Oplus_131072

ಶುಭ ದೀಪಾವಳಿ.

ಮೂರು ಲೋಕಗಳಲಿ ಬೆಳಗುವ
ಸೂರ್ಯನ ಕಿರಣ
ರಾತ್ರಿಯ ಕತ್ತಲೆಯಲಿ ಮಿನುಗುವ
ನಕ್ಷತ್ರಗೃಳ ತೋರಣ
ನಗುತ ತಂಪನೀಯುತಲಿ ಹೊಳೆವ
ಚಂದ್ರನ ಪಯಣ
ಅನೂಳ ಅಂತರಂಗದಲಿ ಆತ್ಮದ
ಜ್ಯೋತಿ ಕಿರಣ//

ಮನೆ ಮನೆಗಳ ಮುಂದೆ ದೀಪಗಳ
ಸಾಲು ಆಕರ್ಷಕ
ಮನ ಮನಗಳ ಅಂತರಂಗದಾಳದ
ಪ್ರೀತಿ ಮನಮೋಹಕ
ತಮವ ಕಳೆದು ಜ್ಞಾನದೀಪ ಹಚ್ಚುವ
ಬೆಳಕು ಚಿತ್ತಾಕರ್ಷಕ
ಸಮತೆ ಸೌಹಾರ್ದತೆ ಮಾನವತೆಯ
ದೀಪವೇ ದ್ಯೋತಕ//

ಎಲ್ಲೆಲ್ಲೂ ಸಂಭ್ರಮ ಸಂತೋಷಗಳ
ಸುಂದರ ದೀಪಾವಳಿ
ಜಗದಿ ದಿವ್ಯಾತ್ಮಗಳ ಚೈತನ್ಯಶಕ್ತಿಗಳ
ಹೊಳೆವ ಪ್ರಭಾವಳಿ
ಪ್ರೇಮ ಪ್ರೀತಿ ಸ್ನೇಹ ಆತ್ಮೀಯತೆಯ
ವಿನಿಮಯ ಬಳುವಳಿ
ರುಚಿ ರುಚಿ ಸಿಹಿತಿಂಡಿ ಉಂಡಿ ಚೂಡಾ
ಚಕ್ಕುಲಿಗಳ ಹಾವಳಿ//

ಸದ್ಗುಣಸಂಪತ್ತು ವಿದ್ಯಾಬುದ್ಧಿಯಿರಲು
ಚಿಂತೆ ಭಯವೇತಕೆ
ಲಕ್ಷ್ಮಿಶಾರದೆಯರು ಹೃದಯದಲಿರಲು
ಬೇರೆ ಪೂಜೆಯೇತಕೆ
ಜ್ಞಾನದೀಪ ಹೊತ್ತಿಸುವ ಗುರುವಿರಲು
ಅಜ್ಞಾನದ ಭೀತಿಯೇತಕೆ
ದೀಪದಿಂದ ದೀಪ ಹಚ್ಚಿ ಬೆಳಕಿನಾರತಿ
ಮಾಡುವಾ ಬನ್ನಿ//

ಅನ್ನಪೂರ್ಣ ಸಕ್ರೋಜಿ.ಪುಣೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