ಸಾಹಿತಿ (ಲಲಿತ ಪ್ರಬಂಧ)
ಸಾಹಿತಿ ಅನ್ನುವ ಪದ ನಮಗೆ ಅಪರಿಚಿತವಾದುದೇನೂ ಅಲ್ಲ, ನಮ್ಮಲ್ಲಿ, ನಮ್ಮ ಸುತ್ತಮುತ್ತ ಅನೇಕ ಸಾಹಿತಿಗಳಿದ್ದಾರೆ. ಕಲಿತ ಸಾಹಿತಿಗಳು, ದಲಿತ ಸಾಹಿತಿಗಳು, ಬಲಿತ
ಸಾಹಿತಿಗಳು ಈ ರೀತಿ ಎಲ್ಲ ವರ್ಗದ ಸಾಹಿತಿಗಳನ್ನು ನಾವು ಕಾಣುತ್ತೇವೆ. ಪರದೇಶಗಳಂತೆ
ಅಥವಾ ನಮ್ಮ ದೇಶದ ಕಾರಂತರು, ಅ.ನ.ಕೃ.ರಂಥ ಪೂರ್ಣಕಾಲಿಕ ಸಾಹಿತಿಗಳು ನಮ್ಮಲ್ಲಿ
ಇರಲಿಕ್ಕಿಲ್ಲ. ಸಾಹಿತ್ಯವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಬದುಕುವುದು ನಮ್ಮ
ದೇಶದಲ್ಲಿ ಸಾಧ್ಯವೂ ಇಲ್ಲ. ಹೀಗಾಗಿ ನಮ್ಮ ನಡುವೆ ಇರುವ ಸಾಹಿತಿಗಳೆನಿಸಿಕೊಳ್ಳುವವರಿಗೆ
ಸಾಹಿತ್ಯವು ಮುಖ್ಯ ಕಸಬಲ್ಲ. ಅದು ಉಪಕಸಬಾಗಿರುತ್ತದೆ. ದೊಡ್ಡ ದೊಡ್ಡ ಕಾರಖಾನೆಗಳಲ್ಲಿ
ಮುಖ್ಯ ಉತ್ಪಾದನೆಯ ಜೊತೆಗೆ ಬೈ-ಪ್ರೋಡಕ್ಟಗಳು ಉತ್ಪನ್ನವಾಗುವಂತೆ ಈ ಸಾಹಿತಿಗಳಿಂದ
ಸಾಹಿತ್ಯವು ಬೈ-ಪ್ರೋಡಕ್ಷ ಆಗಿ ಸೃಷ್ಟಿಯಾಗುತ್ತದೆ. ಉದಾಹರಣೆಗೆ ಸಕ್ಕರೆಯ ಕರಖಾನೆಯಲ್ಲಿ
ಸಕ್ಕರೆಯ ಉತ್ಪಾದನೆಯು ಮುಖ್ಯ ಗುರಿಯಾಗಿರುತ್ತದೆ. ಆದರೆ ಸಕ್ಕರೆಯ ಜೊತೆಗೆ
ಅದರ ತ್ಯಾಜ್ಯ ವಸ್ತುವೂ ಉತ್ಪನ್ನವಾಗುತ್ತದೆ. ಅದನ್ನು ನಿರುಪಯುಕ್ತವೆಂದು ಎಸೆಯುವುದಕ್ಕೆ
ಮನಸ್ಸಾಗುವುದಿಲ್ಲ. ಆದ್ದರಿಂದ ಸಕ್ಕರೆ ಕಾರಖಾನೆಯವರು ಇಂಥ ಉಪ-ಉತ್ಪನ್ನದಿಂದ
ಲಿಕ ಅಂದರೆ ಮದ್ಯ ತಯಾರಿಸುತ್ತಾರೆ. ಅದೇ ರೀತಿಯಾಗಿ ಸಾಹಿತಿಗಳೆಂದು ನಮ್ಮ
ಸುತ್ತಮುತ್ತ ಕಾಣಿಸಿಕೊಳ್ಳುವವರ ಮೂಲ ಕಸಬು ಬೇರೆ ಏನೋ ಆಗಿರುತ್ತದೆ. ಅದರ
ಬೈ-ಪ್ರೋಡಕ್ಷನ್ನು ಮರುಬಳಕೆ ಮಾಡಲು ಹೋದಾಗ ಅಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತದೆ.
ಅಂಥ ವ್ಯಕ್ತಿಗಳ ಮೂಲ ವೃತ್ತಿಯೇ ಮಾಯವಾಗಿ ಈ ಬೈ-ಪ್ರೋಡಕ್ಷೇ ಪ್ರಮುಖವಾಗಿ
ಅವರು ಸಾಹಿತಿಗಳೆಂದು ಬ್ಯಾನರ್ ಹಚ್ಚಿಕೊಂಡಿರುತ್ತಾರೆ.
ಸಾಹಿತಿ ಎಂದರೆ ಯಾರು ? ಎಂಬ ಪ್ರಶ್ನೆಯನ್ನೇ ಮರೆತು ನಾನು ಏನೇನೋ
ಹೇಳಿ ಹೊರಟಿದ್ದೇನೆ. ಸಾಹಿತಿಯೆಂದರೆ ಸಾಹಿತ್ಯಕ್ಕೆ ಸಂಬಂಧಪಟ್ಟಂಥ ವ್ಯಕ್ತಿಗಳು ಎಂದು
ನಾನು ತಿಳಿದುಕೊಂಡ ನೇರವಾದ ಅರ್ಥ. ಸಾಹಿತ್ಯಕ್ಕೆ ಸಂಬಂಧಪಟ್ಟವರೆಂದರೆ ಯಾರು?
