ಸಂಬಂಧ ವಿಲ್ಲದವರು
ಈಗಿನ ಜನಾಂಗ ಕಷ್ಟಕ್ಕಿಲ್ಲ ಸುಖಕಿಲ್ಲ
ಸ್ವಾರ್ಥಿಗಳಾಗಿ ತಮ್ಮದೇ ಲೋಕದಲ್ಲಿ
ಬದುಕವರೆಲ್ಲ//
ವಾಟ್ಸಪ್ಪಿನಲಿ ಫೇಸ್ಬುಕ್ ನಲಿ ಇರೋ
ಟ್ವಿಟರ್ ಇನಸ್ಟಾಗ್ರಾಮನಲಿ ಇರೋ
ತರಾ ಸಂಬಂಧಗಳು//
ಅಷ್ಟೇ ಅಲ್ಲ ಮನೆಯೊಳಗಿನ ಜನ
ಕುಟುಂಬದವರೆಲ್ಲರ ಮನ ಕೂಡ
ಮೋಬೈಲದಲಿ ಮಾತ್ರ//
ಅಪಾರ್ಟ್ಮೆಂಟ್ ನಲಿರೊ ನೇಬರ್ಸ
ಅಂತರ್ ಜಾಲದಲ್ಲಿರೋ ಫ್ರೆಂಡ್ಸ್
ಕಷ್ಟಕ್ಕಿಲ್ಲ ಸುಖಕಿಲ್ಲ//
ದಸರಾ ದೀಪಾವಳಿ ಹಬ್ಬಗಳಲಿ
ದೇವಿ ದೀಪದ ಚಿತ್ರಗಳು ವಾಟ್ಸಪ್ದಲ್ಲಿ
ಅದೊಂದು ಹಬ್ಬವೇ//
ಯಾವ ಪುಣ್ಯಾತ್ಮ ಹುಡುಕಿದನೋ
ಈ ಮೋಬೈಲೆಂಬ ಮಹಾಭೂತವನು
ಮಾನವೀಯತೆ ಇಲ್ಲ//
ಸದುಪಯೋಗವಿರಲಿ ಅದರ ಜೊತೆ
ಮನುಷ್ಯತ್ವವೂ ಇರಬೇಕಲ್ಲವೆ ಅನು
ಹಿರಿಯರಿಗೆ ಗೌರವವಿಲ್ಲ//
ಹಣ ಕಡಿಮೆಯಿದ್ದರೂ ಗುಣವಂತ
ಜನರಿದ್ದರು ಹಬ್ಬ ಹರಿದಿನ ಒಟ್ಟಿಗೆ
ಸೇರಿ ಮಾಡುತ್ತಿದ್ದರು//
ಪರಸ್ಪರ ಸುಖ ದುಃಖ ಹಂಚಿಕೊಂಡು
ಸ್ನೇಹ ಸಹಾಯ ಮಾಡಿಕೊಂಡು
ಸಂತೋಷವಾಗಿದ್ದರು//
– ಅನ್ನಪೂರ್ಣ ಸಕ್ರೋಜಿ ಪುಣೆ.