Oplus_131072

ಸ್ವಾಥ೯ ಮತ್ತು ಸಾಧನೆ (ಚಿಂತನೆ)

ಆಧುನಿಕ ಯುಗದಲ್ಲಿ ಸ್ವಾರ್ಥ ಮತ್ತು ಸಾಧನೆ ಎಂಬುದು ಒಂದೇ ನಾಣ್ಯದ ಎರಡು ಮುಖದಂತೆ ಕಂಗೋಳಿಸುತ್ತಿವೆ.

ಇಂದಿನ ಕಂಪ್ಯೂಟರಿಕರಣ ಆಧುನಿಕ ಯುಗದಲ್ಲಿ ಮನುಷ್ಯನ ಸ್ವಾರ್ಥತೆಯು ಗಣನೀಯವಾಗಿ ಬೆಳೆದು ಬಿಟ್ಟಿದೆ. ಆನ್ಲೈನ್ ತರಹ ಎಲ್ಲ ಕಡೆ ಹಬ್ಬಿ ವದಂತಿಗಳು ಸೃಷ್ಟಿಯಾಗುತ್ತಿವೆ.

ಈ ಜಗತ್ತಿನಲ್ಲಿ ಸ್ವಾರ್ಥಗಳು ತುಂಬಿ ಹೋಗಿದ್ದಾರೆ. ಈ ಸ್ವಾರ್ಥಿಗಳ ಮಧ್ಯೆ ನಿಸ್ವಾರ್ಥಿಗಳನು ಹುಡುಕಿದರೂ ಸಾವಿರಕ್ಕೆ ಒಬ್ಬರು ಸಿಗದ ಕಾಲ ನಮ್ಮದಾಗಿದೆ.
ಬರಿ , ಮೋಸ, ವಂಚನೆ, ಕಪಟತನದಿಂದ ತುಂಬಿದ ಜನ.
ಒಳಗೊಂದು, ಹೊರಗೊಂದು, ವಿಚಿತ್ರವಾದ ಮಾತು ಕೇಳಿ ಬೆಸತ್ತು ಹೋಗಿ ಯಾರಿಗೂ ನಂಬಿಕೆ ಇಲ್ಲದಂತಾಹ ಪರಿಸ್ಥಿತಿ ಕಂಡು ಬರುತ್ತಿದೆ.

“ಹರಿಗೋಲು ಇಲ್ಲದ ದೋಣಿ ಯಂತಹ ಬದುಕು”
ನಡೆಸುತ್ತಿರುವ ಕಾಲ ಇದು.
ಬಹು ಮುಖ್ಯವಾಗಿ ಮನುಷ್ಯನಿಗೆ ತನ್ನ ಮೇಲೆ ತನಗೆ ನಂಬಿಕೆ ವಿಶ್ವಾಸ ಇರಬೇಕು . ತದನಂತರ ಒಳ್ಳೆಯ ಮನಸ್ಸು ಕೂಡ ಇರಬೇಕು. ಆಸೆ ಆಕಾಂಕ್ಷೆ, ದುರಾಲೋಚನೆ, ದುರ್ಬದ್ಧಿ ಮೊದಲು ಇರಬಾರದು. ಈ ಪ್ರಪಂಚವೇ ಸ್ವಾರ್ಥಿಗಳ ಸಾಗರದಲ್ಲಿ ಮುಳುಗಿ ತೇಲಾಡುತ್ತಿದೆ.
ಯಾರು ಸ್ವಾರ್ಥರಲ್ಲ ಎಂದು ಹೇಳಲು ಬಹು ಸೋಜಿಗದ ಸಂಗತಿ ಎದುರಾಗಿದೆ.

