Oplus_131072

ಸಂಸ್ಕೃತಿ ಮರೆತಾಗಾ (ಮಿನಿ ಕಾದಂಬರಿ)

 

ಅನೀತಾ ಡಿ.ದುಬೈ.ಯಾದಗಿರಿ.

ಆ ಪರ್ವತ ಶ್ರೇಣಿಗಳು ಮುಗಿಲಿಗೆ ಮುಟ್ಟಿದ್ದೇವೆ. ನಮಗಿಂತ ಹಿರಿಯರಾರಿಲ್ಲ ಎಂಬ ಭಾವನೆ ಅವುಗಳಲ್ಲಿ. ಆ ಸಹಸ್ರರು ಪಕ್ಷಿಗಳ ವಸಂತಗಾನ ಕೇಳಿದವುಗಳೆಲ್ಲಾ ತಲೆಯಲ್ಲಾಡಿಸುತ್ತವೆ. ಮಳೆ ಬಂದು ನಿಂತಾಗ, ಆಗಸದಲ್ಲಿ ಬೀರುವ ಮಳೆಬಿಲ್ಲು, ಇವುಗಳನ್ನು ಕಂಡು ನಗೆಬೀರುತ್ತದೆ. ತಂಗಾಳಿ ಬೀಸುವ ತಂಬೆಲರು. ಅರಣ್ಯ ರಾಶಿಯ ಕೇಂದ್ರಬಿAದುವಾದ ಸಂಜೆಯ ನೇಸರ, ಕಾಣಲು ಅದ್ಭುತ, ಅಮೋಘ, ಆಶ್ಚರ್ಯ, ಆನಂದ, ಉಲ್ಲಾಸ, ಮನ ಶಾಂತಿ, ನೇಸರನ ಹೊಂಬಿಸಿಲಿಗೆ ಹಕ್ಕಿಗಳು ವಸಂತಗಾನವಾಡಲು ಪ್ರಾರಂಭಿಸುತ್ತವೆ. ಪ್ರಾಣಿಗಳು ತಮ್ಮ ಮರಿಗಳಿಗೆ ಹಾಲುಣಿಸುತ್ತವೆ. ಗಿರಿ ವನದ ಝರಿ ಹರಿಯಲು ಪ್ರಾರಂಭಿಸುತ್ತ, ಕೀಟಗಳು ಆಹಾರವನ್ನು ಅರಸುತ್ತವೆ. ಶ್ರೀಗಂಧ,ತೆAಗು ತಂಗಾಳಿ ಬೀಸುತ್ತವೆ. ಮುಂಜಾನೆಯ ಹೂವು ಅರಳುತ್ತದೆ. ಪ್ರೇಮದ ಕಾವಿನಲ್ಲಿರುವ ಜೀವಿಗಳು, ಸುಂದರ ಸೂರ್ಯನ ಪ್ರದರ್ಶನ ಕಂಡು ತಮ್ಮನ್ನು ತಾವೇ ಮರೆತು ಬಾಳುವವು. ವರ್ಷನ ಒಲವಿನಿಂದ, ರವಿಯ ಸಂಧ್ಯಾಕಾಶದ ಬಣ್ಣದ ಮೆರವಣಿಗೆ, ದಿನನಿತ್ಯ ಈ ಚಟುವಟಿಕೆಗಳು ನಡೆಯುವವು. ಆ ಅರಣ್ಯ ಪ್ರದೇ±ದÀ ಆ ಮರಳಿರುವ ಅಂಗಳದಲ್ಲಿ ನೃತ್ಯ ಕಲಿಸುವ ಗುರುಗಳು ಒಂದು ಕಡೆ ಕುಳಿತುಕೊಳ್ಳುವರು. ಮರಳಿನ ಮೇಲೆ ಮೊಣಕಾಲೂರಿ, ಶ್ವೇತವರ್ಣದ ವಸ್ತç ತಲೆಗೆ ಸುತ್ತಿ. ಕೈಗೆ ಕಪ್ಪು ವರ್ಣದ ವಸ್ತç ಸುತ್ತಿ, ಬೆವರುವ ಹಣೆ, ಗಡಸಾದ ಚರ್ಮ, ಉದರ ಭಾಗದಿಂದ ಮೇಲೆ ಕುತ್ತಿಗೆವರೆಗೆ ಯಾವುದೇ ವಸ್ತç ಧರಿಸದ ಬರಿ ಮೈ. ಉಳಿದ ಭಾಗ ಶ್ವೇತಾ ವರ್ಣದ ಪಂಚೆಕಟ್ಟು. ತೊಡೆಯ ಮೇಲೆ ಬೃಹತ್ ಗಾತ್ರದ ಢಮರು. ಆ ಢಮರನ್ನು ಉಣ್ಣೆಯಿಂದ ಆವೃತ್ತಗೊಳಿಸಿದ್ದಾರೆ. ಎಡಗೈಯಲ್ಲೊಂದು, ಬಲಗೈಯಲೊಂದು ಮೋಟಾದ ಕೋಲನ್ನು ಹಿಡಿದು ಚಿಗುರಿದ ಮೀಸೆಯ ಕೆಳಗೆ ತುಟಿ ಕಚ್ಚಿ, ಎದೆ ಉಬ್ಬಿಸಿ, ಢಮರು ಬಾರಿಸುವವ. ಎದೆ ತುಂಬ ಧೈರ್ಯ. ಮೌನದ ಮೊಗ, ಹೆಚ್ಚು ಮಾತನಾಡದವ. ಒಮ್ಮೆ ತೊಡೆಯ ಮೇಲಿನ ಢಮರು ಬಾರಿಸಲು ಶುರು ಮಾಡಿದರೆ ವಿರಾಮ ನೀಡುವುದೇ ಕಷ್ಟ. ಗುರುಗಳನ್ನು ಕಂಡರೆ ಭಯ ಮತ್ತು ಭಕ್ತಿ. ಗುರುಗಳಿಗೆ ತನ್ನ ವಂದನೆ ತಿಳಿಸಬೇಕಾದರೆ ಬಿಗಿಯಾಗಿ ಕಣ್ಮುಚ್ಚಿ, ನರ-ನಾಡಿಗಳನ್ನು ಬಿಗಿದಿಡಿದು, ಮೊಣಕಾಲನ್ನು ಧರೆಗಟ್ಟಿ. ನೇರ ಬೆನ್ನು ಮಾಡಿ ತನ್ನ ಹಸ್ತಗಳನ್ನು ಎದೆಯ ಬಳಿಯಿಟ್ಟು, ದೀರ್ಘ ಉಸಿರುಬಿಡುತ್ತಾ, ಭಕ್ತಿಯಿಂದ ಪ್ರಾರ್ಥಿಸುವವ. ಗುರುಗಳು ಅವನನ್ನು ಪ್ರೀತಿಯಿಂದ “ಸಾಂಘ್ವಿ” ಎಂದು ಕರೆಯುವರು.