ಈ ವರ್ಗಕ್ಕೆ ಯಾರು ಯಾರು ಸೇರುತ್ತಾರೆ ? ಪ್ರಶ್ನೆ ತುಂಬ ಸರಳವಾಗಿದೆ. ಸಾಹಿತ್ಯ
ಎಂದ ಮೇಲೆ ಅದನ್ನು ನಿರ್ಮಿಸುವಂಥ ಒಬ್ಬ ವ್ಯಕ್ತಿ ಬೇಕೇಬೇಕಲ್ಲ. ಸಾಹಿತ್ಯವನ್ನು ನಿರ್ಮಿಸುವ
ವ್ಯಕ್ತಿಯೇ ಲೇಖಕ. ಲೇಖಕನೊಬ್ಬನೇ ಸಾಹಿತಿಯಲ್ಲ. ಈತ ಈ ವರ್ಗದ ಮೊದಲನೆಯ
ವ್ಯಕ್ತಿ. ಎಲ್ಲಾ ಲೇಖಕರು ಅಥವಾ ಬರವಣೆಗೆಗಾರರು ಸಾಹಿತಿಗಳಾಗುವುದಿಲ್ಲ ಎಂಬ
ಅರಿವು ನನಗಿದೆ. ಹಾಗೇನಾದರೂ ಆದರೆ ಕಚೇರಿಗಳಲ್ಲಿ ಕಡತಗಳನ್ನು ಬರೆಯುವವರು,
ಅಂಗಡಿಗಳಲ್ಲಿ ಖಾತೆ ಬರೆಯುವವರು, ಮಾರಾಟ ಮಳಿಗೆಗಳಲ್ಲಿ ಪಾವತಿ ಬರೆಯುವವರು,
ಸಾರ್ವಜನಿಕ ಮೂತ್ರಾಲಯಗಳ ಗೋಡೆಗಳ ಮೇಲೆ ತಮ್ಮ ವಿದ್ವತ್ತನ್ನು ಪ್ರದರ್ಶಿಸುವವರು,
ಇದೇ ರೀತಿ ಅನೇಕ ಲೇಖಕರೆಲ್ಲ ಸಾಹಿತಿಗಳಾಗುವ ಅಪಾಯವಿದೆ. ಆದ್ದರಿಂದ
ಸಾಹಿತಿ ಎಂಬ ಸದಕ್ಕೆ ಒಂದು ಸುರಿವಾದ ಅರ್ಥವಿದೆ ಎಂಬುದು ನಿಟುಗಳ ಗು
ಅದನ್ನು ವ್ಯಾಖ್ಯಾನಿಸುವ ಗೋಜಿಗೆ ನಾನು ಹೋಗುವುದಿಲ್ಲ.
ಸಾಹಿತ್ಯಕ್ಕೆ ಸಂಬಂಧ ಪಟ್ಟಂತೆ ಎಂಬಳೆಯ ವ್ಯಕ್ತಿಯೆಂದರೆ ಓದುಗ, ಸಾಹಿತಿಯು
ವಿವಾಹಿತನಾಗಿದ್ದಾರ. ಸಾಮಾನ್ಯವಾಗಿ ಅವನ ಹೆಂಡತಿ ಓದುಗಳಾಗಿರುತ್ತಾಳ,
ಅವಿವಾಹಿತನಾಗಿದ್ದರೆ, ಅನಿನಿಂದ ಎಸ್.ಕೆ.ಸಿ. (ಸ್ವೀಟ್, ಬಾರಾ, ಕಾಫಿಯ ಸೇವೆ ಮಾಡಿಸಿ
ಕೊಳ್ಳುವ ಗೆಳೆಯರಿರುತ್ತಾರೆ, ಇನ್ನು ವಿಧುರನಾಗಿದ್ದರೆ, ಸನ್ಯಾಸಿಯಾಗಿದ್ದರೆ, ಅದೂ ಆಗಿದ್ದರೆ,
ಇದೂ ಆಗಿದ್ದಾರೆ ಎಂಬ ಪನ್ನಗಳನ್ನು ಕೇಳಬೇಡಿರಿ, ಅವು ಅಪ್ರಸ್ತುತ, ಅವರವರ ಯೋಗ್ಯತೆಗೆ
ಅಂತ ಅವರವರಿಗೆ ಓದುಗರು ಇದ್ದೇ ಇರುತ್ತಾರೆ, ಮೂರನೆಯ ವ್ಯಕ್ತಿ ಪ್ರಕಾಶಕ, ಈ ವ್ಯಕ್ತಿ
ಸಿಗುವುದೇ ಬಹಳ ಕಷ್ಟ ನಮ್ಮ ಎಷ್ಟೊಂದು ಸಾಹಿತಿಗಳು ಬೆಳಕು ಕಾಣದೇ ಇರುವುದಕ್ಕೆ,
ನಮ್ಮ ಎಷ್ಟೊಂದು ಪ್ರತಿಭೆಗಳು ಉಸಿರುಗಟ್ಟಿ ಸಾಯುತ್ತಿರುವುದಕ್ಕೆ ನಮ್ಮ ಸೃಜನಾತ್ಮಕತೆಯ
ತುಟ್ಟಿಗೆ ಕಾಯ ನೀಡುವವರು ಇಲ್ಲದೆ ಇರುವುದರಿಂದ ಅದು ಚರಂಡಿಯ ಪಾಲಾಗುತ್ತಿರುವುದಕ್ಕೆ
ಈ ಪ್ರಕಾಶನೆಂಬ ವ್ಯಕ್ತಿಯ ಕೊರತೆಯೇ ಕಾರಣವಾಗಿದೆ,
ನಾಲ್ಕನೆಯ ವ್ಯಕ್ತಿ ಮಾರಾಟಗಾರ, ಪ್ರಕಾಶಕನಷ್ಟೇ ಈತನೂ ಪ್ರಮುಖನಾದ ವ್ಯಕ್ತಿ,
ಮನೆಯಲ್ಲಿ ಬೆಳೆದುನಿಂತ ಮಗಳಿಗಾಗಿ ಮದುವ ಮಾರ್ಕೆಟಿನಲ್ಲಿ ಗಿರಾಕಿಯನ್ನು
ಕುಮರಿಸಿಕೊಡಲು ಒಬ್ಬ ದಳ್ಳಾಳಿ ಬೇಕೇಬೇಕಲ್ಲವೆ, ದಳ್ಳಾಳಿ ಎಂಬ ಶಬ್ಬ ಬಹುಶಃ ಕಿವಿಗೆ
ಹಿತವಾಗಿ ಕಾಣಲಿಕ್ಕಿಲ್ಲ. ಬೇಕಾದರೆ ಮಧ್ಯಸ್ಥ ಅಥವಾ ‘ಸೋಶಿಯಲ್ ಸರ್ವಿಸ್’ ಮಾಡುವವ
ಎಂದು ಬೇಕಾದರೂ ಇಟ್ಟುಕೊಳ್ಳಿ, ಹೆಸರು ಏನಾದರೇನಂತೆ, ಕೆಲಸ ಅದೇ ತಾನೆ, ನಮ್ಮ
ಸಾಹಿತ್ಯ ಕೃತಿಯು ಓದುಗರಿಗೆ ತಲುಪಬೇಕಾದರೆ ಈ ವ್ಯಪಾರಿ ಎಂಬ ಪ್ರಾಣಿ ಅದನ್ನು
ಗ್ರಾಹಕರ ಮನವೊಲಿಸಿ ಚಲಾವಣೆಗೆ ತರಬೇಕು, ಆಗ ಮಾತ್ರ ಅದು ಲೋಕಾರ್ಪಣವಾದಂತೆ,
ಈ ಸಾಹಿತಿಗಳ ವರ್ಗದಲ್ಲಿ ಇನ್ನೊಬ್ಬ ಪ್ರಮುಖನಾದ ವ್ಯಕ್ತಿ ಇದ್ದಾನೆ, ಆತನೇ
ವಿಮರ್ಶಕ ಅಥವಾ ಸಮೀಕ್ಷಕ, ಮದುವೆಯ ದಳ್ಳಾಳಿಗಳಂತೆ ಮಾರಾಟಗಾರನು ಸುಳೊಂದು
ಸೊಗಡೊಂದು ಏನೋ ಹೇಳಿ ತನ್ನ ಸರಕನ್ನು ಖರ್ಚುಮಾಡುವ ಮಸಲಾ ಮಾಡಬಹುದು,
ಆದರೆ ವಿಮರ್ಶಕ ಹಾಗಲ್ಲ, ಸಿನಿಮಾಗಳ ಜಾಹಿರಾತಿನಂತೆ ಪುಸ್ತಕದ ಬಗ್ಗೆ ಒಂದಿಷ್ಟು
ಹೇಳಿ, ಓದುಗರ ಕುತೂಹಲ ಕೆರಳಿಸಿ ‘ಮುಂದಿನದನ್ನು ಬೆಳ್ಳಿಯ ಪರದೆಯ ಮೇಲೆ
ನೋಡಿರಿ’ ಎಂದು ಹೇಳುವಂತೆ ಪ್ರಚಾರ ಕಾರ್ಯಕ್ಕೆ ಪೂರಕವಾಗಿ ದುಡಿಯುತ್ತಾನೆ.
