Oplus_131072

ತಾತ ನಗುತ್ತಿದ್ದಾನೆ

ಕಛೇರಿಗಳಲ್ಲಿ ಸತ್ಯ ಕ್ಕೆ ಮೊಳೆಹೊಡೆದು ಗೋಡೆಗೆ ನೇತು ಹಾಕಲಾಗಿದೆ/

ತಾತಾ ನಗುತ್ತಿದ್ದಾನೆ//

ಪ್ರಮುಖ ನಗರಗಳಲ್ಲಿ ವೃತ್ತದಲ್ಲಿ ತಾತನನ್ನು ನಿಲ್ಲಿಸಿದ್ದಾರೆ

ಆತನ ಆದರ್ಶ ಗಳನ್ನು ನಿಲ್ಲಿಸಲಾಗಿದೆ//

ತಾತಾ ನಗುತ್ತಿದ್ದಾನೆ/

ಆರೋಪಿಗಳು ತಾತನಿಗೆ ಹಾರ ಹಾಕಿ ಕೈ ಮುಗಿಯುತ್ತಿದ್ದಾರೆ
ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ

ತಾತಾ ನಗುತ್ತಿದ್ದಾನೆ//

ತಾತನೆದೆಗೆ ಗುಂಡು ಬಿದ್ದಾಗಲೇ
ಆತನೊಂದಿಗೆ ಸತ್ತು ಹೋಯಿತು ಸತ್ಯ ಮೇವ ಜಯತೆ

ತಾತಾ ಈಗಲೂ ನಗುತ್ತಿದ್ದಾನೆ//

ಉಸಿರು ಹಾರಿ ಹೋಗುವ ಮುನ್ನ ನೀ ಹೇ ರಾಮ್ ಎಂದೆಯಲ್ಲ

ಈಗ ಆ ರಾಮನನ್ನೆ ಮರೆತಿದ್ದಾರೆ

ಮತ್ತೇ ತಾತಾ ನಗುತ್ತಿದ್ದಾನೆ//

ತನ್ನ ಹಂತಕರ ಸಂತತಿ ಸಾವಿರವಾಗುತ್ತಿರುವದನ್ನು ನೋಡಿಯೂ

ತಾತಾ ನಗುತ್ತಿದ್ದಾನೆ !

ನಿನ್ನ ನಗುವಿನ ಕಾರಣ ನನಗೆ ಅರ್ಥವಾಗಲಿಲ್ಲ
ಶಬ್ದಕೋಶ ದಲ್ಲೂ ಅರ್ಥ ಸಿಗದೆಂದು

ತಾತಾ ಮತ್ತೇ ನಗುತ್ತಿದ್ದಾನೆ !

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ ಗದಗ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

One thought on “ತಾತ ನಗುತ್ತಿದ್ದಾನೆ (ಕವಿತೆ)”
  1. ಅದ್ಭುತವಾದ ಕವಿತೆಗಳು ಸಮಕಾಲಿನ ತಲ್ಲಣಗಳಿಗೆ ಕನ್ನಡ ಹಿಡಿಯುತ್ತವೆ.. ಅನಂತ ಅಭಿನಂದನೆಗಳು ಕವಿಗಳಿಗೆ

Leave a Reply

Your email address will not be published. Required fields are marked *