ಸ್ವಾರ್ಥ’ ಎಂದರೆ ಹೇಗೆ ಇರಬೇಕು ಗೊತ್ತಾ ? ನಿಮ್ಮ ನೋವು, ನಿಮ್ಮ ಕಾಯಿಲೆ, ನಿಮ್ಮ ಕಾಯಕ ,ನಿಮ್ಮ ಮನಸ್ಸಿಗೆ ನೀವು ಮಾತ್ರ ಸ್ವಾರ್ಥರಾಗಿ ಇದ್ದರೆ ಅದು ನಿಜವಾದ ಸ್ವಾರ್ಥತೆ ಎನಿಸುವುದು.

ಪರರ ಹಿತ ಸಂತೋಷಕ್ಕೆ ಅಡ್ಡಿಯಾಗಿ ಮತ್ತೊಬ್ಬರ ಆಸೆ, ಕನಸು ,ಪ್ರೀತಿ ಸಾಧನೆ ಕಂಡು ಮನದೊಳಗೆ ಆಸೆಪಟ್ಟು ಕಸೆದುಕೊಳ್ಳುವ ಆಲೋಚನೆ ಕೂಡ ಸ್ವಾರ್ಥ.

ಈ ಭೂಮಿ ಮೇಲೆ ಅತಿ ಕ್ರೂರವಾದ ವ್ಯಕ್ತಿ ಅಂದರೆ ‘ಸ್ವಾರ್ಥಿಗಳು’ ಪ್ರಕೃತಿ ವಿಕೋಪದಾಚೆ ಇದ್ದರು ನಮ್ಮ ಸ್ವಾರ್ಥಕ್ಕೆ ಜಗತ್ತು ಮುಳುಗಿದರು ಚಿಂತೆ ಇಲ್ಲ. ಯಾರ ಜೀವ ಹೋದರು ಚಿಂತೆ ಇಲ್ಲ .ನಾನೊಬ್ಬ ಖುಷಿಯಾಗಿದ್ದು, ಮಜಾ ಮಾಡಿದರೆ ಸಾಕು ಎನ್ನುವ ಮನಸ್ಥಿತಿ ನೂರಕ್ಕೆ ನೂರರಷ್ಟು ಜನ ಇದ್ದಾರೆ.

“ಹಾಳು ಬಾವಿ ಅಂತ ಹಗಲೇ ನೌಕಿ ಮಜಾ ಮಾಡುವ ಈ ಕಾಲ.” ಎದುರೇ ಇದ್ದರೂ ಏನು ಮಾಡಲು ಆಗದ ನಿಸ್ವಾರ್ಥಿಗಳ ಭವಿಷ್ಯ ಆ ದೇವನಿಗೆ ಮಾತ್ರ ಗೊತ್ತು.

ನಿಸ್ವಾರ್ಥಿಗಳಾಗಲು ಏನು ಮಾಡ್ತಾರೆ ? ಅವರೇನು ದೇವರಾ ? ಅವರಿಗೆ ಆಸೆ ಇರಲ್ಲವಾ ? ಬರೀ, ಸ್ವಾರ್ಥಿಗಳಿಗೆ ಎಂದು ಬೆರಳು ಮಾಡಿ ತೋರಿಸುತ್ತಿರಿ” ಅಂತ ಕೇಳಬಹುದು.

ಹೌದು !
ಅವರಲ್ಲಿ ನಿಮ್ಮಂಥ ಭಾವನೆ ಇರಲ್ಲ. ಮನಸ್ಸಿನೊಳಗೆ ಯಾವ ಕಲ್ಮಶವಿರದೆ ಯಾರ ವಸ್ತುವಿಗೂ ಆಸೆ ಪಡದೆ ಇರುವುದರಲ್ಲಿ ತೃಪ್ತಿ ಪಡುತ್ತಾ, ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಾ , ಪರಶಿವನಲ್ಲಿ ಪರರಿಗಾಗಿ ಒಳಿತು ಮಾಡುವ ಅವರ ಕಷ್ಟ ನೋಡಲಾರೆ ” ಎಂದು ಬೇಡಿಕೊಳ್ಳುತ್ತಾ ಇರುವವರು ಜೊತೆಗೆ ಹಣ, ಆಸ್ತಿ ,ಒಡವೆ ಅಂತ ಆಸೆ ಪಡೆದವರು ಧಾನ ಧರ್ಮ ಇರುವದರಲ್ಲಿ ಹಂಚಿ ತಿನ್ನುವ ಭಾವನೆ.
ಬೇರೆಯವರಿಗೆ ಒಳಿತಾದರೆ ತಮಗೆ ಒಳಿತು ಆದಂತೆ ಖುಷಿ ಪಡುವ ಸಂಭ್ರಮ ಇಷ್ಟು ಹೊಂದಿರುತ್ತಾರೆ.

ಇವುಗಳಲ್ಲಿ ಒಂದು ನಮ್ಮೊಳಗೆ ಇರಲು ಸಾಧ್ಯವಿಲ್ಲ . ಇದ್ದರೂ ಆತನ ಬಗ್ಗೆ ಗೆಲಿ ಮಾಡಿ ನಗುವರು . ಸ್ವಾರ್ಥ ಬುದ್ಧಿಗಳು ಮಹದೇವ ಕೊಟ್ಟ ಭಿಕ್ಷೆ, ಈ ಜೀವನ ಇದಕ್ಕೆ ಬೆಲೆ ಇಲ್ಲ. ಇರುವ ತನಕ ಮಾತ್ರ ಹೋದ ಮೇಲೆ ‘ಎಲ್ಲಾ ಮಾಯೆ ‘ ಎಂದು ತಿಳಿದರು.

ಅರಿವು ಅಳಿಯದಂತೆ ಇದ್ದರೂ ಅರಿವು ಸಾಗರದಂತೆ ಸೇರುವುದು ಸ್ವಾರ್ಥದಲ್ಲಿ ಎಂದರೆ ತಪ್ಪಿಲ್ಲ.
ಕನಸು ಚಿಗುರೊಡೆದು ಹೂವಾಗಲು ಬಿಡಿ. ಹರಿದು ಹಾಕಿ ನನ್ನದು ಎನ್ನಬೇಡಿ ಮನಸ್ಸು ಶಾಂತವಾಗಿರಲು ಬಿಡಿ. ನೂರಾಸೆ ಹಚ್ಚಿ ತಿರುಗಾಡಿಸಬೇಡಿ. ಇದರಿಂದ ಲಾಭ ನಷ್ಟವಿಲ್ಲ. ಆದರೆ ಮಾನವೀಯತೆ ಮನುಷ್ಯನ ಧರ್ಮ ಇದೆಯಲ್ಲ ಭೂಮಿಗೆ ಬಂದಿರುವುದೇ ಒಮ್ಮೆ ಏನಾದರೂ ಬಿಟ್ಟು ಹೋಗೋಣ. ಎಲ್ಲಾ ಹೊತ್ತಿಕೊಂಡು ಹೋಗಬೇಡಿ.

ಯುವ ಪೀಳಿಗೆಗೆ ಕನಸು ಬಹು ಚಿಕ್ಕದು ಅದರಲ್ಲಿ ಈ ಹುಳಿ ಹಾಕಿ ಹೋಗಬೇಡಿ. ಆಚಾರ ಹೇಳುವ ನಾಲಿಗೆ ಅಜ್ಞಾನಿಯಾಗಿದೆ . ವಿಚಾರ ಮಂಡಿಸುವ ಬುದ್ಧಿ ಕಳೆದು ಹೋಗಿದೆ. ಹುಡುಕಲು ಸಾಧ್ಯವಿಲ್ಲ. ಪ್ರಯತ್ನಕ್ಕಿಂತ ಫಲ ದೊಡ್ಡದಿಲ್ಲ. ಒಮ್ಮೆ ಯೋಚಿಸಿ ನೋಡಿ. ಕಲಿಯುಗದ ಕಾಮಧೇನು ಪ್ರಭುಗಳೇ !
ನಮ್ಮಲ್ಲಿ ಹುಟ್ಟಿರುವ ಒಂದು ಜಿಗುಪ್ಸೆ ಇದನ್ನು ತೊರೆದು ಆಚೆ ಬನ್ನಿ.