ಒಮ್ಮೊಮ್ಮೆ ತದ್ವಿರುದ್ಧವಾಗಿಯೂ ಆತ ಕೆಲಸ ಮಾಡಬಹುದು, ಆ ಮಾತು ಬೇರೆ,
ಈ ಐದೂ ಜನರನ್ನು ನಾವು ಸಾಹಿತಿಗಳೆಂದು ಕರೆಯಬಹುದು, ಆದರೆ ಇವರೆಲ್ಲರ
ವೃತ್ತಿಗಳು ಭಿನ್ನಭಿನ್ನ. ಒಬ್ಬರ ಕೆಲಸ ಇನ್ನೊಬ್ಬರು ಮಾಡಲು ಬರುವುದಿಲ್ಲ, ಲೇಖಕನಾದವನು
ಓದುಗನಾಗಲಾರ, ಆಗಲೂ ಬಾರದು, ಬರೆಯುವವನೂ ತಾನೇ ಓದುವವನೂ ತನೇ,
ಎಂದರೆ ಅದಕ್ಕೊಂದು ಮರ್ಯಾದೆ ಬೇಡವೆ ? ಅದರಂತೆ ಓದುಗನು ಪ್ರಕಾಶಕನಾಗಲಾರ,
ಪ್ರಕಾಶಕನೇ ಓದಗ ಮತ್ತು ವಿಮರ್ಶಕ ಮುಂತಾಗಿ ಆಗಲು ಸಾಧ್ಯವಿಲ್ಲ, ಯಾರ ಕೆಲಸ
ಅವರೇ ಮಾಡಬೇಕು. ಹಾಗೆಂದರೆ ನೌಕರಶಾಹಿ ಮಂದಿ ರಾಜಕೀಯ ಮಾಡಬಾರದು,
ರಾಜಕೀಯ ವ್ಯಕ್ತಿಗಳು ಸಮಾಜ ಸೇವೆ ಮಾಡಬಾರದು, ಸಮಾಜಸೇವಕರು ದುಡಿದು
ತಿನ್ನಬಾರದು. ಆದರೆ ಈಗ ನಮ್ಮಲ್ಲಿ ಹೀಗಾಗುತ್ತಿಲ್ಲ. ಯಾರು ಯಾರ ಕೆಲಸಗಳನ್ನು
ಯಾರುಯಾರೋ ಮಾಡುತ್ತಿರುವುದರಿಂದಲೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ.
ಆದರೆ ಏನು ಮಾಡುವುದು ? ಮನುಷ್ಯನ ವಿವರತೆಯಿದೆ. ಲೇಖಕನೇ ಪ್ರಕಾಶನಾಗ
ಬೇಕಾಗಿದೆ, ಲೇಖಕನೇ ಮಾರಾಟಗಾರನಾಗಬೇಕಾಗಿದೆ. ಆದರೆ ಆತ ಓದುಗನಾಗಲೀ,
ವಿಮರ್ಶಕನಾಗಲೀ ಆಗಲು ಸಾಧ್ಯವಿಲ್ಲ. ನನಗೆ ಕೇಳಿದರೆ ಲೇಖಕನಾದವನು ಓದಲೇಬಾರದು.
ಅಪ್ಪಿತಪ್ಪಿ ಓದಿದರೂ ಅದರ ಕುರಿತು ಮಾತಾಡಬಾರದು. ಇದನ್ನು ನಮ್ಮ ಲೇಖಕರು
ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಅವರನ್ನು ಅಭಿನಂದಿಸಬೇಕು. ಅವರೇ ಓದುತ್ತಾ
ಕುಳಿತರೆ ಬರವಣಿಗೆ ಮಾಡವವರಾರು ? ಹಾಗಂತಲೇ ದಿನಬೆಳಗಾದರೆ ಎಷ್ಟೊಂದು
ಕೃತಿಗಳು ಬೆಳಕು ಕಾಣುತ್ತಿವೆ. ಹಾಗಂತ ನಾವು ಪತ್ರಿಕೆಗಳಲ್ಲಿ ಓದುತ್ತೇವೆ. ಈ ಓದುವ ಕೆಲಸ
ಮತ್ತು ವಿಮರ್ಶೆ ಕೆಲಸ ಕೈಬಿಟ್ಟಿದ್ದರಿಂದಲೇ ನಮ್ಮ ಲೇಖಕನು ಹೆಗಲಿಗೊಂದು ಚೀಲ
ಹಾಕಿಕೊಂಡು ಓದುಗರನ್ನೂ ವಿಮರ್ಶಕರನ್ನೂ ಹುಡುಕುತ್ತ ಬೀದಿ-ಬೀದಿ ಅಲೆಯುತ್ತಿದ್ದಾನೆ.
ಯಾಕೆಂದರೆ ಅವುಗಳನ್ನು ಓದುವವರು ಯಾರೂ ಸಿಗತಾ ಇಲ್ಲ. ನನಗೆ ನಮ್ಮ ಬುದ್ಧಿಜೀವಿಗಳ
ಪರಿಸ್ಥಿತಿ ತುಂಬ ಶೋಚನೀಯವಾಗಿ ಕಾಣುತ್ತಿದೆ.
ಒಂದಿಷ್ಟು ಕನ್ನಡ ಓದಲು, ಬರೆಯಲು ಬಂದರೆ ಸಾಕು. ಅವನೊಬ್ಬ ಕವಿಯಾಗುತ್ತಾನೆ.
