Oplus_131072

ಸಾಹಿತಿ ಶಕೀಲ್ ಐ.ಎಸ್’ ರವರು ಬರೆದ ಕೇರಳ ಪ್ರವಾಸ ಕಥನ.

(ಹಿಂದಿನ ಸಂಚಿಕೆಯಂದ….)

ಅಧ್ಯಾಯ-3

ಕೇರಳ ರಾಜ್ಯದ ಮುಂದಿನ ಪ್ರವಾಸ ಮಲಬಾರ ಪ್ರಾಂತದ ಕೋಡಂಗಲ್ಲೂರ್ .
ಭಾರತದಲ್ಲಿ ಕಟ್ಟಲ್ಪಟ್ಟ ಮೊದಲನೆಯ ಕಟ್ಟಡ ಯಾವುದು ? ಆ ಕಟ್ಟಡ ಕಟ್ಟಿಸಿದವರು ಯಾರು? ಯಾವ   ಕಾಲಮಾನದಲ್ಲಿ ? ಯಾವ ಸ್ಥಳದಲ್ಲಿ ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನಾನು “ಬೀದರ ಜಿಲ್ಲೆಯ ಸೂಫಿಗಳು” ಎಂಬ ಕೃತಿಯನ್ನು ರಚಿಸುವಾಗ ಕ್ರಿ.ಶ 2018ರಲ್ಲಿಯೇ ಕಂಡುಕೊಂಡಿದ್ದೇನು. ಭಾರತ ದೇಶದ ನಿರ್ಮಾಣವಾದ ಅತೀ ಹಳೆಯ ಮಸೀದಿ ಕೇರಳ ರಾಜ್ಯದಲ್ಲಿದ್ದು, ನಮ್ಮ ದೇಶದಲ್ಲಿ ಮುಸ್ಲಿಂ ಸುಲ್ತಾನರ ಆಳ್ವಿಕೆಯು ಪ್ರಾರಂಭವಾಗುವ ಕಾಲಘಟ್ಟದಲ್ಲಿ, ಮಹಮ್ಮದ ಪೈಗಂಬರರು ವಾಸಿಸುತ್ತಿದ್ದ ಕಾಲಘಟ್ಟದಲ್ಲಿ ಭಾರತ ದೇಶದ ಮಸೀದಿ ಕಟ್ಟಲಾಗಿತ್ತೆಂದು ತಿಳಿದುಕೊಂಡಾಗಿನಿಂದ ಆ ಸ್ಥಳಕ್ಕೆ ಭೇಟಿ ನೀಡಬೇಕೆಂಬ ಕೂತುಹಲ ಇತಿಹಾಸದ ಸಂಶೋಧನೆಯಲ್ಲಿ ನನ್ನ ಸ್ವಾಭಾವಿಕವಾಗಿ ಮೂಡಿಬಂದಿದೆ. ಇಂತಹ ಕುತೂಹಲ ನಿಮಗೂ ಇರಬಹುದು. ಆದ್ದರಿಂದ ನನ್ನ ಈ ಪ್ರವಾಸ ಕಥನದಲ್ಲಿ ಈ ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೇನೆ. ನಾವು ಒಂಬತ್ತು ಜನರ ತಂಡವು ಈ ಮಸೀದಿ ನೋಡಲು ಮುನ್ನಾರದಿಂದ ಟವೆರಾ ವಾಹನದಲ್ಲಿ ಹೊರಟೆವು. ಮುನ್ನಾರದಿಂದ ಸುಮಾರು 145 ಕಿಲೋ ಮೀಟರ್ ದೂರದಲ್ಲಿರುವ ಈ ಪ್ರದೇಶಕ್ಕೆ ಹೋಗುವದಾರಿಯಲ್ಲಿ ಶಿಕ್ಷಕರಾಗಿರುವ ರಫೀಕ್ ಪಟೇಲನಿಗೆ ಇದರ ಇತಿಹಾಸ ತಿಳಿಯುವ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ, ಶಕೀಲ್ ಭೈಯ್ಯಾ ನಮಗೆ ಇನ್ನೂ ಹಲವಾರು ದೂರುಗಳು ಬಂದಿವೆ, ಅಲ್ಲಿ ಸುಮಾರು ವರ್ಷಗಳ ಇತಿಹಾಸವನ್ನು ಸ್ವಲ್ಪ ತಿಳಿಸಿಕೊಡಿ, ನಿಮಗೆ ಗುರುತಿರುವ ಇತಿಹಾಸವು ನಾವು ಸಹ ಅಲ್ಲಿಗೆ ಹೋದರೆ ಅವರೆಲ್ಲರಿಗೂ ಅರ್ಥಪೂರ್ಣವಾಗಿ ತಿಳಿದುಕೊಳ್ಳಬಹುದು. ಶಾಲೆಯ ಇತಿಹಾಸ ಹೇಳಬೇಕೆಂದಿದ್ದೆ, ರಫೀಕ್ ಪಟೇಲ್ ಕೇಳಿದ ಮೇಲೆ ಸುಮ್ಮನಿರೊಕ್ಕಾಗುತ್ತಾ ನನ್ನ ಉಪನ್ಯಾಸವನ್ನು ಪ್ರಾರಂಭಿಸಿದೆ.