ಹಣ ಆಸ್ತಿ ನೀಡದ ಖುಷಿ ಸಂತೋಷ ನಿಸ್ವಾರ್ಥ ಬದುಕು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

ಸಾಧನೆ ಒಂದೇ ಛಲ ಗುರಿ ಆದರೆ ಸಾಧಿಸುವ ಕಲೆ ನಿಯಮ ಬಹು ಆಯಾಮ ಹೊಂದಿದೆ. ಹೇಗಂದರೆ ಒಬ್ಬ ಮನುಷ್ಯ ಸಾಧಿಸಬಹುದು ತನ್ನ ಸ್ವಾರ್ಥಕ್ಕಾಗಿ ಜಯಿಸಬಲ್ಲ ಊಹಿಸಬಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಸಾವಿರ ದಾಚೆ ಕನಸು ಕಂಡು ಮೆಟ್ಟಿಲುಗಳ ತರಹ ಒಂದೊಂದಾಗಿ ಏರಿ ಬಂದು ಸಾಧಿಸಿದರೆ ಸಾಧನೆ ಅಥವಾ ಯಾರನ್ನು ನೋಯಿಸದೆ ಗೆಲ್ಲುವ ಹಠ ಬಿಟ್ಟು ನಾಲ್ಕು ಜನರ ಹಿತಕ್ಕೆ ಮೀಸಲಾಗಿದ್ದು ‘ಕಾಯಕವೇ ಕೈಲಾಸ’ ಎಂದು ತಿಳಿದು ಗುರಿ ಮುಟ್ಟುವ ಛಲ ಬಿಟ್ಟು ನನ್ನ ಧರ್ಮ ನಾನು ಮಾಡುವ ಜೀವನ ನಾಲ್ಕು ಜನ ಬದುಕಲಿ . ಎಂದು ಯಾರೂ ಬರುತ್ತಾರೆ ಅವರೇ ನಿಜವಾದ ಸಾಧಕರು, ಮೇರು ಪ್ರತಿಭಾವಂತರು ಎನ್ನುವುದು.

ಉದಾಹರಣೆ :- ಬಸವಣ್ಣ ,ಮೋಳಿಗೆ ಮಾರಯ್ಯ ,ಕಲಾಕಾರರು ,ದಾಸರು ಸಂತರು ಇತ್ಯಾದಿ.

ತನಗಾಗಿ ಅಲ್ಲ ಸಮಾಜದ ದೃಷ್ಟಿಯಿಂದ ಕಾಯಕ ಮಾಡುವರು ಸಾಧಕರು. ಬಹು ದೊಡ್ಡ ಹುದ್ದೆ, ಹಣ, ಅಧಿಕಾರ, ಸ್ವಾವಲಂಬನೆ, ಸ್ವಾರ್ಥ ನಾನೇ ಎಂಬ ಅಹಂ’ ದಿಂದ ಅಧಿಕಾರದ ಕುರ್ಚಿಯಲ್ಲಿ ಕುಳಿತು ನಾ ಸಾಧನೆ ಮಾಡಿರುವೆ ಎಂದರೆ ತಪ್ಪು.

ನಮ್ಮಿಂದ ಸಾಧನೆ ಸಾಧ್ಯ . ಜನರೇ ಈತ ಸಾಧಿಸುವ ವ್ಯಕ್ತಿ ಸಾಧಕ ಎಂದು ಹೇಳುವರು. ಅವರ ಸಾಧನೆ ಮಾತ್ರ ದೊಡ್ಡದು ಮತ್ತೊಬ್ಬರು ಗುರುತಿಸಿ ಸಾಧನೆ ಶಿಖರ ಹತ್ತಿಸಬೇಕೆ ವಿನಹ: ನಾನು ಸಾಧಿಸಿದೆ ಎಂಬ ಗವ೯ ಬೇಡ.