ಒಂದೆರಡು ಪುಸ್ತಕಗಳನ್ನು ತನ್ನ ಹೆಗಲುಚೀಲದಲ್ಲಿ ಹಾಕಿಕೊಂಡು ಓದುಗರಿಗಾಗಿ
ಹುಡುಕಿಕೊಂಡು ಹೊರಡುತ್ತಾನೆ. ತನಗಿಂತ ಹಿರಿಯರೆಂದು ಕಾಣುವ ಲೇಖಕರನ್ನು
ಕಂಡು ತನ್ನ ಪುಸ್ತಕದ ಒಂದು ಪ್ರತಿಯನ್ನು ಗೌರವಪೂರ್ವಕವಾಗಿ ನೀಡಿ, ‘ಇದರ ಬಗ್ಗೆ
ತಮ್ಮ ಅಭಿಪ್ರಾಯ ತಿಳಿಸಿಬೇಕು. ಸರ್. ನನ್ನ ಮುಂದಿನ ಪುಸ್ತಕದಲ್ಲಿ ಅದನ್ನು
ಹಾಕಬೇಕೆಂದಿದ್ದೇನೆ’ ಎಂದು ಹಲ್ಲುಗಿಂಜುತ್ತಾನೆ. ಒಂದೆರಡು ವಾರ ಬಿಟ್ಟು ಮತ್ತೆ
ಭೇಟಿಯಾದಾಗ, ‘ಸರ್, ನನ್ನ ಪುಸ್ತಕ ಓದಿದ್ದೀರ ? ಹೇಗಿದೆ ?’ ಎಂದು ಕೇಳುತ್ತಾನೆ. ಈ
ಎಲ್ಲ ತರುಣ ಪೀಳಿಗೆಯವರು ಹೀಗೇಕೆ ಮಾಡುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ಯಾವಾಗ ನೋಡಿದರೂ ಒಂದು ರೀತಿಯ ಗಂಭೀರ ಮುಖ ಮಾಡಿಕೊಂಡು ತಾವೊಬ್ಬ
ದೊಡ್ಡ ಚಿಂತಕರು ಎಂದು ತೋರಿಸಿಕೊಳ್ಳುತ್ತ ಅಡ್ಡಾಡುತ್ತಾರೆ. ಅವರನ್ನು ನೋಡಿದರೆ
ನನಗೆ ಮೈಸೂರಿನ ಮೃಗಾಲಯದ ಚಿಂಪಾಂಜಿಯ ನೆನಪಾಗುತ್ತದೆ. ಅದೂ ಕೂಡ
ಇವರ ಹಾಗೇ ಯಾವಾಗಲೂ ಏನೋ ಯೋಚಿಸುತ್ತ, ಚಂತನಶೀಲವಾಗಿರುವಂತೆ ಗಂಭೀರ
ಮುಖ ಮಾಡಿಕೊಂಡು ಕುಳಿತಿರುವುದನ್ನು ನಾನು ಕಂಡಿದ್ದೇನೆ.
“ಬಾಯಿ ಬಿಚ್ಚಿದರೆ ಮನುಷ್ಯನ ಯೋಗ್ಯತೆ ಗೊತ್ತಾಗುತ್ತೆ’ ಎಂಬ ಮಾತೊಂದಿದೆ.
ಮಾತಾಡಿದರೆ ತಾನೆ ನಾವು ಎಂಥವರು ಎಂಬುದು ಗೊತ್ತಾಗುವುದು, ಮಾತಾಡದೇ
ಗಂಭೀರವಾಗಿದ್ದರೆ ನಾವೊಬ್ಬ ದೊಡ್ಡ ವಿದ್ವಾಂಸರೋ, ಜ್ಞಾನಿಗಳೋ ಇರಬೇಕೆಂದು ಜನ
ಭಾವಿಸುತ್ತಾರೆ. ಆದರೆ ನಾವು ಆ ರೀತಿ ಗಂಭೀರರಾಗಿರುವುದಕ್ಕೂ ಒಂದು ಮಿತಿ ಇದೆ.
ಕುರುಬರ ಬೀರಪ್ಪ ರಾಜಕುಮಾರಿಯನ್ನು ಮದುವೆಯಾಗಿ ಸೋಬಾನದ ರಾತ್ರಿ ಎಷ್ಟು
ಹೊತ್ತು ಅಂತ ಗಂಭಿರನಾಗಿರಲು ಸಾಧ್ಯ ? ಬಾಯಿ ಬಿಡಲೇ ಬೇಕಾಗುತ್ತದೆ. ಅಂಥ
ಪ್ರಸಂಗ ಬಂದೇ ಬರುತ್ತದೆ. ಅಂಥ ಹೊತ್ತಿನಲ್ಲಿ ನಮ್ಮ ಹೂರಣ ಹೊರಬೀಳುತ್ತದೆ.
ಕುರುಬರ ಬೀರಪ್ಪನಿಗೇನೋ ಆತನ ಹೆಂಡತಿ ಬೀರಪ್ಪನಿಂದ ಕಾಳಿದಾಸನನ್ನಾಗಿ ಮಾಡಿದಳು.
ನಮ್ಮನ್ನು ಕಾಳಿದಾಸರನ್ನಾಗಿ ಮಾಡುವವರು ಯಾರು ? ನಮಗೆ ನಾವೇ ಕಾಳಿದಾಸರಾಗಬೇಕು.
ಸುಮ್ಮನೆ ಗಡ್ಡ
ಬೆಳೆಸಿಕೊಂಡು, ಗಂಭೀರ ಮುಖ ಮಾಡಿಕೊಂಡು, ಹೆಗಲಿಗೊಂದು ಚೀಲ
ಹಾಕಿಕೊಂಡರೆ ಕಾಳಿದಾಸರಾಗುವುದಿಲ್ಲ. ಕುರುಬರ ಬೀರಪ್ಪನು ಕಾಳಿಕಾ ದೇವಿಯ ಗುಡಿಯಲ್ಲಿ
ತನ್ನನ್ನೇ ತಾನು ಸಮರ್ಪಿಸಿಕೊಂಡು ಧ್ಯಾನ ಮಾಡಿದಾಗ ಮಾತ್ರ ಆತ ಕಾಳಿದಾಸನಾಗಲು
ಸಾದ್ಯವಾಯಿತು ಎಂಬ ಮಾತನ್ನು ನಮ್ಮ ತರುಣರು ಅರ್ಥ ಮಾಡಿಕೊಳ್ಳಬೇಕು.
ಮಸ್ತಕಗಳನ್ನು ಅಷ್ಟೂ ಇನ್ನೂ ಓದುವ ಹವ್ಯಾಸ ಇದ್ದುದು ಈ ದೂರದರ್ಶನ
ಮತ್ತು ದೂರದರ್ಶನದ ಚೈನಲ್‌ಗಳು ಬಂದಾಗಿನಿಂದ ಅದೂ ಹಾಳಾಗಿ ಹೋಗಿದೆ.
ದಿನದಿಂದ ದಿನಕ್ಕೆ ನಮ್ಮ ಬದುಕು ಯಾಂತ್ರಿಕವಾಗುತ್ತ ಬಂದಿರುವುದರಿಂದ ದಣಿದ ಮೈ
ಮತ್ತು ಮನಸ್ಸಿಗೆ ಏಕಾಗ್ರತೆಯಿಂದ ಪುಸ್ತಕ ಓದುವಷ್ಟು ವ್ಯವಧಾನವಾದರೂ ಎಲ್ಲಿದೆ ?
