎಳೆಯಿತು-
‘ಕತಿ ಹೇಳು ಆಯಿ’
ರಾಸೂರಾಯಿ ಕತಿ ಹೇಳ ಹತ್ತಿದಳು

‘ಹೂಂ ಕೇಳಿ, ಊರಾಗ ಜನಪಣ್ಣ ಅಂತ ಒಬ್ಬ ಇದ್ದ, ಅಂವಾ ಅದೇ ಆಗ ಜೀರಿಗೆ
ಹೋಗಿ ಬಂದಿದ್ದ. ಇಂಕಣ್ಣನ ಈ ಅರ್ಭಾಟ ನೋಡಿ ಅವನಿಗೆ ಹೊಟ್ಟೆಕಿಚ್ಚುಹುಟ್ಟಿತು
ಸುಮ್ಮೆ ಮರ್ಯಾದಿಯಿಂದ ಮಂದೀ ಸೇವಾ ಮಾಡ್ಕೊಂಡು ಇರೋದು ಬಿಟ್ಟು ಸೊಕ್ಕು
ಹೆಚ್ಚಾಗಿ ಜೇಲಿಗೆ ಹೋಗಿ ಬಂದ್ರೆಲ್ಲ ಅಂತ ಪೇಚಾಡಿದ. ಈಗ ಏನೇ ಆಗ್ಲಿ ಕಾನಕಿಂತ
ತಾನು ಹೆಚ್ಚಿಗೆ ಸೇವಾ ಮಾಡಬೇಕು ಅಂತ ನಿರ್ಧಾರ ಮಾಡ, ಆದರೆ ಎದರಾ ಎದುರಿಗೆ
ನಿಂತು ಮುಖಾಬಿಲೆ ಮಾಡಿದ್ರ ಇಂಕಣ್ಣ ಸೋಲೋ ಅಸಾಮಿ ಅಲ್ಲ ಅಂತ ತಿಳಕೊಂಡು
ಜನಪಣ್ಣ ಇಂಕಣ್ಣನ ಹಾಂಗ ಮೊದಲು ನಗೋದನ್ನು ರೂಢಿ ಮಾಡಿಕೊಂಡ. ಜನಪಲ್ಲಿ
ಹೊಸಾ ಹಲ್ಲು ಹಚ್ಚಿಸಿಕೊಂಡಿದ್ದ. ನಗೋ ಮುಂದ ಅವು ಫಳಫಳನೇ ಹೊಳೀತಿದ್ದು,
ಮಂದಿ ಜನಪಣ್ಣನ ಹಲ್ಲಿಗೆ ಮರುಳಾದರು. ಜನಪಣ್ಣ ನಗೋದು ಬರೇ ನಗು ಅಂತ
ತಿಳಿದರು.
ಒಂದು ದಿನ, ನಿನ್ನ ಸೇವಾ ಸಾಕಪಾ ಇಂಕಣ್ಣ. ಈಗ ಜನಪಣ್ಣ ಸೇವಾ ಮಾಡ್ಲಿ.’
ಅಂತ ಮಂದಿ ಇಂಕಣ್ಣಗ ಹೇಳಿ ಬಿಟ್ಟು, ರಾಜರ ಮಾತು ಮೀರಲಾಕ ಹ್ಯಾಂಗ ಬರ್ತದ?
ಅಂವ ಅಂದ-
‘ಜನಪಣ್ಣನೇ ಸೇವಾ ಮಾಡ್ಲಿ ಬಕ್ಷೀಸ ತಗೊಳ್ಳಿ, ಆದ್ರ ಸೇವಾ ಮಾಡೋದು ನನ್ನ
ರಕ್ತದ ಹನಿಹನ್ಯಾಗೂ ಸೇರಿ ಬಿಟ್ಟಾದ. ಸೇವಾ ಬಿಟ್ಟು ಇರೋದು ನನ್ನಿಂದ ಸಾಧ್ಯ ಇಲ್ಲ.
ನೀವು ನನಗೆ ಬಕ್ಷೀಸ ಕೊಡಬ್ಯಾಡ್ರಿ, ಆದ್ರೂ ನಾ ನಿಮ್ಮ ಸೇವಾ ಮಾಡ್ತಾನೆ ಇರ್ತಿನಿ.
ದಯಮಾಡಿ ನನ್ನ ಕೈಯಾಂದು ಸೇವಾ ಕಸಕೋ ಬ್ಯಾಡಿ,’ ಅಂತ ಪರಿಪರಿಯಾಗಿ ಚಾಲೊರೆದು
ಬೇಡಿಕೊಂಡ.
ಆ ಕಡೆ ಸರಿ ರಾತ್ಮಾಗ ಒಂದು ದಿನ ಹಿತ್ತಲ ಬಾಗಿಲೆ ಇಂಕಣ್ಣ ಜನಪಣ್ಣನ ಮನೆಗೆ
ಹೋದ. ತನ್ನ ಮುವತ್ತೆರಡೂ ಹಲ್ಲುಗಳನ್ನು ತೋರಿ ಮಾರುದ್ಧ ನಗೆ ಬೀರಿದ. ನಕ
ಹಲ್ಲು ಹಚ್ಚಿಕೊಂಡು ಹೊಸದಾಗಿ ನಗೋದನ್ನ ರೂಢಿಸಿಕೊಂಡಿದ್ದ ಜನಪಣ್ಣ ಹುಚ್ಚಾ
ಹ್ವಾದ. ಇಂಕಣ್ಣ ಹೇಳ್ದಾ.
