ಆಹಾರ ಜಾಗೃತಿ…. ಆಚರಣೆಗೆ ಸೀಮಿತವಲ್ಲ
ಒಂದೊಮ್ಮೆ ಭಾರತದ ಪ್ರಸಿದ್ಧ ವ್ಯಕ್ತಿ ತನ್ನ ವ್ಯಾಪಾರ ವಹಿವಾಟುಗಳ ವಿಸ್ತರಣೆಗೆ ತನ್ನ ನಿಯೋಗದೊಂದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ದಿನಗಳಲ್ಲಿ ಮುಗಿಯುವಂತಹ ಭೇಟಿ ಅವರದಾಗಿರಲಿಲ್ಲ.
ಹಲವಾರು ಉದ್ಯಮಗಳನ್ನು ಸಂದರ್ಶಿಸಿ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ ವಿವರಗಳನ್ನು ತಿಳಿದುಕೊಳ್ಳುವುದರಲ್ಲಿ ಅವರ ಸಾಕಷ್ಟು ಸಮಯ ಕಳೆದುಹೋಗಿದೆ. ಹೀಗೆ ಒಂದು ದಿನ ತಮ್ಮ ದೈನಂದಿನ ಭೇಟಿಗಳಲ್ಲಿ ನಿರತರಾದ ಉದ್ಯಮಿ ಮತ್ತು ಅವರ ತಂಡ ತಡವಾಗಿ ಮಧ್ಯಾಹ್ನದ ಊಟಕ್ಕೆ ರೆಸ್ಟೋರೆಂಟ್ ಒಂದಕ್ಕೆ ಧಾವಿಸಿದರು.
ವಿಪರೀತ ಹೊಟ್ಟೆ ಹಸಿದ ಕಾರಣ ಎಲ್ಲರಿಗೂ ಬೇಕಾದ ಆಹಾರ ಆರ್ಡರ್ ಮಾಡಿದರು. ಆಗ ಹೋಟೆಲ್ ಮ್ಯಾನೇಜರ್ಗಿಂತ ಹೆಚ್ಚು ಆಹಾರ ಆರ್ಡರ್ ಮಾಡಿದ್ದೀರಿ… ನೀವು ಎಲ್ಲವನ್ನೂ ತಿನ್ನುತ್ತೀರಲ್ಲವೇ? ಎಂದು ವಿನಯದಿಂದ ಕೇಳಿದನು. ತುಂಬಾ ಹಸಿವಿದ್ದ ಕಾರಣ ಅವರೆಲ್ಲರೂ ಹೌದು! ನಾವು ಎಲ್ಲವನ್ನು ಖಾಲಿ ಮಾಡುತ್ತೇವೆ ಎಂದು ಹೇಳಿದರು.
ನಂತರ ಎಲ್ಲರೂ ಊಟ ಮಾಡಿದರು. ಎಲ್ಲರ ಊಟವಾದ ನಂತರವೂ ಸ್ವಲ್ಪ ಆಹಾರ ತಟ್ಟೆಯಲ್ಲಿ ಉಳಿದುಕೊಂಡಿದೆ. ಕೂಡಲೇ ಹೋಟೆಲ್ ಮ್ಯಾನೇಜರ್ ಫೋನಿನಿಂದ ಕರೆ ಸ್ಥಗಿತಗೊಂಡಿದೆ.
ಅತ್ತ ಕಡೆಯಿಂದ ಕರೆ ಸ್ವೀಕರಿಸಿದ ಅಧಿಕಾರಿಗಳು ಕೂಡಲೇ ಹೋಟೆಲ್ ಗೆ ಧಾವಿಸಿ ಬಂದರು.
ಬಿಲ್ ಪಾವತಿಸಲು ಸಹ ಉದ್ಯಮಿಯ ಮ್ಯಾನೇಜರ್ ಹೋಟೆಲ್ ಮ್ಯಾನೇಜರ್ ಬಳಿ ಬಂದಾಗ ಅವರಿಗೆ ಬಿಲ್ ಜೊತೆಗೆ ದಂಡವನ್ನು ಹಾಕಲಾಯಿತು. ಈ ಕುರಿತು ಉದ್ಯಮಿಯ ಮ್ಯಾನೇಜರ್ ಹೋಟೆಲ್ ನ ಮ್ಯಾನೇಜರ್ ನನ್ನನ್ನು ಪ್ರಶ್ನಿಸಿದಾಗ ನೀವು ತಟ್ಟೆಯಲ್ಲಿ ಆಹಾರವನ್ನು ಉಳಿಸಿದ್ದೀರಲ್ಲವೇ ಅದಕ್ಕೆ ನೀವು ಜುಲ್ಮಾನೆಯನ್ನು ತುಂಬಿದ್ದೇವೆ ಇದು ನಮ್ಮ ದೇಶದ ಕಾನೂನು ಎಂದು ಹೇಳಿದೆ.