ರಫೀಕ್ ಪಟೇಲ್, ಭಾರತ ದೇಶದ ಕಡಲದಾರಿಯು ಮುಖ್ಯವಾಗಿ ಕೇರಳ, ಮುಂಬೈ ಬಂದರುಗಳಿಂದ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅರಬ್-ಭಾರತಗಳ ಕಡಲ ವ್ಯಾಪಾರ ಸಂಬಂಧ ತುಂಬ ಹಳತು. ಇಸ್ಲಾಂ ಹುಟ್ಟಲೂ ಹಳತು. ಅರಬ್ಬಿ ಸಮುದ್ರದ ಕಿನಾರೆಯ ಕರಾಚಿ, ಭರೂಚ್ ಠಾಣೆ, ಮಂಗಳೂರು, ಕಲ್ಲಿಕೋಟೆ, ತಿರುವಾಂಕೂರು ಮುಂತಾದ ನಗರಗಳು ಈ ವ್ಯಾಪಾರಿ ಸಂಪರ್ಕ ಪಡೆದಿವೆ. ಜೊತೆಗೆ ಭಾರತಕ್ಕೆ ಮಧ್ಯ ಏಷ್ಯಾದಿಂದ ಇಸ್ಲಾಂ ಮೊದಲು ಆಗಮಿಸಿದ್ದು ಸಹ ಕಡಲದಾರಿಯ ವ್ಯಾಪಾರಿಗಳು. ಇಸ್ಲಾಮಿಕ ಸಹವಾಸವನ್ನು ಮೊದಲು ಪಡೆದ ಕೇರಳ ಸೀಮೆಯಲ್ಲಿರುವ ಜನರು ಅರಬಸ್ಥಾನದಿಂದ ಬಂದ ಸೂಫಿಗಳಿಂದ. ಇವರು ವ್ಯಾಪಾರದ ಹಾದಿಯಲ್ಲಿ ಅರಬಸ್ಥಾನದಿಂದ ಬಂದವರು. ಆದರೆ ನೆಲಮಾರ್ಗದಲ್ಲಿ ಬಂದ ಸೂಫಿಗಳು ಹೆಚ್ಚಾಗಿ ಪರ್ಷಿಯಾ, ಇರಾಕ್, ಅಫ್ಘಾನಿಸ್ಥಾನದವರು. ಈ ದೇಶಗಳು ಭಾರತಕ್ಕೆ ನೆಲದ ಮೂಲಕ ನೇರ ಸಂಪರ್ಕ ಪಡೆದಿದ್ದ ನೆರೆಮನೆಗಳಾಗಿದ್ದವು ಇಲ್ಲಿ ಮುಖ್ಯ.
ಹೀಗೆ ಕಡಲದಾರಿಯಿಂದ ಜ್ಯೂಜ ಮತ್ತು ಕ್ರಿಶ್ಚನ್ನರ ಗುಂಪೊಂದು ತಮ್ಮ ಕುಟುಂಬಗಳೊಂದಿಗೆ ದೊಡ್ಡ ಹಡಗೊಂದರಲ್ಲಿ ಮಲಬಾರದ ರೇವು ಪಟ್ಟಣ ಕೊಡುಗಲ್ಲೂರಕ್ಕೆ ಬಂದಿಳಿದರು. ಆಗಲೂ ಕೊಡುಂಗಲ್ಲೂ ಅಲ್ಲಿಯ ರಾಜನ ರಾಜಧಾನಿಯಾಗಿತ್ತು. ರಾಜನಿಂದ ಹೊಲಗಳು, ವಾಣಿಜ್ಯ ಬೆಳೆಗಳ ಪ್ರದೇಶಗಳು ಮತ್ತು ಮನೆಗಳಿಗೆ ಅಲ್ಲಿ ನೆಲೆಸಿದರು.
ಕೆಲವು ವರ್ಷಗಳಾದ ಮೇಲೆ ಕೊಡುಂಗಲ್ಲೂ ಒಬ್ಬ ಶೇಖ್ ನೊಡನೆ ಬಡಮುಲ್ಮಾನರ ಗುಂಪೊಂದು ಬಂದಿತ್ತು. ಸಿಲೋನದಲ್ಲಿರುವ ಅಯಡಮನ (ಆದಮ್ ಅಲೈಸಲಾಮ್) ಹೆಜ್ಜೆಗುರುತುಗಳನ್ನು ನೋಡಲು ಹೊರಟರು. ಬರುವವರನ್ನು ಅರಿತ ರಾಜನು ಅವರಿಗೆ ಬರಲು ಹೇಳಿಕಳುಹಿಸಿ, ಅವರನ್ನು ಉಪಚರಿಸಿ ಅತಿಥ್ಯಭಾವದಿಂದ ನಡೆಸಿಕೊಂಡನು. ಆ ಗುಂಪಿನ ನೇತಾರ ಶೇಖನು ಆ ರಾಜನಿಗೆ ಪ್ರವಾದಿ ಮಹಮ್ಮದ ಮತ್ತು ಇಸ್ಲಾಂ ಧರ್ಮವನ್ನು ಕುರಿತು ತಿಳಿಸಿದನು. ಅಲ್ಲಾಹನು ಎತ್ತರದಲ್ಲಿರಲಿ, ಅವನ ಕೀರ್ತಿ ಹಬ್ಬಲಿ. ಪ್ರವಾದಿ ಪವಿತ್ರ ಕಾರ್ಯದ ಸತ್ಯವನ್ನು ಅಲ್ಲಾಹನು ರಾಜನ ಮನಸ್ಸಿನಲ್ಲಿ ಹಾಕಿದನು. ಅವನು ಶೇಖನನ್ನು ಹೃತ್ಪೂರ್ವಕ ಸ್ವೀಕರಿಸಿದನಲ್ಲದೆ ಪ್ರವಾದಿಯ ಅವನ ಹೃದಯವನ್ನು ವಶಪಡಿಸಿಕೊಂಡನು. ಶೇಖ ಮತ್ತು ಅವನ ಸಂಗಡಿಗರು ಮರಳಿ ಹೋಗುವಾಗ ತನ್ನನ್ನು ಭೇಟಿಮಾಡಲು ಕೇಳಿಕೊಂಡನು. ಏಕೆಂದರೆ ಅವರೊಡನೆ ಕೂಡಿಕೊಳ್ಳುವ ವಿಚಾರ ಅವನದಾಗಿತ್ತು. ತಾನು ಅವರೊಡನೆ ಹೊರಡುವ ವಿಷಯವನ್ನು ಗುಪ್ತವಾಗಿಡಲು ಅವರಿಗೆ ಅಜ್ಞಾಪಿಸಿದನಲ್ಲದೆ ಮಲಬಾರದಲ್ಲಿ ಈ ಗುಪ್ತ ಮಾತು ಯಾರಿಗೂ ಗೊತ್ತಾಗದಿರಲಿ ಎಂದು ಹೇಳಿದನು.