ಸಹೋದರಿಯರೋ?, ಅವರು ಸ್ನೇಹಿತೆಯರೋ? ಒಂದೇ ವಯಸ್ಸಿನ ಆ ಪೋರಿಯರು. ಸಾಮಾನ್ಯ ಅಕ್ಷರ ಜ್ಞಾನ ಅವರಲ್ಲಿ ಇಲ್ಲದಿದ್ದರೂ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ನೃತ್ಯದ ಜ್ಞಾನ ಅವರಲ್ಲಿದೆ. ಮೂವರಲ್ಲಿ, ಇಬ್ಬರಿಗಿಂತ ಎತ್ತರದಲ್ಲಿ ಸ್ವಲ್ಪ ಹೆಚ್ಚು ಮೈ ಬಣ್ಣ ಕೆಂಪು, ಸ್ವಲ್ಪ ದಪ್ಪ. ಕಾಲಿಗೆ ಗೆಜ್ಜೆ. ಕೊರಳಲ್ಲಿ ಮಣಿಹಾರ, ಉದ್ದನಯೆ ಕೂದಲನ್ನು ಗಂಟು ಹಾಕಿದ್ದಾಳೆ. ಸೀರೆಯನ್ನು ಧರಿಸುವಳು. ಆದರೇ ಕುಪ್ಪಸವಿಲ್ಲ. ತನ್ನ ಎದೆಯಿಂದ ಮೊಣಕಾಲಿನವರೆಗೂ ಹಸಿರು ಬಣ್ಣದ ಸೀರೆ. ನೃತ್ಯ ಕಲಿಯುವ ಸಂದರ್ಭದಲ್ಲಿ ಬಾಗಿದರೆ ಆಕರ್ಷಣೀಯವಾಗಿ ಕಾಣುವ ಸೊಂಟ. ಗಂಟು ಹಾಕಿದ ಕೂದಲಿಗೆ ಪುಷ್ಪ. ಮೂಗಿಗೆ ಮೂಗುತಿ. ಕಿವಿಯಲ್ಲಿ ನಾಣ್ಯಕ್ಕಿಂತಲೂ ದೊಡ್ಡದಾದ ನವಿಲುಗರಿಯಂತಿರುವ ಓಲೆ. ಹಣೆಗೆ ಕಪ್ಪನೆ ಬಟ್ಟು. ತುಂಬಿದ ವಯಸ್ಸಿನವಳು. ಮರಳಿನ ಮೇಲೆ ಹೆಜ್ಜೆವಿಟ್ಟು ನೃತ್ಯ ಮಾಡಲು ಆರಂಭಿಸಿದಳೆAದರೆ ತನ್ನನ್ನು ತಾನು ಮರೆಯುವಳು. ಗುರುಗಳ ಮಾತನ್ನು ಮೀರಿ ನಡೆಯುವ ಒಂದು ಗುಣ ಅವಳಲ್ಲಿಲ್ಲ. ನೃತ್ಯ ಕಲಿಯುವಾಗ ತಪ್ಪು ಮಾಡಿದರೆ, ಗುರುಗಳು ಪಾದಕ್ಕೆ ಮುಳ್ಳು ಚುಚ್ಚಿ ನೃತ್ಯ ಮಾಡಲು ಹೇಳುವರು. ಅಂತಹ ಶಿಕ್ಷೆಯನ್ನು ಆನಂದದಿಂದ ಅನುಭವಿಸುವವಳು ಲೀರಾ. ಬಣ್ಣ ಕಪ್ಪಾದರೂ, ಮನಸ್ಸು ಬಿಳುಪು. ಸದಾ ನಗು ಮೊಗದವಳು. ನೃತ್ಯ ಕಲಿಯಲು ಹೋಗಬೇಕಾದರೆ ಹೆದರುವಳು. ಗುರುಗಳನ್ನು ಕಂಡರೆ ತತ್ತರಿಸುವಳು. ಸ್ವಲ್ಪ ಮೆತ್ತಗೆ ಮಾತನಾಡಿದರು, ಕೋಪ ಹೆಚ್ಚು. ಕಾಲಿಗೆ ಗೆಜ್ಜೆ. ಹಸಿರು ಸೀರೆ. ಗುರುಗಳನ್ನು ಕಂಡರೆ ಭಯ ಮತ್ತು ಭಕ್ತಿ ಇದೆ. ನೃತ್ಯವನ್ನು ಕಲಿಯಬೇಕೆಂಬ ಹಂಬಲ, ಛಲ ಇಲ್ಲ. ಕಲಿಯಬೇಕೆಂದು ಕಲಿಯುವವಳು. ಸ್ನೇಹಿತೆಯರು ಇವಳನ್ನು “ಭಿಲ್” ಎಂದು ಕರೆಯುವರು. ನೃತ್ಯದಲ್ಲಿ ತಾನು ಸಂಪೂರ್ಣ ಬಲ್ಲವಳು. ಇಬ್ಬರೂ ಸ್ನೇಹಿತೆಯರಿಗಿಂತಲೂ ತಾನೇ ಚುರುಕು ನೃತ್ಯದಲ್ಲಿ ಹಾಗೂ ಗುರುಗಳು ಇವಳನ್ನು ಅಲ್ಪಸ್ವಲ್ಪ ಪ್ರೀತಿಸುವರೆಂಬ ಗರ್ವ ಅವಳಲ್ಲಿ. ಇಬ್ಬರಿಗಿಂತಲೂ ಬಲು ಸುಂದರಿ. ಈಕೆ, ಗುರುಗಳು ಹೇಳಿದ ನೃತ್ಯದ ದೃಶ್ಯ ಕ್ಷಣಾರ್ಧದಲ್ಲಿಯೇ ಕಲಿಯುವ ಚಾತುರ್ಯತೆ. ಹಸಿರು ಸೀರೆಯನ್ನು ಉಡುವಳು. ಕಿವಿಯಲ್ಲಿ ಓಲೆ, ಸುತ್ತಿದ ತುರುಬ, ತುರುಬಿಗೆ ಹೂವಿನ ಗುಚ್ಛ, ಮಾತನಾಡಿಸಿದರೇ ಮಾತನಾಡುವಳು. ಇಲ್ಲವಾದರೇ ಮೌನಿ. ಇವಳನ್ನು ಲೌರಿ ಎಂದು ಕರೆಯುವರು.


“ಹಿಮಾಲಯ ಹತ್ತಿರ
ಮೇಘರಾಯ ಎತ್ತರ
ಸಂಧ್ಯಾ ವರ್ಣ ನೇಸರ
ವನ-ವೃಕ್ಷಗಳ ಚಪ್ಪರ
ಮೌನ ಮಾತನಾಡುವ ಮಂದಿ
ಸುತ್ತ ಎಲ್ಲೂ ಇಲ್ಲ ಕಾಡು ಹಂದಿ
ಗAಡಸರಿಗೆ ಅರ್ದಭಾಗ ಧೋತಿ
ಇವರು ಮಂಗ ನಿಂತಿರುವ ಕೋತಿ
ವಸ್ತçವೋ, ಸೀರೆಯೋ, ಮಾನ
ಮುಚ್ಚಿಕೊಳ್ಳುವ ಹೆಂಗಸರು”
ಹಿಮಾದಿAದಾವೃತವಾದ ಅರಣ್ಯವದು. ಕೋಟ್ಯಾನು ಕೋಟಿ, ವೃಕ್ಷದಿಂದಾವೃತವಾದ ವನವದು. ನರಿ-ಸಿಂಹಗಳಿಗೆ ಹೆದರುವುದಿಲ್ಲ ಆ ಜನ. ಇವರನ್ನು ಕಂಡು ಹೆದರಿ ಓಡುವ ಖಗ-ಮೃಗಗಳು. ಕೈಯಲ್ಲಿ ಕತ್ತಿ ಹಿಡಿದು, ತಲೆಗೆ ಪಕ್ಷಿಯ ಗರಿ ಇಟ್ಟುಕೊಂಡು, ಶಬ್ದ ಮಾಡುತ್ತಾ ಬೇಟೆಯಾಡಲು ಹೊರಟರೆ ಯಾವ ಪಕ್ಷಿ ರೆಕ್ಕೆ ಬಡೆದು ಹಾರಾಡಲು ಬರುವುದಿಲ್ಲ. ಯಾವ ಪ್ರಾಣಿಯು ಉಸಿರಾಡುವುದಿಲ್ಲ. ಕಲ್ಲಿನಲ್ಲಿ ಹರಿಯುವ ತಿಳಿಯಾದ ನೀರನ್ನು ಕುಡಿಯುವುದು. ಬೇಟೆಯಾಡುವುದು ಹಸಿಮಾಂಸ ತಿನ್ನುವುದು. ಉಳಿದರೆ ಮಾಂಸ ಹಿಡಿದುಕೊಂಡು ಚಪ್ಪರಗಳಿಗೆ ಬರುವುದು. ಚಪ್ಪರದಲ್ಲಿದ್ದ ಹೆಂಗಳಿಯರು ಹಸಿದಿದ್ದರೆ ಹಸಿ ಮಾಂಸ ತಿನ್ನುವರು. ಇಲ್ಲವಾದರೇ ಸ್ವಲ್ಪ ಬೇಯಿಸಿಕೊಂಡು ತಿನ್ನುವ ಜನಾಂಗವದು. ಹೊರಗಿನ ಪ್ರಪಂಚ ಕಾಣದೆ ಅರಣ್ಯ, ಹಿಮಾಲಯ, ಮರ-ಗಿಡ, ಪ್ರಾಣಿ-ಪಕ್ಷಿ, ಪ್ರದೇಶ ಬಿಟ್ಟರೆ ಆಸೆ ಜನಾಂಗಕ್ಕೆ ಮತ್ತೇನು ಗೊತ್ತಿಲ್ಲ. ಆರೇಳು ಎಕರೆ ಭೂ-ಪ್ರದೇಶದಲ್ಲಿ ವಾಸಿಸುವ ಜನಾಂಗವದು. ಜನ ಸಂಖ್ಯೆ ಸಾವಿರಗಿಂತಲೂ ಕಡಿಮೆ. ಅವರಲ್ಲಿ ಮೂರು ವರ್ಗದ ಜನಾಂಗದಿಂದ ಕೂಡಿದ್ದು. ಅಲ್ಲಿ ಯಾರು ಅಪ್ಪನೋ? ಯಾರು ಅಮ್ಮನೋ? ಗೊತ್ತಿಲ್ಲ. ಅವರುಗಳಿಗೆ ಅದರ ಬಗ್ಗೆ ಬೇಸರವೂ ಇಲ್ಲ. ಆದರೇ ಯಾವ ಅಪ್ಪನಿಗಾದರೂ ಜನಿಸಲಿ ಅಥವಾ ಯಾವ ಅಮ್ಮನಿಗಾದರೂ ಜನಿಸಲಿ. ಪೂರ್ಣ ಹುಣ್ಣಿಮೆ ದಿನ ಜನಿಸಿದಂತಹ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ನೃತ್ಯ ಕಲಿಸುವರು. ಮೂರು ವರ್ಗದ ಜನಾಂಗದಲ್ಲಿ. ಒಂದು ಜನಾಂಗ ಜೇನು ಸಂಗ್ರಹಿಸುವುದು. ಇನ್ನೊಂದು ಬುಟ್ಟಿ ಹೆಣೆಯುವುದು. ಮತ್ತು ಮತ್ತೊಂದು ವರ್ಗ ಮಡಿಕೆ ತಯಾರಿಸುವುದು ಹೀಗೆ ಒಂದೊAದು ಜನಾಂಗ ಒಂದೊಂದರಲ್ಲಿ ಕಾರ್ಯ ಮಗ್ನರಾದರೇ. ತಮ್ಮ-ತಮ್ಮಲ್ಲಿಯೇ ಅವರ ಸಾಮಗ್ರಿಗಳನ್ನು ವಿನಿಮಯ ಮಾಡಿಕೊಂಡು ಜೀವಿಸುವರು. ಇಂತಹವರಂಲ್ಲಿ ಜನಿಸಿರುವವರು ಸಾಂಪ್ಟಿ, ಲೀರಾ, ಭಿಲ್ ಮತ್ತು ಲೌರಿ. ಸಂಪ್ರದಾಯಿಕ ನೃತ್ಯ ಮಾಡುವಂತಹ ಹೆಣ್ಣಿನ ಜೊತೆ ಸಂಭೋಗ ನಿಷೇಧ. ಹಾಗೂ ಅವರಿಗೆ ಮಿಲನ, ಸ್ಪರ್ಶ, ಸಂಭೋಗ ಏನೆಂಬುದು ತಿಳಿಯಕೂಡದು. ಪೂರ್ಣ ಹುಣ್ಣಿಮೆ ದಿನ ಹುಟ್ಟಿದಾಗಿನಿಂದ, ಹದಿನಾರನೇ ವಯಸ್ಸಿನವರೆಗೂ ಅವರನ್ನು ಸಾವಿರದೊಂದು ಪುಷ್ಪಗಳಿಂದ ಸುಂದರವಾಗಿ ಹೆಣೆದಿದ್ದ ಚಪ್ಪರ ಅವರ ನಿವಾಸ. ಜೇನು ಹಣ್ಣು ಮಾಂಸದ ಊಟ ಅವರಿಗೆ ನಿಷೇಧ. ಹದಿನೇಳನೆ ವಯಸ್ಸಿನಿಂದ ಹತ್ತೊಂಬತ್ತನೇ ವಯಸ್ಸಿನವರೆಗೂ ಆ ಜನಾಂಗದ ಗುರುಗಳ ಬಳಿ ಸಾಂಪ್ರದಾಯಿಕ ನೃತ್ಯ ಕಲಿಯಬೇಕು. ಕಲಿತ ನಂತರ ಇಪ್ಪತ್ತರಿಂದ ಎಪ್ಪತ್ತನೇ ವಯಸ್ಸಿನವರೆಗೂ ಆ ಜನಾಂಗದ ಮುಂದೆ ಅವರ ಮನೋರಂಜನೆಗಾಗಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿಸಬೇಕು. ಕಬ್ಬಿಣದಂತೆ ಗಟ್ಟಿಯಾಗಿರುವ ದೇಹ. ಆದರೆ ಸದಾ ದೋಷವಿಲ್ಲದೆ ನೀರಿನಂತೆ ಹರಿಯುವ ಮನಸ್ಸು. ಗಂಡಸರಲ್ಲಿ ಸೊಬಗಿಲ್ಲ. ಹೆಂಗಸರಲ್ಲಿ ಸೌಂದರ್ಯವಿಲ್ಲ. ಆದರೇ ಆ ಜನಾಂಗದಲ್ಲಿ ಜನಿಸಿದ ಲೀರಾ, ಭೀಲ್, ಲೌರಿ ಮಾತ್ರ ಸ್ವಲ್ಪ ಸುಂದರಿಯರು. ಯಾಕೆಂದರೆ ಸದಾ ಚಪ್ಪರದಲ್ಲಿ ತೊಡಗಿರುವ ಅವರಿಗೆ, ಸ್ನಾನಕ್ಕೆ ಬೇವಿನ ಎಲೆ, ಲೊಳೆರಸ, ನಿಂಬೆರಸ, ಹೂವಿನ ಗಂಧ ಹಾಗೂ ಅರಿಶಿಣ ಬೇವಿನ ರಸ ಸೇರಿ ಮಿಶ್ರಣ ಮಾಡಿದ ಸೌಂದರ್ಯ ವರ್ಧಕ, ಬಿಸಿ ನೀರಿನ ಸ್ನಾನ ದಿನಲೂ ಅವರದು. ಹಾಗಾಗಿ ಅವರಿಗೆ ಸ್ವಲ್ಪ ಸೌಂದರ್ಯವೆನ್ನಬಹುದು.

