Oplus_131072

ಯುವ ಜನಾಂಗದ ಸ್ಪೂರ್ತಿಯ ಚಿಲುಮೆ  ಸಂಸದೆ ಪ್ರಣಿತಿ ಸಿಂಧೆ.

 

ಮಚ್ಚೇಂದ್ರ ಪಿ ಅಣಕಲ್. ಕಲಬುರಗಿ

 

ಡಿಸೆಂಬರ್ 9 ರಂದು ಮಹಾರಾಷ್ಟ್ರ  ಸೋಲಾಪುರ ಜಿಲ್ಲೆಯ ದಲಿತ ಯುವ ಮಹಿಳಾ ಸಂಸದೆ ಕು.ಪ್ರಣಿತಿ ಸಿಂಧೆಯವರಿಗೆ ಈಗ 44ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ,  ಈ ಹುಟ್ಟು ಹಬ್ಬದ ಪ್ರಯುಕ್ತ ಸಂಸದೆ ಪ್ರಣಿತಿ ಸಿಂಧೆಯವರಿಗೆ ಶುಭ ಹಾರೈಕೆಯೊಂದಿಗೆ ಈ ಲೇಖನ ಪ್ರಕಟಿಸಲಾಗಿದೆ.

 

– ಸಂಪಾದಕರು.

 

ಬೆಕ್ಕಿನ ಕಂಗಳ, ಬಟ್ಟಲು ಗಣ್ಣಿನ , ಚೆಂದುಳ್ಳ ಚಲುವೆ ಇವಳು. ಯಾವ ಸಿನಿಮಾ ತಾರೆಗೂ  ಕಡಿಮೆಯಿಲ್ಲದ ಅಂದಗಾತಿ. ಮುದ್ದು ಮುಖದ, ವಿಶಾಲ  ಮನೋಭಾವದ ಸೌಂದರ್ಯವತಿ. ಪಟಪಟಾಂತ ಅರುಳು ಹುರಿದಂತೆ  ಮಾತನಾಡುವ ಮಾತುಗಾರ್ತಿ. ದೀನ ದಲಿತ ಬಡ ಜನಾಂಗದ ಹಿತಕ್ಕಾಗಿ ಹಗಲಿರುಳು ಶ್ರಮಿಸುವ ಸಾಮಾಜಿಕ ಹೋರಾಟಗಾರ್ತಿಯೆಂದರೆ ಅವಳೆ ಸೋಲಾಪುರ ಮೀಸಲು ಕ್ಷೇತ್ರದ  ದಲಿತ ಯುವ ನಾಯಕಿ ಸಂಸದೆ ಪ್ರಣಿತಿ ಸಿಂಧೆ.

ಹೌದು, ಮಹಾರಾಷ್ಟ್ರ  ಸೋಲಾಪುರದ ನೂತನ ಸಂಸದರಾಗಿ ಆಯ್ಕೆಯಾದ ಪ್ರಣತಿ ಸಿಂಧೆಯವರು ನಮ್ಮ ದೇಶದ ಯುವ ಜನತೆಯ ಶಕ್ತಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಇವರು  ಸೋಲಾಪುರದ ಬಿಜಾಪುರ ರಸ್ತೆಯ ಬಡಾವಣೆಯಲ್ಲಿ ಇರುವ  ಅಶೋಕ ನಗರದ ಹಿಂಧೂ, ದಲಿತ (ಚಮ್ಮಾರ) ಕುಟುಂಬದಲ್ಲಿ ಹುಟ್ಟಿದ ಪ್ರಣಿತಿ ಸಿಂಧೆಯವರು ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ ಹಾಗೂ ಮಾಜಿ ಕೇಂದ್ರ ಗೃಹ ಮಂತ್ರಿಯಾಗಿದ್ದ ಸುಶೀಲಕುಮಾರ ಸಿಂಧೆ ಮತ್ತು ಉಜ್ವಲಾ ಸಿಂಧೆ ದಂಪತಿಗಳ  ಸುಪುತ್ರಿಯಾಗಿದ್ದಾಳೆ.

