ಸಾಹಿತಿ ಶಕೀಲ್ ಐ ಎಸ್’ರವರು ಬರೆದ ಕೇರಳ ಪ್ರವಾಸ ಕಥನ.

( ಹಿಂದಿನ ಸಂಚಿಕೆಯಿಂದ…)

ಅಧ್ಯಾಯ-2

ಕೇರಳ ರಾಜ್ಯಕ್ಕೆ ಬಂದು ಮೂರು ದಿನಗಳು ಗತಿಸಿದವು. ಕೇವಲ ಧಾರ್ಮಿಕ ಸ್ಥಳಗಳನ್ನು ಹೆಚ್ಚಾಗಿ ನೋಡಿದ ನಾವು ನೈಸರ್ಗಿಕ ಪರಿಸರವನ್ನು ನೋಡುತ್ತೇವೆ

ಮುನ್ನಾರ್ ಭಾರತದ ಕೇರಳದಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದ್ದು, ಉಸಿರುಕಟ್ಟುವ ನೈಸರ್ಗಿಕ ಸೌಂದರ್ಯ ಮತ್ತು ಉಲ್ಲಾಸಕರ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಮುನ್ನಾರ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿದೆ. ಇದು ಸಮುದ್ರ ಮಟ್ಟದಿಂದ 1,500-2,500 ಮೀಟರ್ (4,921-8,202 ಅಡಿ) ಎತ್ತರದಲ್ಲಿದೆ.

ಮುನ್ನಾರ್ ದಲ್ಲಿ ಪ್ರಮುಖ ಹತ್ತು ಪ್ರವಾಸಿ ಆಕರ್ಷಣೆಯ ತಾಣಗಳನ್ನು ನೋಡಿ. 1. ಚಹಾ ತೋಟಗಳು,2. ಎರವಿಕುಲಂ ರಾಷ್ಟ್ರೀಯ ಉದ್ಯಾನವನ (ನೀಲಗಿರಿ ತಾಹ್ರ್ ಅಭಯಾರಣ್ಯ), 3. ಆನಮುಡಿ ಶಿಖರ (ದಕ್ಷಿಣ ಭಾರತದ ಅತಿ ಎತ್ತರದ ಶಿಖರ), 4. ಮಟ್ಟುಪೆಟ್ಟಿ ಅಣೆಕಟ್ಟು, 5. ಏಕೋ ಪಾಯಿಂಟ್, 6. ಕುಂಡಲ ಸರೋವರ, 7. ಟಾಪ್ ಸ್ಟೇಷನ್ (ಕೇರಳ ಮತ್ತು ತಮಿಳುನಾಡು ಗಡಿ), 8. ರಾಜಮಲೈ (ವನ್ಯಜೀವಿ ಅಭಯಾರಣ್ಯ), 9. ಚಿನ್ನಾರ್ ವನ್ಯಜೀವಿ ಅಭಯಾರಣ್ಯ,10. ಮುನ್ನಾರ್ ಮ್ಯೂಸಿಯಂ. ಇವುಗಳೆಲ್ಲವೂ ನೋಡಲು ಕನ್ಯಾಕುಮಾರಿಯಿಂದಲೇ ಒಂದು ಟವೆರಾ ವಾಹನ ಮಾಡಿಕೊಂಡಿತ್ತು. ಆ ವಾಹನದಲ್ಲಿಯೇ ಎಲ್ಲ ಗೆಳೆಯರು ಹೊರಟೆವು. ಬಹಳ ಎತ್ತರ ಮತ್ತು ತಿರುವುಗಳುಳ್ಳ ಈ ಪ್ರದೇಶದಲ್ಲಿ ವಾಹನ ಚಾಲಕ ವಾಹನ ಅತೀ ವೇಗದಿಂದ ನಡೆಸುತ್ತಿದ್ದ, ಎದುರುಗಡೆಯಿಂದ ಕೂಡ ವೇಗವಾಗಿ ವಾಹನಗಳು ಬರುತ್ತಿದ್ದವು. ಇಷ್ಟೊಂದು ಎತ್ತರ ಮತ್ತು ತಿರುವುಗಳಿರುವ ಪರಿಸರ ನಾನು ಪೊಲೀಸ್ ತರಬೇತಿಯಲ್ಲಿದ್ದಾಗ ಚಿಕ್ಕಮಂಗಳೂರಿನ ಬಾಬಾಬುಡನ್ ಗಿರಿಯಲ್ಲಿ ನೋಡುತ್ತಿರುವ ಸವಿ ನೆನೆಪು ಮತ್ತೆ ಮರುಕಳಿಸಿತು. ಭಯ ಇಬ್ಬರು ಗೆಳೆಯರಿಗೆ ತೋರ್ಪಡಿಸದಂತೆ ಧೈರ್ಯದಿಂದ ಕುಳಿತುಕೊಂಡಿರುವಂತೆ ಮುಖ ಚಹರೆ ಮಾಡಿಕೊಂಡು ಕುಳಿತುಕೊಂಡೆ. ನಮ್ಮ ವಾಹನವನ್ನು ಒಮ್ಮೆಲೆ ತಿರುವಿನಲ್ಲಿ ತಿರುಗಿಸಿದ್ದಾಗ ಒಬ್ಬರ ಮೇಲೆ ಇನ್ನೊಬರು ಬಿದ್ದೆವು. ಮತ್ತೆ ಅದೇ ಭಯ. ಆದ್ರೂ ಮುಗಳನಗೂತ್ತ ನಾನು ಧೈರ್ಯವಂತ ನೆಂದು ಗೆಳೆಯರಿಗೆ ತೋರಿಸುವ ಉದ್ದೇಶದಿಂದ ಎಲ್ಲವನ್ನು ಸಹಿಸಿಕೊಳ್ಳುತ್ತಾ ಮುನ್ನೆಡೆದೆ. ಅವರು ಸಹ ಭಯಪಟ್ಟರು ನನ್ನ ಹಾಗೆ ಯೋಚಿಸುತ್ತಿರಬಹುದು ಏನು ಒಟ್ಟಿನಲ್ಲಿ ಎಲ್ಲರೂ ನಗುವುದರಿಂದ ಯಾರಿಗೆ ಭಯ ಪಡಲಿಲ್ಲ.