“ಮರ-ಗಿಡ ಚಂದ ಗಿರಿ-ವನಕ್ಕೆ
ತಾರೆ-ಚುಕ್ಕಿ ಚಂದ ಜಗಕ್ಕೆ
ಮೊಗ್ಗು ಚಂದ ಹೂದೋಟಕ್ಕೆ
ಮೂಡಣ ರವಿ ಚಂದ ಉದಯಕ್ಕೆ
ಹುಣ್ಣಿಮೆ ಶಶಿ ಚಂದ ಕತ್ತಲಿಗೆ
ಮೀನು-ಮುತ್ತು ಚಂದ ಸಾಗರಕ್ಕೆ
ಪರಿಮಳ ದ್ರವ್ಯ ಚಂದ ಸಿಹಿ ಜೇನಿಗೆ
ಹಿಮಕರಗುವಿಕೆ ಚಂದ ನದಿಗೆ
ಮಾನ, ಸೌಂದರ್ಯ ಚಂದ ಹೆಣ್ಣಿಗೆ”


ಎತ್ತರವಾದ ಕಟ್ಟಿಗೆಯ ರಾಶಿಗೆ ಬೆಂಕಿ ಹಾಕಿ. ಆ ದಿನ ಹಬ್ಬವೋ….ಮಜಾವೋ. ಎಲ್ಲಾ ಜನರಿಗೆ ವಿಶಾಲವಾದ ಮೈದಾನದಲ್ಲಿ ಒಬ್ಬರಿಂದ ಒಬ್ಬರು ಶಿಸ್ತಿನಿಂದ, ಕೈಯಲ್ಲಿ ಉದ್ದನೆಯ ಕಂತ್ತಿ, ಕಾಲಿಗೆ ಖಡ್ಗ, ಕಪ್ಪಾಗಿರುವ ತುಟಿ, ವೈರಸ ತಗಲಿದಂತಿರುವ ಕೂದಲು ಇರುವಂತಹ ಪುರುಷರು ಒಂದೆಡೆ ಕುಳಿತರೆ, ಇನ್ನೊಂದೆಡೆ ಬೆಂಕಿಯ ಉಷ್ಣಕ್ಕೆ ಗುಂಗುರ ಕೂದಲನ್ನು ಕೊರಳಲ್ಲಿ ಬಿಟ್ಟು. ಒಲವಿನಿಂದಿದ್ದ ಕಣ್ಣು. ಕಳೆದಿಂದಿದ್ದ ಮೊಗ. ಮೈ ಬಣ್ಣ ಪಕ್ಕ ಕಪ್ಪಾಗಿದ್ದು. ಕಣ್ಣಿಗೆ ಕಾಡಿಗೆ ಹಚ್ಚಿ, ಕಾಲಲ್ಲಿ ಕಾಲ್ಗೆಜ್ಜೆ ಹಾಕಿ, ಅಲ್ಲಲ್ಲಿ ಒಬ್ಬೊಬ್ಬರು ಕಟ್ಟಿದ ತುರುಬಿಗೆ ಅಂಗೈಗಲ ಆಕಾರವಿರುವ ಹೂವು ಮುಡಿದು. ಅಪರೂಪಕ್ಕೊಮ್ಮೆ ನಗೆ ಬೀರುತ್ತಾ, ಮೊಂಡದ ಮೂಗಿಗೆ ದೊಡ್ಡದಾದ ಮೂಗುತಿ ಕೊರಳಲ್ಲಿ ಮಣಿ ಸರ ಹಾಕಿಕೊಂಡು. ಸ್ತನಗಳ ಕೆಳಗೆ ಬಿಳಿ ಪಟ್ಟಿಯೊಂದನ್ನು ಬಿಗಿದುಕೊಂಡು ಕುಳಿತಿರುವ ಹೆಂಗಸರು. ಉಲ್ಲಾಸದಿಂದ ಪುರುಷ ಮತ್ತು ಸ್ತಿಯರು ಮತ್ತು ತೀರ್ಪುಗಾರರು ಆ ಸಮಾರಂಭದಲ್ಲಿ ಸೇರಿದ್ದಾರೆಂದರೇ ಏನೋ ವಿಶೇಷ ಇದ್ದೇ ಇರುತ್ತಿತ್ತು. ಆ ದಿನ ಅವರ ಪಾಲಿಗೆ ಹಬ್ಬವೇ ಹಬ್ಬ. ವಿಶೇಷವಾದ ಊಟ. ಅಮಾವಾಸೆ ರಾತ್ರಿ. ನೂರಾರು ಹಂದಿಗಳನ್ನು ಬೇಟೆಯಾಡಿ ತಿಂದು ಬೇಯಿಸಿದ ಭೋಜನ ಕಾರ್ಯಕ್ರಮ. ಆ ಮಾಂಸದ ಊಟ ಅವರಿಗೆ ತುಂಬು ಪ್ರಿಯವಾದ ಊಟ, ಬೇಟೆಯಾಡಿ ಬೇಟೆಯಾಡಿ. ಆ ಅರಣ್ಯದಲ್ಲಿ ಹಂದಿ ಮರೆಯಾಗಿವೆ. ಆ ದಿನ ಊಟದ ವಿಶೇಷ ಜೊತೆ ಜೊತೆಗೆ ಇನ್ನೊಂದು ವಿಶೇಷವಾದ ಕಾರ್ಯಕ್ರಮವಿರುತ್ತಿತ್ತು. ಬೆಂಕಿಯ ಎದುರಿಗೆ ಏಳು ವರ್ಷದ ಏಳು ಮಕ್ಕಳನ್ನು ಅಂದರೇ ಗಂಡು ಮಕ್ಕಳನ್ನು ನಿಲ್ಲಿಸಬೇಕು. ಯಾರು ತನ್ನ ಕೈಯಿಂದ ಹಿಡಿ ಬೆಂಕಿಯನ್ನು ತೆಗೆದುಕೊಂಡು ಹೋಗಿ ತೀರ್ಪುಗಾರರ ಮುಂದೆ ಅಚ್ಚುಕಟ್ಟಾಗಿ ಇಡುವರೋ, ಅವನನ್ನು ಸಂಪ್ರದಾಯಕ ನೃತ್ಯಕ್ಕೆ ಢಮರು ಭಾರಿಸಲು ನೇಮಿಸುವರು. ಈ ಪರೀಕ್ಷೆಯಲ್ಲಿ ಏಳನೇ ವಯಸ್ಸಿಗೋ ಜಯಿಸಿದಂತಹ ಮಗು ಹದಿನೇಳನೇ ವರ್ಷ ದಾಟಿದ ಬಳಿಕ ಎರಡು ವರ್ಷಗಳ ಗುರುಗಳ ಬಳಿ ಢಮರು ಭಾರಿಸುವ ಕಲೆ ಕಲಿಯಬೇಕು. ಇವನು ಮಾಂಸದ ಊಟ ಮಾಡುವಂತಿಲ್ಲ. ಇಪ್ಪತ್ತನೇ ವಯಸ್ಸಿನಿಂದ ಎಪ್ಪತ್ತು ವಯಸ್ಸಾಗುವರೆಗೂ ಢಮರು ಭಾರಿಸಬೇಕು.
ಪೂರ್ಣ ಹುಣ್ಣಿಮೆ ದಿನ ಹುಟ್ಟಿದ ‘ಲೀರಾ, ಭಿಲ್, ಲೌರಿ’ ಸಾಂಪ್ರದಾಯಿಕ ನೃತ್ಯ ಮಾಡಲು ಆಯ್ಕೆಯಾದರೆ ಬೆಂಕಿಯ ಪರೀಕ್ಷೆಯಲ್ಲಿ ಪಾಸಾದ ‘ಸಾಂಘ್ವಿ’ ಢಮರು ಭಾರಿಸಲು ಆಯ್ಕೆಯಾಗಿದ್ದರು ಆ ದಿನ. ‘ಸಾಂಘ್ವಿ ಸಹ ಹೆಣ್ಣಿನ ಜೊತೆ ಸಂಭೋಗ, ಸ್ಪರ್ಶ, ಮಿಲನ ಮತ್ತಾö್ಯವುದರ ಬಗ್ಗೆ ಗೊತ್ತಿರಬಾರದು. ನೃತ್ಯಗಾರ್ತಿಯರಿಗೆ ಹಾಗೂ ನೃತ್ಯಕ್ಕೆ ತಾಳ ಹಾಕುವ ಢಮರು ಬಾರಿಸುವವನಿಗೆ ಯಾಕೆ? ಆ ಗಿರಿಜನ ಸಂಸಾರದ ಹಾದಿ ಬೇಡವೆಂದು ಹೇಳಲು ಕಾರಣವಿದೆ. ಅವರು ಇಂದ್ರೀಯಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಕಾಮಕ್ಕೆ ಬಲಿಯಾಗಬಾರದೆಂದು ಆ ಮಕ್ಕಳನ್ನು, ಆ ಜನಾಂಗದ ಆರಾಧ್ಯ ದೈವನ ಮುಂದೆ ಕೂರಿಸಿ ಪೂಜೆ ಮಾಡಿಸುವರು. ಇದು ಸತ್ಯವಾದ ಬಳಿಕ ಅವರು ಕಾಮಕ್ಕೆ ಬಲಿಯಾಗಬಾರದೆಂದು ಅವರಿಗೆ ತಿಳಿ ಹೇಳುವರು. ತಮ್ಮ ಸಂಸ್ಕೃತಿ ಮೀರಿ ವರ್ತಿಸದ ಜವಾಬ್ದಾರಿ ಅವರದು. ಯಾರೆ ಆ ನೃತ್ಯಗಾರ್ತಿಯರಿಗೆ ಮತ್ತು ಡಮರು ಭಾರಿಸುವವ ಸಂಸಾರದ ಹಾದಿ ಹಿಡಿಯಬಾರದೆಂದು, ಆ ಜನಾಂಗಕ್ಕೆ ಪ್ರಶ್ನಿಸಿದರೆ? ಅದಕ್ಕೆ ಉತ್ತರ. ‘ಹೆಣ್ಣು ನಿಶಕ್ತಳಾಗುವಳು. ಗಂಡು ಸಂಸಾರದ ಕಡೆ ಕಾಳಜಿವಹಿಸುವನು. ಇದರಿಂದಾಗಿ ಅವರು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ಮಗ್ನರಾಗಲು ಸಾಧ್ಯವಾಗುವುದಿಲ್ಲ.’ ಎಂದೇಳುವರು. ಹಾಗಾಗಿ ತಮ್ಮ ಸಂಸ್ಕೃತಿಗೆ ಧಕ್ಕೆ ಬರಬಾರದೆಂಬ ಜವಾಬ್ದಾರಿ.