‘ತಮ್ಮಾ ಜನಪಣ್ಣ: ನಿನಗ ಇನ್ನಾ ಅನುಭವ ಸಾಲು, ಏನೋ ಹೊಸಾ ಹಲ್ಲು
ಹಚ್ಚಿಕೊಂಡು ನಗು ಚಮಕಾಸ್ಕೊಂತ ಸೇವಾಕಾರ್ಯಕ್ಕೆ ಇಟ್ಟಿದ್ದಿ, ನೀ ಮಾಡೋದು
ತಪ್ಪಂತ ನಾ ಅನ್ನಲ್ಲ. ಸೇವಾ ಮಾಡೋದು ನಿನಗೂ ಹಕ್ಕ ಅದ ನನಗೂ ಹಕ್ಕ ಅದ
ಹಾಂಗಂತ ತಿಳು ನಾವನಾವೇ ಜೂಜಾಟಕ್ಕೆ ನಿಂತಿ ಅಂದ್ರ ಯಾರ ಹಾಳಾಗ್ತಾರ? ಅದಕ್ಕ
ನಾ ಒಂದು ಹಾದಿ ಹುಡಕನಿ.’
ತನ್ನ ಮನೆ ಬಾಗಿಲಿಗೆ ಇಂಕಣ್ಣ ಬಂದಿದ್ದು ನೋಡಿಯೇ ಜನಪಣ್ಣ ಕರಗಿ ನೀರಾಗಿದ್ದ
ಈಗ ಹಿತ ಚಿಂತಕನಂತೆ ಮಾತಾಡಿದ್ದು ಕೇಳಿ ಇನ್ನೊಂದಿಷ್ಟು ಇಳಿದು ಹೋದ. ‘ಅಣ್ಯ
ನಾ ಬ್ಯಾರ ಅಲ್ಲ ನೀ ಬ್ಯಾರೆ ಅಲ್ಲ. ನೀ ಏನ ಹಾದಿ ಹುಟ್ಟಿದ್ದಿ ಹೇಳು’ ಎಂದು ಜನಪಣ್ಣ
ಪ್ರೀತಿ ಮತ್ತು ಸಲುಗೆಯಿಂದ ಕೇಳಿದ,
‘ನೋಡ ತಮ್ಮಾ: ನೀನೂ ಸೇವಾ ಮಾಡು, ನಾನೂ ಸೇವಾ ಮಾಡ್ತೀನಿ. ಇಬ್ಬರೂ
ಕೂಡಿ ಭಕ್ಷೀಸನ್ನ ಹಂಚಿಕೊಳ್ಳೋಣ. ನಾವು ನಾವೇ ಕಚ್ಚಾಡಿದ್ರೆ ಸೇವಾ ಮಾಡ್ತಾಕ ಇನ್ನೊಬ್ಬ
ಹುಟ್ಟೋತಾನ. ಆಗ ನಮ್ಮ ಗತಿ ಏನಾಗ್ತದ – ಸ್ವಲ್ಪ ವಿಚಾರ ಮಾಡು.’
ಇಂಕಣ್ಣನ ಮಾತು ಸರಿ ಅನಿಸಿತು. ಜನಪಣ್ಣ ತಕ್ಷಣ ಅವನ ಮಾತನ್ನು ಒಪ್ಪಿಕೊಂಡ.