ರಾಜನ ಇಚ್ಚೆಗನುಸಾರವಾಗಿ ಶೇಖ ಮತ್ತು ಅವನ ಸಂಗಡಿಗರು ಸಿಲೋನದಿಂದ ತಿರುಗಿ ಹೋಗುವಾಗ ಅವನನ್ನು ಭೇಟಿಯಾದರು. ಯಾರಿಗೂ ತಿಳಿಯದಂತೆ ಪಡಗ ಮತ್ತು ಉಳಿದ ಅವಶ್ಯ ವಸ್ತುಗಳನ್ನೆಲ್ಲ ಸಿದ್ಧಗೊಳಿಸಬೇಕೆಂದು ರಾಜನು ಶೇಖನಿಗೆ ತಿಳಿಸಿದನು.
ವಿದೇಶಿ ವ್ಯಾಪಾರಸ್ಥರಿಗೆ ಸಂಬಂಧಿಸಿದ ಸಾಕಷ್ಟು ಹಡಗುಗಳು ಬಂದರದಲ್ಲಿದ್ದವು. ಶೇಖನು ಅಲ್ಲಿಯ ಹಡಗೊಂದರ ಮಾಲಿಕನಿಗೆ ತನ್ನ ಮತ್ತು ತನ್ನ ಇರುವೊಡನೆ ಬಡ ಜನರ ಗುಂಪನ್ನು ಹಡಗು ಹತ್ತಿಸಿಕೊಂಡು ಹೋಗಲು ವಿನಂತಿಸಿದನು. ಆ ಮಾಲಕನು ತಕ್ಷಣ ಸಂತೋಷದಿಂದ ಹಾಗೆ ಮಾಡಲು ಒಪ್ಪಿದನು.
ಕಡಲ ಪ್ರಯಾಣಕ್ಕೆ ಗೊತ್ತುಪಡಿಸಿದ ದಿನವು ಸಮೀಪಿಸುವ ತನ್ನ ಕುಟುಂಬದ ಜನರಾಗಲಿ, ಮಂತ್ರಿಗಳಾಗಲಿ ಏಳು ವರ್ಷದ ತನ್ನನ್ನು ಭೇಟಿ ಆಗಬಾರದೆಂದು ಸೂಚನೆ ನೀಡಿದರು. ಆ ಬಳಿಕ ತನ್ನ ರಾಜ್ಯವನ್ನು ಹಲವಾರು ಪ್ರಾಂತಗಳಾಗಿ ವಿಭಜಿಸತೊಡಗಿದನು ಮತ್ತು ಪ್ರತಿ ಪ್ರಾಂತಕ್ಕೂ ಸ್ಪಷ್ಟವಾದ ಸರಹದ್ದುಗಳನ್ನು ಗೊತ್ತು ಮಾಡಿದನು. ಪ್ರತಿಯೊಂದು ಪ್ರಾಂತಕ್ಕೂ ಆಡಳಿತಾಧಿಕಾರಿಯನ್ನು ನೇಮಿಸಿ ಒಂದು ಪ್ರಾಂತವು ಮತ್ತೊಂದು ಪ್ರಾಂತದಲ್ಲಿ ಅತಿಕ್ರಮಿಸಿದಂತೆ ಅವುಗಳ ಪ್ರದೇಶಗಳ ಕ್ಷೇತ್ರಗಳನ್ನು ನಿಗದಿಪಡಿಸಿದನು. ಹಾಗೆ ಮಾಡಿದ್ದರ ಬಗ್ಗೆ ವಿವರವಾಗಿ ಬರೆದಿಟ್ಟನು.

ಆ ರಾಜನು ದಕ್ಷಿಣದಲ್ಲಿ ಸರಹದ್ದಾಗಿರುವ ಕುಮ್ಹಾರಿ (ಕನ್ಯಾಕುಮಾರಿ) ಮತ್ತು ಉತ್ತರದ ಸರಹದ್ದಾಗಿರುವ ಕಂಜರಕೂಟ (ಕಾಸರಗೋಡ) ಇವುಗಳ ಮಧ್ಯದಲ್ಲಿರುವ ಮಲಬಾರದ ಸಮಸ್ತ ಪ್ರದೇಶದ ಸಾಮ್ರಾಟನಾಗಿದ್ದನು.
ಆ ಬಳಿಕ ಶೇಖ ಮತ್ತು ಅವನ ಜನರೊಡನೆ ಹಡಗನ್ನೇರಿ ರಾತ್ರಿಯ ರಾಜನು ಸಾಗಿ ಪಂಟರಯಾನಿ ಎಂಬಲ್ಲಿಗೆ ಬಂದನು. ಅಲ್ಲಿಳಿದು ಒಂದು ಹಗಲು ಒಂದು ರಾತ್ರಿ ಕಳೆದನು. ಅಲ್ಲಿಂದ ಅವರು ಧರ್ಮದ ಕಡೆಗೆ ಹೋಗಿ, ಅಲ್ಲಿ ಮೂರು ದಿನಗಳನ್ನು ಕಳೆದರು. ಅಲ್ಲಿಂದ ಪ್ರಯಾಣಿಸುತ್ತ ಶುಹ್ರಕ್ಕೆ (ಶಾಹರ ಅಲ್-ಮುಕುಲ್ಲಾಕ್ಕೆ) ತಲುಪಿ, ಅಲ್ಲಿ ರಾಜನು ಶೇಖ್ ಮತ್ತು ಅವನ ಜನರೊಡನೆ ಹಲವಾರು ದಿನಗಳವರೆಗಿದ್ದನು. ಅಲ್ಲಿ ಇನ್ನೊಂದು ಯಾತ್ರಿಕರ ಗುಂಪು ಬಂದು ಅವರನ್ನು ಸೇರಿತು. ಮಲಬಾರದಲ್ಲಿ ಇಸ್ಲಾಂ ಧರ್ಮವನ್ನು ಬೋಧಿಸುವ ಮತ್ತು ಅಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲು ಮಸೀದಿಗಳನ್ನು ಕಟ್ಟುವ ಉನ್ನತ ಕಾರ್ಯವನ್ನು ಹೊತ್ತಿದ್ದರು.
ಶಹಾರ ಅಲ್-ಮುಕುಲ್ಲಾಹದಲ್ಲಿರುವಾಗ ರಾಜನು ಅಸ್ವಸ್ಥನಾದನು. ತನ್ನ ರೋಗವು ಹದಗೆಡುತ್ತಿರುವುದನ್ನು ಅರಿತು ಮತ್ತು ಗುಣಮುಖವಾಗುವುದು ಬಹುದೂರವೆನಿಸಿ ಮಲಬಾರ ಕಡೆಗೆ ಹೊರಟಿರುವ ಗುಂಪಿನಲ್ಲಿ ಒಬ್ಬನಾಗಿದ್ದ ಶರಾಫ್ ಬಿನ್ ಮಾಲಿಕ ಎಂಬುವನನ್ನು ತನ್ನ ಹತ್ತಿರ ಬರಲು ಸನ್ನೆ ಮಾಡಿದನು ಮತ್ತು ಮಾಲಿಕಾ ಬಿನ್ ದೀನ ಮತ್ತು ಉಳಿದವರನ್ನು ತನ್ನ ಹತ್ತಿರ ಕರೆದು ಹೇಳಿದನು. ನಾನು ಈ ಜಜ್ಜಿನಿಂದ ಮಡಿಸಿದರೂ ನೀವು ಹಿಂದೂಸ್ತಾನಕ್ಕೆ ಹೋಗುವ ವಿಚಾರವನ್ನು ಬಿಡಬೇಡಿರಿ ಎಂದಾಗ ಅವರಲ್ಲಿ ಒಬ್ಬನು, ನಿಮ್ಮ ದೇಶದ ಬಗ್ಗೆ ನಮಗೇನೂ ತಿಳಿಯದು ಅದು ಎಲ್ಲಿದೆ , ಎಷ್ಟು ವಿಸ್ತಾರವಾಗಿದೆ ಎಂದಾಗ, ಈ ಮಾತನ್ನು ಕೇಳಿದ ರಾಜನು ಕ್ಷಣ ಹೊತ್ತು ಮಲೆಯಾಳಿ ಭಾಷೆಯಲ್ಲಿ ಅವರಿಗೊಂದು ಪತ್ರ ಬರೆದನು. ಆ ಪತ್ರದಲ್ಲಿ ಅವನು ತನ್ನ ರಾಜ್ಯ, ಅದರ ಪ್ರಾಂತಗಳು, ತನ್ನ ಕುಟುಂಬದ ಎಲ್ಲಾ ಸದಸ್ಯರು ಮತ್ತು ಮಲಬಾರದ ಉಳಿದ ರಾಜರ ಕುರಿತು (ಅವರ ಹೆಸರು ಇತ್ಯಾದಿ) ವಿವರಗಳು ಈ ಎಲ್ಲ ಸವಿವರ ಮಾಹಿತಿಯನ್ನು ಬರೆದಿದ್ದಾರೆ. ಆ ಬಳಿಕ ರಾಜನು ಅವರಿಗೆ ಕೊಡುಂಗಲ್ಲೂರ, ವರ್ಮದಂ, ಪಂಟಲಯಾರೆ ಅಥವಾ ಕೊಲ್ಲಂ ಈ ರೇವು ಪಟ್ಟಣಗಳ ಸಮುದ್ರ ತಟಾಕದಿಂದ ಬೇಕಾದಲ್ಲಿ ಹೋಗಬಹುದೆಂದು ಮಾರ್ಗದರ್ಶನ ಮಾಡಿದನು. ಇದಾದ ಬಳಿಕ ಮಲಬಾರದಲ್ಲಿ ಯಾರಿಗೂ ತನಗೊದಗಿದಾಗ ಗಂಭೀರ ಅಸ್ವಸ್ಥೆಯ ಬಗ್ಗೆ ಅಥವಾ ಒಂದು ವೇಳೆ ತಾನು ಸತ್ತರೆ ತನ್ನ ಮರಣದ ಬಗ್ಗೆ ಏನು ಹೇಳಲಿಲ್ಲ ಎಂದು ಅಪ್ಪಣೆ ಮಾಡಿದರು. ಆ ಬಳಿಕ ಕೆಲ ದಿನಗಳಲ್ಲಿ ರಾಜನು ತೀರಿಕೊಂಡನು.
