ಎಸ್.ಎಸ್.ಎಲ್.ಸಿ, ಪಿಯುಸಿಗೆ ನಡೆಸುವ ವೆಬ್ ಕಾಸ್ಟಿಂಗ್ ಪರೀಕ್ಷೆ ಪದವಿಗೆ ಯಾಕಿಲ್ಲ ?
ಪರೀಕ್ಷೆ ಅಂದಮೇಲೆ ಅದರಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕತೆ ಇಲ್ಲದೆ ಹೋದರೆ ಅದು ಪರೀಕ್ಷೆಯೇ ಎನಿಸುವುದಿಲ್ಲ. ಪದವಿ ಪರಿಕ್ಷಗೆಳಲ್ಲಿ ನಡೆಯುವ ಅಕ್ರಮದ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಗಮನ ಹರಿಸಬೇಕು .
ಮುಖ್ಯವಾಗಿ ಇಂದಿನ ದಿನಮಾನದ BA.B.com.Bsc.ಪದವಿ ಹಂತದ ಪರೀಕ್ಷೆಗಳು ಅಷ್ಟೊಂದು ಪಾರದರ್ಶಕವಾಗಿ ನಡೆಯುತ್ತಿಲ್ಲ.ಪದವಿ ಪರೀಕ್ಷೆಗಳ ಮೌಲ್ಯವನ್ನು ಹಾಳು ಮಾಡುತ್ತಿರುವರು ಯಾರು ? ಎಂಬುದು ಕೂಡ ಇಂದು ಗೌಪ್ಯವಾಗಿ ಉಳಿದಿಲ್ಲ.
ಪರೀಕಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದನ್ನು ತಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕಳೆದ ವರ್ಷ ನಡೆದ ಎಸ್ಎಸ್ಎಲ್ ಸಿ ಪರೀಕಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಯನ್ನು ಅಳವಡಿಸಿ ಯಶಸ್ಸು ಸಾಧಿಸಿದ್ದ ಶಿಕ್ಷಣ ಇಲಾಖೆಯು ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಸಹ ಈ ವೆಬ್ ಕಾಸ್ಟಿಂಗ್ ವ್ಯೆವಸ್ಥೆಯನ್ನು ಅಳವಡಿಸಲು ಕರ್ನಾಟಕ ಸರ್ಕಾರದ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಕೆ ಎಸ್ ಇ ಎ ಬಿ ನಿರ್ಧಿರಿಸಿದೆ.
ಅದೇ ಮಾದರಿಯಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಅಥಾವ ಕಾಲೇಜು ಶಿಕ್ಷಣ ಇಲಾಖೆಯು ಕೂಡ B A, B. com. B C A, Bsc, BSW, B.ed ಪದವಿ ಹಾಗೂ ಎಲ್ಲಾ ರೀತಿಯ ಪರಿಕ್ಷೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಿದರೆ ಅಲ್ಲಿ ನಡೆಯುವ ಪರೀಕ್ಷಾ ಅಕ್ರಮಗಳನ್ನು ನಕಲು ಮಾಡುವುದು ತಡೆಯಬಹುದು.
ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಾಡುವ ಸಾಮೂಹಿಕ ನಕಲಗಳ ಅಕ್ರಮಗಳನ್ನು ತಡೆದು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ವೆಬ್ ಕಾಸ್ಟಿಂಗ್ ನೇರವಾಗುತ್ತದೆ. ಬರಿ ಹತ್ತನೆ ಮತ್ತು ಪಿಯುಸಿ ಮಕ್ಕಳಿಗೆ ಈ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸುವುದು ಇದು ಯಾವ ನ್ಯಾಯ.?
ಪರೀಕ್ಷೆ ಅಂದಮೇಲೆ ಅದರಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕತೆ ಇಲ್ಲದೆ ಹೋದರೆ ಅದು ಪರಿಕ್ಷೆಯೇ ಎನಿಸುವುದಿಲ್ಲ. ಪದವಿ ಪರಿಕ್ಷಗೆಳಲ್ಲಿ ನಡೆಯುವ ಅಕ್ರಮದ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಗಮನ ಹರಿಸಬೇಕು .
ಕಳೆದ ವರ್ಷ SSLC & PUC ಪರೀಕ್ಷೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿದ್ದರ ಫಲವಾಗಿಯೇ ಈಗ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿದೆ.
ವೆಬ್ ಕಾಸ್ಟಿಂಗ್ ಪರೀಕ್ಷಾ ಕೇಂದ್ರಗಳು ಮತ್ತು ಕೊಠಡಿಗಳಲ್ಲಿ ಸಿಸಿಟಿವಿ ಉತ್ಕೃಷ್ಟ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಿದ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಿ. ಅಂತಹ ಕಾಲೇಜುಗಳಿಗೆ ಮಾತ್ರ ಪರೀಕ್ಷಾ ಕೇಂದ್ರ ನೀಡಬೆಕು ಇದರಿಂದಾಗಿ ವಿಶ್ವವಿದ್ಯಾಲಯಕ್ಕೆ ವಾರ್ಷಿಕ ಆರ್ಥಿಕ ಹೊರೆಯೂ ತಪ್ಪುತ್ತದೆ.
ಕುಳಿತಲ್ಲಿಯೇ ಕುಲಸಚಿವರು ಕುಲಪತಿಗಳು ಪರೀಕ್ಷೆಗೆ ಸಂಬಂಧ ಪಟ್ಟ ಅಧಿಕಾರಿಗಳು ನೈಜವಾದ ಸಾಕ್ಷಿ ಸಮೇತ ಪರೀಕ್ಷಾ ಕೇಂದ್ರಗಳ ಅಕ್ರಮವನ್ನು ಪತ್ತೆ ಹಚ್ಚಲು ಸಹಾಯ ಆಗುತ್ತದೆ.ಇದರಿಂದ ಆಕ್ರಮ ಪರೀಕ್ಷಾ ಕೇಂದ್ರಗಳು ಮುಚ್ಚಲು ತುಂಬಾ ಸಹಾಯವಾಗುತ್ತದೆ ಅದಲ್ಲದೆ ವಿಶ್ವವಿದ್ಯಾಲಯಗಳ ಹಾಗೂ ಕಾಲೇಜುಗಳ ಗುಣಮಟ್ಟ ಮತ್ತಷ್ಟು ದ್ವಿಗುಣಗೊಳ್ಳುತ್ತದೆ.
ವಿದ್ಯಾರ್ಥಿಗಳು ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯುತ್ತಾರೆ ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳ ಚಲನ ವಲನ ಮತ್ತು ಅವರಿಗೆ ಕಾಪಿ ನಕಲು ಮಾಡಲು ಸಹಾಯ ಮಾಡುವ ಸಿಬ್ಬಂದಿಗಳ ಅಕ್ರಮಗಳನ್ನು ಕ್ಯಾಮೆರಾ ಮೂಲಕ ವಿಶ್ವವಿದ್ಯಾಲಯವು ಹಾಗೂ ಕಾಲೇಜು ಶಿಕ್ಷಣ ಇಲಾಖೆ, ಉನ್ನತ, ಶಿಕ್ಷಣ ಇಲಾಖೆ ಸಚಿವರು ಬೆಂಗಳೂರಲ್ಲಿಯೇ ಕುಳಿತು ವೀಕ್ಷಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಮೇಲ್ವಿಚಾರಣೆ ಮಾಡುಲು ಅನುಕೂಲವಾಗುತ್ತದೆ.
2025ರ ಮಾರ್ಚ್ ಏಪ್ರಿಲ್ ಅಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಡೆಯಲಿದ್ದು ಪರಿಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಇಲಾಖೆ ಅಳವಡಿಸಿದೆ.
ದ್ವಿತಿಯ ಪಿಯುಸಿ ಪರೀಕ್ಷೆಗಳಿಗಾಗಿ ಸಿಸಿಟಿವಿ ಕ್ಯಾಮರಾ ಹೊಂದಿರುವ ಕಾಲೇಜುಗಳನ್ನು ಗುರುತಿಸಲಾಗುತ್ತದೆ.
ಅದೇ ಮಾದರಿಯಲ್ಲಿ 2024-25 ನೇ ಸಾಲೀನ ಪದವಿ ಪರೀಕ್ಷೆಗಳನ್ನು ವೆಬ್ ಕಾಸ್ಟಿಂಗ್ ಮೂಲಕವೇ ನಡೆಸಿದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮವಾಗಿ ಬುನಾದಿ ಹಾಕಿದಂತಾಗುತ್ತದೆ ಮತ್ತು ಇದರಿಂದ ವಿದ್ಯಾರ್ಥಿಗಳಲ್ಲಿ ಆಲಸ್ಯತನ ಹೊಗಿ ಓದುವ ಅಭೀರುಚಿ ಹೆಚ್ಚುತ್ತದೆ, ಅದಲ್ಲದೆ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯವಾಗುತ್ತದೆ ಮತ್ತು ಪದವಿ ಪರಿಕ್ಷೆ ಗಳಲ್ಲಿ ಈ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲು ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವರು, ಮತ್ತು ಉನ್ನತ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿಗಳು ಆದೇಶ ನೀಡಿ ವಿಶ್ವವಿದ್ಯಾಲಯಗಳಿಗೆ ಖಡಕ್ ಎಚ್ಚರಿಕೆ ಕೊಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲಾ ಪದವಿ ಕಾಲೇಜುಗಳಿಗೆ ಸೂಚಿಸಬೇಕು.
– ಸಿದ್ಧಾರ್ಥ ಟಿ ಮಿತ್ರಾ. ಬೀದರ.