ಇವಳು ದಿನಾಂಕ 9-12-1980 ರಲ್ಲಿ ಸೋಲಾಪುರದಲ್ಲಿ ಜನಿಸಿದ್ದಾರೆ. ಮತ್ತು ಆಕೆ ತನ್ನ ಬಾಲ್ಯದ  ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಮುಂಬೈನ ಮಾಹಿಮ್ ಸ್ಕಾಟಿಷ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಮತ್ತು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.ನಂತರ ಅವರು ಮುಂಬೈನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡರು.

ಮಹಾರಾಷ್ಟ್ರದ ಸಾರ್ವಜನಿಕ ಯುವಕ ಯುವತಿಯರಿಗೆ ಉದ್ಯೋಗ ನೀಡುವುದಕ್ಕಾಗಿ ‘ಬೈಜುಯಿ’ ಎಂಬ ಎನ್.ಜಿ.ಒ ಸಂಸ್ಥೆಯನ್ನು ಸ್ಥಾಪಿಸಿ,ಹುಟ್ಟು ಹೋರಾಟಗಾರ್ತಿಯಾಗಿ ಯುವಕ ಯುವತಿಯರು ನಿರುದ್ಯೋಗಿಯಾಗಿ ಕಾಲಹರಣ ಮಾಡಬಾರದೆಂದು ಅವರ  ಉದ್ಯೋಗಕ್ಕಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಸಿಗುವಂತೆ ಸಾಕಷ್ಟು ಹೋರಾಟದ ಮೂಲಕ ಯುವಕರಿಗೆ ಕೆಲಸ ಸಿಗುವಂತೆ ಶ್ರಮಿಸಿರುತ್ತಾರೆ.

ಪ್ರಣಿತಿ ಸಿಂಧೆಯವರು ಭಾರತೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, 2021ರಿಂದ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷೆ ಮತ್ತು ವಿಧಾನ ಸಭೆ ಚುನಾವಣೆಗಾಗಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸ್ಕ್ರೀನಿಂಗ್ ಸಮಿತಿಯ ಸದಸ್ಯರಾಗಿದ್ದಾರೆ.

ಇವರ ಕಾರ್ಯ ಸಾಧನೆಯನ್ನು ಕಂಡು ಸೋಲಾಪುರ ಸಿಟಿ ಸೆಂಟ್ರಲ್ ವಿಧಾನ ಸಭಾ ಮತ ಕ್ಷೇತ್ರದ ಮತದಾರರು 2009, 2014, 2019 ರ ವಿಧಾನ ಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ವಾಗಿ  ಮೂರು ಸಲ ಗೆಲ್ಲಿಸಿ ಶಾಸಕರಾಗಿ ಆಯ್ಕೆ ಮಾಡಿದ್ದು ಅಷ್ಟೇಯಲ್ಲದೆ 2024 ರಲ್ಲಿ ಲೋಕಸಭಾ ಚುನಾವಣೆಯಲ್ಲಿಯೂ ಸಂಸದರಾಗಿ ಅಯ್ಕೆ ಮಾಡಿ ಕಳಿಸಿರುವುದು ನೋಡಿದರೆ ಇವರ ಕಾರ್ಯ ಸಾಧನೆಗೆ ಆ ಸೋಲಾಪುರ ಸಿಟಿ ಸೆಂಟ್ರಲ್ ಮತ ಕ್ಷೇತ್ರದ ಜನ ಇವರ ಮೇಲೆ ಇಟ್ಟಿರುವ ಕಾಳಜಿ ಮತ್ತು ನಂಬಿಕೆಯು ವಿಶ್ವಾಸಾರ್ಹದಾಯಕವಾಗಿದೆ.