ಕೆಲವು ವರ್ಷಗಳ ತರುವಾಯ ಹಜರತ್ ಶರಫ ಬಿನ್ ಮಾಲಿಕ, ಹಜರತ್ ಮಾಲಿಕ ಬಿನ್ ದೀನಾರ ಮತ್ತು ಹಜರತ್ ಮಾಲಿಕ ಬಿನ್ ಹಬೀಬ, ಅವರ ಹೆಂಡತಿ ಹಜರತ್ ಖಾಮರಿಯಾಹ, ಅವರ ಮಕ್ಕಳು ಹಾಗೂ ಸ್ನೇಹಿತರು ಇವರೆಲ್ಲರ ಗುಂಪೊಂದು ಮಲಬಾರ ಕಡೆಗೆ ಕಡಲ ಪ್ರಯಾಣ ಬೆಳೆಸಿದರು. ಹಲವಾರು ದಿನಗಳ ನಂತರ ಕಡಲ ಪ್ರಯಾಣದಿಂದ ಅವರೆಲ್ಲ ಕೊಡಂಗಲ್ಲೂ ಬಂದರ ತೀರಕ್ಕೆ ಬಂದಿಳಿದರು. ಆಗ ಆಳುತ್ತಿದ್ದ ಆಡಳಿತಗಾರನಿಗೆ ರಾಜನು ಕೊಟ್ಟಿದ್ದ ಪತ್ರವನ್ನು ಕೊಟ್ಟರು. ರಾಜನ ಸಾವಿನ ಬಗ್ಗೆ ಅವರು ಅಲ್ಲಿ ಯಾರಿಗೂ ಏನನ್ನು ಉಸಲಿಲ್ಲ. ಆ ಪತ್ರದಲ್ಲಿದ್ದ ನಿರ್ದೇಶನಗಳನ್ನು ಮನ್ನಿಸಿ ಅಲ್ಲಿ ಆಳುತ್ತಿದ್ದ ರಾಜನು ಅವರಿಗೆ ಉಪಯೋಗಿಸಲೆಂದು ಭೂಮಿ ಮತ್ತು ಸ್ಥಿರಾಸ್ತಿಗಳನ್ನು ಕೊಟ್ಟನು. ತದನುಸಾರ, ಅವರು ಅಲ್ಲಿ ನೆಲೆಯೂರಿದರು. ಮತ್ತು ಮಸೀದಿಯೊಂದನ್ನು ಕಟ್ಟಿಸಿದರು. ಈ ಮಸೀದಿಯೇ ಭಾರತ ದೇಶದಲ್ಲಿ ಕಟ್ಟಲ್ಪಟ್ಟ ಪ್ರಥಮ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದೆ ಈ ಮಸೀದಿಗೆ ರಾಜ ಚೆರಾಮನನ ಹೆಸರಿನಲ್ಲಿಟ್ಟಿದ್ದು ಈಗ ಚೆರಾಮನ್ ಜುಮ್ಮಾ ಮಸೀದಿ ಎಂದು ಪ್ರಸಿದ್ಧವಾಗಿದೆ. ಇನ್ನು ಮಲಿಕ್ ಬಿನ್ ದಿನಾರ್ ರವರ ಮುಂದಿನ ಪ್ರಯಾಣದ ಕುರಿತು ಹೇಳಬೇಕೆಂದರೆ, ಮಾಲಿಕ್ ಬಿನ್ ದೀನಾರ ರವರು ಭಾರತಕ್ಕೆ ಬಂದ ಮೊದಲ ಧರ್ಮ ಪ್ರಚಾರಕರೆಂದು ಖ್ಯಾತಿ ಪಡೆದಿದ್ದಾರೆ. ಇವರು ಕೊಡುಂಗಲ್ಲೂರನಲ್ಲಿ ನೆಲೆಸಿಬಿಡಲು ನಿರ್ಧರಿಸಿ ಮಲಬಾರದಲ್ಲಿರುವ ಈ ಭಾಗಗಳಲ್ಲಿ ಮಸೀದಿಗಳನ್ನು ಕಟ್ಟಿ ಇಸ್ಲಾಂ ಧರ್ಮವನ್ನು ಭೋಧಿಸುವ ಕೆಲಸವನ್ನು ತನ್ನ ಸೋದರನ ಮಗ ಮಾಲಿಕ್ ಬಿನ್ ಹಬೀಬನಿಗೆ ಒಪ್ಪಿಸಿದನು. ಮಾಲಿಕ ಬಿನ್ ಹಬೀಬನು ತನ್ನ ಹೆಂಡತಿ ಮತ್ತು ಕೆಲವು ಮಕ್ಕಳೊಡನೆ ಕೂಡಿಕೊಂಡು ಸರಕು ಸಾಮಾನು