ತಂಗಾಳಿ
ತಂಗಾಳಿ ಮೈಗೆ ಸೊಂಕಿದಾಗ ತಾನೇ
ಮನಕ್ಕೆ ಮುದ ನೀಡಿದಂತೆ ತಾನೇ
ಪಿಸು ಮಾತು ಸವಿ ಜೇನಿನಂತೆ ಈಗ
ತುಸು ಗಾಳಿ ಸವಿಯದೇನು ಆಗ
ಮೆಲ್ಲನೆ ಬಂದು ಅಪ್ಪಳಿಸಿ ನೀನು
ಭಾವನೆಗಳ ಅಲೆಯಲ್ಲಿ ತೇಲಿ ನಾನು
ಎಂತ ಚಂದ ನಿನ್ನ ತಂಪುಗಾಳಿ
ಕಳೆದು ಹೋದೇ ನಾನು ಈ ಗಾಳಿ
ಮೈ ರೋಮಾಂಚನ ನೀನು ಅಪ್ಪಿದಾಗ
ಮತ್ತೆ ಮತ್ತೆ ಬೇಕು ನೀನು ನನಗೆ ಆಗ
ಹೊಸ ವರ್ಷದ ಹೊಸ ಅನುಭವ
ಹೃದಯ ತುಂಬಿ ಬಂದ ಕಲರವ
– ಕವಿತಾ ಎಮ್ ಮಾಲಿ ಪಾಟೀಲ. ಜೇವರ್ಗಿ