ಉದಯ್ಮೋಖ ಕಾದಂಬರಿಕಾರ -ಜಿ.ಎಲ್.ನಾಗೇಶ.
ಹೊಸ ಗನ್ನಡ ಸಾಹಿತ್ಯವೆಂದರೆ ಸಣ್ಣ ಕತೆ,ಕಾಬಂಬರಿ,ಭಾವಗೀತೆ,ಕಥನಕಾವ್ಯ, ಮಹಾಕಾವ್ಯ, ನಾಟಕ ಲಲಿತಪ್ರಬಂಧ ,ವಿಮರ್ಶೆ,ಸಂಶೋಧನೆ , ಸಂಪಾದನೆ ಮೊದಲಾದ ಸಾಹಿತ್ಯಿಕ ಪ್ರಕಾರಗಳಾಗಿವೆ. ಈ ತರಹದ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ಅತ್ಯಂತ ಸ್ವತಂತ್ರ ಮತ್ತು ಸ್ವಚ್ಚಂದದ ನಿರ್ಮಾಣವಾಗುವ
ಸಾಹಿತ್ಯ ಪ್ರಕಾರವಾಗಿದೆ.
ಕಾದಂದಬರಿಯನ್ನು “ಕರತಲ ರಂಗಭೂಮಿ”ಎಂದು ಔಚಿತ್ಯಪೂರ್ಣವಾಗಿ ಕರೆಯಲಾಗಿದೆ.
ಇಂಕು ಮತ್ತು ಕಾಗದ ,ಸಾಕಷ್ಟು ವಿರಾಮ ,ತಾಳ್ಮೆಗಳಿದ್ದರೆ ಯಾರು ಬೇಕಾದರು ಕಾದಂಬರಿ ಬರೆಯಬಹುದು.ಎಂಬ ಮಾತು ಕಾದಂಬರಿಯ ಸರಳ ,ಸ್ವತಂತ್ರ ಸ್ವಚ್ಚಂದತೆಯನ್ನು ಕುರಿತು ಹೇಳುತ್ತದೆ.ಕಾದಂಬರಿ ಎಂದರೆ ಘಟನೆ ಮತ್ತು ಕ್ರೀಯೆಗಳೊಡನೆ ಅನುಭವಿಸಿದ ಮತ್ತು ಮಾಡಿದ ಸಂಗತಿಗಳು . ಇವು ಜನಜೀವನದಲ್ಲಿ ಉತ್ಪತಿಯಾದ ಕಾದಂಬರಿಯ ಪಾತ್ರಗಳಾಗುತ್ತವೆ. ವಿಶ್ವದ ಕೆಲವು ಮಹಾನ್ ಕಾದಂಬರಿಗಳೆಂದರೆ : ಟಾಲ್ ಸ್ಟಾಯ್ ರವರ ‘ಅನ್ನಾಕರೆನಿನಾ’ ಮತ್ತು “ವಾರ ಅಂಡ್ ಪೀಸ್’ ಚಿನುವಾ ಅಚಿಬೆ’ ಯವರ “ಥಿಂಗ್ಸ್ ಫಾಲ್ ಅಪಾರ್ಟ್’ ವಿಭೂತಿಭೂಷಣ ಬಂದೊಪಾಧ್ಯಾರ “ಪಥೇರ್ ಪಾಂಚಾಲಿ” ಪ್ರೇಮಚಂದರ “ಗೋದಾನ” ಥಾಮಸ್ ಹಾರಡಿಯವರ “ರಿಟರ್ನ ಆಫ್ ದಿ ನೇಟೀವ್” ತಕಳಿ ಶಿವಶಂಕರ ಅವರ ಪಿಳೈಯವರ “ಚೆಮ್ಮಾನ್” ಮುಂತಾದವು. ಕನ್ನಡದಲ್ಲಿ ಕುವೆಂಪುರವರ “ಕಾನೂರು ಹೆಗ್ಗಡತಿ”, ಮಲೆಗಳಲ್ಲಿ ಮಧುಮಗಳು” ಅನಕೃ ರವರ “ಸಂಧ್ಯಾ ರಾಗ .