Oplus_131072

ಸ್ವಯಂ ಉದ್ಯೋಗಕ್ಕೊಂದು ಆಧಾರ ಟೈಲರಿಂಗ ತರಬೇತಿ.

ಇಂದಿನ ದಿನ ಮಾನಗಳಲ್ಲಿ ಕೌಟುಂಬಿಕ ಸುಖ ಜೀವನ ಸಾಗಿಸಬೇಕಾದರೆ ಗಂಡ -ಹೆಂಡತಿ ಇಬ್ಬರು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಒಂದು ಕಾಲದಲ್ಲಿ ಮಹಿಳೆಗೆ ಗೃಹಿಣಿ ಮನೆಯಲ್ಲಿ- ಗೆಲಸ ಮಾಡಿಕೊಂಡಿದ್ದರೆ ಸಾಕು. ಗಂಡ ಹೊರಗೆ ಹೋಗಿ ದುಡಿದುಕೊಂಡು ಬರುವಂತಹ ವಾತಾವರಣವಿತ್ತು. ಆದರೆ ಈಗ ಹಾಗಿಲ್ಲ. ಕಂಪ್ಯೂಟರಿಕರಣದ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಕಂಡು ಹಿಡಿಯಲಾಯಿತು. ಮತ್ತೆ ಪ್ರಪಂಚವು ಈ ಆಧುನಿಕತೆಯಿಂದ ಶೀಘ್ರವಾಗಿ ಬೆಳವಣಿಗೆಯಾಗುತ್ತಿದೆ ಆದ್ದರಿಂದ ಜನಸಂಖ್ಯೆಯು ಜಾಸ್ತಿಯಾಗಿ ಎಲ್ಲರ ಆಹಾರ ವಸತಿ ಮತ್ತು ಮೂಲಭೂತ ಸೌಕರ್ಯಗಳ ಬೆಲೆಯು ಹೆಚ್ಚಾಗಿ ಜನರ ಜೀವನ ಕ್ರಮದ ಸುಸ್ಥಿತಿ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಮಂದಿ ಎಲ್ಲರೂ ಸೇರಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯೂ ಇದೆ. ಮತ್ತೆ ಅಷ್ಟು ಬೇಗ ನಾವು ಎಲ್ಲರಂತೆ ಸುಖದಿಂದ ಇರಬಹುದು ಎನ್ನುವ ಭಾವನೆ ಎಲ್ಲರಲ್ಲೂ ಮೂಡುತ್ತಿದೆ. ಇನ್ನು ಗಂಡಸರು – ಹೆಂಗಸರು ಎಲ್ಲರೂ ಈಗಿನ ಕಾಲದಲ್ಲಿ ಸ್ಪಲ್ಪ ಮಟ್ಟಿಗೆ ಓದಿದವರು ಇದ್ದಾರೆ.ಅದರಂತೆ ಡಾಕ್ಟರ್.ಇಂಜೀನಿಯರ್ ಆಗುವವರು ಏನು ಕಡಿಮೆಯಿಲ್ಲ.

ಸ್ವಯಂ ಉದ್ಯೋಗಕ್ಕೆ ಟೈಲರಿಂಗ ಕರಕುಶಲ ಕಲೆಗಾರಿಕೆ:

 ಹೆಣ್ಣು ಮಕ್ಕಳು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಓದಿದವರು ತಮ್ಮ ಪಾಡಿಗೆ ತಾವು ತಮಗೆ ತಿಳಿದಿರುವಂತೆ ಕರಕುಶಲ ಕಲೆಯನ್ನು ಕರಗಿಸಿ ಮನೆಯಿಂದ ಹೊರಗುಳಿಯಲು ಹೋಗಿ ಸ್ವಾಭಿಮಾನದಿಂದ ಬದುಕುವುದನ್ನು ಕಲಿತಿದ್ದಾರೆ. ಮತ್ತು ಅವರು ಸ್ವಯಂ ಉದ್ಯೋಗಕ್ಕಾಗಿ ಟೈಲರಿಂಗ ತರಬೇತಿ ಪಡೆದು ಬದುಕಿನ ಉಪಜೀವನಕ್ಕಾಗಿ ಟೈಲರಿಂಗ್ ವೃತ್ತಿಯು ತುಂಬ ಸಹಾಯಕವಾಗಿದೆ. ಅಷ್ಟೇ ಅಲ್ಲದೆ ಬ್ಯಾಗ್ ತಯಾರಿಸುವುದು. ಬ್ಯುಟಿಪಾಲರ್. ಉಲನ್ ಕ್ರಾಫ್ಟ್. ಹಪ್ಪಳ ಸಂಡಿಗೆ ಉಪ್ಪಿನಕಾಯಿ ಮಾಡುವ ವೃತ್ತಿ.ಹಾಗೆ ಕಾರ್ಖಾನೆಗಳಿಗೆ ಅಡಿಗೆ ಮಾಡಿ ಟಿಫಿನ್ ಕ್ಯಾರಿಯರ್ ಕಳುಹಿಸಿ ಕೊಡುವುದು.ಬೆಳಗಿನ ತಿಂಡಿ ತಿನಿಸುಗಳನ್ನು ಮಾಡಿ ಹಾಗೆ ಊಟ ರೆಡಿ ಮಾಡಿಕೊಂಡ ಹೋಟೆಲ್ ಬಿಜಿನೆಸ್.ಚಿಕ್ಕ ಚಿಕ್ಕ ಮಕ್ಕಳಿಗಾಗಿ ನರ್ಸರಿ. ಪ್ಲೇ ಹೋಮ್ ಹೀಗೆ ಇನ್ನೂ ಅನೇಕ ವೃತ್ತಿಪರ ಕೋರ್ಸ್‌ಗಳನ್ನು ಮಾಡಿಕೊಂಡು ಬದುಕಬಹುದು.

ಟೈಲರಿಂಗ ಅನ್ನೋದು ಒಂದು ಉತ್ತಮ ವೃತ್ತಿಯಾಗಿದೆ:

ಈ ಟೈಲರಿಂಗ್ ವೃತ್ತಿಯು ಬಹಳಷ್ಟು ಹೆಣ್ಣುಮಕ್ಕಳಿಗೆ ತುಂಬ ಸಹಾಯ ಮಾಡಿದೆ.ಅದು ಅಂದರೆ ಈಗ ಎಲ್ಲಾ ಹೊಲಿಗೆ ತರಬೇತಿಯನ್ನು ಕೆಲವು ಸಂಸ್ಥೆಗಳು ಸರ್ಕಾರದ ಅನುಮತಿಯನ್ನು ಪಡೆಯುತ್ತಿವೆ.ಹಾಗೆ ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಎಲ್ಲರಿಗೂ ತರಬೇತಿಯ ಪ್ರಮಾಣವಿದೆ. ಕಲೆತವರು ಮನೆಯಲ್ಲಿ ಟೈಲರಿಂಗ್ ಮಿಷನ್ ಇದ್ದರೆ.ಬಟ್ಟೆಯನ್ನು ಹೊಲಿಯುವ ಕೆಲಸ ಕರಗತ ಮಾಡಿಕೊಂಡು ಬದುಕಲು ಇದು ಉಪಜೀವನಕ್ಕೆ ದಾರಿ ದೀಪವಾಗಿದೆ.
ಒಂದು ಪಕ್ಷದಲ್ಲಿ ಮಿಷನ್ ಇಲ್ಲದಿದ್ದರೆ ಈ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿದರೆ.ಅವರು ಮಿಷನ್ ಕೊಡುತ್ತಾರೆ.ಹಾಗೆ ಅವರು ಅದನ್ನು ವ್ಯಾಪಾರದ ಮಳಿಗೆಯನ್ನು ಮಾಡುತ್ತಾರೆ.ಸರ್ಕಾರ ಕೊಡುವ ಉದ್ಯೋಗಿ ಯೋಜನೆಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಬಹುದು.

