ಶ್ರೀ ತುಳಸಿ ಮಹಿಮೆ.
ಕಾರ್ತಿಕ ಮಾಸದ ಉತ್ಥಾನ ದ್ವಾದಶಿ
ಬಲು ಶ್ರೇಷ್ಠ ಪೂಜೆಯದು ಶ್ರೀತುಳಸಿ
ಭಾರತೀಯರ ಸಂಸ್ಕೃತಿಯ ಪಾಲಿಸಿ
ವಿಷ್ಣು ಪತ್ನಿಯಾದ ಕಥೆಯ ಆಲಿಸಿ
ಋಷಿ ಮುನಿಗಳು ಸಂಶೋಧಕರು
ಗಿಡಮರಗಳ ವೈಶಿಷ್ಟ್ಯ ಅರಿತಿದ್ದರು
ಅಶ್ವತ್ಥ್ ಆಲ ನೆಲ್ಲಿ ತುಳಸಿ ಉಸಿರಿನ
ಹಸಿರು ಸಿರಿಸಂಪತ್ತಿನ ಜೀವಿಗಳೆಂದು
ಗೌರವಾದರದಿ ಕಾಣಲು ಹರಸುವರು
ಪೂಜಿಸಿಬೇಡಿಕೆಗಳ ಈಡೇರುಸುವರು
ತುಳಸಿ ಬಳಸಿ ನಿರೋಗಿಯಾಗಿರಲು
ನೆಲ್ಲಿಕಾಯಿ ಅಮೃತಫಲ ಹೇಳಿದರು
ಬಲು ಅಪಾರ ಶ್ರೀ ತುಳಸಿ ಮಹಿಮೆ
ಪರಿಸರಮಾಲಿನ್ಯ ತಡೆಗಟ್ಟುವ ಗರಿಮೆ
ದೇಹದ ತ್ರಿದೋಷ ನಿವಾರಣೆ ಹಿರಿಮೆ
ತ್ವರಿತ ದುಃಖ ನಿವಾರಕಳಿಗೆ ನಮನ
– ಅನ್ನಪೂರ್ಣ ಸಕ್ರೋಜಿ.ಪುಣೆ