ಸ್ವಿಚ್ ಒತ್ತಿದರೆ ಸಾಕು ಆಕಾಶವಾಣಿಯ ಯಾವುದೋ ಕೇಂದ್ರ ಒದರಲು ಸುರುವಾಗುತ್ತದೆ.
ರಿಮೋಟ ಒತ್ತಿದರೆ ದೂರದರ್ಶನದ ಪರದೆ ತೆರೆದುಕೊಳ್ಳುತ್ತದೆ. ಮನಸ್ಸು ಬಂದರೆ ಆ
ಕಡೆಗೆ ಗಮನ ಹರಿಸಿದ, ಇಲ್ಲವಾದರೆ ಇಲ್ಲ. ಆದರೆ ಈ ಪುಸ್ತಕ ಹುಡುಕಿ, ವ್ಯವಸ್ಥಿತವಾಗಿ
ಕುಳಿತು, ಅದನ್ನು ಬಿಚ್ಚಿ, ಅದರಲ್ಲಿ ಮನಸ್ಸನ್ನು ತೊಡಗಿಸಿ ಓದುವಷ್ಟು ಪುರಸೊತ್ತು ಎಲ್ಲಿದೆ.
ನಾನೊಮ್ಮೆ ದಿಲ್ಲಿಗೆ ಹೋದಾಗ ನನ್ನೊಬ್ಬ ಪ್ರಕಾಶಕರಲ್ಲಿ ಕುಳಿತಿದ್ದೆ.
ನ್ಯೂಯಾರ್ಕಿನಲ್ಲಿರುವ ಒಬ್ಬ ಅನಿವಾಸಿ ಭಾರತೀಯರು ಅಲ್ಲಿಗೆ ಬಂದರು. ಅವರು ನಮ್ಮ
ಪ್ರಕಾಶಕರಿಗೆ ಪರಿಚಯದವರೇ ಆಗಿದ್ದರು. ಯೋಗಕ್ಷೇಮದ ಮತುಗಳಾದ ಮೇಲೆ, ‘ನನಗೆ
ಈ ನಮ್ಮ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ವೈದಿಕ ಸಾಹಿತ್ಯದ ಪುಸ್ತಕಗಳು ಬೇಕು.
ಮೂಲ ಸಂಸ್ಕೃತದ ಜೊತೆಗೆ ಅದರ ಹಿಂದೀ ಮತ್ತು ಇಂಗ್ಲೀಷ್ ಅನುವಾದ ಇರಲೇಬೇಕು.
ಅಂಥ ಒಂದು ಸೆಟ್ ಕೊಡಿಸುತ್ತೀರಾ ? ಅಮೇರಿಕಾದಲ್ಲಿ ಯಾರಾದರೂ ಅತಿಥಿಗಳು
ಮನೆಗೆ ಬಂದಾಗ ನಮ್ಮ ಧರ್ಮದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಏನಾದರೂ ಕೇಳಿದರೆ
ಹೇಳುವುದಕ್ಕೆ, ತೋರಿಸುವುದಕ್ಕೆ ನಮ್ಮಲ್ಲಿ ಏನೂ ಇರುವುದಿಲ್ಲ. ಅವರೆದುರಿಗೆ ನಮಗೆ
ತುಂಬ ಇನ್‌ಸಲ್ವಾಗಿ, ಕೀಳರಿಮೆಯ ಭಾವನೆ ಉಂಟಾಗುತ್ತದೆ. ಫೀಜ, ಸಹಾಯ
ಮಾಡುತ್ತೀರಾ?’ ಎಂದು ಅವರು ಬಹಳ ಕಳಕಳಿಯಿಂದ ಕೇಳಿದರು. ಅವರ ದೇಶಾಭಿಮಾನ,
ಜಾತ್ಯಾಭಿಮಾನ ಕಂಡು ನನ್ನಲ್ಲಿ ಅವರ ಬಗ್ಗೆ ತುಂಬ ಗೌರವದ ಭಾವನೆ ಮೂಡಿತು. ನಮ್ಮ
ಪ್ರಕಾಶಕರು ತಮ್ಮಲ್ಲಿರುವಷ್ಟನ್ನು ಹುಡುಕಿಸಿ, ಉಳಿದವುಗಳನ್ನು ಫೋನಿನ ಮೂಲಕ ಬೇರೆ
ಪ್ರಕಾಶಕರನ್ನು ಸಂಪರ್ಕಿಸಿ ಒಂದು ಸೆಟ್ಟು ಹೊಂದಿಸುವ ವ್ಯವಸ್ಥೆ ಮಾಡಿದರು. ಆ ಅನಿವಾಸಿ
ಭಾರತೀಯ ವ್ಯಕ್ತಿಯ ಕಣ್ಣಲ್ಲಿ ಆ ಕ್ಷಣ ಕಾಣಿಸಿಕೊಂಡಿದ್ದ ಕೃತಜ್ಞತಾ ಭಾವನೆ ಇವೊತ್ತಿಗೂ
ನನ್ನ ನೆನಪಿನಲ್ಲಿದೆ.
ಥಂಡಾ-ಗರಂಗಳೆಲ್ಲ ಮುಗಿದ ಮೇಲೆ ಆ ಮಹಾನುಭಾವರು ಕೊರಗಲು ಒಕ್ಕೂ
ನಿಂತರು. ಕೈಕುಲುಕಿ ಇನ್ನೇನು ಹೊರಡುತ್ತಾರೆ ಎನ್ನುವಾಗ, ಒಮ್ಮೆಲೇ ಏಧಿ ಕು
ಕೊಂಡವರಂತೆ ಮತ್ತೆ ಕುಳಿತು, ‘ಓದುವುದಕ್ಕಾಗಿ ಏನಾದರೂ ಪುಸ್ತಕಗಳಿದ್ದರೆ ಅವುಗಳ
ಪ್ಯಾಕ ಮಾಡಿಸಿ, ಇವರೆ’ ಎಂದು ಹೇಳಿದರು. ಅವರ ಮಾತು ಕೇಳಿ ಹೆರ್ಜೆ
ಸನ್ನಿಹೊಡೆದಂತಾಯಿತು. ನ್ಯೂಯಾರ್ಕದಿಂದ ದಿಲ್ಲಿಯವರೆಗೆ ಭಾರತೀಯ ಸಂಸ್ಕೃತಿಗೆ
ಸಂಬಂಧಿಸಿದ ಸಾಹಿತ್ಯವನ್ನು ಹುಡುಕಿಕೊಂಡು ಬಂದಂಥ ವ್ಯಕ್ತಿ ಆ ಸಾಹಿತ್ಯನನ್ನ
ಯಾವುದಕ್ಕಾಗಿ ಖರೀದಿಸುತ್ತಿದ್ದಾರೆ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಎದ್ದಿತು. ನಾನು ನನ್ನ
ಕುತೂಹಲ ತಡೆಯದೆ ಕೇಳಿದೆ, ‘ಇಷ್ಟೆಲ್ಲ ಗ್ರಂಥಗಳನ್ನು ಕೊಳ್ಳುತ್ತಿದ್ದೀರಲ್ಲ. ಇನ್ನು
ಓದುವುದಕ್ಕಲ್ಲವೇ?’ ಅವರು ನಿಷ್ಕಾಳಜಿಯಿಂದ ಹೇಳಿದರು. ‘ಇವು ನಮ್ಮ ಡ್ರಾಯಿಂಗಮಿಸು
ಶೋಭೆಗಾಗಿ, ಓದುವುದಕ್ಕಲ್ಲ, ಓದುವುದಕ್ಕೆ ಹಲ್ಕಾಫುಲ್ಕಾ ಪುಸ್ತಕ ಆದರೆ ಸಾಕು, ಟೈಂಪಾ
ಅಂದರೆ ಪುಸ್ತಕಗಳಿರುವುದು ಟೈಂಪಾಸಿಗಾಗಿ ಎಂಬ ಹೊಸ ಸಂಗತಿ ನನಗೆ ತಿಳಿಯಿತು.