ತೆಗೆದುಕೊಂಡು ಹೊಲ್ಲಂಗೆ ಸಾಗಿದನು. ಅವರನ್ನೆಲ್ಲ ಅಲ್ಲಿ ಬಿಟ್ಟು, ಅವನು ಮುಂದೆ ಎಝಿಮಾಲಾಕ್ಕೆ ಹೋದನು. ಅಲ್ಲೊಂದು ಕಟ್ಟಡ ಕಟ್ಟಿಸಿದನು. ಮುಂದೆ ಅವನು ಬಾರಕೂರು, ಮಂಗಳೂರು ಮತ್ತು ಕಾಸರಗೋಡು ಈ ನಾವುಗಳಿಗೆ ಹೋಗಿ ಅಲ್ಲೆಲ್ಲ ಮಸೀದಿಗಳನ್ನು ಕಟ್ಟಿಸಿದನು. ಈ ಎಲ್ಲಾ ಕಾರ್ಯವನ್ನು ಮುಗಿಸಿ ಎಝಿಮಾಲಕ್ಕೆ ಬಂದು ಅಲ್ಲಿ ಮೂರು ತಿಂಗಳ ವಾಸ್ತವ್ಯ ಮಾಡಿದೆ. ಆ ಮೇಲೆ ಅವನು ಶ್ರೀಕಂದಪುರಂ, ಧರ್ಮದಂ, ಪಂತಲಯಾನಿ ಮತ್ತು ಚಾಲಿಯಂಗಳಿಗೆ ಹೋಗಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿದನು. ಚಾಲಿಯಂನಲ್ಲಿ ಆತನು ಐದು ತಿಂಗಳು ಇದ್ದನು. ಆ ಬಳಿಕ ಕೊಡುಂಗಲ್ಲೂರಕ್ಕೆ ಮರಳಿ ಹೋಗಿ ತನ್ನ ಕಕ್ಕ ಮಾಲಿಕ್ ಬಿನ್ ದೀನಾರ ಜೋತೆಯಲ್ಲಿದ್ದನು. ಏತನ್ಮಧ್ಯೆ ಎರಡನೇ ಬಾರಿಗೆ ಪ್ರಯಾಣ ಕೈಕೊಂಡು ತಾನು, ಮಲಬಾರದಲ್ಲಿ ಕಟ್ಟಿಸಿದ ಮಸೀದಿಗಳನ್ನೆಲ್ಲ ನೋಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದನು. ನಾಸ್ತಿಕ್ಯದ ಕತ್ತಲೆಯಲ್ಲಿ ಅಷ್ಟೊಂದು ವಿಸ್ತಾರವಾಗಿ ಇಸ್ಲಾಂ ತನ್ನ ದಿವ್ಯ ಬೆಳಕನ್ನು ಬೀರಿದ್ದನು ನೋಡಿ ಸಂತೋಷಭರಿತನಾಗಿ ಅಲ್ಲಾಹನನ್ನು ಸ್ತುತಿಸುತ್ತ ಹೃತ್ಪೂರ್ವಕ ಕೃತಜ್ಞತೆಯನ್ನು ಅಭಿವ್ಯಕ್ತಗೊಳಿಸಿದನು.
ಮಾಲಿಕ ಬಿನ್ ದೀನಾರ ಮತ್ತು ಮಾಲಿಕ್ ಬಿನ್ ಹಬೀಬ ತಮ್ಮ ಗೆಳೆಯರು ಮತ್ತು ಸೇವಕರೊಂದಿಗೆ ಕೊಲ್ಲಂಕ್ಕೆ ಹೋದರು. ಅಲ್ಲಿಂದ ಮಾಲಿಕ ಬಿನ್ ದೀನಾರ ಮತ್ತು ಕೆಲವರು ಶಹರ್ ಅಲ್-ಮುಕುಲ್ಲಾಕ್ಕೆ ಪ್ರಯಣಿಸಿದರು. ಉಳಿದವರು ಕೊಲ್ಲಂದಲ್ಲಿ ನೆಲೆಸಿದರು. ಶಹರ ಅಲ್ ಮುರುಲ್ಲಾದಲ್ಲಿ ಮಾಲಿಕ ಬಿನ್ ದೀನಾರನು ಮೃತ ರಾಜನ ಸಮಾಧಿಗೆ ಭೇಟಿಯಿತ್ತು ಮುಂದೆ ಖುರಾಸಾನಕ್ಕೆ ಪ್ರಯಾಣಿಸಿದನು. ಕೆಲ ಕಾಲದ ನಂತರ ವಿಧಿವಶವಾದನು.