ಸಂಸದೆ ಪ್ರಣಿತಿ ಸಿಂಧೆಯವರು ಮಾಜಿ ಮುಖ್ಯ ಮಂತ್ರಿ ಸುಶೀಲಕುಮಾರ ಸಿಂಧೆಯವರ ಮೂವರು ಹೆಣ್ಣು ಮಕ್ಕಳಲ್ಲಿ ಇವರು ಕಿರಿಯ ಸುಪುತ್ರಿಯಾಗಿದ್ದು  ಸ್ಮ್ರತಿ ಮತ್ತು ಪ್ರೀತಿ ಎಂಬ ಇಬ್ಬರು ಸಹೋದರಿಯರನ್ನು ಹೊಂದಿದ್ದಾಳೆ. ಇವಳ ಸಹೋದರಿಯರಿಗೆ ಈಗಾಗಲೇ ಮದುವೆಯಾಗಿದ್ದು ಕೌಟುಂಬಿಕ ಜವಾಬ್ದಾರಿಯಿಂದ ಹೊತ್ತುಕೊಂಡಿದ್ದರೆ  ಇವರು  ಮಾತ್ರ ಸಾಮಾಜಿಕ ಹಿತಕ್ಕಾಗಿ ಮದುವೆಯಾಗದೆ ಅವಿವಾಹಿತೆಯಾಗಿದ್ದಾರೆ.
ಇವರಿಗೆ ಈಗ ಡಿಸೆಂಬರ್ 9 ಕ್ಕೆ 44ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

ಸಂಸದೆ ಪ್ರಣಿತಿ ಸಿಂಧೆಯವರು ಈ ಹಿಂದೆ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವಿಕರಿಸುವ ವೇಳೆ ರಾಹುಲ್ ಗಾಂಧಿಗೆ ‘ವಿಶ್‘ ಮಾಡಿ ಲೋಕಸಭೆಯ ಎಲ್ಲಾ ಸಂಸದರ ಎದುರಿಗೇ ಕೈ ಕುಲಕಿದ ಕಾರಣಕ್ಕೆ ರಾಹುಲ್ ಗಾಂಧಿಗೆ ಇವಳು ಮನ ಒಲಿದಿದ್ದಾಳೆ, ಮುಂದೆ ರಾಹುಲ್ ಗಾಂಧಿಗೆ  ಮದುವೆಯೂ ಆಗುತ್ತಾಳೆ  ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲೆಲ್ಲ ತುಂಬ ಹರಿದಾಡಿತ್ತು. ಇದು ‘ಸುದ್ದ ಸುಳ್ಳು‘ ಎಂದು ಅವರ ತಂದೆ ಸುಶೀಲಕುಮಾರ ಸಿಂಧೆಯವರು ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿ ಆ ಗಾಸಿಪ ಸುದ್ದಿಗೆ ತೆರೆ ಎಳೆದಿದ್ದರು.

ಪ್ರಣಿತಿ ಸಿಂಧೆಯವರ ತಂದೆಯವರಾದ ಸುಶೀಲಕುಮಾರ ಸಿಂಧೆಯವರು ಮೊದಲು ಪೋಲಿಸ್ ಇಲಾಖೆಯಲ್ಲಿ 5 ವರ್ಷ ಪಿ.ಎಸ್.ಐ ಯಾಗಿ ಸೇವೆ ಸಲ್ಲಿಸಿದ್ದು ನಂತರ ರಾಜಕೀಯ ಪ್ರವೇಶ ಮಾಡಿ ಶಾಸಕರಾಗಿ ಆಯ್ಕೆಯಾಗಿ ನಂತರ 2003ರಿಂದ 2004ರ ವರೆಗೆ ಮಹಾರಾಷ್ಟ್ರ ರಾಜ್ಯದ ಮೊದಲ ದಲಿತ ಮುಖ್ಯ ಮಂತ್ರಿಯಾಗಿ ದೇಶದ ಗಮನ ಸೇಳೆದವರಲ್ಲಿ ಮೊದಲಿಗರು.

ಅಷ್ಟೇಯಲ್ಲದೆ ಇವರು ಮೂರು ಸಲ ಸಂಸದರಾಗಿಯೂ ಆಯ್ಕೆಯಾಗಿದ್ದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸರ್ಕಾರದಲ್ಲಿ 2006 ರಿಂದ 2012 ರ ವರೆಗೆ ಉರ್ಜಾ ಮಂತ್ರಿ ಮತ್ತು 2012 ರಿಂದ 2014 ರ ವರೆಗೆ ಕೇಂದ್ರ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮತ್ತು  ಅಷ್ಟೇಯಲ್ಲದೆ ಇವರು ಉಪರಾಷ್ಟ್ರಪತಿ ಚುನಾವಣೆಗೂ  ಸ್ಪರ್ಧಿಸಿದರು. ನಂತರ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ರಾಜಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲಾಪುರ ಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯಾರ್ಥಿಯಾಗಿ ಸ್ಪರ್ಧಿಸಿದ  ಡಾ.ಜಯಸಿದ್ದೇಶ್ವರ ಸ್ವಾಮಿಜಿಯ ಎದುರು ಸೋಲನ್ನು ಅನುಭವಿಸಿದರು. ಇವರ ಸೋಲಿಗೆ ಕಣದಲ್ಲಿ ಉಳಿದು ಸ್ಪರ್ಧಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ರವರೆ ಕಾರಣರಾಗಿದ್ದರೆಂದು ಬೆಸತ್ತು ಅದೇ ವರ್ಷ ಅಕ್ಟೋಬರ್ 24 ರಂದು ಸೋಲಾಪುರದಲ್ಲಿ ನಡೆದ

ಧಮ್ಮ ಚಕ್ರ” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂದೇ ರಾಜಕೀಯ ನಿವೃತ್ತಿಯ ಸನ್ಯಾಸವನ್ನು ಸ್ವಿಕರಿಸುವುದಾಗಿ ತುಂಬಿದ ಸಭೆಯಲ್ಲಿ ಸಾರ್ವಜನಿಕವಾಗಿ ಘೋಷಣೆ ಮಾಡಿದರು. ಮತ್ತೆ ಮುಂದಿನ ಉತ್ತರಾಧಿಕಾರಿಯಾಗಿ ತಮ್ಮ ಮುದ್ದಿನ ಮಗಳಾದ ಪ್ರಣಿತಿ ಸಿಂಧೆಯವರ ಹೆಸರನ್ನು ಮುನ್ನೆಲೆಗೆ ತಂದು ಅವರ ಹೆಸರು  ಘೋಷಿಸಿ “ಮುಂದಿನ 2024 ರ ಲೋಕಸಭಾ ಚುನಾವಣೆ ಪ್ರಣಿತಿ ಸಿಂಧೆಯವರೇ ಎದುರಿಸುತ್ತಾಳೆ ” ಎಂದು ಶಪತ್ ಮಾಡಿದರು.

ತಂದೆಯ ಪಿತ್ರಾಜ್ಞೆಯಂತೆ  ಪ್ರಣಿತಿ ಸಿಂಧೆಯವರು 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು.  ಈಗ ಅವರು ಲೋಕಸಭೆಯಲ್ಲಿ ದಲಿತ ಯುವ ಉತ್ಸಾಹಿ ಮಹಿಳಾ ಸಂಸದೆಯಾಗಿ ದೇಶದಾದ್ಯಂತ ತುಂಬ ಗಮನ ಸೇಳೆದಿದ್ದಾಳೆ.