ಮುನ್ನಾರ್ ಗಿರಿಧಾಮವು ಪ್ರತಿ ಪ್ರವಾಸದಲ್ಲಿ ವಿಶೇಷ ಅನುಭವವನ್ನು ನೀಡುತ್ತದೆ. ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ, ರೋಲಿಂಗ್ ಬೆಟ್ಟಗಳು ಅಗತ್ಯವಿರುವಷ್ಟು ತಾಜಾ ಗಾಳಿಯನ್ನು ನೀಡುತ್ತವೆ. ಅಂತ ಗಾಳಿ ಸವಿಯುತ್ತ ನಡೆದೆವು. ಚಹಾ ತೋಟಗಳ ಹಸಿರು ಕಾರ್ಪೆಟ್ ಮೇಲೆ ತೂಗಾಡುತ್ತಿರುವ ಜಕರಂಡಾ ಮರಗಳ ಪ್ರಕಾಶಮಾನವಾದ, ನೀಲಿ ಹೂವುಗಳು ನಮ್ಮನ್ನು ಸೆಳೆಯುತ್ತಿದ್ದವು. ನೀಲವಾಕ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಹೂವುಗಳನ್ನು ಮುನ್ನಾರದಲ್ಲಿ ಕಾಣುತ್ತಿದ್ದವು. ಇಂತಹ ಮನ್ಮೋಹಕ ದೃಶ್ಯಗಳನ್ನು ನೋಡುತ್ತ ಎಲ್ಲರ ಮನ ಪುಳಕಗೊಂಡಿತ್ತು.

ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಾಸಸ್ಥಾನವು ಇಂದು ನಗರದ ಶಬ್ದ ಮತ್ತು ಮಾಲಿನ್ಯದಿಂದ ಅತ್ಯಂತ ಪ್ರಿಯವಾದ ಪಾರು ಆಗಿದೆ. ಅದು ಸೊಂಪಾದ ಚಹಾ ತೋಟಗಳಾಗಲಿ, ಧುಮ್ಮಿಕ್ಕುವ ಜಲಪಾತಗಳಾಗಲಿ ಅಥವಾ ವಿವಿಧ ಸಸ್ಯೋದ್ಯಾನಗಳಲ್ಲಿರುವ ಹೂವುಗಳು ಎದ್ದುಕಾಣುವ ಬಣ್ಣಗಳಾಗಲಿ, ಇಲ್ಲಿ ನೈಸರ್ಗಿಕ ಅನುಭವಗಳ ಕೊರತೆಯಿಲ್ಲವೆಂದು ಗೆಳೆಯರೆಲ್ಲರು ಮಾತಾಡುತ್ತ ಸ್ವರ್ಗ ಅಂದರೆ ಬಹುಷಃ ಹೀಗೆ ಇರಬಹುದೆಂದು ಪರಿಸರದ ಮೊಹಮ್ಮದ್ ಅತೀವವಾಗಿ ಹೇಳಿದರು.
ಎರವಿಕುಲಂ ಎಂದೂ ಕರೆಯಲ್ಪಡುವ ರಾಜಮಲೈ ಮಾತ್ರ ನಿಮ್ಮ ಇತ್ಯರ್ಥದಲ್ಲಿ ಒಂದು ದಿನವಿದ್ದರೆ ನೀವು ಭೇಟಿ ನೀಡಲು ಸಾಧ್ಯವಾಗುವ ಏಕೈಕ ರಾಷ್ಟ್ರೀಯ ಉದ್ಯಾನವನವಾಗಿದೆ. ಎಂದು ಡ್ರೈವರ್ ಹೇಳಿದಾಗ ಅದನ್ನು ಸಹ ನೋಡಲು ಹೊರಟೆವು. ಕಣ್ಣನ್ ದೇವನ್ ಬೆಟ್ಟಗಳ ನಡುವೆ 97 ಚದರ ಕಿಲೋಮೀಟರ್ಗಳಷ್ಟು ಹರಡಿದೆ, ಇದು ರಾಜ್ಯದ ಮೊದಲ ರಾಷ್ಟ್ರೀಯ ಉದ್ಯಾನವನವಾಗಿದೆ. 2,000 ಮೀಟರ್ ಎತ್ತರದ ಪ್ರಸ್ಥಭೂಮಿಗೆ ನೆಲೆಯಾಗಿದೆ, ಸ್ಥಳೀಯ ಭೂಪ್ರದೇಶವು ಹೆಚ್ಚಾಗಿ ರೋಲಿಂಗ್ ಬೆಟ್ಟಗಳಲ್ಲಿ ಹುಲ್ಲುಗಾವಲುಗಳಿಂದ ಮತ್ತು ಕಣಿವೆಗಳಲ್ಲಿ ಕುಂಠಿತವಾದ ಉಷ್ಣವಲಯದ ಮಲೆನಾಡಿನ ಕಾಡುಗಳಿಂದ ಕೂಡಿದೆ.

ಮುನ್ನಾರ್ ರೋಸ್ ಗಾರ್ಡನ್ ಅನ್ನು ಫ್ಲೋರಿಕಲ್ಚರ್ ಗಾರ್ಡನ್ ಎಂದೂ ಕರೆಯುತ್ತಾರೆ, ಇದು 100 ಕ್ಕೂ ಹೆಚ್ಚು ಪ್ರಭೇದಗಳು 20,000 ಕ್ಕೂ ಹೆಚ್ಚು ಗುಲಾಬಿ ಪೊದೆಗಳನ್ನು ಹೊಂದಿದೆ. ಉದ್ಯಾನವು ಲಿಲ್ಲಿಗಳು, ಆರ್ಕಿಡ್‌ಗಳು, ಡೈಸಿಗಳು, ಪಾಪಸುಕಳ್ಳಿ, ಪೊದೆಗಳು, ಬಳ್ಳಿಗಳು ಮತ್ತು ವಿವಿಧ ಹೂವುಗಳನ್ನು ಒಳಗೊಂಡಿವೆ. ಇಂತಹ ಸುಂದರ ಸ್ಥಳದಲ್ಲಿ ಪಟಗಳನ್ನು ತೆಗೆದುಕೊಳ್ಳಲಾಗಿದೆ, ಅವುಗಳ ಒಂದು ಪಟ ನನ್ನ ಮನೆಗೆ ಕಳುಹಿಸಲಾಗಿದೆ. ಮೊದಲೇ ತನಗೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಎನ್ನುತ್ತಿದ್ದವಳಿಗೆ ಈ ಪಟ ಕಳುಹಿಸಿ ಆಕೆಗೆ ಇನ್ನಷ್ಟು ಕೋಪಗೊಳ್ಳುವಂತೆ ಮಾಡ್ದೆ. ಏನ್ ಮಾಡುವುದು ಆ ಪಟ ಅವಳಿಗೆ ತೋರಿಸಲೇ ಬೇಕಾಗಿತ್ತು. ಈ ಗಾರ್ಡನ್ ಕೇರಳದ ಮುನ್ನಾರ್‌ನಲ್ಲಿರುವ ರೋಸ್ ಗಾರ್ಡನ್ ಎಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇದು ನಗರ ಕೇಂದ್ರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 3,500 ಅಡಿ ಎತ್ತರವನ್ನು ಸ್ಥಾಪಿಸಲಾಗಿದೆ.