ಅದಕ್ಕೆ ಉತ್ತರವಾಗಿ ಉದ್ಯಮಿಯ ಮ್ಯಾನೇಜರ್ ಅರೆ! ನಾವು ಆರ್ಡರ್ ಮಾಡಿದ ಆಹಾರ ನಮ್ಮ ತಟ್ಟೆಯಲ್ಲಿ ನಾವು ಉಳಿಸಿದರೆ ನಿಮ್ಮದೇನು ಗಂಟು ಇಲ್ಲ? ಎಂದು ಪ್ರಶ್ನಿಸಿದ.
ಮೆಲ್ಲನೆ ನಸುನಗುತ್ತಾ ಹೋಟೆಲ್ ನ ಮ್ಯಾನೇಜ್ ಪಕ್ಕದಲ್ಲಿದ್ದ ಅಧಿಕಾರಿ “ತಟ್ಟೆಯಲ್ಲಿರುವ ಆಹಾರ ನಿಮ್ಮದೇ ನಿಜ,ಆದರೆ ಹಾಳಾಗಿರುವುದು ನಮ್ಮ ದೇಶದ ಸಂಪನ್ಮೂಲ ಅಲ್ಲವೇ? ಎಂದು ಪ್ರಶ್ನಿಸಿದಾಗ ಉದ್ಯಮಿ ಮ್ಯಾನೇಜರ್ ಹೋಟೆಲ್ ನ ಬಿಲ್ ನ ಜೊತೆಗೆ ಜೂಲ್ಮಾನವನ್ನು ಕೂಡ ಭರಿಸಿದರು.
ನೋಡಿದಿರಾ ಸ್ನೇಹಿತರೆ, ನಾವು ಎಷ್ಟೋ ಸಾರಿ ದುಡ್ಡು ಕೊಟ್ಟು ಕೊಂಡಿದ್ದೇವೆ ಎಂದು ಸೊಕ್ಕಿನಿಂದ ಮಾತನಾಡುತ್ತೇವೆ, ದುಡ್ಡು ನಮ್ಮದಾದರೆ ಸಂಪನ್ಮೂಲಗಳು ನಮ್ಮವಲ್ಲ ಎಂದು ಪಾಶ್ಚಾತ್ಯ ದೇಶಗಳಲ್ಲಿ ಅದೆಷ್ಟು ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾರೆ. ಅಲ್ಲವೇ?
ದೀಪದ ಝಗ ಮಗ ಬೆಳಕಿನಲ್ಲಿ ಕಣ್ಣು ಕೋರೈಸುವ ಅಲಂಕಾರದ ವೈಭವೋಪೇತ ಸಮಾರಂಭಗಳಲ್ಲಿಯೇ ಆಗಲಿ ಅತ್ಯಂತ ಕಡು ಬಡವರ ಮನೆಯ ಮದುವೆಯೇ ಆಗಲಿ ಆಹಾರ ಎಲ್ಲೂ ಪೋಲಾಗಬಾರದು.
ಒಂದು ಹಿಡಿ ಭತ್ತ ಬೆಳೆಯಲು ಹಲವಾರು ದಿನಗಳ ರೈತನ ಶ್ರಮ ಇರುತ್ತದೆ… ಆದರೆ ಒಂದು ಹಿಡಿ ಅನ್ನ ಕೆಡಿಸಲು ಕೆಲವೇ ಸೆಕೆಂಡುಗಳು ಸಾಕು.
ನಮ್ಮ ಒಂದು ಹೊತ್ತಿನ ಊಟ ಎಷ್ಟೋ ಜನರ ಬೆವರಿನ ಫಲ ಎಂಬ ತಿಳುವಳಿಕೆ ನಮ್ಮಲ್ಲಿರಬೇಕು. “ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ” ಎಂಬ ಗಾದೆಯ ಮಾತಿನಂತೆ ಆಹಾರಧಾನ್ಯದ ಹಿಂದೆ ಇರುವ ಶ್ರಮ ಮತ್ತು ಅದನ್ನು ಪೋಲು ಮಾಡುವುದರಿಂದ ಉಂಟಾಗುವ ಹಾನಿಯ ಕುರಿತು ನಮಗೆ ಅರಿವಿರಬೇಕು.
ಒಂದು ಮಹತ್ವದ ಸಮೀಕ್ಷೆಯ ಪ್ರಕಾರ 2050 ನೇ ಸಾಲಿನ ಹೊತ್ತಿಗೆ ಸದ್ಯಕ್ಕೆ ಇರುವ ಜನಸಂಖ್ಯೆಯ ಹೊಟ್ಟೆಯನ್ನು ತುಂಬಿಸಲು ಒಂದು ಭೂಮಿ ಸಾಲದು. ನಮ್ಮ ಬೆಳೆಯುವ ಸಾಮರ್ಥ್ಯವನ್ನು ನಾವು ಹೆಚ್ಚಿಸಿಕೊಳ್ಳಬೇಕು…. ಆದರೆ ಭೂಮಿ ಎಲ್ಲಿದೆ? ಎಂಬಂತಹ ಪರಿಸ್ಥಿತಿ ಬಂದೊದಗಬಹುದು.