ಈ ದಿನಗಳಲ್ಲಿ ‘ಪಾಸ್’ ಮಾಡಲು ಯಾರ ಹತ್ತಿರವೂ ‘ಟೈಮೇ ಇಲ್ಲ. ಅಂದ
ಪುಸ್ತಕ ಓದುವುದಾದರೂ ಹೇಗೆ ? ಲೇಖಕ ಮತ್ತು ಓದುಗ ಇವರಲ್ಲಿ ಒಂದು ನಿರ್ದಿಷ್ಟವಾದ
ಅನುಪಾತವಿದ್ದರೆ ಜನ ಪುಸ್ತಕ ಕೊಂಡೋ, ಕದ್ದೋ, ಬೇಡಿಯೋ, ಬಿಟ್ಟಿಯಾಗಿಯೋ
ಓದುತ್ತಾರೆ. ಈಗ ಏನಾಗಿದೆಯೆಂದರೆ, ಬರೆಯುವವರು ಹೆಚ್ಚಾಗಿದ್ದಾರೆ. ಬರೆಯುವವರ
ಅನುಪಾತದಲ್ಲಿ ಓದುಗರು ಬೆಳೆದಿಲ್ಲ. ಇಲ್ಲಿ ಅಸಮತೋಲನವಾಗಿರುವುರಿಂದ, ಲೇಖಕರ
ಪರಿಸ್ಥಿತಿ ಗಂಭೀರವಾಗಿದೆ. ಪ್ರಾದೇಶಿಕ ಅಸಮತೋಲನಕ್ಕಾಗಿ ಹುಲ್ಲೆಬ್ಬಿಸುತ್ತಿರುವ ನಮ್ಮ
ರಾಜಕಾರಣಿಗಳು ಈ ಕಡೆಗೆ ತುರ್ತು ಗಮನ ಹರಿಸುವುದು ಅತ್ಯಾವಶ್ಯಕವಾಗಿದೆ. ಯಾಕೆಂದು
ಇದು ಪ್ರಾದೇಶಿಕ ಅಸಮತೋಲನಕ್ಕಿಂತ ಅತೀ ಗಂಭೀರವಾದ ಸಮಸ್ಯೆ ಯಾರೂ ಇದನ್ನು
ಗಮನಿಸಿಯೇ ಇಲ್ಲ ಎಂದು ನನಗನಿಸುತ್ತದೆ. ಪ್ರದೇಶ ಎಲ್ಲಿಯೂ ಮುಳಗಿ ಹೋಗುವುದಿಲ್ಲ.
ಇಂದಿಲ್ಲ ನಾಳೆಯಾರೂ ಅದರ ಅಸಮತೋಲನವನ್ನು ದೂರ ಮಾಡುವ ಪ್ರಾಮಾಣಿಕ
ಪ್ರಯತ್ನ ಮಾಡಬಹುದು. ಪ್ರಯತ್ನಕ್ಕಿಂತ ಹೆಚ್ಚಿಗೆ ಬೇರೆ ಏನೂ ಮಾಡುವ ಅವಶ್ಯಕತೆ ಇಲ್ಲ
ಎಂದು ನನ್ನ ಭಾವನೆ. ಮೇಲಿಂದ ಮೇಲೆ ಚುನವಣೆಗಳು ಬರುತ್ತಲೇ ಇರುತ್ತವೆ. ಚುನಾವಣಾ
ಪ್ರಚಾರಕ್ಕೆ ಪ್ರಾದೇಶಿಕ ಅಸಮತೋಲನದ ಪ್ರಶ್ನೆ ಜೀವಂತವಾಗಿರದಿದ್ದರೆ ನಮ್ಮ
ಉಮೇದುವಾರರು ಪಾಪ, ಜನರ ತಲೆಗೆ ಬೂದಿ ಹಚ್ಚಿ ಓಟು ಗಿಟ್ಟಿಸುವುದು ಹೇಗ
ಆದ್ದರಿಂದ, ಪ್ರದೇಶವು ಒಂದು ಸ್ಥಾಯಿ ಭೂಭಾಗವಾಗಿರುವುದರಿಂದ ಅದು
ಅಸಮತೋಲನವನ್ನು ಹೋಗಲಾಡಿಸುವ ಪ್ರಯತ್ನ ಮಾತ್ರ ನಿರಂತರವಾಗಿ ನಡೆಯುತ್ತಿದ್ದರೆ
ಸಾಕು. ಆದರೆ ಲೇಖಕರ ವಿಚಾರ ಹಾಗಲ್ಲ. ಓದುಗರಿಲ್ಲದೆ ಒಮ್ಮೆ ಲೇಖಕ ದಿಕ್ಕಾಪಾಲಾಗಿ
ಹೋದನೆಂದರೆ ಮುಂದೆ ಲೇಖಕರು ಹುಟ್ಟಿಕೊಳ್ಳುವುದೇ ಇಲ್ಲ. ಒಂದು ದೇಶವು ಹಿ
ಲೇಖಕ ಹುಟ್ಟಿಕೊಳ್ಳಬೇಕಾದರೆ ಭೂಮಂಡಲದ ಋಣ್ಯ ಬೇಕು ಎಂದು ಯಾವ
ಒಬ್ಬ ಕನ್ನಡದ ಕವಿ ಹೇಳಿದ್ದಾನೆ. ಈ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಸರಕು
ಪ್ರಾದೇಶಿಕ ಅಭಿವೃದ್ಧಿಗಿಂತಲೂ ಲೇಖಕನ ಶ್ರೇಯೋಭಿವೃದ್ಧಿಗಾಗಿ ದುಡಿದರೆ ಕನ್ನಡದ
ಡಿಂಡಿಮವನ್ನು ಅನಂತ ಕಾಲದವರೆಗೆ ಮೊಳಗಿಸಲು ಸಾಧ್ಯವಾಗುತ್ತದೆ.
