Oplus_131072

ಸಂವಿಧಾನ ವಿರೋಧಿ ಪೇಜಾವರಗೆ ಉತ್ತರ.

ಹೃದಯದೊಳಿಪ್ಪ ಬಾಯ್ಭೇಧಿ ದಡಬಡಿಸಿ ತಾನ್
ಈ ಮಣ್ಣ ಶಾಸನದ ಬೇರು ಭದ್ರತೆಗೆ,,,
ವಿಷ ಕಸುವೊಳಿಪ್ಪ ಪರದೇಶಿಯ ನಾಲಗೆಯೊಳ್
ಉಕ್ಕಿ ಹರಿಯುತ್ತಿಹುದು ಜಾತಿ-ವಿಷ ಪ್ರಾಶನಃ,,, ;

ವಿದ್ರೋಹಿ ಆರ್ಯ ಮೂಲತಃ ಮಹಾದಂಡಪಿಂಡ
ಖಚಿತವಲ್ಲದವನ ಹೇಸಿ ಬ್ರಾಹ್ಮಣ್ಯತನವು,,,
ಮೂಲರಾಜರ ವಾಚ್ಯಕ್ಕೆ ಗುಲಾಮನಂತೆ ಶರಣಾಗತಃ
ವಾಚ್ಯ ಸಮಯಾಸಮಯಕ್ಕೆ ದ್ವೇಷಕಿಡಿ ಉರಿಯು___

ಈ ನೆಲದ ಸಂವಿಧಾನ ಸರ್ವರಿಗೂ ಸಮಾನತೆಯ
ಮಾನ-ಪ್ರಾಣ ಗೌರವವಿತ್ತ ಮಹ-ಧಮ್ಮಗ್ರಂಥಃ,,,
ಆರ್ಯನೋರ್ವನ ಮಿಥ್ಯಾಚರಣೆಯ ಮಾನ್ಯತೆಗಾಗಿ
ಇಪ್ಪ ಭೇದ ಮನುಗ್ರಂಥಃ ಬೇಕಾಗಿದೆಯಂತೆ !

ಸುಪ್ತಮನದೊಳಿಹ ಸಪ್ತ ಅಸಮ್ಮತಿ ಭಾವಗಳು
ಸತ್ತ ಹೆಣದೊಡಲೊಳ್ ಮಿಗಿ-ಮಿಗಿ ಹುಳುವಿನಂತೆ,,
ಕೊಳೆತು ನಾರುವ ಧರ್ಮದೊಳಿಹುದೇನು ಮಾನ
ಶ್ರೇಷ್ಠ ತಾನೆಂಬುವನ ಘಾಸಿ ಬೂಸ-ಒಕ್ಕಣೆಯು,,,

ಇದುವೆನ್ನ ದೇಶ, ಎಮ್ಮ ಮೂಲವಾಸಿಗಳೊಡೆತನ
ದೋಷಪೂರಿತ ನಿನ್ನಯೀ ಹೇಳಿಕೆಗಿದುತ್ತರಃ,__
ಭೀಮ ಸಂವಿಧಾನವನೊಪ್ಪಿ ಬಾಳಲಿಚ್ಚಿಸೆ ನೀನಿಲ್ಲಿ
ಬದುಕು ಸಾಗಿಸಲನ್ನದ ಋಣ ನಿನ್ನ ಜೋಳ್ಗೆಗೆ !

ಸಂವಿಧಾನ ದಿನದಂದೆ ಸಂವಿಧಾನ ವಿರೋಧಿಸುವ
ನಿನ್ನ ತುಚ್ಚ-ವ್ಯಾಕ್ಯಕ್ಕೆ ದೇಶ ಮನ್ನಿಸದೆಂದು,,_
ಜಾತಿಯ ಪಂಜು ನೀನುರಿಸುವೆ, ಸಮತೆ ಜ್ಯೋತಿಗೆ
ಬಾಬಾ ಈ ಮಣ್ಣನ್ನೆ ಹಣತೆಯಾಗಿಸಿಹನು.

ಏ.ಅಸುರೇಶ ಭೇರಿ

One thought on “ಸಂವಿಧಾನ ವಿರೋಧಿ ಪೇಜಾವರಗೆ ಉತ್ತರ.”
  1. ಆ ಹೇಳಿಕೆ ನೀಡಿದ ಪೇಜಾವರಗೆ ಮುಟ್ಟುವವರೆಗೂ ಈ ಕವಿತೆ ಹರಡಬೇಕು ಇಂತಹ ಕ್ರಾಂತಿಕಾರಿ ಹೇಳಿಕೆಯ ಕವಿತೆಗಳು ಇನ್ನು ಹೆಚ್ಚು ಹೆಚ್ಚು ಬರಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