ಹೀಗೆ ಒಂದೊಂದು ಸ್ಥಳಗಳ್ಳನ್ನು ನೋಡುತ್ತಾ ಮುನ್ನಡದೆವು. ಒಂದೊಂದು ಸ್ಥಳಗಳು ತುಂಬಾ ಸುಂದರವಾದ ತಾಣಗಳು. ಎಲ್ಲವನ್ನು ನೋಡುತ್ತಾ ಆನೆ ಸವಾರಿ ಕೂಡ ಮಾಡಿ, ಹೊಸ ಅನುಭವ ಪಡೆದೆವು. ದಿನವೆಲ್ಲಾ ನಗುತ್ತಲೇ ಕಾಲ ಕಳೆದ ಈ ದಿನ ಮರಿಯಲು ಸಾಧ್ಯವಿಲ್ಲ. ಇಡಿ ದಿನವೆಲ್ಲ ನಿಸರ್ಗದ ಮಡಿಲಲ್ಲಿ ತೇಲುತ್ತ ಹೋದೆವು.

( ಮುಂದುವರೆಯುವುದು….)

ಶಕೀಲ್ ಐ.ಎಸ್.ಹುಮನಾಬಾದ.

ಲೇಖಕರ ಪರಿಚಯ:

ಶಕೀಲ್ ಐ.ಎಸ್.

ಸಾಹಿತಿ  ಶಕೀಲ್ ಐ.ಎಸ್. ರವರು ಬೀದರ ಜಿಲ್ಲೆ
ಹುಮನಾಬಾದ ತಾಲೂಕಿನ ಖೇಣಿ ರಂಗೋಳ ಗ್ರಾಮದವರು. ಬಿ.ಎ. ಪದವಿಧರರಾದ ಇವರು ಪೋಲಿಸ್ ಇಲಾಖೆಯಲ್ಲಿದ್ದು ಸದ್ಯ ಹುಮನಾಬಾದ ಡಿ.ಎಸ್ಪಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಅಭಿವೃದ್ಧಿ ಪಥ’, ‘ಕರ್ನಾಟಕ ಇತಿಹಾಸ, ‘ಹುಮನಾಬಾದ ತಾಲೂಕು ಇತಿಹಾಸ’ ( ಲೇಖನ) ‘ಮೂರು ನಾಟಕಗಳು‘ (ನಾಟಕ) ‘ಭ್ರಷ್ಟಾಚಾರ ದೇಹಕ್ಕೂ ಮಾರಕ’ (ರೂಪಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ‘ಬೀದರ ಜಿಲ್ಲೆಯ ಸೂಫಿಗಳು‘ ಎಂಬುದು ಇವರ ಸಂಶೋಧನಾತ್ಮಕ ಕೃತಿಯಾಗಿದೆ. ‘ನಳದಮಯಂತಿ’ ಇದು ಪೌರಾಣಿಕ ಕತೆಯಾದರೆ, ‘ಗರ್ಭಕೋಶದಲ್ಲಿ ಮಹಾಯುದ್ಧ‘ (ಕಥಾಸಂಕಲನ) ‘ಧರಿನಾಡಿನ ಗಂಡುಗಲಿ (ವ್ಯಕ್ತಿಚಿರ್ತಣ) ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