ಸಂಜೆ ಮಳೆ ಬಂದ ನೆಲ ತಣ್ಣಗಾಯಿತು. ಹಕ್ಕಿಗಳು ಹಾಡು ಪ್ರಾರಂಭಿಸಿದವು. ಮುಳುಗುವ ಸೂರ್ಯ ಇಣುಕಿ-ಇಣುಕಿ ನೋಡುತ್ತಿದ್ದ. ನವಿಲು ಗರಿಬಿಚ್ಚಿ ತನ್ನದೇ ಒಯ್ಯಾರದಲ್ಲಿ ಕುಣಿಯುತ್ತಿತ್ತು. ಮಂಗ ಮರದಿಂದ ಮರಕ್ಕೆ ಚಂಗನೇ ಜಿಗಿಯುತ್ತಿತ್ತು. ಕೋಗಿಲೆ ‘ನಾನೇನು ಕಮ್ಮಿಯೋ?’ ಎಂದು ಕುಹೂ….ಕುಹೂ…… ಇಂಪಾದ ಗಾನರಾಗ ಹಾಡುತ್ತಿತ್ತು. ಗಿರಿ ವನದಲ್ಲಿ ಹರಿಯುತ್ತಿದ್ದ ಝರಿ ಯಾಕೋ ತುಸು ಹೆಚ್ಚಾಗಿಯೇ ಹರಿಯುತ್ತಿತ್ತು. ವೃಕ್ಷಗಳೆಲ್ಲವೂ ತಂಪಾದ ಗಾಳಿ ಬೀಸುತ್ತಿದ್ದವು. ಮರಳಿರುವ ವಿಶಾಲವಾದ ಮೈದಾನಕ್ಕೆ ಹದಿನೇಳನೇ ವಯಸ್ಸಿನ ಪ್ರಾಯದ ಬೆಡಗಿಯರು ಬಂದು, ಮೊದಲು ವಯಸ್ಸಾದ ಗುರುಗಳಿಗೆ ನಮಿಸುತ್ತಾ, ತಮ್ಮ ಸ್ಥಾನದ ಕಡೆ ಹೋಗಿ ನೃತ್ಯದ ಮೊದಲ ಹಂತ ಪ್ರಾರಂಭಿಸಿದರು. ನೃತ್ಯ ಕಲಿಯುವಾಗ ಧರಿಸಬೇಕಾದ ವಸ್ತçವನ್ನೆಲ್ಲಾ ಧರಿಸಿದರು. ಹಸಿರು ಸೀರೆ, ಸುತ್ತಿಕೊಂಡು ಕಾಲ್ಗೆಜೆ ಹಾಕಿ, ಮುಡಿಗೆ ಹೂಬಿಟ್ಟು, ಕಾಡಿಗೆ ಹಚ್ಚಿ, ಸೊಂಟಕ್ಕೆ ಬಳೆ ಪಟ್ಟಿ ಹಾಕಿಕೊಂಡು ನೃತ್ಯ ಕಲಿಯಲು ನಿಂತರು ಆ ಹೆಂಗಳೆಯರು. ಮೊದಲು ಲೌರಿ (ಐouಡಿi) ತನ್ನ ಬಲಗಾಲನ್ನು ಮರಳಲಿಟ್ಟು, ಎಡಗಲು ಹಿಂದೆ ಸ್ವಲ್ಪ ಮೇಲೆತ್ತಿ, ಬಲಗೈಯನ್ನು ಕೇಳಗೆ ಬಿಟ್ಟು, ತನ್ನ ಎಲ್ಲಾ ಶಕ್ತಿಯನ್ನು ಬಲಗೈ ಮೇಲೆ ಹಾಕಿ. ಉಳಿದ ಎಡಗೈಯಿಂದ ಮಧ್ಯೆವಿರುವ ‘ಭಿಲ್’ಳನ್ನು ಹಿಡಿಯುವಳು. ಮಧ್ಯದಲ್ಲಿರುವ ‘ಭೀಲ್’ಳು ಬಲಗಾಲನ್ನು ಮರಗಳಿಗೆ ಹಚ್ಚಿ, ಎಡಗಾಲನ್ನು ಸ್ವಲ್ಪ ಮರಳಿಗೆ ಲೌರಿ ಎಂತೆ ಮೇಲೆತ್ತಿ. ಬಲಗೈಯನ್ನು ಲೌರಿ ಹಿಂದೆ ಹಿಡಿದು, ಎಡಗೈಯನ್ನು ಲೀರಾಳ ಬೆನ್ನ ಹಿಂದೆ ಹಿಡಿದು ನೃತ್ಯ ಆರಂಭಿಸುವಳು. ಕೊನೆಯದಾಗಿ ಸ್ವಲ್ಪ ದಪ್ಪವಿರುವ ಲೀರಾಳು ಬಲಗಾಲನ್ನು ಮರಳಿನಲ್ಲಿಟ್ಟು. ಬಲಗೈಯನ್ನು ‘ಭಿಲ್’ಳ ಬೆನ್ನ ಹಿಂದೆ ಹಿಡಿದು, ಎಡಗೈಯನ್ನು ಕೆಳಗೆ ಬಿಟ್ಟು ಅತಿಯಾಗಿ ಬಾಗಿ, ಅತಿಯಾಗಿ ಬಾಗುವುದರಿಂದಾಗಿ ಇವರ ನೃತ್ಯ ನೋಡಲು ಚೆನ್ನ. ಒಬ್ಬರನ್ನು ಒಬ್ಬರು ಹಿಡಿದು ಕಲಿಯುವ ನೃತ್ಯವಿದು. ಮುಂದೆ ಕುಳಿತ ಗುರುಗಳು ಒಮ್ಮೆ ಮಾತ್ರ ಹೇಳಿಕೊಡುವರು. ತಪ್ಪು ಮಾಡಿದರೆ ಘೋರ ಶಿಕ್ಷೆ ಅವರಿಗೆ. ಈ ಮೂವರು ಸ್ನೇಹಿತೆಯರೋ, ಸಹೋದರಿಯರೋ, ಯಾರಿಗೋ ಹುಟ್ಟಿ ಬೆಳೆದವರು. ‘ಸಾಂಘ್ವಿ’ ಯನ್ನು ಒಂದು ದಿನ ಮಾತನಾಡಿಸಲಿಲ್ಲ. ಸಾಂಘ್ವಿಗೆ ತಾನು, ತನ್ನ ಗುರು, ತನ ಕಲೆ ಬಿಟ್ಟು ಬೇರೇನೂ ಗೊತ್ತಿಲ್ಲ. ಅವನಿಗೆ ಅವನೇ ಮುಖ್ಯ, ಅವನಿಗೆ ಅವನ ಸಂಸ್ಕೃತಿಯೇ ಮುಖ್ಯವಾಗಿತ್ತು. ವಯಸ್ಸಿಗೆ ಬಂದ ಅವನು. ಇಂದ್ರೀಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗಲಿಲ್ಲ. ಸಾಂಘ್ವಿಗೆ ದೇವರ ಪೂಜೆ ಮಾಡಿಸಿದರು ವ್ಯರ್ಥವಾಯಿತು. ಕಾಮದ ಮುಂದೆ ಅವನಿಗೆ ಗೆಲ್ಲಲಾಗಲಿಲ್ಲ. ಯಾಕೆಂದರೆ ಅವನ ಮೈಯಲ್ಲಿ ನಿಜವಾಗಿ ಆ ಗಿರಿ ಜನಾಂಗದ ರಕ್ತವಿದ್ದರೇ ? ಆ ಜನಾಂಗ ಮಾಡಿಸಿದಂತಹ ಕಾಮಾ ಪೂಜೆ ಸಾರ್ಥಕವಾಗುತ್ತಿತ್ತೋ ? ಆದರೇ ಅವನು ಗಿರಿ ಜನಕ್ಕೆ ಹುಟ್ಟಿದ ಮಗು ಅಲ್ಲವೇ ಅಲ್ಲ. ತನ್ನ ಸಂಸ್ಕೃತಿ ಮರೆತು, ತನ್ನ ಹಿಡಿತ ಮರೆತು ಲೀರಾ ಮತ್ತು ಲೌರಿಯ ಜೀವನವನ್ನೇ ಹಾಳು ಮಾಡಿದನು.


ಸಂಜೆ ಸಮಯ, ತಂಪಾದ ಗಾಳಿ, ಇಂಪಾದ ಕೋಗಿಲೆ ಹಾಡು. ಗರಿಬಿಚ್ಚಿ ಕುಣಿಯುತಿರುವ ನವಿಲು. ಸೊಗಸಾಗಿ ಗಿಡ ಹತ್ತುತ್ತಿರುವ ಅಳಿಲು. ಪೊದೆ-ಪೊದೆಗಳಲ್ಲಿ ಓಡಾಡುತ್ತಿರುವ ಮೊಲ. ಜೋತುಬಿದ್ದಂತಹ ಕೊಂಬೆ-ರೆAಬೆಗಳ ಮೇಲೆ ನಲಿದಾಡುವ ಮಂಗಗಳು. ಒಂದೊAದೆ ಪೊದೆ ಹುಲ್ಲನ್ನು ಬಾಯಲ್ಲಿಟ್ಟುಕೊಂಡು ಗೂಡು ತಯಾರಿಸುತ್ತಿರುವ ಗೀಜುಗ. ಮಿಡತೆಯನ್ನು ತಿನ್ನಬೇಕೆಂದು ಕಾತುರದಿಂದ ಕಾಯುತ್ತಿರುವ ಕಪ್ಪೆ. ಬಾನಿನ ಅಂಚಿನಲ್ಲಿ ಹಾರಾಡುತ್ತಿರುವ ಹಕ್ಕಿಗಳು. ಸಂದೇಶ ರವಾನೆ ಮಾಡುತ್ತಿರುವ ಬಣ್ಣ-ಬಣ್ಣದ ಚಿಟ್ಟೆಗಳು. ಧರೆಯ ಹಸಿರು ಹುಲ್ಲಿನ ನಗು. ಇವುಗಳ ಜೊತೆ-ಜೊತೆಗೆ ಪುಷ್ಪದಿಂದಾವೃತವಾದ ಚಪ್ಪರದ ಬದಿಯಲ್ಲಿ ಕುದಿಯುತ್ತಿರುವ ನೀರಿನ ಪಾತ್ರೆ. ಈಚಲು ಮರದ ಪೊದೆಯಿಂದ ಮಾಡಿದಂತಹ ಸ್ನಾನ ಗೃಹವದು. ಅಲ್ಲಿ ಒಂದು ಪಾತ್ರೆಯಲ್ಲಿ ಬಿಸಿನೀರಿದೆ. ಮೃದುವಾದ ಬಂಡೆಯಿದೆ. ಲೋಳೆರಸ, ಅರಿಶಿಣ, ನಿಂಬೆ ರಸ, ಬೇವಿನ ರಸದಿಂದ ಕೂಡಿದ ಸೌಂದರ್ಯ ವರ್ಧಕ ಆ ಪಾತ್ರೆಯಲ್ಲಿದೆ. ಮೃದುವಾದ ಬಂಡೆಯ ಮೇಲೆ ನಾಜೂಕಾದ ಕಾಲನ್ನು ಚಾಚಿಕೊಂಡು, ಬೆನ್ನ ಹಿಂದೆ ಕೂದಲು ಬಿಟ್ಟುಕೊಂಡು, ಆ ಕೂದಲಿಗೆ ಎಣ್ಣೆ ಹಾಕಿ, ಕೆನ್ನೆಗೆ, ಮುಖಕ್ಕೆ, ಬೆನ್ನಿಗೆ, ಕೈಯಿಗೆ, ಕಾಲಿಗೆ, ಲೊಳೆರಸ, ನಿಂಬೆರಸ ಹಚ್ಚಿಕೊಂಡು ಆ ಸುಂದರ ಸಂಜೆಯಲ್ಲಿ ಸ್ನಾನಗೃಹದಲ್ಲಿ ಸ್ನಾನ ಮಾಡಲು ಕುಳಿತಿದ್ದಾಳೆ ಲೀರಾ. ಆಕೆ ನಿಸರ್ಗದ ಚಿಂತನೆಯಲ್ಲಿ ಮಗ್ನಳಾಗಿದ್ದಳು. ಬಾಹ್ಯ ಜಗತ್ತನ್ನು ಮರೆತು ತನ್ನ ಆಂತರಿಕ ಜಗತ್ತಿನೊಡನೆ ಚರ್ಚಿಸುತ್ತಿದ್ದಳು. ಓಡಿ ಬಂದ ಮೊಲ ಆ ಸ್ನಾಗೃಹದ ಬಳಿ ಬಂದು ನಿಂತಿತು. ಅದನ್ನು ಹಿಡಿಯಲು ಅದರಿಂದೆ ಓಡುತ್ತಾ ಬಂದ ಸಾಂಘ್ವಿ, ಸ್ನಾನಗೃಹದ ಬಳಿ ಬಂದು ನಿಂತ ಮೊಲ ಕೈಗೆತ್ತಿಕೊಂಡನು. ಪಕ್ಕಕ್ಕೆ ಸರೆದು, ತಿರುಗಿ ಸ್ವಲ್ಪ ಕಣ್ಣ್ಕು ಹಾಯಿಸಿದ. ಸ್ವÀರ್ಗ ಅಂದರೇ ಇದೆನಾ?, ಮೈಯೊಳಗೆ ಪುಳಕ, ಹೃದಯ ಬಡಿತ ತೀವ್ರ. ಹಣೆಯಲ್ಲಿ ಬೆವರು, ಕೈ ಬೆರಳು, ಕಾಲು ನಡುಕ, ಒಮ್ಮೆ ಕಣ್ಮುಚ್ಚಿ, ಉಸಿರು ಬಿಡುತಾ ಕಣ್ಣು ತೆರೆದನು. ಕೈಯೊಳಗೆ ಸಿಕ್ಕಿಕೊಂಡ ಮೊಲವು ಜಿಗಿದು ಓಡಿ ಹೋಯಿತು. ಒಂದೊAದೆ ಹೆಜ್ಜೆ ಮುಂದಿಡುತಾ…..ಮುಂದಿಡುತಾ ಮೆಲ್ಲಗೆ ನಡೆದನು. ಅವಳ ಸನಿಹಕ್ಕೆ ಬಂದು, ಸ್ಪರ್ಶಿಸಿಸಿದನು. ಮೈಮರೆತಿದ್ದ ಲೀರಾ ಮತ್ತು ಸಾಂಘ್ವಿ ಇಬ್ಬರೂ ತನ್ಮಯರಾಗಿ ಹೋದರು. ಇವರನ್ನು ಕಂಡಂತಹ ಸಂಜೆಯ ತಂಪನೆ ನೇಸರ ಮನೆಗೆ ಓಡಿದ. ಹಸಿರು ಹುಲ್ಲಲ್ಲಿ ಆಟವಾಡುತ್ತಿರುವ ಮೊಲ ಗೂಡು ಸೇರಿತು. ಪಕ್ಷಿಗಳು ಹಾರಿದವು. ಚಿಟ್ಟೆ ಮಾಯವಾದವು, ಮಂಗಗಳು ಚೆಂಗನೆ ಜಿಗಿದವು.