ಅದರಲ್ಲಿ ಶೇ.30ರಷ್ಟು ಹಣ ಸಬ್ಸಿಡಿ ಪಡೆದುಕೊಳ್ಳಿ. ಈ ಸಬ್ಸಿಡಿ ಹಣ ವಾಪಾಸು ಕಟ್ಟುವ ಆವಶ್ಯಕತೆ ಇರುವುದಿಲ್ಲ.
ಇನ್ನು ಉಳಿದ ಹಣಕ್ಕೆ ಶೇ.4 ರ ಬಡ್ಡಿದರದಲ್ಲಿ ಸಾಲ ಮರುಪಾವತಿ ಮಾಡಿಲ್ಲ. ಮತ್ತೂಂದು ಉಪಯೋಗ ಏನಂದ್ರೆ ಈ ಟೈಲರಿಂಗ್ ತರಬೇತಿ ಶಿಬಿರದಲ್ಲಿ ಪ್ರಮಾಣ ಪತ್ರ ಇದ್ದರೆ ಅವರಿಗೆ ಪ್ರತ್ಯೇಕವಾಗಿ ಮನೆಯಲ್ಲಿ ಟೈಲರಿಂಗ್ ತರಬೇತಿ ನೀಡಬಹುದು.ಮತ್ತೆ ದೊಡ್ಡ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಬಹುದು.ಅದರಲ್ಲಿ ಒಂದು ಒಳ್ಳೆ ಸಂಬಳದ ಮೂಲಕ ಜೀವನ ಸಾಗಿಸಬಹುದು.ಇದರಲ್ಲಿ ಸ್ಪಲ್ಪದಿಂದ ಚುರುಕು ಬುದ್ಧಿ ಬಲದಿಂದ ಹೊಸ ಬಟ್ಟೆ ವಿನ್ಯಾಸ ಮಾಡಿ ಈ ಯೂಟ್ಯೂಬ್ ಚಾನೆಲ್ ಅಥವಾ ಪೇಸ್ ಬುಕ್ ಪೇಜ್ ನಲ್ಲಿ ಇನ್ನು ಹಲವು ಜನಪ್ರಿಯ ಆಫ್ ಗಳ ವಾಟ್ಸಪ್ ನಲ್ಲಿ ವಿಡಿಯೋ ಹಾಕಿದರೆ.ಅವರಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ . ಅದರಿಂದ ತುಂಬಾ ಉಪಯೋಗವಿದೆ . ಮತ್ತೆ ಈ ಧಾರಾವಾಹಿ ರಿಯಲಿಟಿ ಶೋ ಹಾಗೆ ಸಿನಿಮಾದ ಕಿರು ತೆರೆ ಹಾಗೆ ಹಿರಿ ತೆರೆಯ ನಟ ನಟಿಯರಿಗೆ ಅವಕಾಶ ಸಿಕ್ಕರೆ ವಸ್ತ್ರ ವಿನ್ಯಾಸ ಮಾಡಿ ಹಣ ಗಳಿಸಬಹುದು.
ಒಟ್ಟಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಅದಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ.

ಅನಾನುಕೂಲತೆ:

ಈ ಟೈಲರಿಂಗ್ ವೃತ್ತಿಯಿಂದ ಲಾಭವಿದೆ ಅದರ ಕೆಲವು ವಿಚಿತ್ರಗಳು ಚಿಕ್ಕ ವಯಸ್ಸಿನಲ್ಲೇ ನಾವು ಬಟ್ಟೆ ಹೊಲಿಯುವುದರಿಂದ ಈ ನಲವತ್ತಾರು ವಯಸ್ಸು ದಾಟಿದ ನಂತರ ಸಾಮಾನ್ಯವಾಗಿ ಕೈ.ಕಾಲು .

ಬೆನ್ನು ನೋವು ಬರುತ್ತದೆ.ಮತ್ತೆ ಈ ಸೂಜಿ ದಾರವನ್ನು ಪದೇ ಪದೇ ಪೂಣಿಸುತ್ತಿದ್ದರಿಂದ ಕಣ್ಣಿನ ಸಮಸ್ಯೆ ಬರಬಹುದು.ಇತ್ತಿಚಿನ ದಿನಗಳಲ್ಲಿ ಈ ಮಿಷನ್ ಕಾಲಿನಿಂದ ತುಳಿಯುವುದರಿಂದ ಕೆಲವೂಬ್ಬರಿಗೆ ಮೂಳೆ ಸವಕಳಿ ಆಗುವ ಸಾಧ್ಯತೆ ಇದೆ. ಆಮೇಲೆ ನೆಲದ ಮೇಲೆ ಕುಳಿತುಕೊಳ್ಳುವವರಿಗೆ ತೊಂದರೆಯಾಗುತ್ತದೆ.ಕೆಲವರಿಗೆ ಈ ತುಂಬಾ ಕುಳಿತು ಹೊಲೆಯುವುದರಿಂದ ಪಲ್ಯ ಆಗುತ್ತದೆ.ಕೆಲವರಿಗೆ ರಕ್ತ ಪರಿಚಲನೆ ಕಡಿಮೆ ಆಗುವುದು ರಾತ್ರಿ ನಿದ್ದೆ ಕೆಟ್ಟರೆ ಹೊಲೆಯ ಕೆಲಸ ಮಾಡಿದರೆ ಆಗಾಗ ಆಗುವುದು.ಆಮೇಲೆ ಕೆಲಸದಲ್ಲಿ ಊಟ ಮಾಡುವುದನ್ನು ಬಿಟ್ಟು ಜಾಸ್ತಿ ಕೆಲಸ ಮಾಡಿದರೆ ಆಗುವುದು ಈ ಆರೋಗ್ಯ. ಸಮಸ್ಯೆ ಶುರುವಾಗುತ್ತದೆ.