ಈಗ ಇಬ್ಬರೂ ಕೂಡಿ ರಾಸೂರಿನ ಸೇವಾ ಮಾಡ್ತಾ ಇದ್ದಾರ. ಎಲ್ಲಾರ ಹೆಗಲ
ಮೇಲೂ ಕೈಹಾಕಿ ಪ್ರೀತಿಯಿಂದ ಮಾತಾಡಸ್ತಾರ. ನಗನಗ್ತಾನೆ ಮಂದಿ ಖಿಸ್ಯಾವಾಗ ಕೈ
ಹಾಕಿ ಬೀಡಿ ಸಿಗರೇಟ ತೊಗೊತಾರ. ಪಾಕೀಟಿನ್ಯಾಗ ಕೈಹಾಕಿ ನೂರನೂರರ ನೋಟು
ತೆಗೆದು ನಡು ಬಜಾರದಾಗ ಮುರಸ್ಕಾರ, ಮಂದೀ ಬಾಯಾನ ತುತ್ತು ಕಸಕೊಂಡು ತಮ್ಮ
ಹೊಟ್ಟೆ ತುಂಬೈತಾರ, ‘ನಿಮಗ ನಾವು ಬಕ್ಷೀಸ ಕೊಡ್ತಾನೇ ಇದ್ದೀವಲ್ಲ! ಎಂಜರ್ಲ್ಯಾ
ತಿಂತೀರವಾ?’ ಅಂತ ಮಂದಿ ಕೇಳ್ತಾರ. ‘ನಾವು ಸೇವಕರು ಅಂದಮ್ಯಾಲ ರಾಜರ ಎಂಜಲ
ತಿಂಬೋದು ನಮ್ಮ ಧರ್ಮ ಆದ.’ ಅಂತ ಅವ್ರು ಹೇಳ್ತಾರ. ಇಂಥಾ ಸೇವಾ ಬುದ್ಧಿ ನೋಡಿ
ಮಂದಿ ಹಚ್ಚಾಗಿ ಹೋಗ್ತಾರ, ಖುಷಿಖುಷೀಲೆ ಅವರು ಎಂಜಲ ತಿಂಬೋದು ನೋಡಿ
ಮಂದಿ ತಾವು ಉಪಾಸ ಇದ್ರೂ ಚಿಂತೆ ಇಲ್ಲ, ತಮ್ಮ ಬಾಯಾಂದಷ್ಟೇ ಅಲ್ಲ. ಹೆಂಡರಕ್ಕಳ
ಛಾಯಾನ ತುತ್ತ ಸೈತ ತೆಗೆದು ಅವರ ಬಾಯಾಗ ಇಡ್ತಾರ. ತಾವು ಮಾತ್ರ ಗಟಾರದ
ನೀರು ಕುಡ್ಡು ಬದಕಾರ, ಹಿಂಗಾಗಿ ಮಂದಿಯೊಳಗ ವಾಂತಿ ಭೇದೀ ಲಕ್ಷಣಗಳು
ಕಾಣಿಸಿಕೊಳ್ಳಾಕ ಹತ್ಯಾವ….’ ರಾಸೂರಾಯಿ ಕತೆಯನ್ನು ನಡುವೆ ನಿಲ್ಲಿಸಿ ಒಂದೆರಡು ಕ್ಷಣ
ಪಿಳಪಿಳನೇ ಕಣ್ಣು ಬಿಡುತ್ತ ಆಕಾಶದ ಕಡೆಗೆ ನೋಡ ಹತ್ತಿದಳು.
ಮುಂದೇನಾಯ್ತು, ಆಯಿ ?’ – ಒಂದು ಮಗು ಕೇಳಿತು.
ಇನ್ನೂ ಏನೂ ಆಗಿಲ್ಲ ಮಗ, ಆಗೋದದ, ಅನಾಹುತ ಆಗೋದಕ ಮುಂಚೆ
ಇಲ್ಲಿಗೆ ಒಬ್ಬ ಡಾಕ್ಟರ ಬರ್ಬೇಕಾಗದ, ಇಲ್ಲಾಂದ್ರ ವಾಂತಿ-ಬೇದಿ ಹತ್ತಿ ಮಂದಿ ಪಟಪಟಾಂತ
ಸತ್ತು ಹೋಗ್ತಾರ.’
‘ನಾ ಡಾಕ್ಟರ ಆಗ್ತಿನಿ, ಆಯಿ, ನಾ ಈ ಬ್ಯಾನಿ ದೂರ ಮಾಡ್ತೀನಿ’, ಒಂದು ಮಗು
ಉತ್ಸಾಹ ತಡೆಯಲಾರದೆ ಎದ್ದು ನಿಂತು ಹೇಳಿತು.
‘ಹೌಂದು ಮಗಾ, ನೀ ದೊಡ್ಡಂವ ಆಗು. ಡಾಕ್ಟರ ಆಗು. ಬ್ಯಾನಿ ದೂರ ಮಾಡು, ಈ
ವಾಂತಿ ಭೇದಿ ಜಾಗಾ ತೊಳು ಸ್ವಚ್ಛ ಮಾಡು, ವಾತಾವರಣ ಸ್ವಚ್ಛ ಆಯ್ತು ಅಂದ್ರೆ ನನ್ನ
ತಲ್ಯಾನ ಹೇನು ತಂತಾನೇ ಸತ್ತು ಹೋಗ್ತಾವ. ನನ್ನ ತ್ಯಾಪಿ ಹಚ್ಚಿದ ಸೀರಿ ಕಡಿಗೆ ಮಂದಿ
ನಿಗಾ ಮಾಡ್ತಾರ, ಆದ್ರೆ ನೀ ದೊಡ್ಡಾಂವ ಆಗಿ ಯಾವಾಗ ಬರಾಂವ ಮಗಾ ……
ದೊಡ್ಡಾಂವಾಗಿ ಯಾವಾಗ ಬರಾಂವ?…’
ರಾಸೂರಾಯಿ ಕನಸಿನಲ್ಲಿ ತೇಲಿ ಹೋದಳು. ಆಕೆಗೆ ಕತೆ ಮರೆತು ಹೋಯಿತು,
ಕನಸು ಕಣ್ಣ ಮುಂದೆ ಕಟ್ಟಿತು.

ಭಾಲಚಂದ್ರ ಜಯಶೆಟ್ಟಿ.
ರಾಜೇಶ್ವರ.ಬೀದರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