ದಿನ ಕಳೆದವು. ಆ ಕಾಡಿನ ಗುರುಗಳಿಗೆ ಬೀರಾಳ ಮೇಲೆ ಅನುಮಾನ ಶುರುವಾಯಿತು. ಅವಳಿಗೆ ಕರೆದು ಮೂರು-ನಾಲ್ಕು ಬಾರಿ ಮಾತನಾಡಿಸಿದರು ಗುರುಗಳು. ಅವಳು ಮಾತ್ರ ಸತ್ಯ ಹೇಳಲಿಲ್ಲ. ಹಾಗಾಗಿ ಹಿರಿಯರು ಒಂದು ತೀರ್ಮಾನಕ್ಕೆ ಬರುವರು. ಬೀರಾಳನ್ನು ಮಧ್ಯೆ ಕೂರಿಸಿ ಸುತ್ತಲೂ ಹಿರಿಯರು, ಇನ್ನೊಂದು ಕಡೆ ಗುರು. ಆ ಗುರುವಿಗೆ ಅದ್ಭುತವಾದ ಶಕ್ತಿ ಇರುತ್ತದೆ. ಅದೇನೆಂದರೆ ‘ಯಾವ ವ್ಯಕ್ತಿಯ ಮನಸ್ಸು ಏನನ್ನು ಆಲೋಚಿಸಿರುತ್ತದೆ.’ ಎಂದು ಖಚಿತವಾಗಿ ಹೇಳುವರು. ಮೌನಿಯಾದ ಲೀರಾಳ ಮುಂದೆ ಆ ಗುರು ಆಲೋಚಿಸಿ ಇನ್ನೇನೂ ಅವಳ ಮನಸ್ಸಿನ ತಳಮಳ ಹೇಳಬೇಕೆನ್ನುವುದರೊಳಗಾಗಲೇ, ದೂರದಲ್ಲಿದ್ದ ಸಾಂಘ್ವಿ ಎಲ್ಲವನ್ನು ಅವಲೋಕಿಸುತ್ತಾ ನಿಂತಿದ್ದನು. ತಡಮಾಡದೆ ಸಾಂಘ್ವಿ ಅಲ್ಲಿಂದ ಓಡಿ ಹೋಗಿ ಜೇನು ಹುಳಗಳನ್ನು ಎಬ್ಬಿಸಿದನು. ಜೇನುಗೂಡಿಗೆ ಬಾಣ ಸಿಲುಕಿಸಿ ಅಲ್ಲಿ ಅಲ್ಲೋಲ-ಕಲೋಲ ಮಾಡಿದನು. ಯಾಕೆಂದರೆ ಲೀರಾಳ ಮನಸ್ಸಿನ ಭಾವ, ಗೊಂದಲ ವಿಷಯವನ್ನು ಗುರುಗಳು ಹೇಳಿದಾರೆ? ತನ್ನ ಮತ್ತು ಲೀರಾಳ ಸಂಬAಧ ಹಾಳಾಗುವುದೆಂದು ಆಚಾರ-ವಿಚಾರ ಮರೆತಂತಹ ಅವನಿಗೆ ತನ್ನ ಆಸೆಯೇ ಹೆಚ್ಚಾಯಿತು. ತನ್ನ ಮನದ ಮಾತೆ ಸರಿ ಅನಿಸಿತು.
ಭೋರ್ಗತಲು, ಸವರಾತ್ರಿ ಜನವೆಲ್ಲಾ ನಿದ್ರಿಸುತ್ತಿತ್ತು. ಲೀರಾ ತನ್ನ ಹೂವಿನ ಸೂರಲ್ಲಿ ಮೌನಿಯಾಗಿ ಕಣ್ಣುಬಿಟ್ಟು, ತನ್ನ ಎರಡು ಕೈಗಳನ್ನು ಉದರದ ಮೇಲಿಟ್ಟುಕೊಂಡು ಮಲಗಿದ್ದಳು. ಅದೇ ಹೊತ್ತಲ್ಲಿ ಸಾಂಘ್ವಿ ಲೀರಾಳ ಗುಡಿಸಲ ಬಾಗಿಲನ್ನು ತೆರೆದು ಒಳ ಬರುವನು. ಆ ಗುಡಿಸಲು ಹೂವಿನ ಅರಮನೆಯಂತೆ ಸೊಬಗು. ಒಂದು ಕಡೆ ಬೆಳಗುತ್ತಿರುವ ದೀಪ. ಹಾಗೂ ಹೂವಿನ ಮೆತ್ತನೆ ಹಾಸಿಗೆ ಮೇಲೆ ಮಲಗಿದ್ದ ಲೀರಾಳು ಸಾಂಘ್ವಿಯನ್ನು ಕಂಡು ಎದ್ದು ಕುಳಿತುಕೊಳ್ಳುವಳು. ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತವೆ. ಆತುರ, ಭಯದಿಂದ ಸಾಂಘ್ವಿ ‘ಯಾಕೆ?’ ಎಂದು ಪ್ರಶ್ನಿಸಿಸುವನು. ಲೀರಾ ತನ್ನೆರಡು ಕೈಗಳನ್ನು ಮುಗಿದು, ‘ದಯವಿಟ್ಟು ಇಲ್ಲಿಂದ ಹೊರಡು’ ಎಂದು ಹೇಳುತ್ತಾಳೆ. ಆದರೇ ಲೀರಾಳನ್ನು ಸಮಾಧಾನಿಸಿದ ಸಾಂಘ್ವಿಯು ತನ್ನ ಕೆಲಸವನ್ನು ತಾನು ಮುಗಿಸಿಕೊಂಡು ಹೋಗುವನು. ಸಾಂಘ್ವಿ ಹಾಗೂ ಲೀರಾಳ ಈ ಸಂಬAಧ ಬಹು ದಿನ ಉಳಿಯುವುದಿಲ್ಲ. ಲೀರಾ ಅವನನ್ನು ಸಂಪೂರ್ಣವಾಗಿ ತಿರಸ್ಕರಿಸುವಳು. ಆದರೇ, ಒಂದು ದಿನ ನೃತ್ಯ ಪ್ರದರ್ಶನ ಮುಗಿದ ನಂತರ ಸವರಾತ್ರಿ ಹೊತ್ತು. ಎದ್ದು ನೇರ ಲೀರಾಳ ಬಳಿ ಬರುವನು. ಮಂದ ಬೆಳಕು ಕಾಮ ತುಂಬಿದ ಕಣ್ಣು ಸಾಂಘ್ವಿ ಲೀರಾ ಎಂದು ಮಲಗಿದ್ದ ಲೌರಿ (ಐouಡಿi)ಯನ್ನು ಮುದ್ದಾಡುವನು.
ನಂತರ ಬೆಳಕಿಗೆ ಲೌರಿಯ ಸುಂದರ ಮೊಗವನ್ನು ನೋಡಿ ಬೆರಗಾದ.