ತರಾಸು ಅವರ” ಬೆಂಕಿಯ ಬಲೆ” ತ್ರೀವೇಣಿಯವರ “ಬೇಕ್ಕಿನ ಕಣ್ಣು” ಬಸವರಾಜ ಕಟ್ಟಿಮನಿಯವರ ” ಮಾಡಿ ಮಡಿದವರು ರಾವ್ ಬಹದ್ದೂರ್ ಅವರ “ಗ್ರಾಮಾಯಣ” ಶಿವರಾಮ ಕಾರಂತರವರ “ಚೊಮನ ದುಡಿ” ಮಾಸ್ತಿಯವರ “ಚಿಕ್ಕವೀರ ರಾಜೇಂದ್ರ ” ಅನಂತಮೂರ್ತಿಯವರ “ಸಂಸ್ಕಾರ” ದೇವನೂರು ಮಹಾದೇವ ಅವರ “ಕುಸುಮಾ ಬಾಲೆ” ಅರವಿಂದ ಮಾಲಗತ್ತಿ ಅವರ ” ಮಾಗಿ, ಮತ್ತು ಕಾರ್ಯ .ಕುಂ.ವೀರಭದ್ರಪ್ಪ ಅಮರ “ಬೇಲಿ ಮತ್ತು ಹೊಲ ಜಿ,ಎಸ್,ಶಿ .ಯವರ “ಕರ್ಮಯೋಗಿ” ದೆವುಡು ಅವರ” ಮಹಾಕ್ಷತ್ರೀಯ .ಗೀತಾ ನಾಗಭೂಷಣ ಅವರ “ಬದುಕು” . ವೀಣಾ ಶಾಂತೆಶ್ವರರ ‘ಗಂಡಸರು ಮತ್ತು ,ಶೋಷಣೆ ” ಚಂದ್ರಶೇಖರ ಕಂಬಾರ ಅವರ “ಸಿಂಗಾರವ್ವ ಮತ್ತು ಅರಮನೆ” ವ್ಯಾಸರಾಯ ಬಲ್ಲಾಳರ ‘ಆಕಾಶಕ್ಕೊಂದು ಕಂದಿಲು” ಕಥನ ‘ ಮುಂತಾದ ಕಾದಂಬರಿಗಳು ಮುಖ್ಯವಾಗಿವೆ.
ಆದರೆ ಬೀದರ ಜಿಲ್ಲೆಯಲ್ಲಿ ಗಮನಿಸಿದ್ದಾಗ ಕಾದಂಬರಿ ಕ್ಷೇತ್ರದಲ್ಲಿ ಆದ ಸಾಹಿತ್ಯ ಕೃಷಿಯನ್ನು ಗಮನಿಸಿದ್ದಾಗ ಬೆರಳೆಣಿಕೆಯಷ್ಟೇ ಮಾತ್ರ ಕಂಡು ಬರುತ್ತವೆ. ಅಂಥದರಲ್ಲಿ ಬೀದರ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಕಾದಂಬರಿ ಬರೆದ ಹೆಗ್ಗಳಿಕೆಗೆ ಪಾತ್ರರಾದವರು ಜಿ.ಎಲ್.ನಾಗೇಶ ರವರು. ಅವರ ಪೂರ್ಣ ಹೇಸರು ನಾಗೇಶ ತಂದೆ ಲಾಲಪ್ಪಾ ಗಾಯಕವಾಡ, ಅವರು ಓದಿದ್ದು ಮೇಟ್ರೀಕಲೆಷನವರೆಗೆ ಮಾತ್ರ. ಆದರೆ ಬರೆದದ್ದು ಸುಮಾರು 46 ಕ್ಕೂ ಹೆಚ್ಚು ಕಾದಂಬರಿಗಳು ಅಂದರೆ ಆಚರ್ಯ ಪಡಬೇಕಾಗಿಲ್ಲ. ಇವರು ಬರೆದ ಬಹುತೇಕ ಕಾದಂಬರಿಗಳು ರಾಜ್ಯದ ಕಾದಂಬರಿಗಳಿಗೆಂದೆ ಮೀಸಲಾದ ರಾಗಸಂಗಮ, ನವರಾಗಸಂಗಮ,ಥ್ರೀಲ್, ಮಾಸಪತ್ರಿಕೆಗಳಲ್ಲಿ ಖ್ಯಾತ ಕಾದಂಬರಿಕಾರನೆಂಬ ಶಿರೋನಾಮೆಯಲ್ಲಿ ಇವರ ಕಾದಂಬರಿಗಳು ಪ್ರಕಟವಾಗಿವೆ. ಅಂಥವುಗಳಲ್ಲಿ ಮುಖ್ಯವಾಗಿ:
“ನಾ ನಿನ್ನ ಕ್ಷೇಮಿಸಿದ್ದೇನೆ” ಭ್ರಮೆ, ಅಮರ ಜ್ಯೋತಿ ಪ್ರೇಮ, ವಿಷಕನ್ಯೆ, ಸಮಯ, ವಿಲಕ್ಷಣ, ರಕ್ತ ದಾಹದ ನಾಗ, ಶೈಕೊ ಕಿಲ್ಲರ್, ಅನುರಾಗ ಅಳಿಸದು ,ನನ್ನನ್ನು ಕ್ಷೇಮೀಸು, ಬಾಡಿದ ಹೂ ,ದಡ ಸೇರದ ನೌಕೆ, ಪವಿತ್ರ, ಇಂಚರ, ನಿನ್ನ ಪ್ರೀತಿಗಾಗಿ, ಕಗ್ಗತ್ತಲೆ ಕರಗಿಸಿದ ಸೂರ್ಯ,ಮೋಡ ಸರಿದ ರವಿ, ಭ್ರಮೆ ಬದುಕು,ವಿಪರ್ಯಾಸ,ನಿಕೃತಿ,ತೆರೆ ಮರೆಯ ಹಿಂದೆ , ಮೊದಲಾದ ಸುಮಾರು 46 ಕ್ಕೂ ಹೇಚ್ಚು ಕಾದಂಬರಿಗಳು ಬರೆದಿದ್ದಾರೆ.ಇವುಗಳಲ್ಲಿ ನವರಾಗಸಂಗಮ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕಾದಂಬರಿಗಳೆಂದರೆ :”ನಾ ನಿನ್ನ ಕ್ಷೇಮಿಸಿದ್ದೇನೆ” ಭ್ರಮೆ, ಅಮರ ಜ್ಯೋತಿ ಪ್ರೇಮ, ಕಾದಂಬರಿಗಳಾದರೆ ರಾಗಸಂಗಮ,ಮಾಸ ಪತ್ರಿಕೆಯಲ್ಲಿ ವಿಷಕನ್ಯೆ, ಸಮಯ, ವಿಲಕ್ಷಣ, ರಕ್ತ ದಾಹದ ನಾಗ, ಶೈಕೊ ಕಿಲ್ಲರ್, ಅನುರಾಗ ಅಳಿಸದು ,ಅಷ್ಟೇಯಲ್ಲದೆ ಥ್ರೀಲ್ ,ಮಾಸ ಪತ್ರಿಕೆಯಲ್ಲಿ ,ನನ್ನನ್ನು ಕ್ಷೇಮೀಸು, ಬಾಡಿದ ಹೂ ,ದಡ ಸೇರದ ನೌಕೆ, ಪವಿತ್ರ, ಇಂಚರ, ನಿನ್ನ ಪ್ರೀತಿಗಾಗಿ, ಕಗ್ಗತ್ತಲೆ ಕರಗಿಸಿದ ಸೂರ್ಯ,ಮೋಡ ಸರಿದ ರವಿ, ಭ್ರಮೆ ಬದುಕು,ವಿಪರ್ಯಾಸ,ನಿಕೃತಿ,
ತೆರೆ ಮರೆಯ ಹಿಂದೆ ಕಾದಂಬರಿಗಳು ಪ್ರಕಟವಾಗಿವೆ ಎನ್ನುವುದು ನಮ್ಮೇಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಜಿ.ಎಲ್ ನಾಗೇಶ ಅವರು ಬಸವಕಲ್ಯಾಣ ತಾಲೂಕಿನ ಧನ್ನೂರ( ಆರ್) ಎಂಬ ಕುಗ್ರಾಮದಲ್ಲಿ ಲಾಲಪ್ಪ ಮತ್ತು ಮಹಾದೇವಿ ಎಂಬ ಬಡ ದಂಪತಿಗಳ ಉದರದಲ್ಲಿ 1-6-1984 ರಲ್ಲಿ ಜನಿಸಿದ್ದಾರೆ. ಅವರು ವಿಧ್ಯಾಭ್ಯಾಸವು ಬಡತನದಿಂದ ವಂಚಿತರಾದರು ಪರವಾಗಿಲ್ಲ. ಸಾಹಿತ್ಯಿಕ ಶ್ರೀಮಂತಿಕೆಯನ್ನು ಮೇರೆದಿದಾರೆ. ಅವರ ವೃತ್ತಿ ವ್ಯವಸಾಯವಾದರೆ ಪ್ರವೃತ್ತಿ ಕಾದಂಬರಿ ಕೃಷಿಯಾಗಿದೆ. ನಾಗೇಶ ಅವರ ಕಾದಂಬರಿ ಶೈಲಿ ನೋಡಿದರೆ ಕೌಂಡಿನ್ಯ, ಬಿ,ವಿ. ಅನಂತರಾಮು ಅವರಂತೆ ಇವರ ಕಾದಂಬರಿಗಳು ಓದಿಸಿಕೊಂಡು ಹೋಗುತ್ತವೆ. ಇಷ್ಟೋಂದು ಕಾದಂಬರಿಗಳು ಬರೆದಿರುವ ಇವರನ್ನು ಗುರುತಿಸುವ ಕಾರ್ಯ ಜಿಲ್ಲೆಯಲ್ಲಿ ದಶಕದ ಹಿಂದೆಯೆ ಆಗಬೇಕಿತ್ತು. ಇವರು ಗ್ರಾಮೀಣ ಪ್ರದೇಶದಲ್ಲಿ ಇರುವುದರಿಂದ ಸಾಹಿತಿಗಳಿಗೆ ಸಂಪರ್ಕವಿಲ್ಲದೆ ಎಲೆ ಮರೆಯ ಬಲಿತ ಕಾಯಿಯಂತೆ ಬಲಿತು ಜಿಲ್ಲೆಯ ಸಾಹಿತಿ ಬಳಗಕ್ಕೆ ಅಚ್ಚರಿ ಮೂಡಿಸಿದ್ದಾರೆ. ನನಗೂ ಇವರ ಕಾದಂಬರಿ ಸುಮಾರು ವರ್ಷಗಳಿಂದ ಥ್ರೀಲ್, ರಾಗಸಂಗಮ , ನವರಾಗಸಂಗಮ , ಮಾಸಪತ್ರಿಕೆಯಲ್ಲಿ ಓದುತ್ತಿದ್ದೆ .ಇವರು ಬೀದರ ಜಿಲ್ಲೆಯವರೆಂದು ಗೊತ್ತಾದದ್ದೆ ಥ್ರೀಲ್, 106 ನೇ ಸಂಚಿಕೆಯಲ್ಲಿ ಇವರ “ವಿಷಕನ್ಯೆ,, ಸಮಯ” ಎನ್ನುವ ಎರಡು ಕಾದಂಬರಿಗಳೊಂದಿಗೆ ಇವರ ವಿಳಾಸ ಪ್ರಕಟವಾಗಿದ್ದರಿಂದ ಇವರು ನಮ್ಮ ಬೀದರಿನವರೆಂದು ತಿಳಿದು ಸಂತಸದಿಂದವರ ಗ್ರಾಮಕ್ಕೆ ಬೇಟಿಕೊಟ್ಟೆ.ಆಗ ಇವರು ಇನ್ನೂ ಇಪ್ಪತ್ತಾರು ವರ್ಷದ ಪೊರ. ನೊಡಲು ದನ ಕಾಯುವನಂತೆ ಕಂಡು ಬಂದರು ಸಾಹಿತ್ಯ ಕೃಷಿ ವಿಪುಲವಾಗಿ ಬೆಳೆಸಿದ್ದಾರೆ ಅನ್ನೋದಕ್ಕೆ ಅವರಲ್ಲಿರುವ ಪ್ರಕಟಿತ ಮತ್ತು ಅಪ್ರಕಟಿತ ಕಾದಂಬರಿಗಳೆ ಸಾಕ್ಷಿಯಾಗಿವೆ. ಇವರ ಈ ಸಾಹಿತ್ಯ ಕೃಷಿಗೆ ಮೆಚ್ಚಿ ಜಿಲ್ಲೆಯ ಹಲವಾರು ಸಾಹಿತ್ಯ ಸಂಘ ಸಂಸ್ಥೆಯವರು ಮೆಚ್ಚಿ ಸತ್ಕರಿಸಿ ಗೌರವಿಸಿದ್ದಾರೆ.
– ಮಚ್ಚೇಂದ್ರ ಪಿ.ಅಣಕಲ್.