ಕೈಕಟ್ಟಿ ಹಾಕಬೇಡಿ .ಮನಸ್ಸು ಮುಟ್ಟಿ ನೋಡಿ .ಕಲಿಯುಗದಲ್ಲಿ ಕಣ್ಣು ತೆರೆದು ನೋಡಿದರೂ ಸಾಧನೆ ಕಾಣುತ್ತಿಲ್ಲ. ಸಾಧನೆ ಹೆಸರಲ್ಲಿ ಸ್ವಾರ್ಥ ತುಂಬಿ ತುಳುಕುತ್ತಿದೆ. ಸಾಧನೆ ನಿಸ್ವಾರ್ಥದಿಂದ ಸೇವೆ ಮಾಡುವುದು.

ಬಡವ ಬಲಿಪಶು ಆದಂತೆ ಆಗಿದೆ. ಸ್ವಾರ್ಥ ಮತ್ತು ಸಾಧನೆ ಕಲಿಯುಗದಲ್ಲಿ ಕಲ್ಲು ಹತ್ತು ಬೆಟ್ಟಕ್ಕೆ ಇಟ್ಟರೆ ಆಗುತ್ತದೆ .ಹಾಗೆ ಒಂದು ಬಿಟ್ಟು ಒಂದಿಲ್ಲ. ಸದ್ಯದ ಸಮಾಜದಲ್ಲಿ ಇವರದೇ ಹಾವಳಿ ಹೋಬಳಿಯ ತನಕ ಇವರದೇ ದರ್ಬಾರು ಒಳ್ಳೆಯವರ ಕಾಲವಲ್ಲ ಸ್ವಾರ್ಥಿಗಳ ಕಾಲ ಇದಾಗಿದೆ.

ಕವಿತಾ ಎಂ ಮಾಲಿ ಪಾಟೀಲ.ಜೇವರ್ಗಿ

ಕವಯತ್ರಿ ಪರಿಚಯ:

ಕವಿತಾ ಎಮ್.ಮಾಲಿ ಪಾಟೀಲ್.

ಕವಯತ್ರಿ ಕವಿತಾ ಎಮ್. ಮಾಲಿ ಪಾಟೀಲ ರವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದವರು.
ಇವರು ಡಿ.ಇಡಿ, ಬಿ.ಎ.ಪದವೀಧರರು ಮತ್ತು ಎಂ.ಎ ಸಾತ್ನಕೋತ್ತರ ವಿದ್ಯಾರ್ಥಿನಿಯಾಗಿದ್ದು, ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿ ಕಾಯ೯ ನಿರ್ವಹಿಸುತ್ತಿದ್ದಾರೆ.

ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು ಕತೆ ಕವನ ಲೇಖನ ಮೊದಲಾದ ತರಹದ ಬರಹಗಳು ಬರೆದಿದ್ದಾರೆ. ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇವರಿಗೆ *ಉತ್ತಮ ಶಿಕ್ಷಕಿ* ಮತ್ತು *ಆದಶ೯ ಶಿಕ್ಷಕಿ* ಎಂಬ ಪ್ರಶಸ್ತಿಯು ಕೂಡ ಪಡೆದಿದ್ದಾರೆ.
ಇವರ ಬರಹಗಳು ರಾಷ್ಟ್ರೀಯ, ಅಂತರಾಷ್ಟ್ರೀಯ, ಮಟ್ಟದಲ್ಲಿ ಕೂಡ ಪ್ರಕಟವಾಗಿವೆ. ಹಾಗೂ ಆನ್ಲೈನ್ ನಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳಲ್ಲಿ ಇವರಿಗೆ 500ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಅಷ್ಟೇಯಲ್ಲದೆ ಇವರು ನಾಡಿನ
ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯದಲ್ಲಿಯೇ ಇವರ ಸಾಹಿತ್ಯವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಲಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