ಇದಕ್ಕಾಗಿ ಸರಕಾರ ಸಗಟು ಖರೀದಿ ಎಂಬ ಯೋಜನೆಯನ್ನೇನೋ ಹಾಕಿಕೊಂಡಿದೆ.
ಈ ಯೋಜನೆಯಿಂದ ಆಗುವ ಲಾಭವೆಂದರೆ ನಮ್ಮ ಗ್ರಂಥಾಲಯಗಳ ಚದುರಳತೆಯ
ಪ್ರಮಾಣ ಹೆಚ್ಚಿಸಿ ಅಲ್ಲಿ ನಮ್ಮ ನ್ಯೂಯಾರ್ಕಿನ ಪುಸ್ತಕ ಪ್ರೇಮಿಯ ಡ್ರಾಯಿಂಗ ರೂಮಿನಂತೆ
ಪುಸ್ತಕಗಳನ್ನು ಪ್ರದರ್ಶನಕ್ಕಿಡಬಹುದೇ ಹೊರತು ಯಾರೂ ಓದಲಿಕ್ಕಿಲ್ಲ. ಇದಕ್ಕಾಗಿ ನನ್ನ
ಸಲಹೆಯೆಂದರೆ ಸರಕಾರವು ಓದುಗನಿಗೇನೆ ಅನುದಾನ ಬಿಡುಗಡೆ ಮಾಡಬೇಕು. ಬೇಕಾದರೆ
ಒಂದು ವರ್ಷ ಈ ಪ್ರಯೋಗ ಮಾಡಿ ನೋಡಲಿ, ಜನತೆಯಿಂದ ಎಂಥ ಸಹಯೋಗ
ದೊರೆಯುತ್ತದೆ ಎಂಬುದು ಗೊತ್ತಾಗುತ್ತದೆ. ನನ್ನ ಈ ಸಲಹೆಯನ್ನು ಸರಕಾರ ಗಮನಕ್ಕೆ
ತೆಗೆದುಕೊಳ್ಳಬೇಕಲ್ಲ !
ಇಷ್ಟೆಲ್ಲ ನಾನು ಹೇಳಿದ್ದು ಜಾಳುಜಾಳಾದ ಮಾತುಗಳು, ಒ೦ದು ರೀತಿಯಿಂದ
ಇದು ಇಂದಿನ ಆತ್ಮವಿಶ್ವಾಸವಿಲ್ಲದೆ, ತಳವೂರಿನಿಲ್ಲದೆ, ಚಿಂತನೆಯ ಆಳವಿಲ್ಲದೆ ಬೆಳಗಾಗುವುದರಲ್ಲಿ
ಸಾಹಿತಿಗಳೆನಿಸಿಕೊಳ್ಳಬೇಕೆಂಬ ಹಂಬಲದಿಂದ ರಾಶಿಗಟ್ಟಲೇ ಬರೆಯುತ್ತಿರುವ ತರುಣ
ಪೀಳಿಗೆಯನ್ನು ಕುರಿತಾದ ಟಿಪ್ಪಣಿಯಾಗಿದೆ. ನಿಜವಾದ ಸಾಹಿತ್ಯದ ಗುರಿಯು ಮನುಷ್ಯನನ್ನು
ಅಜ್ಞಾನ, ಮೋಹ, ಕೆಟ್ಟ ಸಂಸ್ಕಾರ ಮತ್ತು ಇನ್ನೊಬ್ಬರ ಕಡೆಗೆ ಯಾಚಕನಂತೆ ಕೈಯೊಡ್ಡುವ
ದೈನ್ಯತೆಯಿಂದ ರಕ್ಷಿಸುವುದೇ ಆಗಿದೆ. ನಮ್ಮ ಸಾಹಿತ್ಯಕ್ಕೆ ಮನುಷ್ಯನೇ ವಸ್ತುವಾಗಬೇಕು.
ಮನುಷ್ಯನ ಸಂಸ್ಕಾರವೇ ಅದರಲ್ಲಿ ಪ್ರತಿಬಿಂಬಿಸಬೇಕು. ಈಗ ನಮ್ಮ ಮಹತ್ವಾಕಾಂಕ್ಷಿಗಳಾದ
ತರುಣರು ರಚಿಸುತ್ತಿರುವ ಸಾಹಿತ್ಯ ತಮ್ಮ ವೈಯಕ್ತಿಕ ಪಾತಳಿಯಿಂದ ಮೇಲೆ ಏರುತ್ತಿಲ್ಲ.
ಅವರ ಭಾಷಾ ಪ್ರಯೋಗವೂ ಕೂಡ ಗಾಬರಿಯನ್ನು ಹುಟ್ಟಿಸುವಂತಿದೆ.
ಒಮ್ಮೆ ಗಾಂಧೀಜಿಯವರಿಗೆ ಒಬ್ಬ ಸಮವಯಸ್ಕರು ಹೇಳಿದರಂತೆ, ‘ಬಾಪೂಜಿ,
ನೀವು ಇಂಗ್ಲೀಷರನ್ನು ಭಾರತದಿಂದ ಓಡಿಸಲು ಇಷ್ಟೇಕೆ ಕಷ್ಟ ಪಡುತ್ತಿದ್ದೀರಿ. ಭಾರತೀಯರ
ಇಂಗ್ಲೀಷ್ ಪ್ರಯೋಗ ಅವರ ಎದುರಿಗಿಟ್ಟರೆ ಸಾಕು, ಅಯ್ಯೋ, ಇಲ್ಲಿ ನಮ್ಮ ಭಾಷೆಯ
ಕೊಲೆಯಾಗುತ್ತಿದೆ ಎಂದು ಹೆದರಿ ತಾವಾಗಿಯೇ ಇಲ್ಲಿಂದ ಓಡಿ ಹೋಗುತ್ತಾರೆ’ ಎಂದು.
ಈ ಮಾತು ಈ ದಿನಗಳಲ್ಲಿ ಕನ್ನಡದ ಸಂದರ್ಭದಲ್ಲಿ ನೂರಕ್ಕೆ ನೂರರಷ್ಟು ಸತ್ಯ ಎನಿಸುತ್ತದೆ.
ಕರ್ನಾಟಕದಿಂದ ಕನ್ನಡವನ್ನು ಉಚ್ಚಾಟಿಸಲು ತಮಿಳುನಾಡಿನಿಂದ ತಮಿಳರಾಗಲೀ,
ಮಹಾರಾಷ್ಟ್ರದಿಂದ ಮರಾ ಗರಾಗಲೀ, ಉತ್ತರಿದಿಂದ ಹಿಂದಿಯವರಾಗಲೀ, ಇಂಗ್ಲೆಂಡಿನಿಂದ
ಇಂಗ್ಲೀಷರಾಗಲೀ ಬರಬೇಕಾದ ಅಗತ್ಯವೇನೂ ಇಲ್ಲ. ನಮ್ಮ ಈ ಅಭಿನವ ಸಾಹಿತಿಗಳೇ ಆ
ಕೆಲಸವನ್ನು ಬಹಳ ಸುಸೂತ್ರವಾಗಿ ಮಾಡುತ್ತಿದ್ದಾರೆ. ನಾವು ಇಂಥ ಕೆಲಸದಲ್ಲಿ ತುಂಬ
ಪಾರಂಗತರು.