“ಸುಮದರತೆಯ ಮೊಗ
ತುಟಿ ಕಚ್ಚಿದರೆ ಸಿಹಿ ಜೇನು
ಅರೆ ನಿದ್ದೆಯಲ್ಲಿದ್ದ ನಯನ
ಕೆಂಪು ಮೈ ಬಣ್ಣ
ಮೃದುತ್ವದ ನಡು
ಬೀರಾಳಿಗಿಂತಲೂ ಅಪ್ಸರೆ
ಸೀರೆಯ ಅಂಚಿಗೆ ಅಂಟಿರುವ ವಕ್ಷ”

ಕಂಡಂತಹ ಕಾಮ ಪ್ರೇತ ಸಾಂಘ್ವಿಗೆ ಅವಳನ್ನು ಇನ್ನೂ ಹೆಚ್ಚು ಮುದ್ದಾಡಬೇಕೆನಿಸಿತು. ಆಶ್ಚರ್ಯದಿ ಬೆರಗಾದ ಲೌರಿ. ಸಾಂಘ್ವಿಗೆ ಏನು? ಯಾಕೆ? ಎಂದು ಪ್ರಶ್ನಿಸದೇ ಮೌನಿಯಾದಳು. ಲೀರಾಳ ಮೋಹದಿಂದ ದೂರಾದ ಸಾಂಘ್ವಿ ದಿನ ನಿತ್ಯ ಲೌರಿಯ ಚಪರಕ್ಕೆ ನಡೆದ. ಇದು ಆ ಜನಾಂಗದ ಸಂಸ್ಕೃತಿಗೆ, ಸಂಪ್ರದಾಯಕ್ಕೆ ಕೆಡಕಾಯಿತು. ಒಟ್ಟಿನಲ್ಲಿ ಬೀರಾ ಮತ್ತು ಲೌರಿ ಇಬ್ಬರೂ ಮೌನಸ್ಥರಾದರು. ಸಾಂಘ್ವಿ ಆ ಜನಾಂಗಕ್ಕೆ ಸೇರಿದವನೇ? ಅಥವಾ ಆ ಜನಾಂಗದವರಿಗೆ ಜನಿಸಿದವನೆ? ಅಲ್ಲವೇ ಅಲ್ಲ. ಹಾಗಾದರೆ ಆ ಸಾಂಘ್ವಿ ಯಾರು?


ಒಂದೂರಿನ ರಾಜ. ಅವನಿಗೆ ಇಬ್ಬರೂ ಹೆಂಡಿರು. ಮೊದಲ ಹೆಂಡ್ತಿಗೆ ಮಗುವಾಗಿತ್ತು. ಎರಡನೇ ಹೆಂಡತಿ ಆಗ ತಾನೇ ಗರ್ಭಿಣಿ. ತನ್ನ ದ್ವಿತೀಯ ಪತ್ನಿಗೆ ಮೊಲದ ಮಾಂಸ ತಿನ್ನಬೇಕೆಂಬ ಬಯಕೆ. ಹೆಂಡತಿಯ ಬಯಕೆ ಈಡೇರಿಸಲು ಅರಣ್ಯಕ್ಕೆ ಬೇಟೆಯಾಡಲು ಹೋದ. ಆ ದಿನ ರಾಜನಿಗೆ ಒಂದು ಮೊಲ ಸಿಗಲಿಲ್ಲ. ಮರುದಿನ ಹೋದ ಆ ದಿನ ಸಹ ಮೊಲವನ್ನು ಬೇಟೆಯಾಡಲಾಗಲಿಲ್ಲ. ಮೂರನೇ ದಿನ ತನ್ನ ಮೊದಲ ಹೆಂಡತಿಯ ೨ ವರ್ಷದ ಮಗುವನ್ನು ಎತ್ತಿಕೊಂಡು ಬೇಟೆಯಾಡಲು ಹೋದನು. ರಾಜ ಬಯಸಿದಗಿಂತಲೂ ಹೆಚ್ಚು ಮೊಲವನ್ನು ಬೇಟೆಯಾಡಿದ. ಆದರೆ ಅರಣ್ಯದೊಳಗೆ ಪ್ರವೇಶಿಸಿದಾಗ ಬೇಟೆಯಾಡಲು ಹೋಗುವ ಮುನ್ನ ಮಗುವನ್ನು ಕುದುರೆ ಬಳಿ ಕೂರಿಸಿ ಹೊರಟ. ಬೇಟೆಯಾಡಿ ಬಂದು ನೋಡಿದರೆ ಆ ಸ್ಥಳದಲ್ಲಿದ್ದ ಮಗು ಮಾಯವಾಗಿತ್ತು.ಆದರೇ ಕುದುರೆ ಮಾತ್ರ ಅಲ್ಲಿಯೇ ನಿಂತಿತ್ತು. ಕುದುರೆವನ್ನು ಹತ್ತಿ ಮಗನನ್ನು ಎಲ್ಲಾ ಕಡೆ ಹುಡುಕಿದನು. ಎಲ್ಲೂ ಆ ಮಗು ಕಾಣಲೇ ಇಲ್ಲ.

“ನಾನೊಬ್ಬ ಬೇಟೆಗಾರನಾಗಿದ್ದಾಗ
ನಿನ್ನೊಬ್ಬ ನನ್ನ ರಾಜಕುಮಾರನಾಗಿದ್ದೆ.
ಅರಣ್ಯ ಕಂಡು ಹೆದರಿದೇಯಾ?
ವನದಲ್ಲಿ ಮಾಯವಾದೆಯಾ?
ನಿನ್ನ ತಾಯಂದಿರಿಗೆ ತಿಳಿಸಲೇನು? ಕಂದ! ನಿನ್ನ ಉತ್ತರವೇನು?”