ತನ್ನ ಕೆಲವು ಮಕ್ಕಳಿಗೆ ಕಲ್ಲಿನಲ್ಲಿ ನೆಲೆಸಲು ವ್ಯವಸ್ಥೆ ಮಾಡಿ ಮಾಲಿಕ್ ಬಿನ್ ಹಬೀಬ್ ತನ್ನ ಹೆಂಡತಿಯೊಡನೆ ಕೊಡುಂಗಲ್ಲೂರಿಗೆ ಮರಳಿದನು. ಕೊಡುಂಗಲ್ಲೂರಿನಲ್ಲಿ ಇರುವಾಗ ಅವನು ಮತ್ತು ಅವನ ಹೆಂಡತಿ ಇಹಲೋಕ ತ್ಯಜಿಸಿದರು. ಹಜರತ್ ಮಾಲಿಕ ಬಿನ್ ಹಬೀಬ, ಅವರ ಹೆಂಡತಿ ಹಜರತ್ ಖಾಮರಿಯಾಹ ರವರ ಸಮಾಧಿಯು ಪ್ರಸ್ತುತ ಚೆರಾಮನ್ ಜುಮಾ ಮಸೀದಿಯಲ್ಲಿಯೇ ಇದೆ. ಅದನ್ನು ಸಹ ನಾವು ನೀಡಬೇಕಾಗಿದೆ ಎಂದು ನಾನು ಹೇಳಿದಾಗ, ಎಲ್ಲರೂ ಹೌದಾ ನಾವು ಮಸೀದಿಯಲ್ಲಿ ಸ್ಥಾಪಿಸಿದ ಮಹಾನ್ ವ್ಯಕ್ತಿಯ ಸಮಾಧಿ ಸಹ ನೋಡುವ ಭಾಗ್ಯ ನಮ್ಮದಾಗಲಿ ಎಂದಾಗ, ನಾನು ಹೌದು ಗೆಳೆಯರೇ, ಇದು ಮಲಲಿಯ ಇಸ್ಲಾಂ ಧರ್ಮ ಮತ್ತು ಪ್ರಸಾರದ ಇತಿಹಾಸ. ಯಾವ ವರ್ಷ ಇದು ಸಂಭವಿಸಿದೆ ಎಂದು ಖಚಿತವಾಗಿ ಹೇಳಲು ಸ್ಪಷ್ಟವಾದ ರುಜುವಾತು ಯಾವುದೂ ಇಲ್ಲ. ಬಹು ಸಂಖ್ಯಾತ ಅಭಿಪ್ರಾಯ ಪ್ರಕಾರ ಇದೆಲ್ಲ ಘಟಿಸಿದ್ದು ಹಿ.ಶ 200 ರಲ್ಲಿ ಆದರೆ, ಮಲಬಾರದ ಮುಸಲ್ಮಾನರಲ್ಲಿ ಸಾಮಾನ್ಯ ಅಭಿಪ್ರಾಯಗಳ ಮೇಲೆ ಹೇಳಿದ ರಾಜನು ಮಹಮ್ಮದ ಪೈಗಂಬರರ ಕಾಲದಲ್ಲಿಯೇ ಇಸ್ಲಾಂಗೆ ಮತಾಂತರಗೊಂಡನು ಅಂತ ಪ್ರತೀತಿ ಇದೆ. ಹಾಗೂ ಆ ಮಸೀದಿಯಲ್ಲಿ ಕ್ರಿಸ್ಟ್ ಶಕ್ 629ರಲ್ಲಿ ಕಟ್ಟಲಾಗಿದೆ ಎಂಬ ಇತ್ತೀಚಿಗೆ ಇಂಗ್ಲಿಷ್ ಮತ್ತು ಮಲಿಯಾಳಂ ಭಾಷೆಯಲ್ಲಿ ಬರೆದಿರುವ ಶಾಸನದ ಕಲ್ಲು ಶಹ ಇದೆ. ಅದನೆಲ್ಲ ನೋಡಲು ಎಂದು ಹೇಳಿದಾಗ ಅಬ್ಬಾ ಇಷ್ಟೊಂದು ಇತಿಹಾಸ ನೀವು ಬಲ್ಲಿರೆಂದರೆ, ನಿಜವಾಗಲು ನೀವು ತಿಳಿದಿರುವಿರಿ ಎಂದು ಹೊಗಳಲು ಪ್ರಾರಂಭಿಸಿದರು. ಆಗ ನಾನು ಸಹ ಮುಗುಳ್ನಗುತ್ತ ಹಾಗೇನಿಲ್ಲವೆಂದು ಹೇಳಿ, ನಾವೆಲ್ಲರೂ ಪ್ರಯಾಣ ಬೆಳೆಸುತ್ತ ಹೋದೆವು. ಕೊಡಂಗಲ್ಲುರ್ ಪಟ್ಟಣಕ್ಕೆ ಹೋಗುವಷ್ಟರಲ್ಲಿ ರಾತ್ರಿ ಆಯಿತು. ಪೂಜೆಯ ಮುಂದೆ ಬ್ಯಾರಿಕೆಡ ಹಾಕಿದ ಕಾವಲುಗಾರರ ಒಳಗೆ ನೀರಾಕರಿಸಿ, ರಾತ್ರಿ ಆಗಿದ್ದರೆ ನಾಳೆ ಬನ್ನಿ ಎಂದು ಹೇಳಿದರು. ಅಲ್ಲಿಯೇ ಸ್ವಲ್ಪ ದೂರದಲ್ಲಿ ಲಾಡ್ಜ್ ನೋಡಿ ರಾತ್ರಿ ವಸತಿ ಮಾಡಿ ಮರು ದಿವಸ್ ಫಜರ್ ನಮಾಜ್ ಈ ಮಸೀದಿಯಲ್ಲಿ ಮಾಡೋಣವೆಂದು ನಿಶ್ಚಯಿಸಿ ಅಲ್ಲಿಂದ ಹೊರಟು ಲಾಡ್ಜ್ ನಲ್ಲಿ ರಾತ್ರಿ ವಸತಿ ಮಾಡಿ ಮರು ದಿವಸ ಫಜರ್ ನಮಾಜಿಗೆ ಆ ಮಸೀದಿಗೆ ಬಂದು, ನಮಾಜ್ ಮುಗಿದ ನಂತರ ಸಂಪೂರ್ಣ ಮಸೀದಿ ನೋಡಿದೆ. ನಮ್ಮ ಕಡೆ ದೊಡ್ಡ ದೊಡ್ಡ ಮಿನಾರ್, ಇಸ್ಲಾಮಿಕ್ ಶೈಲಿಯಲ್ಲಿದ್ದ ಮಸೀದಿಗಳನ್ನು ನೋಡಿದ ನಮಗೆ ಈ ಹೊಸ ಅನುಭವ ನೀಡಿತು.