ಲೇಖಕನಾದವನು ಭಾಷೆಯನ್ನು ತನ್ನ ಗುಲಾಮನಂತೆ ದುಡಿಸಿಕೊಳ್ಳಬೇಕು. ತಾನೇ
ಅದರ ಗುಲಾಮನಾಗಬಾರದು. ಈಗಾಗಿರುವುದು ಹಾಗೆಯೇ, ಆದ್ದರಿಂದ ಇಂದಿನ ಲೇಖಕನ
ಕೈಯಲ್ಲಿ ಭಾಷೆ ಪಳಗುತ್ತಿಲ್ಲ. ದಿಕ್ಕೇಡಿಯಾಗುತ್ತಿದೆ. ಇನ್ನು, ಇವರು ಪ್ರಕಟಿಸುವ ಪುಸ್ತಕಗಳ
ಒಳಗಿನ ಗುಣಮಟ್ಟದ ಬಗ್ಗೆ ಹೇಳದೇ ಇರುವುದೇ ಕ್ಷೇಮ ಎಂದು ನನಗನಿಸುತ್ತದೆ. ಏಡ್ಡು,
ಕ್ಯಾನ್ಸರು, ಕ್ಷಯ ಹತ್ತಿದ ರೋಗಿಗೆ ಬ್ಯೂಟಿ ಪಾರ್ಲರಗಳಲ್ಲಿ ಮೇಕಪ್ ಮಾಡಿ ನಿಲ್ಲಿಸಿದಂತೆ
ಮನಮೋಹಕವಾದಂಥ ಹೊದಿಕೆಯನ್ನು ಹೊದಿಸಿ ಪುಸ್ತಕ ಪ್ರಕಟಿಸಿದರೆ ಅದರ ಬಳಗೆ
ಅಡಗಿರುವ ರೋಗರುಜಿನಗಳು ಅಡಗಿ ಹೋಗುವುದಿಲ್ಲ. ಒಂದು ಪ್ರದರ್ಶನಕ್ಕೆ ಆಗುವಷ್ಟು
ಇಂಥ ಪುಸ್ತಕಗಳು ನನ್ನ ಸಂಗ್ರಹದಲ್ಲಿವೆ. ಇವು ಓದುವುದಕ್ಕಾಗಿಯಲ್ಲ ಅಲಂಕಾರಕ್ಕಾಗಿ,
ಗೃಹಶೋಭೆಗಾಗಿ ಕಪಾಟುಗಳಲ್ಲಿ ಓರಣವಾಗಿ ಇಡಲು ಮಾತ್ರ ಉಪಯೋಗವಾಗು
ವಂಥವುಗಳು.
ಸಾಹಿತಿಯಗುವುದು ಮತ್ತು ಸಾಹಿತ್ಯ ಸೇವೆಯನ್ನು ಮಾಡುವುದು ಒಂದು ಸೌಭಾಗ್ಯದ
ಕೆಲಸವೆಂದು ನಾನು ಭಾವಿಸುತ್ತೇನೆ. ಯಾಕೆಂದರೆ ಸಮಾಜದ ಹೃದಯದಲ್ಲಿ ಇಣುಕಿ
ಹಾಕುವುದು ಸಾಹಿತಿಯಿಂದಲೇ ಮಾತ್ರ ಸಾಧ್ಯ ಪರಕಾಯ ಪ್ರವೇಶ ಮಾಡಿ ವ್ಯಷ್ಟಿಯ
ಸಂವೇದನೆಗಳನ್ನು ಸಮಷ್ಟಿಯ ಸಂವೇದನೆಗಳನ್ನಾಗಿ ಅಭಿವ್ಯಕ್ತಿಸುವ ಪ್ರತಿಭೆ ಸಾಹಿತಿಗೇ
ಮಾತ್ರ ಇರುತ್ತದೆ. ಆ ಕೆಲಸವನ್ನು ಆತ ಮಾಡದೇ ಹೋದರೆ ಅವನೊಬ್ಬ ಆತ್ಮವಂಚಕ
ಎಂದು ನನ್ನ ಭಾವನೆ. ನಾವು ಹೃದಯದಿಂದ ಉದಾರಿಗಳಾಗಬೇಕು, ಸಂವೇದನ
ಶೀಲರಾಗಬೇಕು, ನಮ್ಮ ಬುದ್ಧಿಯು ಸೂಕ್ಷ್ಮವೂ ಸಾರಗ್ರಾಹಿಯೂ ಆಗಬೇಕು, ನಮ್ಮ
ಸಂಕಲ್ಪವು ಮಹತ್ತರವೂ, ಮಂಗಳಕಾರಿಯೂ ಆಗಬೇಕು. ಆಗ ಮಾತ್ರ ನಮ್ಮ ರಾಜನೀತಿ,
ಅರ್ಥನೀತಿ, ನವ-ನಿರ್ಮಾಣದ ಯೋಜನೆಗಳು ಸಾರ್ವತ್ರಿಕವಾಗಿ ಮಂಗಳವನ್ನುಂಟು
ಮಾಡಲು ಸಾಧ್ಯವಿದೆ. ಇದು ಕೇವಲ ತೆಟ್ಟೆಯಾದ (shallow) ಸಾಹಿತ್ಯದಿಂದ ಸಾಧ್ಯವಿಲ್ಲ.
ಅದು ಮನುಷ್ಯನನ್ನು ಮನುಷ್ಯನ ಬಗ್ಗೆ ಸಂವೇದನಶೀಲನನ್ನಾಗಿ ಮಾಡುವಂಥ ಸಾಹಿತ್ಯದಿಂದ
ಮಾತ್ರ ಸಾಧ್ಯವಿದೆ. ಮಾನವ ಸಮಾಜವನ್ನು ರೋಗರುಜಿನಗಳಿಂದ, ದುಃಖ ಶೋಕಗಳಿಂದ,
ಅಜ್ಞಾನ-ದಾರಿದ್ರದಿಂದ ಮತ್ತು ಪರಾವಲಂಬಿತದಿಂದ ರಕ್ಷಿಸಿ ಅದರಲ್ಲಿ ಆತ್ಮಶಕ್ತಿಯನ್ನು
ತುಂಬುವಂಥ ಸಾಹಿತ್ಯವು ನಿಜವಾಗಿಯೂ ತವನಿಧಿಯಾಗಿ ರೂಪುಗೊಳ್ಳುತ್ತದೆ.
– ಭಾಲಚಂದ್ರ ಜಯಶೆಟ್ಟಿ. ರಾಜೇಶ್ವರ.ಬೀದರ.