ಡಿಸೆಂಬರ್ 9 ರಂದು ಪ್ರಣಿತಿ ಸಿಂಧೆ ಯವರ ಹುಟ್ಟು ಹಬ್ಬವಾಗಿದ್ದರಿಂದ ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕೊಟ್ಟು ಕರುಣಿಸಿ ಕಾಪಾಡಲಿ.
ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ತತ್ವ ಸಿದ್ದಾಂತ ಮೇಲೆ ನಂಬಿಕೆ ಇಟ್ಟು ರಾಜಕೀಯ ಮಾಡುತ್ತಿರುವ ಅವರ ಅಧಿಕಾರದ ಅವಧಿಯಲ್ಲಿ ದೀನ, ದಲಿತ ಬಡ ಜನಾಂಗೀಯ ಏಳಿಗೆಗಾಗಿ ಮತ್ತು ಮಹಿಳಾ ಸಬಲಿಕರಣದ ಅಭಿವೃದ್ಧಿಗಾಗಿ ಅವರು ನಿತ್ಯ ಶ್ರಮಿಸುಂತಾಗಲಿ ಎಂದು ಹಾರೈಸೋಣ.

ಮಚ್ಚೇಂದ್ರ ಪಿ ಅಣಕಲ್.
ಕಲಬುರಗಿ. ಮೊ- 6363042197

 

ಲೇಖಕರ ಪರಿಚಯ: 

ಮಚ್ಚೇಂದ್ರ ಪಿ ಅಣಕಲ್’

ಸಾಹಿತಿ ಮಚ್ಚೇಂದ್ರ ಪಿ ಅಣಕಲ್’ ರವರು ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರಾಗಿದ್ದು, ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ  ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಇಡಿ ಪದವಿ ಪಡೆದಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ ‘ಲಾಟರಿ’ಕತೆ ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ ‘ಡಾಂಬಾರು ದಂಧೆ’ ಕತೆ ಬಹುಮಾನ ಪಡೆದು ‘ದೀಪಾತೊರಿದೆಡೆಗೆ’ ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ. ಇವರು  ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು ( ಕವನಸಂಕಲನ), ಜ್ಞಾನ ಸೂರ್ಯ ( ಸಂಪಾದಿತ), ಜನಪದ ವೈದ್ಯರ ಕೈಪಿಡಿ  (ಸಂಪಾದನೆ), ಲಾಟರಿಮೊದಲ ಗಿರಾಕಿ, ಹಗಲುಗಳ್ಳರು ‌(ಕಥಾ ಸಂಕಲನ) ಬೀದರ ಜಿಲ್ಲಾ ಸಾಹಿತಿಗಳ ಪರಿಚಯ (ಲೇಖನ) ಇತ್ಯಾದಿ ಪುಸ್ತಕಗಳು ಪ್ರಕಟಿಸಿದ್ದಾರೆ ಇವರಿಗೆ ರಾಜ್ಯ ಮಟ್ಟದ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

 

2 thoughts on “ಯುವ ಜನಾಂಗದ ಸ್ಪೂರ್ತಿಯ ಚಿಲುಮೆ ಸಂಸದೆ ಪ್ರಣಿತಿ ಸಿಂಧೆ.”
  1. ಲೇಖನ ತುಂಬ ಚೆನ್ನಾಗಿ ಮೂಡಿ ಬಂದಿದೆ.
    ಸಂಸದೆ ಪ್ರಣಿತಿ ಸಿಂಧೆ ಅವರು ರಾಜಕೀಯ ರಂಗದಲ್ಲಿ ಮತ್ತಷ್ಟು ಎತ್ತರದ ಸ್ಥಾನಕೆರಲ್ಲಿ ಎನ್ನುತ್ತಾ ಜನ್ಮದಿನದ ಶುಭ ಕೋರುವೆ.

  2. ಅದ್ಭುತ ಸಂದೇಶ ಯುವ ಪೀಳಿಗೆಗೆ ಉತ್ತಮ ಮಾದರಿಯಾಗುವ ಲೇಖನ.ಅಂಗೈಯಲ್ಲಿ ಅನೇಕ ಉತ್ತಮ ಸಂದೇಶಗಳು ಉಣ್ಣಬಡಿಸುತ್ತಿರುವ ತಮ್ಮಗೆ ಹೃದಯಪೂರ್ವಕ ಅಭಿನಂದನೆಗಳು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