ಮೈಸೂರು ಕೇರಳ ಶೈಲಿಯಲ್ಲಿ ನೇತಾಡುವ ದೀಪಗಳನ್ನು ನಿರ್ಮಿಸಲಾಗಿದೆ. 1504 ರಲ್ಲಿ ಲೋಪೊ ಸೊರೆಸ್ ಡಿ ಅಲ್ಬರ್‌ಗೇರಿಯ ಕೊಡಂಗಲ್ಲೂರ್ ಬಂದರಿನ ಮೇಲೆ ದಾಳಿ ಮಾಡಿದಾಗ ಪೋರ್ಚುಗೀಸರಿಂದ ಮಸೀದಿ ನಾಶವಾಯಿತು. ಹಳೆಯ ಕಟ್ಟಡವನ್ನು 1504 ಡಿ ಅಲ್ಗಬಾರಿಯಾ ದಾಳಿಯ ನಂತರ (ಅಂದರೆ, 16 ನೇ ಶತಮಾನದ ಮಧ್ಯಭಾಗದಿಂದ 17 ನೇ ಶತಮಾನದ ಆರಂಭದವರೆಗೆ) ಸ್ವಲ್ಪ ಸಮಯದ ನಂತರ ನಿರ್ಮಿಸಲಾಯಿತೆಂದು ತಿಳಿದು ಬರುತ್ತದೆ. ನಂತರ ಅಲ್ಲಿಯೇ ಇದ್ದ ಇಬ್ಬರು ಸೂಫಿಗಳ ಮಜಾರ್ ನೋಡಿ ಪಟಗಳನ್ನು ತೆಗೆದುಕೊಂಡು ಧನ್ಯತಾ ಭಾವದಿಂದ ಹೊರಟೆವು.
( ಮುಂದುವರೆಯುವುದು…)

ಶಕೀಲ್ ಐ .ಎಸ್. ಹುಮ್ನಾಬಾದ್

ಲೇಖಕರ ಪರಿಚಯ: 

ಶಕೀಲ್ ಐ.ಎಸ್.

ಸಾಹಿತಿ  ಶಕೀಲ್ ಐ.ಎಸ್. ರವರು ಬೀದರ ಜಿಲ್ಲೆ
ಹುಮನಾಬಾದ ತಾಲೂಕಿನ ಖೇಣಿ ರಂಗೋಳ ಗ್ರಾಮದವರು. ಬಿ.ಎ. ಪದವಿಧರರಾದ ಇವರು ಪೋಲಿಸ್ ಇಲಾಖೆಯಲ್ಲಿದ್ದು ಸದ್ಯ ಹುಮನಾಬಾದ ಡಿ.ಎಸ್ಪಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಅಭಿವೃದ್ಧಿ ಪಥ’, ‘ಕರ್ನಾಟಕ ಇತಿಹಾಸ, ‘ಹುಮನಾಬಾದ ತಾಲೂಕು ಇತಿಹಾಸ’ ( ಲೇಖನ) ‘ಮೂರು ನಾಟಕಗಳು‘ (ನಾಟಕ) ‘ಭ್ರಷ್ಟಾಚಾರ ದೇಹಕ್ಕೂ ಮಾರಕ’ (ರೂಪಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ‘ಬೀದರ ಜಿಲ್ಲೆಯ ಸೂಫಿಗಳು‘ ಎಂಬುದು ಇವರ ಸಂಶೋಧನಾತ್ಮಕ ಕೃತಿಯಾಗಿದೆ. ‘ನಳದಮಯಂತಿ’ ಇದು ಪೌರಾಣಿಕ ಕತೆಯಾದರೆ, ‘ಗರ್ಭಕೋಶದಲ್ಲಿ ಮಹಾಯುದ್ಧ‘ (ಕಥಾಸಂಕಲನ) ‘ಧರಿನಾಡಿನ ಗಂಡುಗಲಿ (ವ್ಯಕ್ತಿಚಿರ್ತಣ) ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