ಪರಿಹಾರ :

ಈ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ.ಬಟ್ಟೆಯಿರಿ ಅದು ತಪ್ಪಾದರೂ ದುಡ್ಡಿನ ಆಸೆಗೆ ಬಿದ್ದು ಆದರ ಮಿತಿಯನ್ನು ದಾಟುತ್ತದೆ.

ನಮಗೆ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿದರೆ ತೃಪ್ತಿಯ ಜೀವನವನ್ನು ನಡೆಸಬಹುದು. ಅದೇ ಒಳ್ಳೆಯ ರೀತಿಯ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು. ನೀರನ್ನು ಜಾಸ್ತಿ ಕುಡಿಯಬೇಕು. ಹಣ್ಣು.ತರಕಾರಿ ಕಾಳುಗಳನ್ನು ಸೇವಿಸುವುದರಿಂದ ಈ ಮೂಳೆ ಸವಕಳಿ ತಡೆಯಬಹುದು .ಆಗ ಬಟ್ಟೆ ಹೊಲಿಯುವ ಕೆಲಸವನ್ನು ಸುಲಭವಾಗಿ ಮಾಡಬಹುದು.
ಒಟ್ಟಿನಲ್ಲಿ ಈ ಟೈಲರಿಂಗ್ ವೃತ್ತಿಯು ಮಹಿಳೆಯರಿಗಾಗಲಿ ಪುರುಷರಿಗಾಗಲಿ ತುಂಬಾ ಉಪಯುಕ್ತವಾದ ವೃತ್ತಿಯಾಗಿದೆ.

ಸ್ವಾಭಿಮಾನದ ಬದುಕು :

ಹಾಗೆ ಇನ್ನು ಹಲವು ವೃತ್ತಿಗಳಲ್ಲಿ ಬ್ಯಾಗ್ ತಯಾರಿಸುವುದು. ಬ್ಯೂಟಿ ಪಾರ್ಲರ್.ಉಲನ್ ಕ್ರಾಫ್ಟ್.ಹಪ್ಪಳ ಸಂಡಿಗೆ. ಉಪ್ಪಿನಕಾಯಿ ಮಾಡುವ ವೃತ್ತಿ ಮತ್ತು ಕಾರ್ಖಾನೆಗಳಿಗೆ ಟಿಫಿನ್.ಟೀ.ಹಾಗೆ ಅಡಿಗೆ ಮಾಡಿ ಕ್ಯಾರಿಯರ್ ಕಳುಹಿಸಿ ಕೊಡುವುದು ಒಳ್ಳೆಯ ಕೆಲಸವಾಗಿದೆ.ಮತ್ತೆ ಹೋಟೆಲ್ ಬಿಜಿನೆಸ್. ಚಿಕ್ಕ ಚಿಕ್ಕ ಮಕ್ಕಳಿಗಾಗಿ ನರ್ಸರಿ.ಪ್ಲೇ ಹೋಮ್ ಹೀಗೆ ಹಲವು ವೃತ್ತಿಪರ ಕೋರ್ಸ್‌ಗಳು ಇವೆ.ಅದರಲ್ಲಿ ಕಾರ್ಯ ಜಾಣ್ಮೆಯಿಂದ ನಿಭಾಯಿಸುವ ವೈಖರಿಯನ್ನು ಕಲಿಯಬೇಕು.ಹಾಗೆ ಒಬ್ಬರ ಕೈಯಲ್ಲಿ ಕೆಲಸ ಮಾಡುವ ಮೂಲಕ ಸ್ವಾಭಿಮಾನದಿಂದ ಬದುಕುವುದು ತುಂಬಾ ಉಪಯುಕ್ತವಾದ ಕೆಲಸ ಎಂದು ಹೇಳಿದರು.

– ರಾಧಾ ಹನುಮಂತಪ್ಪ ಟಿ ಹರಿಹರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