ಸೈನಿಕರಿಗೊಂದು ಸಲಾಂ.
ಸೈನಿಕ ನಮ್ಮೆಲ್ಲರ ರಕ್ಷಕ…
ಭಾರತ ಮಾತೇಯ ಸೇವಕ””
ಸೈನಿಕ ಕಾಯುವನು ನಮಗಾಗಿ ಗಡಿಯಲ್ಲಿ…
ಅವನಿಂದ ಮಾತ್ರ ನಾವುಗಳು ಸುಖನಿದ್ರೆಯಲಿ.
ಅವನಿಗಿಲ್ಲ ನೀರಡಿಕೆ ಹಸಿವಿನ ಚಿಂತೆ..
ಹೆಂಡಿರ ಮಕ್ಕಳ ಸಂಸಾರದ ಚಿಂತೆ
ಏನಿದ್ದರೂ ಎಂತಿದ್ದರೂ…
ಅವನಿಗೆ ನಮ್ಮನ್ನು ಕಾಯುವದಷ್ಟೇ ಚಿಂತೆ.
ಸೈನಿಕ ನಮ್ಮೆಲ್ಲರ ರಕ್ಷಕ…
ಭಾರತ ಮಾತೆಯ ಸೇವಕ. “”
ಸೈನಿಕನ ಉಸಿರಿನಲ್ಲಿದೆ ನಮ್ಮಯ ಉಸಿರು…
ಅವನಿಂದಲೆ ನಾವುಗಳು ಸುರಕ್ಷಿತ..
ಸುಭಿಕ್ಷಿತ..
ಅವನೇ ನಮ್ಮಯ ಹೆಮ್ಮೆಯ ಸೈನಿಕ
ಭಾರತ ಮಾತೆಯ ಸೇವಕ”‘
– ಓಂಕಾರ ಪಾಟೀಲ.
ಕಾರ್ಯದರ್ಶಿಗಳು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