ಎಷ್ಟೋ ವಿಜ್ಞಾನ ಬದುಕುವ ತಂತ್ರಜ್ಞಾನಗಳು ಬೆಳೆದಿದ್ದು ತಿಂಗಳ ಮಂಗಳ ಗ್ರಹದವರೆಗೆ ನಾವು ಉಪಗ್ರಹ ಉಡಾವಣೆ ಮಾಡಬಹುದೇ ಆದರೆ ಬದುಕಿನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆಹಾರವೇ ಇಲ್ಲದಿರುವುದು ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆಯೇ?
ಹೊಟ್ಟೆಗೆ ಬೇಕಾಗಿರುವುದು ಹಿಡಿ ಅನ್ನವೇ
ನಮ್ಮ ಆವಿಷ್ಕಾರಗಳಲ್ಲ. ಆವಿಷ್ಕಾರಗಳು ಬದುಕನ್ನು ಸುಲಭವಾಗಿ ನಡೆಸಲು ಸಾಧ್ಯವಾಗುವಂತೆ ಕಾರ್ಯನಿರ್ವಹಿಸುತ್ತವೆ ಎಂಬುದು ನಿಜವಾದ ಆಹಾರ ಬೆಳೆಯುವುದು ನಮ್ಮ ಪುರಾತನ ಕೃಷಿ ಪದ್ಧತಿಯಿಂದ ನಾವು ಮರೆಯಬಾರದು.
ಈ ಕುರಿತು ನುರಿತ ತಜ್ಞ ಸಾಮಾಜಿಕ ವೈದ್ಯರು ಚಿಂತಕರು ಪರಿಸರವಾದಿಗಳು ಬುದ್ಧಿಜೀವಿಗಳಲ್ಲಿ ಸಾಕಷ್ಟು ವಿರೋಧದ ಚರ್ಚೆಗಳು ನಡೆಯುತ್ತಿವೆ. ವಾದಕ್ಕಾಗಿ ವಾದ, ಮಾತಿಗಾಗಿ ಮಾತು ಎಂಬಂತೆ ಇವರ ಚರ್ಚೆ ವಿವಾದಗಳಲ್ಲಿ ಕೊನೆಯಾಗದೆ ಸುಭದ್ರವಾದ ಭವಿಷ್ಯವನ್ನು ಕಟ್ಟಿಕೊಡುವ ಫಲಪ್ರದವಾಗುವ ಯೋಜನೆಗಳು ರೂಪುಗೊಳ್ಳಬೇಕು.
ಅದು ಮೇಲ್ಮಟ್ಟದಲ್ಲಾಗಲಿ ಬಿಡಿ… ಪ್ರತಿದಿನ ನಾವು ನಮ್ಮ ಮನೆಗಳಲ್ಲಿ, ಸಮುದಾಯಗಳಲ್ಲಿ ಆಹಾರ ಕುರಿತಾದ ಜಾಗೃತಿಯನ್ನು ಬೆಳೆಸಿಕೊಂಡು ಆಹಾರ ಪೋಲಾಗದಂತೆ, ದವಸ ಧಾನ್ಯಗಳು ಹಾಳಾಗದಂತೆ ರಕ್ಷಿಸಿಕೊಳ್ಳುವ ಮೂಲಕ ದೇಶಕ್ಕೆ ನಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡೋಣ.
– ವೀಣಾ ಹೇಮಂತ್ ಗೌಡ ಪಾಟೀಲ್. ಮುಂಡರಗಿ ಗದಗ್
ಲೇಖಕಿಯರ ಪರಿಚಯ :
ವೀಣಾ ಹೇಮಂತ್ ಗೌಡ ಪಾಟೀಲ್ , ರವರು ಗದಗ ಜಿಲ್ಲೆ ಮುಂಡರಗಿ ನಿವಾಸಿ. ಇವರು ಮನಃಶಾಸ್ತ್ರ ಮತ್ತು ಮಾನವ ಶಾಸ್ತ್ರಗಳ ಪದವಿಧರರು. ‘ ಚೈತನ್ಯ ‘ ಎಂಬ ಶಿಕ್ಷಣ ಸಂಸ್ಥೆ ಹೊಂದಿರುವ ಇವರು ಅಬಾಕಸ್ ಮತ್ತು ವೇದ ಗಣಿತಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ನರ್ಸರಿ ಟೀಚರ್ಸ್ ಟ್ರೈನಿಂಗ್ ತರಗತಿ ಹಾಗೂ ನುರಿತ ಶಿಕ್ಷಕರಿಂದ ಭರತ ನಾಟ್ಯ ಶಾಸ್ತ್ರೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿರುವ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
‘ ವೀಣಾಂತರಂಗ ‘ ಎಂಬ ಪುಸ್ತಕ ಪ್ರಕಟಿಸಿದ್ದಾರೆ.