ಎಂದು ರಾಜ ಕಣ್ಣೀರಿಡುತ್ತಾ ಅರಣ್ಯವೆಲ್ಲಾ ಹುಡುಕಾಡಿದ. ಆದರೂ ಸಿಗಲಿಲ್ಲ. ಆದರೇ ಎತ್ತಾ ಹೋಯ್ತು ಮಗು? ರಾಜ ಬೇಟೆಯಾಡಲು ಹೋದಾಗ – ಕುದುರೆಗೆ ತೀರಾ ಬಾಯಾರಿಕೆಯಾಗಿತ್ತು. ಹಾಗಾಗಿ ಕುದುರೆ ಸನಿಹದಲ್ಲಿ ಹರಿಯುತ್ತಿದ್ದ ನೀರು ಕುಡಿಯಲು ಹೋದಾಗ, ಆ ಕಾಡು ಜನಾಂಗದ ಓರ್ವ ವ್ಯಕ್ತಿಯೊಬ್ಬನು ಪಕ್ಷಿಗೆ ಗುರಿಯಿಟ್ಟು ಬಾಣ ಹೊಡೆದ. ಆ ಬಾಣಕ್ಕೆ ತುತಾದ ಪಕ್ಷಿ ಕೆಳಗೆ ಬಿದ್ದು, ವಿಲ-ವಲನೆ ಓದ್ದಾಡುತ್ತಿತ್ತು. ಕುದುರೆ ಪಕ್ಕ ಕುಳಿತಿದ್ದ ಮಗು ಚಿಟ್ಟನೆ ಚೀರಿತು. ಆ ಬಿಲ್ಲುಗಾರ ಆ ಮಗುವನ್ನು ಎತ್ತಿಕೊಂಡು ಸುತ್ತಲೂ ನೋಡಿದ. ಯಾರು ಇರಲಿಲ್ಲ. ಮುದ್ದಾದ ಮಗುವಿಗೆ ರಾಜಕುಮಾರನ ವಸ್ತಾಲಂಕಾರ ನೋಡಿದ ಆ ವ್ಯಕ್ತಿ. ಕೂಗಿ ಶಬ್ದ ಮಾಡಿದ ಹತ್ತಿರಕ್ಕೆ ಯಾರು’ ಬರಲಿಲ್ಲ. ಆ ವ್ಯಕ್ತಿಯ ಕೈಯಲ್ಲಿದ್ದ ಮಗು ಆ ವಿಚಿತ್ರ ವ್ಯಕ್ತಿ ಕಂಡು ಹೆಚ್ಚು ಚೀರಾಡತೊಡಗಿತು. ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಬಿಲ್ಲು, ಬಾಣ ಕೆಳಗಾಕಿ, ತಲೆಗೆ ಸುತ್ತಿದ ಬಟ್ಟೆ ತೆಗೆದನು. ಮಗು ಆವಾಗ ಸ್ವಲ್ಪ ಸಮಾಧಾನವಾಯಿತು. ಆ ವ್ಯಕ್ತಿ ಆ ಮಗುವನ್ನು ಎತ್ತಿಕೊಂಡು ಬಾಣಕ್ಕೆ ತುತ್ತಾದ ಪಕ್ಷಿಯನ್ನು ತೆಗೆದುಕೊಂಡು, ತನ್ನ ಜನಾಂಗ ಕಡೆ ನಡೆದ. ತದನಂತರದಲ್ಲಿ ನೀರು ಕುಡಿಯಲು ಹೋದಂತಹ ಕುದುರೆ ಆ ಸ್ಥಳಕ್ಕೆ ಬಂದು ನಿಂತಿತು. ಕ್ಷಣಾರ್ಧದಲ್ಲಿಯೇ ಆ ರಾಜ ಬಂದನು. ಮಗು ಕಾಣದ ರಾಜ ಕಂಗಲಾದನು. ಮಗುವನ್ನು ಎತ್ತಿಕೊಂಡು ಹೋದ ವ್ಯಕ್ತಿ ಆ ಜನಾಂಗದೊಳಗೆ ಸೇರಿಸಿ ಬಿಟ್ಟನು. ಯಾವ ರಾಜ್ಯದ ರಾಜನ ಮೈಯ ರಕ್ತದ ಮಗುವಿಗೆ ಆ ಜನಾಂಗ ‘ಸಾಂಘ್ವಿ’ ಎಂದು ಕರೆದಿತು. ಈ ಸತ್ಯ ಆ ಜನಾಂಗದ ಜನದ ಒಬ್ಬರಿಗೂ ಗೊತ್ತಿಲ್ಲ. ಅಲ್ಲಿಯೇ ಬೆಳೆದು ಢಮರು ಭಾರಿಸಲು ಆಯ್ಕೆಯಾದನು.


ಹೀಗೆಯೇ ದಿನಗಳು ಕಳೆದವು. ಲೌರಿ ಮತ್ತು ಸಾಂಘ್ವಿಯ ಸಂಬAಧ ಹಾಗೇ ಜರಗಿತ್ತು. ಒಂದಿನ ರಾತ್ರಿ ನೃತ್ಯ ಮಾಡುವಾಗ ಲೀರಾ ಮತ್ತು ಲೌರಿ ಇಬ್ಬರೂ ತಲೆಸುತ್ತಿ ಬಿದ್ದರು.
ಮರುದಿನ ಆ ಜನಾಂಗದ ಬುದ್ಧಿವಂತ ಗುರುವಿನ ಮುಂದೆ ಅವರಿಬ್ಬರನ್ನು ಕೂರಿಸಿದರು. ಅವರುಗಳ ಮನದಲ್ಲಿದ್ದ ಭಾವನೆಯನ್ನು, ಅವರುಗಳು ಮಾಡಿದ್ದು ಮತ್ತು ಮಾಡುತ್ತಿರುವ ತಪ್ಪನ್ನು, ತಮ್ಮ ಜನಾಂಗದ ಮುಂದೆ ಗುರುಗಳು ತಿಳಿಸುವರು. ಆ ಜನಾಂಗದವರಿಗೆ ತೀವ್ರ ಆಘಾತವಾಗುವದು. ಜೊತೆಯಲ್ಲಿದ್ದ ‘ಭೀಲ್’ಳು ಮಾತ್ರ ‘ಅಯ್ಯೋ! ದೇವರೆ’ ಎಂದು ಕಂಬನಿ ಸುರಿಸುವಳು. ಬೀರಾ ಮತ್ತು ಲೌರಿಯನ್ನು ತಮ್ಮ ಜನಾಂಗದಿAದ ಬಹಿಷ್ಕರಿಸಿತು. ಆದರೇ ಅವರಿಬ್ಬರೂ ಗರ್ಭಿಣಿಯಾದ ವಿಷಯ ತಿಳಿದ ಜನಾಂಗ ಅವರ ಮೇಲೆ ಕಿಡಿಕಾರುವರು ಇಬ್ಬರ ಈ ಸ್ಥಿತಿಗೆ ಕಾರಣ ‘ಸಾಂಘ್ವಿ’ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಇವರಿಬ್ಬರು ಸಹ ಹೇಳುವುದಿಲ್ಲ. ಶಿಕ್ಷೆ ತಮ್ಮಿಬ್ಬರಿಗೆ ಸಾಕು’ ಎಂದು ತೀರ್ಮಾನಿಸಿ ತಮ್ಮ ಹೆಣ್ತನ ಹೆಚ್ಚಿಸಿಕೊಳ್ಳುವರು.
‘ನೀನು ರಾಜಕುಮಾರ. ನೀನು ಮಗುವಾಗಿದ್ದಾಗ ನನಗೆ ಈ ಅರಣ್ಯದಲ್ಲಿ ದೊರಕಿದ್ದೆ. ನಾನೇ ನಿನ್ನನು ಈ ನಮ್ಮ ಜನರೊಂದಿಗೆ ಸೇರಿಸಿದ್ದೆ. ಇಲ್ಲವಾದರೇ ನೀನು ಇಂದು ಒಬ್ಬ ಮಹಾರಾಜನಾಗಿ ಮೆರೆಯುತ್ತಿದ್ದೆ’ ಎಂಬ ಸತ್ಯ ಸಂಗತಿಯನ್ನು ಅಂದಿನ ಬಿಲ್ಲುಗಾರ ಇಂದು ವೃದ್ಧನಾಗಿ ನಡೆದ ವಿಷಯವನ್ನು ತಿಳಿಸುವನು. ಸಾಂಘ್ವಿಯು ಒಂದು ಕ್ಷಣ ಸಹ ಅರಣ್ಯದಲ್ಲಿರಲು ಮನಸ್ಸು ಮಾಡುವುದಿಲ್ಲ. ತನ್ನ ಮನೆ, ಅರಮನೆ, ಆಡಳಿತದ ಕಡೆ ಅವನ ಮನಸ್ಸು ಚಿಂತಿಸುತ್ತಿತ್ತು. ತಡಮಾಡದೆ ಆ ವೃದ್ಧನಿಗೆ ಧನ್ಯವಾದ ತಿಳಿಸಿ ಮೆಲ್ಲನೆ ಅರಮನೆ ಕಡೆ ನಡೆಯುವನು. ಲೀರಾ ಮತ್ತು ಲೌರಿ ಇಬ್ಬರೂ ಸೂರ್ಯ ಮುಳುಗುವ ಹೊತ್ತಲ್ಲಿ ತಮ್ಮ ನಿವಾಸ, ಜನಾಂಗಬಿಟ್ಟು ಹೊರಟೆ ಹೋಗುವರು.
ಸಾಂಘ್ವಿ ತಮ್ಮ ಕಾಡು, ಜನಾಂಗ ಬಿಟ್ಟು ಹೋದ ವಿಷಯ ತಿಳಿದ ಜನರೆಲ್ಲಾ ದುಃಖಿತರಾಗುವರು. ಆದರೇ ಲೀರಾ ಮತ್ತು ಲೌರಿಯನ್ನು ಕಳೆದುಕೊಂಡದಕ್ಕಾಗಿ ಬೇಸರವಾದರು. ತಮ್ಮ ಜನಾಂಗದ ಸಂಪ್ರದಾಯ, ಸಂಸ್ಕೃತಿ, ಆಚಾರ, ಶಿಸ್ತು, ಪ್ರಾಮಾಣಿಕತೆ ಮತ್ತು ನಂಬಿಕೆ ಕಾಪಾಡುವದು ಅವರ ಶತಸಿದ್ಧ ತಪಸ್ಸಾಗಿತ್ತು. ಸೂರ್ಯ ಸಂಪೂರ್ಣ ಮುಕ್ತಾಯಗೊಂಡನು. ಕತ್ತಲು ಆವರಿಸಿತು. ಸಮಯಕ್ಕೂ ವ್ಯವಸ್ಥೆಗೂ ಯಾರು ಶಪಿಸದೆ ದಿನಗಳೆದರು. ಮತ್ತೆ ತಮ್ಮ ತಮ್ಮ ಕ್ರಿಯೆಗಳಲ್ಲಿ ತೊಡಗಿಕೊಂಡು ಆನಂದದಿಂದ ಬಾಳಿದರು.

ಅನಿತಾ ಡಿ.ದುಬೈ.ಮಾವಿನಹಳ್ಳಿ ಯಾದಗಿರಿ

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