ವೀರಣ್ಣ ಮಂಠಾಳಕರ್ ರವರ ಕೆಲ ಚುಟುಕುಗಳು
1.ವೈನ್ ಶಾಪ್ ಕಂಡಲೆಲ್ಲ
ನನ್ ವೈಫ್ ನೆನಪಾಗುತ್ತಾಳೆ
ಒಂದ್ ಕ್ಷಣ ನಿಂತು ಕುಡಿಯಬೇಕು
ಎನಿಸುತ್ತದೆ.
2.ಅವನ್ಯಾವನೋ ದುಂಡಿ
ಬ್ಯಾಂಕನಲ್ಲಿದ್ದ ಹುಂಡಿ ಕದ್ದೋಯ್ದವ
ಅವನೊಬ್ಬನೇ ಚುಟುಕು ಬೃಹ್ಮನಲ್ಲ
ಅವನ ಗುಂಡಿ ತೋಡಿದರೂ
ಒಂದು ಹುಂಡಿ ಸಿಗುವುದಿಲ್ಲ!
3.ಚುಟುಕು ಬೃಹ್ಮನೆಂದು
ಬಡಾಯಿ ಕೊಚ್ಚಿಕೊಳ್ಳುವನು
ಅವನಿಗಿಂತ ಕಿರಿಯ
ಚುಟುಕು ಬೃಹ್ಮರಲ್ಲಿ
ಕೊಚ್ಚಿಕೊಂಡು ಹೋಗುವನು.!
4.ಚುಟುಕುಗಳೆಂದರೆ ಚುಟಕಿ ಹೊಡೆದಂಗಲ್ಲ
ಯಾರ್ಯಾರೋ ಬರೆಯುತಿದ್ದಾರೆ ಚುಟುಕು
ಆದರೆ, ಅವರ ಜೀವನವೆಲ್ಲ ಭುಟುಕು
5.ಕಾಪಿ ಪೇಸ್ಟ್ ಮಾಡುವರಿಗೆ
ಕಾಫಿಯಾ ರದೀಫ್ ಗೊತ್ತಿಲ್ಲ
ಕುಡಿಯುವವರ ಮಜಾಕ್ ಮಾಡುವರಿಗೆ
ಅವರು ಬದುಕಿದ್ದೇ ಗೊತ್ತಿಲ್ಲ!
6.ನಾನು ಬದುಕಿದ್ದೇನೆ ಭ್ರಷ್ಟ ರಾಜಕಾರಣದಲ್ಲಿ
ಶೋಷಿತ ಸಮಾಜದಲ್ಲಿ ಅದಕ್ಕಾಗಿ ಗೊತ್ತಿದೆ
ಸಮಾಜದವರೆಲ್ಲರ ಮತ್ತು ನನಗೇರಿದೆ.!
7.ಅವರೆಲ್ಲರ ಮತ್ತಿಳಿಸಬೇಕು ಈಗ
ದುಡ್ಡಿನ ಧೀಮಾಕಿನಲ್ಲಿರುವವರು ಜಾಗ
ಖಾಲಿ ಮಾಡಿದರೂ ಸಿಗುವುದಿಲ್ಲ
ಆತ್ಮ ತೃಪ್ತಿಯಲ್ಲೂ ಸಹಯೋಗ
8.ಅವನ್ಯಾವನೋ ಹೇಳಿದನೆಂದು ಕುಡಿಯಲಿಲ್ಲ
ಜಗದಲ್ಲಿರುವ ಜನರ ಕಪಟ ವಂಚಕರ
ಬಣ್ಣ ಬಯಲಾಗಲಿಯೆಂದೇ ಕುಡಿಯುತ್ತಿರುವೆ
ಯಾಕೆಂದರೆ, ಅವರು ಸತ್ತ ಬಳಿಕವೂ
ಅವರವರ ಆತ್ಮ ಸಾಕ್ಷಿಯಲ್ಲಿ ಉಳಿಯುತ್ತಿರುವೆ?
9.ನಾನು ನನ್ನದೆಂಬ ಅಹಂಕಾರಗಳು ಬಿಟ್ಟರೆ
ರಾಜಕಾರಣಿಗಳಿಗೆ ಉಳಿಗಾಲವುಂಟು!?
ಇಲ್ಲವಾದರೆ, ನೀವು ಸತ್ತ ಬಳಿಕವೂ
ನಿಮ್ಮ ಸಮಾಧಿಗಳ ಮೇಲೆ ಚಪ್ಪಲಿ ಹಾರಗಳುಂಟು!
10.ಕೊನೆಯದಾಗಿ ಹೇಳುವೆ
ಶಾಶ್ವತವಲ್ಲದ ಈ ಬದುಕು
ಸಿಗಬೇಕೆಂದರೆ ನಿನ್ನೊಳಗೊಬ್ಬನಾಗಿ
ನೀನು ಹುಡುಕು! ಅಲ್ಲಿಂದಲೇ
ನಿನ್ನ ಜೀವನಾರಂಭ… ಇದು ಕೇವಲ
ಪ್ರಾರಂಭ!!!?
– ವೀರಣ್ಣ ಮಂಠಾಳಕರ್ ಬಸವಕಲ್ಯಾಣ,
ಲೇಖಕರ ಪರಿಚಯ.
ಸಾಹಿತಿ ವೀರಣ್ಣ ಮಂಠಾಳಕರ್ ರವರು ಬೀದರ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದವರು.
ಬಿ.ಎ ಪದವೀಧರರಾದ ಇವರು ಕೆಲಕಾಲ ಬೆಂಗಳೂರಿನ ನಂದಿನಿ ಹಾಲಿನ ಡೈರಿಯಲ್ಲಿ ಸೇವೆ ಸಲ್ಲಿಸಿದರು. ನಂತರ ಬಸವ ಕಲ್ಯಾಣದ ಕನ್ನಡ ಪ್ರಭ, ವಿಜಯ ಕರ್ನಾಟಕ ವರದಿಗಾರ ರಾಗಿ ‘ಸಂಕಲ್ಪ’ ಮಾಸಿಕದ ಪ್ರಧಾನ ಸಂಪಾದಕರಾಗಿದರು, ಸದ್ಯ ಇವರು ‘ವೀರ ಸಂಕಲ್ಪ ‘ ಯು ಟ್ಯೂಬ್’ ನ ಸಂಪಾದಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಭಾವಾಂತರಂಗ’ (ಚುಟುಕು) ‘ಗಾಂಧಿ ಆಸ್ಟೇಕೆಂದುಕೊಂಡಾಗ’, ‘ಕಾಯುವ ದೇವರ ವರ’ (ಕವನಗಳು) ‘ಬದುಕಿನ ಬೆನ್ನೇರಿ’ (ಕಥಾ) ‘ಸುಳಿಗಳು’ (ಹನಿಗವನ) ‘ಮಾಧ್ಯಮದೊಳಗಣ (ಅಂಕಣ ) ‘ಗಜಲ್ ಗೆಜ್ಜೆನಾದ’ (ಗಜಲ್ ) ‘ಮೌನ ಪ್ರತಿಭೆ’ (ವ್ಯಕ್ತಿ ಚಿತ್ರ) ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ.